Загрузка страницы

VANACHETHANA | VIHARA PLUS | ವನಚೇತನ | Dinesh Holla

#ViharaPlus#VanaChethana #DineshHolla
ವೃತ್ತಿಯಿಂದ ಗ್ರಾಫಿಕ್ ಡಿಸೈನರ್‌ ಆಗಿರುವ ದಿನೇಶ್‌ ಹೊಳ್ಳ ರೇಖಾಚಿತ್ರ ಬಿಡಿಸುವುದರಲ್ಲಿ ನಾಡಿನಲ್ಲೇ ವಿಖ್ಯಾತರು, ನಿಸರ್ಗ ಎಂದರೆ ಅಷ್ಟೇ ಖುಷಿ ಪಡುವವರು ದಿನೇಶ್ ಹೊಳ್ಳ. ನದಿ, ತೊರೆ, ಗುಡ್ಡ ಎಂದು ಚಾರಣ ಹೊರಡುವ ಹೊಳ್ಳ ನಿಸರ್ಗಕ್ಕೆ ಚ್ಯುತಿ ಉಂಟಾದಾಗ ಅಷ್ಟೇ ಗಂಭೀರವಾಗಿ ಹೋರಾಟಕ್ಕೆ ರೆಡಿ ಕೂಡಾ.
ಇಲ್ಲಿ ನಾವಿಂದು ತೋರಿಸುತ್ತಿರುವುದು ಹೊಳ್ಳರ ವ್ಯಕ್ತಿತ್ವದ ಮತ್ತೊಂದು ಆಯಾಮ. ಆದಿವಾಸಿ ಮಕ್ಕಳು ಎಂದರೆ ಇನ್ನಿಲ್ಲದ ಮಮತೆ ತೋರುವ ಅವರು ಕಳೆದೆರಡು ವರ್ಷಗಳಿಂದ ಉತ್ತರ ಕನ್ನಡ, ದಕ್ಷಿಣ ಕನ್ನಡದ ಗುಡ್ಡಗಾಡು ಪ್ರದೇಶದ ಮಕ್ಕಳ ಕ್ರಿಯಾಶೀಲತೆ ಹೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ.
ಕೋವಿಡ್‌ನಿಂದಾಗಿ ಶಾಲೆಯಿಲ್ಲದೆ ಮಸುಕಾದ ಮಕ್ಕಳ ಸೃಜನಶೀಲತೆಯನ್ನು ಮತ್ತೆ ಚುರುಕುಗೊಳಿಸುವ ಮೂಲಕ ಅವರಿಗೆ ನೆರವಾಗಿದ್ದಾರೆ.
ಕಳೆದ ವರ್ಷ ವನಬೆಳಕು ಎಂಬ ಕಾರ್ಯಕ್ರಮವನ್ನು ದಾನಿಗಳ ನೆರವಿನಲ್ಲಿ ನಡೆಸಲಾಯಿತು. ಜೋಯಿಡಾ, ಅಣಶಿ, ಯಲ್ಲಾಪುರ, ಅಂಕೋಲ, ಮುಂಡಗೋಡ, ದಾಂಡೇಲಿ, ಹಳಿಯಾಳ, ಕಾಳಿ ಹುಲಿ ರಕ್ಷಿತಾರಣ್ಯದ ಆಸುಪಾಸಿನಲ್ಲಿ ಎರಡು ಹಂತಗಳಲ್ಲಿ ‘ವನಬೆಳಕು’ ಹರಡಿದ್ದರು.
ಈ ವರ್ಷವೂ ಅದೇ ಮಾದರಿಯ ‘ವನಚೇತನ’ ಯೋಜನೆಯನ್ನು ಈಗಷ್ಟೇ ಮುಗಿಸಿದ್ದಾರೆ. ವನಬೆಳಕಿನಲ್ಲಿ ಅಡವಿ ಮಕ್ಕಳ ಸೃಜನ ವಿಕಸನವಾದರೆ ವನಚೇತನದಲ್ಲಿ ಮಕ್ಕಳ ವಿದ್ಯಾವಿಕಸನಕ್ಕೆ ಹೆಚ್ಚು ಒತ್ತು.
ಟಿವಿಯನ್ನೇಶಾಲೆಗಳಿಗೆ ಒಯ್ದು ಅಲ್ಲಿ ಪಾಠಗಳನ್ನು ಪ್ರದರ್ಶಿಸುವುದು ಅಲ್ಲದೆ ಮಕ್ಕಳ ಕ್ರಿಯಾತ್ಮಕತೆ ಹೆಚ್ಚಿಸುವಂತಹ ಆಟಗಳನ್ನು ಆಡಿಸುವುದು, ಕುಶಲಕಲೆಗಳು, ನೃತ್ಯ, ಆಕರ್ಷಕ ಕೈ ಬರಹ, ಗಾಳಿಪಟ ತಯಾರಿಕೆ ಇತ್ಯಾದಿ ಹತ್ತು ಹಲವು ಕಾರ್ಯಕ್ರಮಗಳನ್ನು ವನಬೆಳಕು ಶಿಬಿರದಲ್ಲಿ ಜೋಡಿಸಿಕೊಳ್ಳಲಾಗಿದೆ. ಸಹಜ ವಾತಾವರಣದಲ್ಲಿ ಶಾಲೆಗಿಂತಲೂ ಹೆಚ್ಚು ಖುಷಿಯಲ್ಲಿ ಮಕ್ಕಳು ಸೇರಿಕೊಂಡು ಕಲಿತುಕೊಳ್ಳುತ್ತಾರೆ.
ಅನಿವಾಸಿ ಭಾರತೀಯ ಉದ್ಯಮಿ ವಾಸುದೇವ ಐತಾಳ್ ಮುಖ್ಯವಾಗಿ ಖರ್ಚುವೆಚ್ಚಗಳ ಪ್ರಾಯೋಜಕತ್ವ ವಹಿಸಿಕೊಂಡರೆ ಇನ್ನಷ್ಟು ಮಂದಿ ಹೊಳ್ಳರಿಗೆ ಬೇಕಾದ ನೆರವನ್ನು ನೀಡಿದ್ದಾರೆ, ಬಹಳಷ್ಟು ಮಂದಿ ಸ್ವಯಂಸೇವಕರಾಗಿ ಸಂಪನ್ಮೂಲ ವ್ಯಕ್ತಿಗಳಾಗಿ ಶಿಬಿರಗಳಿಗೆ ಬಂದಿದ್ದಾರೆ.

This #VIHARA video is about Vanachethana, a unique project of Dinesh Holla, a graphic designer and an avid environment conservationist. Project is mainly focussed on rekindling creativity in tribal kids.

Dinesh Holla contact: 934111611
venu vinod: 9448386876
https://www.youtube.com/c/VIHARAPLUS

Видео VANACHETHANA | VIHARA PLUS | ವನಚೇತನ | Dinesh Holla канала Vihara Plus
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
7 декабря 2021 г. 10:06:30
00:07:24
Яндекс.Метрика