Загрузка страницы

soorya namaskar at kadri | ಸಾಮೂಹಿಕ ಸೂರ್ಯ ನಮಸ್ಕಾರ | VIHARA PLUS

ಸೂರ್ಯನಮಸ್ಕಾರವೆನ್ನುವುದು ಭಾರತೀಯ ಯೋಗ ಪದ್ಧತಿ ಯಲ್ಲಿ ಬರುವಂತಹ ಮಹತ್ವದ ಭಾಗಗಳಲ್ಲೊಂದು. ಹಠಯೋಗದಲ್ಲಿ ಬರುವ ಈ ವ್ಯಾಯಾಮವು ಒಟ್ಟು 12 ವಿವಿಧ ಯೋಗಾಸನಗಳ ಒಂದು ಗುಚ್ಛ ಅಥವಾ ಸರಣಿ. ಓಂ ಮಿತ್ರಾಯ ನಮಃ, ಓಂ ರವಯೇ ನಮಃ, ಓಂ ಸೂರ್ಯಾನ ನಮಃ ಸೂರ್ಯನ ಬೀಜ ಮಂತ್ರವನ್ನು ಉಚ್ಛರಿಸುತ್ತಾ ಸೂರ್ಯನಮಸ್ಕಾರವನ್ನು ಮಾಡಲಾಗುತ್ತದೆ. ಮುಂಜಾನೆ ಸೂರ್ಯೋದಯದ ಕಾಲದಲ್ಲಿ ಮಾಡುವ ಸೂರ್ಯನಮಸ್ಕಾರದಿಂದ ದೈಹಿಕ, ಮಾನಸಿಕ ಆರೋಗ್ಯ ಉತ್ತಮಗೊಳ್ಳುತ್ತದೆ.
ಇಂತಹ ಸೂರ್ಯನಮಸ್ಕಾರ ಹಾಗೂ ಒಟ್ಟು ಯೋಗಾಸನದ ಪ್ರಸರಣದ ನಿಟ್ಟಿನಲ್ಲಿ ಮಂಗಳೂರಿನ ಶ್ರೀ ಪತಂಜಲಿ ಯೋಗ ಶಿಕ್ಷಣ ಪ್ರತಿಷ್ಠಾನದವರು ಪ್ರತಿ ವರ್ಷ ರಥಸಪ್ತಮಿಯ ದಿನದಂದು ಸಾಮೂಹಿಕವಾಗಿ ಕದ್ರಿಯ ಶ್ರೀ ಮಂಜುನಾಥೇಶ್ವರ ದೇವಸ್ಥಾನದ ಪ್ರಾಂಗಣದಲ್ಲಿ 108 ಸೂರ್ಯನಮಸ್ಕಾರ ಪ್ರದರ್ಶನ ಏರ್ಪಡಿಸುತ್ತಿದ್ದಾರೆ.
ಸೂರ್ಯನ ಎಳೆಯ ಕಿರಣಗಳು ಶರೀರವನ್ನು ಸ್ಪರ್ಶಿಸಿದಾಗ ಶರೀರಕ್ಕೆ ಹೊಸ ಚೈತನ್ಯ ಲವಲವಿಕೆ ಲಭಿಸಿ ಅದು ಆರೋಗ್ಯಪೂರ್ಣವಾಗಿ ವಿಕಸನಗೊಳ್ಳುತ್ತದೆ, ಸೂರ್ಯನಮಸ್ಕಾರದಿಂದ ದೇಹದ 186 ಎಲುಬು ಕೀಲುಗಳಿಗೆ ಮಾಂಸಖಂಡಗಳಿಗೆ ಚಲನೆ ದೊರೆತು ಅವುಗಳ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ.
ಲಯಬದ್ಧ ಶ್ವಾಸಕ್ರಿಯೆಯಿಂದ ನಾಡಿಗಳಲ್ಲಿ ಪ್ರಾಣ ಸಂಚಾರ ಸುಗಮಗೊಂಡು ದೇಹ ನವಚೈತನ್ಯ ಪಡೆಯುತ್ತದೆ. ಬೀಜಾಕ್ಷರ ಮಂತ್ರಗಳ ಉಚ್ಛಾರದಿಂದ ಮೆದುಳಿನ ವಿವಿಧ ಕೇಂದ್ರಗಳು ಪ್ರಚೋದನೆಗೊಂಡು ವಿವಿಧ ಗ್ರಂಥಿಗಳ ಕಾರ್ಯ ಸಮರ್ಪಕಗೊಳ್ಳುತ್ತದೆ. ಶರೀರ, ಮನಸ್ಸು, ಬುದ್ಧಿ, ಆತ್ಮದ ಪರಿಪೂರ್ಣ ವಿಕಾಸಕ್ಕೆ ಕಾರಣವಾಗುತ್ತದೆ ಎನ್ನುತ್ತಾರೆ ಪತಂಜಲಿ ಯೋಗ ಕೇಂದ್ರದವರು.

Surya Namaskar or Sun Salutation is a sequence of 12 powerful yoga poses. Besides being a great cardiovascular workout, Surya Namaskar is also known to have an immensely positive impact on the body and mind.

Surya Namaskar is best done early morning on an empty stomach. Each round of Sun Salutation consists of two sets, and each set is composed of 12 yoga poses. You might find several versions on how to practice Sun Salutation. However, it is advisable to stick to one particular version and practice it regularly for best results.

Besides good health, Surya Namaskar also provides an opportunity to express gratitude to the sun for sustaining life on this planet.

In Kadri Shri Manjunatha Temple, every year open Sooryanamaskar session is conducted by Shri Patanjali yoga shikshan pratishtana.

You can contact Patanjali Pratishtana for daily yoga training.
contact: 9481765574 / 9243317217 / 9945222532

#viharaplus #KadriTemple #PatanjaliYoga #IndianYoga #Yogasana
#ಸೂರ್ಯನಮಸ್ಕಾರ #ಯೋಗಾಸನ #ಕದ್ರಿಮಂಜುನಾಥೇಶ್ವರದೇವಸ್ಥಾನ

Видео soorya namaskar at kadri | ಸಾಮೂಹಿಕ ಸೂರ್ಯ ನಮಸ್ಕಾರ | VIHARA PLUS канала Vihara Plus
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
21 февраля 2021 г. 11:39:39
00:07:36
Яндекс.Метрика