Загрузка страницы

NELLITEERTHA CAVE TEMPLE | VIHARA PLUS | ನೆಲ್ಲಿತೀರ್ಥ ಗುಹಾಲಯ

#Nelliteertha #CaveTemple#ViharaPlus

One of the highly revered Shiva temples in the region, Nellitheertha Cave Temple, otherwise known as Sri Somanatheshwara Cave Temple, is an ancient temple which is believed to have been established in the late 15th century. It is dedicated to Lord Shiva, and hence it is an important shrine amongst Shaivites. Being a cave temple, one need to scrawl on their knees to reach its sanctum sanctorum where a Shivalinga is worshipped. As per Hindu mythology, the cave was used by sage Jabali for meditation and penance. Today, the temple is a popular destination amongst nature lovers as well as Hindus. Surrounded by the lush greenery, it is located on the outskirts of Mangalore and maintains a peaceful and divine aura.

ಪ್ರಾಕೃತಿಕ ವಿಭಿನ್ನತೆ ಹಾಗೂ ಪುರಾಣದ ಹಿನ್ನೆಲೆಗಳಿಂದ ಮಹತ್ವ ಪಡೆದ ಕ್ಷೇತ್ರ ನೆಲ್ಲಿತೀರ್ಥ
ನೆಲ್ಲಿತೀರ್ಥ ದೇವಾಲಯವಾದರೂ ಅಲ್ಲಿರುವ ಗುಹಾಲಯದಿಂದಲೇ ಹೆಚ್ಚು ಪ್ರಸಿದ್ಧ. ಇದು ಈಶ್ವರನ ನೆಲೆವೀಡು. ನೆಲ್ಲಿತೀರ್ಥದಲ್ಲಿ ಸೋಮನಾಥೇಶ್ವರ ಆರಾಧ್ಯದೈವ. ಅದರೊಂದಿಗೆ ಗುಹೆಯಲ್ಲಿರುವವನು ಜಾಬಾಲೀ ಮುನಿಯಿಂದ ಪೂಜಿಸಲ್ಪಟ್ಟಿರುವ ಜಾಬಾಲೇಶ್ವರ.
ಕ್ರಿಸ್ತ ಶಕ ೧೫ನೇ ಶತಮಾನದಿಂದೀಚೆಗಿನ ಚರಿತ್ರೆಯನ್ನು ಹೊಂದಿರುವ ದೇವಳವು ಪೌರಾಣಿಕ ಹಿನ್ನೆಲೆಯ ಪ್ರಕಾರ ಅರುಣಾಸುರನನ್ನು ದೇವಿಯು ಭ್ರಾಮರಿಯಾಗಿ ಸಂಹರಿಸುವ ಕಥೆಯನ್ನು ಹೊಂದಿದೆ. ಹಾಗಾಗಿಯೇ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೂ ಅಲ್ಲಿಂದ ೧೨ ಕಿ.ಮೀ ದೂರವಿರುವ ನೆಲ್ಲಿತೀರ್ಥಕ್ಕೂ ಪೌರಾಣಿಕವಾಗಿಯೇ ಸಂಬಂಧವಿದೆ.
ಬಜ್ಪೆಯಿಂದ ಕಟೀಲಿಗೆ ಹೋಗುವ ದಾರಿಯಲ್ಲಿ ನಾಲ್ಕು ಕಿ.ಮೀ ಕಳೆದ ಕೂಡಲೇ ಬಲಕ್ಕೆ ತಿರುಗುವ ದಾರಿಯಲ್ಲಿ ಹೋಗಬೇಕು. ಪೇಟೆ ಮರೆಯಾಗಿ ಕಾಡು, ಅಡಿಕೆ ತೋಟಗಳಿಂದ ಕೂಡಿದ ಬೆಟ್ಟ ಕಣಿವೆಗಳನ್ನು ಏರಿಳಿದರೆ ನೀವು ನೆಲ್ಲಿತೀರ್ಥ ತಲಪುತ್ತೀರಿ.
ಯಾವುದೇ ಪೇಟೆಯ ಸ್ಪರ್ಶವಿರದ ಸ್ವಚ್ಛ ಪರಿಸರದ ಮಧ್ಯೆ ಇರುವ ಪ್ರಾಕೃತಿಕ ರಮಣೀಯ ತಾಣವಿದು.
ನೆಲ್ಲಿತೀರ್ಥ ದೇವಸ್ಥಾನ ತುಸು ಹೊಂಡದಲ್ಲಿದೆ. ಅದರ ಮೊದಲೇ ಕ್ಷೇತ್ರಪಾಲ, ರಕ್ತೇಶ್ವರಿ ಪಿಲಿಚಾಮುಂಡಿ ದೈವಗಳ ಗುಡಿಗಳು ಸಿಗುತ್ತವೆ. ಇವುಗಳನ್ನು ದಾಟಿ ಕೆಳಕ್ಕಿಳಿದರೆ ಸೋಮನಾಥ ದೇವಸ್ಥಾನ. ದೇವಸ್ಥಾನದ ಎಡಬದಿಯಲ್ಲಿ ಗುಹಾಲಯಕ್ಕೆ ಪ್ರವೇಶದ್ವಾರವಿದೆ. ಬಲಬದಿಯಲ್ಲಿ ಇಳಿದರೆ ನಾಗಪ್ಪ ಕೆರೆ ಅಥವಾ ತೀರ್ಥಸ್ನಾನದ ಕೆರೆಗೆ ಹೋಗುವ ದಾರಿ. ಈ ದಾರಿಯ ಪಕ್ಕದಲ್ಲೇ ಬಟ್ಟೆ ಬದಲಾಯಿಸಲು ಸ್ಥಳ, ಬಟ್ಟೆ, ಬಬ್ಯಾಗ್‌ಇರಿಸಲು ಲಾಕರ್‌, ಶೌಚಾಲಯಗಳು ಸಿಗುತ್ತವೆ. ತೋಟದ ಬದಿಯಲ್ಲಿ ಸುಮಾರು ನಾಲ್ಕನೂರು ಮೀಟರ್‌ನಷ್ಟು ನಡೆದರೆ ನಾಗಪ್ಪ ಕೆರೆಯ ದರ್ಶನ. ನಾಗಪ್ಪ ಕೆರೆ ಎನ್ನುವುದು ಹಳೇಯ ಸುಂದರ ಪುಷ್ಕರಿಣಿ. ಅದರಲ್ಲೂ ಡಿಸೆಂಬರ್‌ವರೆಗೆ ನೀಲಿಬಣ್ಣದ ನೀರಿನಿಂದ ಕಂಗೊಳಿಸುತ್ತದೆ.
ಗುಹಾಲಯಕ್ಕೆ ಹೋಗುವ ಮೊದಲು ಪುಷ್ಕರಣಿಯಲ್ಲಿ ಮುಳುಗಿ ಒದ್ದೆಬಟ್ಟೆಯಲ್ಲೇ ಬರಬೇಕು. ಟಿಕೆಟ್‌ಪಡೆದಿರಬೇಕು. ಮೊದಲು ಜಾಬಾಲಿ ಋಷಿಯ ವೃಂದಾವನದಲ್ಲಿ ನಮಸ್ಕರಿಸಿ ಬಳಿಕ ಮಾರ್ಗದರ್ಶಕರ ಹಿಂದೆ ತೆರಳಬೇಕು. ಗುಹೆಯಲ್ಲಿ ಮೊದಲು ಕೆಲ ಹೆಜ್ಜೆ ಇಳಿಯುವಾಗ ತುಸು ಬಗ್ಗಿದ್ದರೆ ಸಾಕು, ಆ ನಂತರ ಕುಳಿತು ಸಾಗುವುದು, ಆ ಬಳಿಕ ಮಲಗಿದ ಸ್ಥಿತಿಯಲ್ಲಿ ತೆವಳುತ್ತಾ ಸಾಗಬೇಕಾಗುತ್ತದೆ. ಅಕ್ಟೋಬರ್‌, ನವೆಂಬರ್‌ನಲ್ಲಿ ದಾರಿಯುದ್ದಕ್ಕೂ ನೀರಿರುತ್ತದೆ. ಗುಹೆಯ ಚಾವಣಿಯಿಂದ ನೀರು ನೆಲ್ಲಿಕಾಯಿ ಗಾತ್ರದಲ್ಲಿ ತೊಟ್ಟಿಕ್ಕುತ್ತಿರುತ್ತದೆ ಅದಕ್ಕಾಗಿಯೇ ನೆಲ್ಲಿತೀರ್ಥವೆಂಬ ಹೆಸರೂ ಬಂದಿದೆ. ಇಡೀ ಗುಹೆ ನೈಸರ್ಗಿಕವಾಗಿ ಕೆಂಪುಕಲ್ಲಿನಲ್ಲಿ ಆಗಿರುವಂಥದ್ದು.
ಒಟ್ಟು ೨೧೦ ಮೀಟರ್‌ಉದ್ದದ ಗುಹೆಯಲ್ಲಿ ಕತ್ತಲಿದ್ದರೂ ಮಾರ್ಗದರ್ಶಕರು ಹಿಡಿದು ಬರುವ ದೀಪದ ಬೆಳಕು ನಮಗೆ ಸುರಕ್ಷಿತ ಭಾವನೆ ನೀಡುತ್ತದೆ, ಯಾವುದೇ ಭಯವಿಲ್ಲದೆ ಸಾಗಬಹುದು, ಕೆಲ ಮೀಟರ್‌ತೆವಳಿದ ಬಳಿಕ ಮತ್ತೆ ಕುಳಿತು ಹೋಗಬೇಕು, ನಂತರ ಗುಹೆ ವಿಶಾಲವಾಗಿ ತೆರೆದುಕೊಳ್ಳುತ್ತದೆ.
ಅಲ್ಲೇ ಮುಂದೆ ತುಸು ಇಳಿದರೆ ಪುಟ್ಟ ಕೊಳವೊಂದಿದೆ, ಅದರ ಹಿಂದೆ ಎತ್ತರದಲ್ಲಿ ಶಿವಲಿಂಗವಿದೆ ಇದುವೇ ಜಾಬಾಲೇಶ್ವರನ ಲಿಂಗ. ಅದರ ಹಿಂದೆ ಜಾಬಾಲಿ ಮುನಿಗಳು ಬಂದಿರುವರು ಎಂದು ನಂಬಿರುವ ಕಾಶಿಗೆ ಸಂಪರ್ಕಿಸುವ ಗುಹೆ ಇದೆ, ಅದಕ್ಕೆ ಪ್ರವೇಶ ಇಲ್ಲ.
ಶಿವಲಿಂಗಕ್ಕೆ ಅಲ್ಲಿರುವ ನೀರನ್ನೇ ಅಭಿಷೇಕ ಮಾಡಿ ಬೀಳುವ ನೀರಿಗೆ ತಲೆಯೊಡ್ಡಿ ಪಕ್ಕದಲ್ಲಿರುವ ಗೋಡೆಯಿಂದ ಅಗತ್ಯವಿದ್ದರೆ ಮಾತ್ರವೇ ಮೃತ್ತಿಕಾ ಪ್ರಸಾದವನ್ನು ಪೂಸಿಕೊಂಡು ಹಿಂದಿರುಗಬೇಕು, ಬರುವ ದಾರಿಯಲ್ಲಿ ಜಾಬಾಲಿ ಋಷಿಗಳು ಧ್ಯಾನ ಮಾಡಿದ ಸ್ಥಳವಿದೆ, ಮತ್ತೆ ಮುಂದೆ ದುರ್ಗಾದೇವಿಯು ಕಟೀಲಿಗೆ ತೆರಳಿದ ಗುಹಾ ಮಾರ್ಗವೂ ಇದೆ. ಅಲ್ಲಿ ಕೈ ಮುಗಿದರೆ ನಮ್ಮ ಗುಹಾದರ್ಶನ ಪೂರ್ಣವಾದಂತೆ. ಮತ್ತೆ ತೆವಳುತ್ತಾ, ಕುಕ್ಕರುಗಾಲಲ್ಲಿ ಕುಳಿತುಕೊಳ್ಳುತ್ತಾ, ಬಾಗುತ್ತಾ ಗುಹೆಯಿಂದ ಹೊರಗೆ ಬರಬೇಕು. ಒಮ್ಮೆಗೇ ೧೦-೨೦ ಮಂದಿಯನ್ನು ದರ್ಶನಕ್ಕೆ ಕರೆದೊಯ್ಯಲಾಗುತ್ತದೆ. ಹೊರಗೆ ಬಂದ ಬಳಿಕ ಮತ್ತೆ ಅಲ್ಲಿ ಸ್ನಾನ ಮಾಡಬಾರದು, ಒಣಬಟ್ಟೆಯಲ್ಲಿ ಮೈಯೊರಸಿಕೊಂಡು ದೇವಸ್ಥಾನದಲ್ಲಿ ದೇವರ ದರ್ಶನ ಪಡೆದು ಜಾಬಾಲಿ ಋಷಿಗೆ ಅಡ್ಡಬಿದ್ದು ಪ್ರಸಾದ ಪಡೆದುಕೊಳ್ಳಬೇಕು.
ಬೆಳಗ್ಗೆ ೭.೩೦ರಿಂದ ಮಧ್ಯಾಹ್ನ ೧ ಗಂಟೆ ವರೆಗೆ ಮಾತ್ರವೇ ಗುಹೆಗೆ ಪ್ರವೇಶವಿದೆ. ಉಳಿದ ಹೊತ್ತಿನಲ್ಲಿ ಬಂದರೆ ದೇವಸ್ಥಾನವನ್ನಷ್ಟೇ ನೋಡಿ ಹಿಂದಿರುಗಬೇಕಾಗುತ್ತದೆ.
ಪ್ರತೀ ವರ್ಷ ಆರು ತಿಂಗಳು ಮಾತ್ರವೇ ಗುಹಾಲಯಕ್ಕೆ ಪ್ರವೇಶ. ತುಲಾ ಸಂಕ್ರಮಣದಿಂದ ಮೇಷ ಸಂಕ್ರಮಣದ ವರೆಗೆ ಎಂದರೆ ಅಕ್ಟೋಬರ್‌೧೭ರಿಂದ ಏಪ್ರಿಲ್‌೧೪ರ ವರೆಗೆ ಗುಹೆಗೆ ಪ್ರವೇಶ ಕಲ್ಪಿಸಲಾಗುತ್ತದೆ.
ಇತಿಹಾಸದ ಪುಟಗಳನ್ನು ತೆರೆದರೆ ಈ ದೇವಸ್ಥಾನವನ್ನು ಚೌಟರಸರು ಆಳುತ್ತಿದ್ದರು ಎಂಬ ಪುರಾವೆಗಳು ಸಿಗುತ್ತವೆ. ಚೌಟರಸರು ದೇವಸ್ಥಾನಕ್ಕೆ ಬಂದು ಪೂಜೆ ವೀಕ್ಷಿಸುವುದಕ್ಕೆ ಕುಳಿತು ಕೊಳ್ಳುತ್ತಿದ್ದ ಕಲ್ಲಿನ ಮಂಚವೂ ದೇವಸ್ಥಾನದ ಮುಂದೆ ಈಗಲೂ ಇದೆ. ಈಗಲೂ ಅರಸರ ವಂಶಸ್ಥರು ದೇವಸ್ಥಾನಕ್ಕೆ ಭೇಟಿ ನೀಡುತ್ತಿರುತ್ತಾರೆ.
ಹೀಗೆ ಹಲವು ವೈಶಿಷ್ಟ್ಯಗಳನ್ನು ತನ್ನಲ್ಲಿ ಹುದುಗಿಸಿಕೊಂಡಿರುವ ನೆಲ್ಲಿತೀರ್ಥಕ್ಕೆ ಭೇಟಿ ನೀಡಲು ಬರುವವರ ಸಂಖ್ಯೆ ಅಪಾರ. ಹೀಗೆ ಬರುವವರು ಕ್ಷೇತ್ರದ ಪಾವಿತ್ರ್ಯಕ್ಕೆ ಭಂಗ ಬರದಂತೆ ಶಿಸ್ತು ಸಂಯಮದೊಂದಿಗೆ ವರ್ತಿಸಿ, ಕ್ಷೇತ್ರದ ಸಾನಿಧ್ಯ ಹಾಗೂ ಸ್ಥಳದ ನೈಸರ್ಗಿಕ ಚೆಲುವನ್ನು ಕಾಪಾಡಬೇಕು ಎನ್ನುವುದು ಇಲ್ಲಿನ ಆಡಳಿತ ಕೋರಿಕೆಯೂ ಹೌದು.
-----------------------------
CONTACT
SOMANATHESHWARA TEMPLE: 8088708914
Donate to annadanam fund
Bank Details
AC No: 110018762726
IFSC Code: CNRB0009029
--------------------------------------
video & editing
VENU VINOD: 9448386876
--------------------------------------
Location: https://tinyurl.com/39424zuv

Видео NELLITEERTHA CAVE TEMPLE | VIHARA PLUS | ನೆಲ್ಲಿತೀರ್ಥ ಗುಹಾಲಯ канала Vihara Plus
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
15 ноября 2021 г. 10:47:46
00:08:47
Яндекс.Метрика