Загрузка страницы

ನಮ್ಮ ಆಲೋಚನೆಗಳನ್ನು ಹತೋಟಿಯಲ್ಲಿಡುವುದು ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿ

ನಮ್ಮ ಆಲೋಚನೆಗಳನ್ನು ಹತೋಟಿಯಲ್ಲಿಡುವುದು ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿ

ತನ್ನನ್ನು ತಾನು ಅಧ್ಯಯನ ಮಾಡುವುದನ್ನು ಸ್ವ ಸಮಾಲೋಚನೆ ಅಥವಾ ಸೆಲ್ಫ್ ಕೌನ್ಸೆಲಿಂಗ್ ಎನ್ನಲಾಗುತ್ತದೆ. ಬುದ್ಧನೆಂಬ ಮಹಾ ಸಂತನ ಅವತಾರವಾದದ್ದೂ ಇದೇ ಪ್ರಕ್ರಿಯೆಯಿಂದ. ಬುದ್ಧ ಜಗತ್ತಿಗೆ ಬಂದ ನಂತರ ಸಂಸಾರದ ಮಧ್ಯೆ ಬದುಕುತ್ತಾನೆ. ಮಗನಿಗೆ ಯಾವುದೇ ರೀತಿಯ ಕಷ್ಟದ ಅನುಭವವಾಗದಂತೆ ಬುದ್ಧನ ತಂದೆ ಕಾಳಜಿ ವಹಿಸುತ್ತಾನೆ. ಆದರೆ ಒಂದು ದಿನ ತನ್ನ ಸಾರಥಿ ಚೆನ್ನನೊಂದಿಗೆ ವಿಹಾರಕ್ಕೆ ತೆರಳುವ ಸಿದ್ಧಾರ್ಥನು ಮುಪ್ಪು, ಖಾಯಿಲೆ ಮತ್ತು ಮೃತ್ಯುವನ್ನು ನೋಡಿ ತನಗೂ ಇಂತಹುದೇ ಪರಿಸ್ಥಿತಿ ಬರುತ್ತದೆಯೇ ಎನ್ನುವ ಚಿಂತನೆಯಲ್ಲಿ ಬೀಳುತ್ತಾನೆ. ಈ ಸಂದರ್ಭ ಜೀವಂತವಾಗಿರುವಾಗಲೇ ಈ ಮೂರನ್ನೂ ದಾಟುವ ಬಗೆ ಹೇಗೆ ಎನ್ನುವ ಪ್ರಶ್ನೆ ಅವನಿಗೆ ಮೂಡುತ್ತದೆ. ಆತ ಖಿನ್ನತೆಗೆ ಜಾರದೆ ತಪಸ್ಸಿನ ಮಾರ್ಗ ಹಿಡಿದು ಸಾವಿನ ಮೂಲ ಕಂಡುಹುಡುಕುವ ಪ್ರಯತ್ನಕ್ಕಿಳಿಯುತ್ತಾನೆ. ಇಲ್ಲಿ ಬುದ್ಧ ಉಪಯೋಗಿಸುವ ಮಾರ್ಗ ಸ್ವ ಸಮಾಲೋಚನೆ. ಬುದ್ಧನ ಮಟ್ಟಕ್ಕಲ್ಲದಿದ್ದರೂ ಜೀವನದ ಮಟ್ಟಕ್ಕೆ ತಕ್ಕಂತಹ ಸಾವಿರ ಪ್ರಶ್ನೆಗಳು ಪ್ರತಿನಿತ್ಯ, ಪ್ರತಿಯೊಬ್ಬ ಮನುಷ್ಯನ ಮನಸ್ಸಿನಲ್ಲಿ ಮೂಡುತ್ತದೆ. ಅವೆಷ್ಟೋ ಸಂಸ್ಕರಿಸದ ಆಲೋಚನೆಗಳು ಮನಸ್ಸಿನಲ್ಲಿ ಮೂಡುತ್ತದೆ ಆದರೆ ಬುದ್ಧಿಯಲ್ಲಿ ಸಂಸ್ಕರಿಸಿದ ಆಲೋಚನೆಗಳಿಗಷ್ಟೇ ಜಾಗವಿರುತ್ತದೆ. ಇದಕ್ಕೆ ಕಾರಣ ಬುದ್ಧಿಯಲ್ಲಿ ಅನುಭವದ ಆಧಾರ ಮತ್ತು ಅಧ್ಯಯನಗಳೆರಡರ ಸಮ್ಮಿಲನವಿರುತ್ತದೆ. ಮನಸ್ಸು ಚಂದ್ರನನ್ನು ಸಾಂಕೇತಿಸುತ್ತದೆ. ಚಂದ್ರನಂತೆ ಮನಸ್ಸಿಗೂ ಚಾಂಚಲ್ಯವಿದೆ. ಆದರೆ ಬುದ್ಧಿ ಸೂರ್ಯನಂತೆ ಸ್ಥಿತಪ್ರಜ್ಞವಾಗಿರುತ್ತದೆ. ನಮ್ಮ ಮನಸ್ಸಿನಲ್ಲಿ ಅತಿಯಾಗಿ ಕಾಡುವ ಪ್ರಶ್ನೆಗಳು ಮೂಡಿದಾಗ ಅದನ್ನು ಬರೆದಿಟ್ಟುಕೊಳ್ಳಬೇಕು. ನಮ್ಮ ಪ್ರಶ್ನೆಗಳಿಗೆ ಉತ್ತರ ನಮ್ಮ ಪ್ರಶ್ನೆಯಲ್ಲೇ ಇರುತ್ತದೆ ಅದನ್ನು ಕಂಡುಕೊಳ್ಳಬೇಕು. ಯಾವುದೇ ಸಮಸ್ಯೆ ಎದುರಾದರೂ ಮನಸ್ಸಿನೊಂದಿಗೆ ಮಾತನಾಡಿ ಅದರಿಂದ ಹೊರಬರುವ ಉಪಾಯ ಹುಡುಕಬೇಕು. ಮನಸ್ಸಿನ ಗೊಂದಲಕ್ಕೆ ಕಾರಣ ಮನಸ್ಸೇ ಆಗಿದೆ. ಇದನ್ನು ಬರವಣಿಗೆಯಲ್ಲಿ ಬರೆದು ಏಕಾಂತದಲ್ಲಿ ತನಗೆ ತಾನು ಪ್ರಶ್ನೆ ಹಾಕಿದಾಗ ಕ್ಲಿಷ್ಟಕರ ಸಮಸ್ಯೆಗೂ ಪರಿಹಾರ ದೊರಕುತ್ತದೆ. ಮನುಷ್ಯ ಮನಸ್ಸನ್ನು ಪ್ರಶ್ನಿಸಲು ಆರಂಭಿಸಿದ ಕ್ಷಣದಿಂದ ಆಧ್ಯಾತ್ಮಕ್ಕೆ ತೆರೆದುಕೊಳ್ಳುತ್ತಾನೆ. ಆಧ್ಯಾತ್ಮವೆಂದರೆ ಕುಂಡಲಿನೀ ಶಕ್ತಿಯಲ್ಲಿ ಉಲ್ಲೇಖಿತವಾಗಿರುವ ಆಧ್ಯಾ ಶಕ್ತಿ ಅಥವಾ ಆದಿ ಶಕ್ತಿ ಜಾಗೃತವಾಗುವುದು. ಆದಿ ಶಕ್ತಿಯು ಮೂಲದಿಂದಲೂ ಇರುತ್ತಾಳೆ. ಆ ಶಕ್ತಿಗೆ ಚೈತನ್ಯ ನೀಡುವವನು ಪರಮೇಶ್ವರ. ಇಲ್ಲಿ ಪರಮೇಶ್ವರನು ಆತ್ಮ ತತ್ವದ ಪ್ರತೀಕ. ಎಲ್ಲಾ ಬಗೆಯ ಶಕ್ತಿಗಳೂ ಸೃಷ್ಠಿಯಾದದ್ದು ಸೂರ್ಯನ ಬೆಳಕಿನಿಂದ, ಈ ಬೆಳಕೇ ಆತ್ಮ. ಸೃಷ್ಠಿ ಸಮಸ್ತವೆಲ್ಲಾ ನಾಶವಾದರೂ ಬೆಳಕು ಯಥಾ ಸ್ಥಿತಿಯಲ್ಲಿರುತ್ತದೆ. ದೇಹದಲ್ಲಿ ಆತ್ಮದ ಗತಿಯೂ ಇದೇ ಆಗಿದೆ. ಬೆಳಕನ್ನು ಯಾವುದರಿಂದಲೂ ನಾಶ ಮಾಡಲು ಸಾಧ್ಯವಿಲ್ಲ. ಮನುಷ್ಯ ತನ್ನೊಳಗಿನ ಬೆಳಕನ್ನು ಅರಿತಾಗ ಅರಿವು ಅವನ ಪಾಲಾಗುತ್ತದೆ. ನಾವು ನಮ್ಮ ಆಂತರ್ಯದಲ್ಲಿರುವ ಅರಿವನ್ನು ಮನಸ್ಸಿನ ಮೇಲೆ ಪ್ರಭಾವಿಸಿದಾಗ ಎಲ್ಲಾ ಬಗೆಯ ನಕಾರಾತ್ಮಕ ಆಲೋಚನೆಗಳು ದೂರವಾಗುತ್ತದೆ. ಇದನ್ನೇ ಬುದ್ಧಿ ಬಲವಾಗುವುದು ಅಥವಾ ಸ್ವ ಸಮಾಲೋಚನೆ ಎನ್ನಲಾಗುತ್ತದೆ. ಈ ವಿಧಾನವನ್ನು ಯಾರು ಬೇಕಾದರೂ ಅಳವಡಿಸಿಕೊಳ್ಳಬಹುದು ಆದರೆ ಇದಕ್ಕೆ ಅಧ್ಯಯನದ ಅವಶ್ಯಕತೆ ಇರುತ್ತದೆ. ಪ್ರಸ್ತುತ ಕೌನ್ಸಿಲಿಂಗ್ ಎಂದರೇನು ಎನ್ನುವ ಪ್ರಶ್ನೆಯೂ ಹಲವರಲ್ಲಿದೆ. ಮನಸ್ಸಿನಲ್ಲಿ ಎಚ್ಚರ, ಸ್ವಪ್ನಾ ಮತ್ತು ಸುಶುಪ್ತ ಎನ್ನುವ ಮೂರು ಬಗೆಯ ಪ್ರಜ್ಞೆಗಳಿವೆ. ಎಚ್ಚರಾವಸ್ಥೆಯಲ್ಲಿ ಮನಸ್ಸು, ದೇಹ ಮತ್ತು ಬುದ್ಧಿ ಕಾರ್ಯ ನಿರ್ವಹಿಸುತ್ತಿರುತ್ತದೆ. ಸ್ವಪ್ನಾವಸ್ಥೆಯಲ್ಲಿ ಶರೀರ ನಿದ್ದೆಗೆ ಜಾರಿರುತ್ತದೆ ಮನಸ್ಸು ಜಾಗೃತವಾಗಿರುತ್ತದೆ. ಸುಶುಪ್ತಾವಸ್ಥೆಯಲ್ಲಿ ಮೆದುಳು ಎಚ್ಚರದಲ್ಲಿರುತ್ತದೆ. ಮನಸ್ಸನ್ನು ನಾವು ಅಧ್ಯಿಸುವುದು ಸ್ವ ಸಮಾಲೋಚನೆಯಾದರೆ, ನಮ್ಮ ಮನಸ್ಸನ್ನು ಇತರರು ಓದುವುದು ಸಮಾಲೋಚನೆಯೆನಿಸುತ್ತದೆ. ಪ್ರತಿಫಲಾಪೇಕ್ಷೆಯೊಂದಿಗೆ ಕರ್ಮ ಮಾಡಿ ಅದು ಈಡೇರದಿದ್ದಾಗ ಖಿನ್ನತೆ ಕಾಡುತ್ತದೆ ಅದರಿಂದ ಹೊರಬರಲು ಕೌನ್ಸಿಲಿಂಗ್ ಮುಂತಾದ ಚಿಕಿತ್ಸೆಗಳನ್ನು ಜನರು ಪಡೆಯುತ್ತಿದ್ದಾರೆ. ಇದನ್ನೇ ಕೃಷ್ಣನೂ ಭಗವದ್ಗೀತೆಯಲ್ಲಿ ಉಲ್ಲೇಖಿಸಿದ್ದಾನೆ. ಪ್ರತಿಫಲಾಪೇಕ್ಷೆ ಇಲ್ಲದೆ ಸಹಾಯ ಮಾಡಿದಾಗ ಮನಃಶಾಂತಿ ದೊರೆಯುತ್ತದೆ.

For More Videos:

ಸೂತಕದ ಮನೆ ಹನ್ನೊಂದು ದಿನ ಹೇಗಿರಬೇಕು ಗೊತ್ತೇ ? | ಅವಧೂತ ಶ್ರೀ ವಿನಯ್ ಗುರೂಜಿ https://youtu.be/3ZGy7yInnhA

ವಿವಾಹ ಯೋಗ ಕೈ ತಪ್ಪುವುದು ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿ https://youtu.be/rSES9Sxi2WY

ಸರ್ಪ ದೋಷ ನಿವಾರಣೆ ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿ https://youtu.be/xSfJFvg24F0

ಹೀಗೆ ಮಾಡುವುದರಿಂದ ಮೋಕ್ಷದ ಬಾಗಿಲು ತೆರೆಯುತ್ತದೆ! | ಭಾಗ - 2 | ಅವಧೂತ ಶ್ರೀ ವಿನಯ್ ಗುರೂಜಿ https://youtu.be/vx-a354uTjs

ಇದುವೇ ಸ್ವರ್ಗ ನರಕದ ಮಹಾ ರಹಸ್ಯ ! | ಭಾಗ - ೧ | ಅವಧೂತ ಶ್ರೀ ವಿನಯ್ ಗುರೂಜಿ https://youtu.be/VntCiedcwas

#AvadhoothaSriVinayGuruji #trending #blessings #srivinayguruji #vinayguruji #guruji #youtube #youtubeislife #youtubeguru #youtubecontent #newvideo #subscribers #youtubevideo #youtuber #youtubevideos #india #gurujispeech #health #tips #homeremedies
#hospital #medicine #Family #Familylife

Видео ನಮ್ಮ ಆಲೋಚನೆಗಳನ್ನು ಹತೋಟಿಯಲ್ಲಿಡುವುದು ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿ канала Avadhootha
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
2 июня 2023 г. 17:30:33
00:10:07
Другие видео канала
ನನಸಾಯ್ತು ಗಾಂಧಿ ಕುಟೀರದ ಕನಸು | ಅವಧೂತ ಶ್ರೀ ವಿನಯ್ ಗುರೂಜಿನನಸಾಯ್ತು ಗಾಂಧಿ ಕುಟೀರದ ಕನಸು | ಅವಧೂತ ಶ್ರೀ ವಿನಯ್ ಗುರೂಜಿಅವಧೂತರ ಆಶೀರ್ವಾದ ಪಡೆದ ಬಹುಭಾಷಾ ನಟ ಅರ್ಜುನ್ ಸರ್ಜಾಅವಧೂತರ ಆಶೀರ್ವಾದ ಪಡೆದ ಬಹುಭಾಷಾ ನಟ ಅರ್ಜುನ್ ಸರ್ಜಾತಾಳ್ಮೆಯಿಂದ ಇರಲು ಇದೆ ಸಾಧ್ಯ !  | ಅವಧೂತ ಶ್ರೀ ವಿನಯ್ ಗುರೂಜಿತಾಳ್ಮೆಯಿಂದ ಇರಲು ಇದೆ ಸಾಧ್ಯ ! | ಅವಧೂತ ಶ್ರೀ ವಿನಯ್ ಗುರೂಜಿಶ್ರೀ ಸಿದ್ಧಾರೂಢ ಮಹಾಸ್ವಾಮಿಗಳಿಗೆ ಅವಧೂತರಿಂದ ವಿಶೇಷ ಪೂಜೆ | ಅವಧೂತ ಶ್ರೀ ವಿನಯ್ ಗುರೂಜಿಶ್ರೀ ಸಿದ್ಧಾರೂಢ ಮಹಾಸ್ವಾಮಿಗಳಿಗೆ ಅವಧೂತರಿಂದ ವಿಶೇಷ ಪೂಜೆ | ಅವಧೂತ ಶ್ರೀ ವಿನಯ್ ಗುರೂಜಿನೈತಿಕ ಸಿದ್ಧಾಂತಗಳನ್ನು ಪಾಲಿಸದೇ ಇರುವುದೇ ಸಮಾಜದ ಕೆಡುಕಿನ ಕಾರಣ! | ಅವಧೂತ ಶ್ರೀ ವಿನಯ್ ಗುರೂಜಿನೈತಿಕ ಸಿದ್ಧಾಂತಗಳನ್ನು ಪಾಲಿಸದೇ ಇರುವುದೇ ಸಮಾಜದ ಕೆಡುಕಿನ ಕಾರಣ! | ಅವಧೂತ ಶ್ರೀ ವಿನಯ್ ಗುರೂಜಿಗರುಡ ಪುರಾಣವನ್ನು ಮನೆಯಲ್ಲಿ ಯಾಕೆ ಓದಬಾರದು? | ಅವಧೂತ ಶ್ರೀ ವಿನಯ್ ಗುರೂಜಿಗರುಡ ಪುರಾಣವನ್ನು ಮನೆಯಲ್ಲಿ ಯಾಕೆ ಓದಬಾರದು? | ಅವಧೂತ ಶ್ರೀ ವಿನಯ್ ಗುರೂಜಿಭಗವಂತನ ನರ ನಾರಾಯಣ ಅವತಾರದ ಹಿಂದಿದೆ ಈ ಮಹಾ ರಹಸ್ಯ! ಅವಧೂತ ಶ್ರೀ ವಿನಯ್ ಗುರೂಜಿಭಗವಂತನ ನರ ನಾರಾಯಣ ಅವತಾರದ ಹಿಂದಿದೆ ಈ ಮಹಾ ರಹಸ್ಯ! ಅವಧೂತ ಶ್ರೀ ವಿನಯ್ ಗುರೂಜಿಹೊಸವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳುವ ಮುನ್ನ ಇದನ್ನೊಮ್ಮೆ ತಪ್ಪದೇ ಕೇಳಿ! | New Year | Avadhoothaಹೊಸವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳುವ ಮುನ್ನ ಇದನ್ನೊಮ್ಮೆ ತಪ್ಪದೇ ಕೇಳಿ! | New Year | Avadhoothaಭಗವಂತ ಈ ಅವತಾರ ಎತ್ತಿದ್ದೇ ಈ ಮಹಾ ಉದ್ದೇಶಕ್ಕೆ | ಅವಧೂತ ಶ್ರೀ ವಿನಯ್ ಗುರೂಜಿಭಗವಂತ ಈ ಅವತಾರ ಎತ್ತಿದ್ದೇ ಈ ಮಹಾ ಉದ್ದೇಶಕ್ಕೆ | ಅವಧೂತ ಶ್ರೀ ವಿನಯ್ ಗುರೂಜಿತಾಂಬೂಲದಿಂದ ವಾಕ್ ದೋಷ ಹೋಗುತ್ತೆ  | ಅವಧೂತ ಶ್ರೀ ವಿನಯ್ ಗುರೂಜಿತಾಂಬೂಲದಿಂದ ವಾಕ್ ದೋಷ ಹೋಗುತ್ತೆ | ಅವಧೂತ ಶ್ರೀ ವಿನಯ್ ಗುರೂಜಿಸಕ್ರೇಬೈಲು  ಬಳಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಅವಧೂತರು || ಅವಧೂತ ಶ್ರೀ ವಿನಯ್ ಗುರೂಜಿ |ಸಕ್ರೇಬೈಲು ಬಳಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಅವಧೂತರು || ಅವಧೂತ ಶ್ರೀ ವಿನಯ್ ಗುರೂಜಿ |ನಾವು ಬೆಳೆಯುವ ವಾತಾವರಣದ ಮೇಲೆ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ! | ಅವಧೂತ ಶ್ರೀ ವಿನಯ್ ಗುರೂಜಿನಾವು ಬೆಳೆಯುವ ವಾತಾವರಣದ ಮೇಲೆ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ! | ಅವಧೂತ ಶ್ರೀ ವಿನಯ್ ಗುರೂಜಿಇವೆಲ್ಲವೂ ಧರ್ಮ ಯುದ್ದ ಆಗುವುದೇ ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿಇವೆಲ್ಲವೂ ಧರ್ಮ ಯುದ್ದ ಆಗುವುದೇ ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿಹೀಗೆ ಮಾಡುವುದರಿಂದ ಸಂಬಂಧಗಳು ಸದೃಢವಾಗಿರುತ್ತವೆ | ಅವಧೂತ ಶ್ರೀ ವಿನಯ್ ಗುರೂಜಿಹೀಗೆ ಮಾಡುವುದರಿಂದ ಸಂಬಂಧಗಳು ಸದೃಢವಾಗಿರುತ್ತವೆ | ಅವಧೂತ ಶ್ರೀ ವಿನಯ್ ಗುರೂಜಿದೇಹದ ಒಳಗೆ ಚಕ್ರಗಳನ್ನು ಯಾಕ್ಟಿವೇಟ್ ಮಾಡುವುದು ಹೇಗೆ  | ಅವಧೂತ ಶ್ರೀ ವಿನಯ್ ಗುರೂಜಿದೇಹದ ಒಳಗೆ ಚಕ್ರಗಳನ್ನು ಯಾಕ್ಟಿವೇಟ್ ಮಾಡುವುದು ಹೇಗೆ | ಅವಧೂತ ಶ್ರೀ ವಿನಯ್ ಗುರೂಜಿನಿದ್ದೆ ಬರದೇ ಇರೋದಕ್ಕೆ ಇವೆಲ್ಲಾ ಕಾರಣಗಳು |  ಅವಧೂತ ಶ್ರೀ ವಿನಯ್ ಗುರೂಜಿನಿದ್ದೆ ಬರದೇ ಇರೋದಕ್ಕೆ ಇವೆಲ್ಲಾ ಕಾರಣಗಳು | ಅವಧೂತ ಶ್ರೀ ವಿನಯ್ ಗುರೂಜಿಇದು ಪಿತೃದೋಷವನ್ನು ಪರಿಹರಿಸುವ ಸರಳ ಕ್ರಿಯೆ! | ಅವಧೂತ ಶ್ರೀ ವಿನಯ್ ಗುರೂಜಿಇದು ಪಿತೃದೋಷವನ್ನು ಪರಿಹರಿಸುವ ಸರಳ ಕ್ರಿಯೆ! | ಅವಧೂತ ಶ್ರೀ ವಿನಯ್ ಗುರೂಜಿನಗರಗಳಲ್ಲಿ ಏನಿದ್ದರೇನು ಇವಿಲ್ಲದಿದ್ದರೆ! | ಅವಧೂತ ಶ್ರೀ ವಿನಯ್ ಗುರೂಜಿನಗರಗಳಲ್ಲಿ ಏನಿದ್ದರೇನು ಇವಿಲ್ಲದಿದ್ದರೆ! | ಅವಧೂತ ಶ್ರೀ ವಿನಯ್ ಗುರೂಜಿಗೌರಿ ಗದ್ದೆ ಆಶ್ರಮದಲ್ಲಿ ಕಣ್ಣು ತಪಾಸಣಾ ಶಿಬಿರ | Eye checkup camp at Gowrigadde Ashramಗೌರಿ ಗದ್ದೆ ಆಶ್ರಮದಲ್ಲಿ ಕಣ್ಣು ತಪಾಸಣಾ ಶಿಬಿರ | Eye checkup camp at Gowrigadde Ashramಹೀಗೆ ಮಾಡಿದರೆ ಖಂಡಿತಾ ತಂದೆ ತಾಯಿಯ ಋಣಸಂದಾಯ ಮಾಡಿದಂತಾಗುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿಹೀಗೆ ಮಾಡಿದರೆ ಖಂಡಿತಾ ತಂದೆ ತಾಯಿಯ ಋಣಸಂದಾಯ ಮಾಡಿದಂತಾಗುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿ
Яндекс.Метрика