Загрузка страницы

VIHARA PLUS | Parashuram Temple | ಪರಶುರಾಮ ದೇವಸ್ಥಾನ

#ParashuramTemple #Mundaje #viharaplus
Sanyasikatte Mundaje Shri Parashurama Temple is unique and one of the few such temples dedicated to Parashuram, who is believed to be the creator of konkan coastline. Old temple on the verge of decay was renovated in 2018. This temples lies near River netravati, in a village called mundaje, belthangady taluk of dakshina kannada, karnataka.
ಪಶ್ಚಿಮಕರಾವಳಿಯನ್ನು ಪರಶುರಾಮ ಸೃಷ್ಟಿ ಎಂದೇ ಅನಾದಿ ಕಾಲದಿಂದಲೂ ಕರೆಯಲಾಗುತ್ತದೆ.
ವಿಷ್ಣುವಿನ ೬ನೇ ಅವತಾರವೆಂದೇ ನಂಬಲ್ಪಡುವ ಪರಶುರಾಮ ಬ್ರಾಹ್ಮಣನಾದರೂ ಕ್ಷತ್ರಿಯನಂತೆಯೇ ಶೂರನಾಗಿದ್ದ. ಜಮದಗ್ನಿ-ರೇಣುಕೆಯರ ಪುತ್ರ. ತಂದೆಯನ್ನು ಕೊಂದ ಕ್ಷತ್ರಿಯರ ವಿರುದ್ಧ ಸಿಡಿದೆದ್ದು ಅವರ ೨೧ ಬಾರಿ ಲೋಕ ಪರ್ಯಟನೆ ಮಾಡಿ ಭ್ರಷ್ಟ ಕ್ಷತ್ರಿಯರನ್ನು ವಧಿಸಿದ್ದ. ತನ್ನ ಕೊಡಲಿಯನ್ನು ಕರಾವಳಿಯ ಬೆಟ್ಟದ ಮೇಲೆ ನಿಂತು ಬೀಸಿ ಎಸೆದ ಕಾರಣ ಸಾಗರವೂ ಹಿಂದೆ ಸರಿದು ಕರಾವಳಿ ಪ್ರದೇಶ ಉದ್ಭವಿಸಿದೆ ಎಂಬ ಕಥೆಯಿದೆ.
ಪರಶುರಾಮನ ಜನ್ಮಸ್ಥಳ ಬೆಳಗಾವಿಯ ಸಮೀಪ ಪರಶುಗಢ ಎಂಬ ಜಾಗ. ಆದರೂ ಆತನಿಗೆ ಕರಾವಳಿಯಲ್ಲಿ ಗೌರವದ ಸ್ಥಾನವಿದೆ. ಹಾಗಾದರೆ ಇಷ್ಟಾದರೂ ಪರಶುರಾಮನ ದೇವಸ್ಥಾನಗಳು ನಮ್ಮ ನಾಡಿನಲ್ಲಿ ವಿರಳವೇ ಹೌದು. ಕೇರಳದಲ್ಲಿ ನೂರಾರು ಪರಶುರಾಮ ದೇವಸ್ಥಾನಗಳಿವೆ. ಮಹಾರಾಷ್ಟ್ರದಲ್ಲೂ ಕೆಲವು ದೇವಳಗಳಿವೆ. ದಕ್ಷಿಣ ಕನ್ನಡದಲ್ಲಿ ಇರುವ ಕೆಲವೇ ಕೆಲವು ದೇವಸ್ಥಾನಗಳಲ್ಲಿ ಬೆಳ್ತಂಗಡಿ ಸಮೀಪದ ಮುಂಡಾಜೆಯ ಸನ್ಯಾಸಿ ಕಟ್ಟೆ ಎಂಬಲ್ಲಿರುವ ಪರಶುರಾಮ ದೇವಸ್ಥಾನ ಪ್ರಸಿದ್ಧ ಯಾತ್ರಾಸ್ಥಳ. ನೇತ್ರಾವತಿ ನದಿಯ ಪಕ್ಕದಲ್ಲಿ ಮಂಗಳೂರು ಚಿಕ್ಕಮಗಳೂರು ಸಂಪರ್ಕಿಸುವ ಚಾರ್ಮಾಡಿ ಘಾಟ್‌ ರಸ್ತೆಯ ಪಕ್ಕದಲ್ಲೇ ಇದೆ ಈ ದೇವಸ್ಥಾನ.
ಮಂಗಳೂರಿನಿಂದ ಸುಮಾರು ೮೨ ಕಿ.ಮೀ ಹಾಗೂ ೩೦೦ ಕಿ.ಮೀ ದೂರದಲ್ಲಿ ಇರುವ ಈ ದೇವಸ್ಥಾನ ಹೆದ್ದಾರಿಯ ಪಕ್ಕದಲ್ಲೇ ಇದೆ. ಪಕ್ಕದಲ್ಲೇ ಬಸ್‌ ತಂಗುದಾಣವಿದೆ, ಹಾಗಾಗಿ ಸ್ವಂತ ವಾಹನದಲ್ಲಾಗಲೀ ಬಸ್‌ ಮೂಲಕವಾಗಲೀ ಇಲ್ಲಿಗೆ ಬರಬಹುದು. ಪರಶುರಾಮನಿಗೂ ನಡೆಯುವ ಪೂಜೆಯನ್ನು ವೀಕ್ಷಿಸಬಹುದು.

Map link
https://goo.gl/maps/jewsAT8zcrNA1fvk8

Gratitudes for the wonderful music
https://www.youtube.com/watch?v=ko-fk45T7K8&t=205s
https://www.youtube.com/watch?v=JOyidNWwIZw

subscribe our channel
https://www.youtube.com/c/VIHARA

Видео VIHARA PLUS | Parashuram Temple | ಪರಶುರಾಮ ದೇವಸ್ಥಾನ канала Vihara Plus
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
14 декабря 2021 г. 9:42:35
00:05:17
Яндекс.Метрика