Загрузка страницы

Unique Yakshagana Artist | Yakshagana Memento | VIHARA PLUS

#ViharaPlus #RavirajHaleangady #YakshaganaMementos
ಯಕ್ಷಗಾನದ ಸ್ಮರಣಿಕೆಗಳು, ಯಕ್ಷಗಾನ ಕಿರೀಟ, ವೇಷಭೂಷಣಗಳನ್ನು ತಯಾರಿಸುವ ಕುಸುರಿ ಕಲೆ ಬಲ್ಲವರು ರವಿರಾಜ್‌ ಹಳೆಯಂಗಡಿ. ಈ ಭಾಗದಲ್ಲಿ ಯಕ್ಷಗಾನದ ಸ್ಮರಣಿಕೆಗಳನ್ನು ತಯಾರಿಸುವ ಕೌಶಲ್ಯ ಹೊಂದಿದ ಕೆಲವೇ ಮಂದಿಯಲ್ಲಿ ರವಿ ಕೂಡಾ ಒಬ್ಬರು.
ಮಂಗಳೂರಿನ ಹೊರವಲಯದ ಪಾವಂಜೆ ಜ್ಞಾನಶಕ್ತಿ ಸುಬ್ರಹ್ಮಣ್ಯ ಕ್ಷೇತ್ರದ ಸಮೀಪ ಹಳೆಯಂಗಡಿ ಎಂಬಲ್ಲಿನ ತಮ್ಮ ಮನೆಯ ಹಿಂದೆ ಪುಟ್ಟ ಶೆಡ್‌ನಲ್ಲಿ ತಮ್ಮ ತಂಡದೊಂದಿಗೆ ಯಕ್ಷಗಾನದ ಬೊಂಬೆಗಳು, ಸ್ಮರಣಿಕೆಗಳು, ಮುಖವರ್ಣಿಕೆಗಳನ್ನು ಸಿದ್ಧಪಡಿಸುತ್ತಾ ಯಕ್ಷಗಾನದ ಪ್ರಚಾರದಲ್ಲಿ ತೊಡಗಿದವರು.

ಮಣ್ಣಿನಲ್ಲಿ ಮೊದಲು ಮುಖವರ್ಣಿಕೆಯ ಅಚ್ಚು ತಯಾರಿಸಿ, ಅದನ್ನು ಬಳಿಕ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ಗೆ ವರ್ಗಾಯಿಸಿ, ಕೊನೆಯಲ್ಲಿ ಫೈಬರ್‌ನಿಂದ ಸ್ಮರಣಿಕೆಗಳನ್ನು ಸಿದ್ಧಪಡಿಸುವುದು ಬಹಳ ತಾಳ್ಮೆ ಹಾಗೂ ಸಮಯವನ್ನು ಕೇಳುವ ಕೆಲಸ. ಅಚ್ಚು ಸಿದ್ಧಪಡಿಸಿ, ತಂಡದ ಮೂಲಕ ಬೇಕಾದ ರೀತಿಯ ಸ್ಮರಣಿಕೆಯ ಬೇಸ್‌ ಮಾಡಿಸುತ್ತಾರೆ, ಅಂತಿಮವಾಗಿ ವರ್ಣ, ಟಚಪ್‌ ಇತ್ಯಾದಿಯನ್ನು ಸ್ವತಃ ರವಿಯವರೇ ಮಾಡುತ್ತಾರೆ.

ಹೀಗೆ ಅವರು ಸಿದ್ಧಪಡಿಸಿದ ಸ್ಮರಣಿಕೆಗಳು ದೇಶವಿದೇಶಗಳಿಗೂ ಹೋಗಿ ಕಪಾಟುಗಳಲ್ಲಿ ನೋಡುಗರ ಗಮನ ಸೆಳೆಯುತ್ತಿವೆ. ಕೇವಲ ಸ್ಮರಣಿಕೆ ಮಾತ್ರವಲ್ಲ, ವಿವಿಧ ಮೇಳಗಳಿಗೆ ಬೇಕಾದ ವೇಷಭೂಷಣ, ಕಿರೀಟಗಳನ್ನೂ ರವಿ ತಯಾರಿಸಿಕೊಡುತ್ತಾರೆ.

Raviraj Haleangady is a unique and self made yakshagana artist. He designs yakshagana souvenirs, mementos and costumes to various yakshagana troupes in coastal karnataka.
He designs the yakshaga memento initially in clay mud and then converts it in to plaster of paris and finally to fiber. Then final coloring is made using traditional five colours of yakshagana.

chende beats credit : krishnamohan
----------------------------------------------------------------
RAVIRAJ HALEANGADY: 09632845009
----------------------------------------------------------------
Subscribe VIHARA PLUS channel
https://https://www.youtube.com/c/VIHARAPLUS
contact VIHARA PLUS: 09448386876

Видео Unique Yakshagana Artist | Yakshagana Memento | VIHARA PLUS канала Vihara Plus
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
16 января 2022 г. 20:28:55
00:08:44
Яндекс.Метрика