Загрузка страницы

ಕಲಿಯುಗದಲ್ಲಿ ಯುಗಧರ್ಮ ಪಾಲನೆ ಹೇಗೆ? | ಗುರು-ಬ್ರಹ್ಮ | ಭಾಗ 4

ಕಲಿಯುಗದಲ್ಲಿ ಯುಗಧರ್ಮ ಪಾಲನೆ ಹೇಗೆ? | ಗುರು-ಬ್ರಹ್ಮ | ಭಾಗ 4

ದಿನ ನಿತ್ಯ ಪ್ರಾಣಿಗಳೊಂದಿಗೆ ವಾಸಿಸುವವನಿಗೆ ಪ್ರಾಣ ಭಯದ ಸಾಧ್ಯತೆ ಕಡಿಮೆ ಇರುತ್ತದೆ. ಪ್ರತಿಯೊಬ್ಬನಿಗೂ ಅನ್ನ ನೀಡುವ ರೈತನ ಪಾಲಿಗೆ ಅವನ ಜೀವನವೇ ತಪಸ್ಸಾಗಿರುತ್ತದೆ. ತನ್ನನ್ನು ತಾನು ಜಗತ್ತಿಗೆ ದಾನವಾಗಿ ಸಮರ್ಪಿಸಿಕೊಂಡು ಶ್ರಮ ಪಡುವ ವರ್ಗವೇ ರೈತಾಪಿ ವರ್ಗ. ಸದಾ ಕಾಲ ಅನ್ನ ನೀಡುವ ರೈತನಿಗೆ ಕೃತಜ್ಞತೆ ತೋರುವುದು ಪ್ರತಿಯೊಬ್ಬನ ಕರ್ತವ್ಯ. ಪ್ರಸ್ತುತ ಜನಾಂಗದಲ್ಲಿ ಒಂದು ಬಗೆಯ ಘನತೆಯನ್ನು ಕಾಪಿಟ್ಟುಕೊಳ್ಳುವುದೇ ಹಿರಿಮೆಯ ವಿಚಾರ ಎಂದೆನಿಸಿಕೊಂಡಿದೆ. ಅರ್ಥವನ್ನೇ ಅರಿಯದೆ ಅಭ್ಯಾಸ ಮಾಡುವ ಪದ್ಧತಿಯನ್ನು ಅಳವಡಿಸಿಕೊಂಡಿದ್ದೇವೆ. ನಮ್ಮತನ, ನಮ್ಮ ಸಂಸ್ಕಾರ, ನಮ್ಮ ಜೀವನಶೈಲಿಯನ್ನು ಪ್ರೀತಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ಯಾವುದೇ ನಕಾರಾತ್ಮಕ ವಿಚಾರಗಳನ್ನು ಆದರ್ಶ ಗುಣದ ಅಳವಡಿಕೆಯ ಮೂಲಕ ಸರಿ ಮಾಡುವ ಸಾಧ್ಯತೆ ಇದೆ. ಖಾಯಿಲೆಯ ಮೂಲ ಗುಟ್ಟು ಮನಸ್ಸೇ ಆಗಿದೆ. ಒಬ್ಬ ರೋಗಿಯ ಪಾಲಿಗೆ ವೈದ್ಯ ದೇವರಾಗಿರುತ್ತಾನೆ. ಆ ದೇವರಲ್ಲಿ ಭಕ್ತನಿಗೆ ಭಯ, ಕಳಂಕ, ಮೋಸ ಮತ್ತು ನಾಟಕ ಬುದ್ಧಿಗಳು ಇರುವುದಿಲ್ಲ. ವೈದ್ಯರು ಮತ್ತು ಗುರುಗಳ ಬಳಿ ಯಾವುದೇ ಕಾರಣಕ್ಕೂ ಸುಳ್ಳನ್ನಾಡಬಾರದು. ಎದುರಿಗಿನ ವ್ಯಕ್ತಿ ಎಂತಹವನೇ ಆದರೂ ಅವನನ್ನು ಸರಿ ಮಾಡುವ ಜವಾಬ್ದಾರಿ ಇವರಿಬ್ಬರ ಮೇಲಿರುತ್ತದೆ. ಒಬ್ಬ ವೈದ್ಯನಿಗೆ ರೋಗಿಯ ಜೊತೆಗಲ್ಲ ರೋಗದ ಜೊತೆಗೆ ಯುದ್ಧವಿರುತ್ತದೆ. ಒಬ್ಬ ಗುರುವೂ ಶಿಷ್ಯನ ಕೆಟ್ಟ ಮನಸ್ಥಿತಿಯನ್ನು ಬದಲಿಸುವ ಸಮಯಕ್ಕೆ ಕಾಯುತ್ತಾನೆ. ವಿವೇಕಾನಂದರು ಮತ್ತು ಶರೀಫರು ಗುರುಭಕ್ತಿಗೆ ಸಾಕ್ಷಿಗಳಾಗಿದ್ದಾರೆ. ಮನಸ್ಸು ಉನ್ಮಾದವನ್ನು ಪಡೆಯುತ್ತಾ ಹೋದಂತೆ ಇತರ ವಿಷಯಗಳನ್ನು ಮರೆಯುತ್ತದೆ. ಆಧ್ಯಾತ್ಮವೆಂದರೆ ಕನಿಷ್ಠ ಜ್ಞಾನದಿಂದ ಗರಿಷ್ಠ ಜ್ಞಾನದೆಡೆಗಿನ ಪಯಣವಾಗಿದೆ. ಸಮಯ ಸರಿದಂತೆ ಆತ್ಮ ಪರಮಾತ್ಮವಾಗುತ್ತದೆ. ಪ್ರಾಣ ಪರಮಾತ್ಮನಾಗಲು ಹಲವು ಮಾರ್ಗಗಳಿವೆ. ಎಲ್ಲದರ ಅಂತಿಮ ಗುರಿ ಪರಮಾತ್ಮನನ್ನು ತಲುಪುವುದು. ಜ್ಞಾನ ಎಲ್ಲಾ ಬಗೆಯ ವ್ಯಕ್ತಿಗಳ ಪಾಲಾಗಿದೆ. ಜ್ಞಾನಿಯ ಚಿಂತನೆಗೂ, ಸಾಮಾನ್ಯ ವ್ಯಕ್ತಿಯ ಚಿಂತನೆಗೂ ಅಜಗಜಾಂತರ ವ್ಯತ್ಯಾಸವಿದೆ. ನಮ್ಮನ್ನು ಮನುಷ್ಯರು ಎಂದು ಇತರರು ಗುರುತಿಸಿದ ಕಾರಣ ಮನುಷ್ಯ ಎನ್ನುವ ಅಸ್ತಿತ್ವ ನಮ್ಮಲ್ಲಿದೆ. ಒಬ್ಬ ವ್ಯಕ್ತಿಯ ಅಧಿಕಾರ ವಿವೇಕ ಮತ್ತು ಸಂಸ್ಕಾರದಿಂದ ಪ್ರತಿಫಲಿಸಲ್ಪಡುತ್ತದೆ. ನಾನು ದೇಹ ಎನ್ನುವುದು ಇತರರಿಂದ ಬೋಧಿಸಲ್ಪಟ್ಟಿರುವ ವಿಷಯ ಆದರೆ ಇದರ ಸತ್ಯಾಸತ್ಯತೆ ಯಾರಿಗೂ ತಿಳಿದಿಲ್ಲ. ಶುದ್ಧ ಸಂಬಂಧಕ್ಕೆ ದೇಹ ಸಂಬಂಧದ ಮಿತಿ ಇಲ್ಲ ಎನ್ನುವ ನಿದರ್ಶನಗಳು ಪುರಾಣದಲ್ಲಿದೆ. ಪುರಾಣದ ಕಾಲದಲ್ಲೇ ಹಲವಾರು ಬಗೆಯ ವೈದ್ಯಕೀಯ ವಿಸ್ಮಯಗಳ ಪರಿಚಯವಾಗಿತ್ತು. ಕಲ್ಪವೃಕ್ಷದಂತಹಾ ಭಾರತ ದೇಶದಲ್ಲಿ ಅಲ್ಪ ಬುದ್ಧಿಯಿಂದ ನಾವೆಲ್ಲಾ ಹಾಳಾಗುತ್ತಿದ್ದೇವೆ. ದೇಹ, ಜೀವಗಳೆಂಬ ಭ್ರಮೆಯಾಚೆಗೆ ಹುಟ್ಟುವ ಪ್ರಶ್ನೆಯಿಂದ ಆಧ್ಯಾತ್ಮ ಶುರುವಾಗುತ್ತದೆ. ಆತ್ಮವೊಂದನ್ನು ಬಿಟ್ಟು ಪ್ರತಿಯೊಂದು ಬದಲಾಗುತ್ತದೆ. ಆತ್ಮದ ಅಧ್ಯಯನದಿಂದ ಆಧ್ಯಾತ್ಮ ಆರಂಭವಾಗುತ್ತದೆ. ಕಲಿಯುಗದಲ್ಲಿ ಯುಗಧರ್ಮ ಪಾಲನೆ ಹೇಗೆ ಎಂಬ ಪ್ರಶ್ನೆಗೆ ಉತ್ತರ. ಈ ಯುಗಕ್ಕೆ ಸರಿಯಾಗಿ ಹಿಂದಿನ ನಿಯಮಾವಳಿಗಳನ್ನು ಸಡಿಲಿಸಿಕೊಂಡು ಬದುಕುವುದು. ಋಷಿಗಳ ಕಾಲದ ಅನುಷ್ಠಾನಗಳು ಪಾಲಿಸಲು ಪ್ರಸ್ತುತ ಸಾಧ್ಯವಿಲ್ಲ. ಎಲ್ಲವೂ ಅಶುದ್ಧವಾಗಿದೆ. ಮಾನವ ದಾನವನಾಗುವುದು ಚಿಂತನೆಯ ಫಲದಿಂದ. ಕಲಿ ಎನ್ನುವುದು ಕಲ್ಮಶದ ಸಂಕೇತ. ಹೀಗಾಗಿ ಅಂಧಕಾರದಿಂದ ಬೆಳಕಿನೆಡೆಗೆ ಸಾಗಲು ಪ್ರಯತ್ನಿಸಬೇಕು. ಅನಾವಶ್ಯಕ ವಸ್ತುಗಳಿಂದ ಮನಸ್ಸು ಮತ್ತು ದೇಹದ ಆರೋಗ್ಯ ಕ್ಷೀಣಿಸುತ್ತದೆ. ಹೀಗಾಗಿ ಇದು ಅನಗತ್ಯ ಕರ್ಮವಾಗುತ್ತದೆ. ತನ್ನ ಮಿತಿಯನ್ನು ಕಂಡುಕೊಂಡ ದಿನ ಮನುಷ್ಯ ಸರಿ ಹೋಗುತ್ತಾನೆ. ಮಿತಿಯನ್ನು ಮೀರಿದಾಗಲೇ ಖಾಯಿಲೆಗಳು ಆವರಿಸುವುದು. ಸಹಜವಾದ ಜೀವನವನ್ನು ಹಾಳುಗೆಡವಿ ಸಾಧಿಸುವಂತಹುದು ಏನೂ ಇಲ್ಲ. ಅತಿಯಾದ ಉತ್ಸಾಹ ಮತ್ತು ಕೊರಗುವಿಕೆಯಿಂದ ಆಪತ್ತು ಸಂಭವಿಸುತ್ತದೆ. ಜೀವನದಲ್ಲಿ ಎದುರಾಗುವ ಪ್ರತಿಯೊಂದನ್ನು ಸ್ವೀಕರಿಸುತ್ತಾ ಹೋದಾಗ, ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತದೆ. ಜಗತ್ತಿನಲ್ಲಿ ಉಚಿತವಾಗಿ ಸಿಗುವುದು ಸಲಹೆ ಮತ್ತು ಠೀಕೆ. ಒಂದನ್ನೇ ಪರಮ ಸತ್ಯ ಎಂದು ಒಪ್ಪಿಕೊಳ್ಳಬೇಕೆಂದೇನಿಲ್ಲ. ಪರಮಾತ್ಮನ ಕಡೆಗೆ ಹೋಗಲು ಬೇರೆ ಬೇರೆ ದಾರಿಯಿದೆ. ಆಧ್ಯಾತ್ಮ ಸಾಧನೆಯ ಸುಲಭ ದಾರಿಯೇ ಸೇವೆ. ಸೇವೆಯು ದೇಹ ಮತ್ತು ದೇಶದ ಅಭಿವೃದ್ಧಿಗೆ ಕಾರಣವಾಗುತ್ತದೆ. ಮಹಾನ್ ಚಿಂತಕರೆಲ್ಲರೂ ಈ ಮಾರ್ಗವನ್ನೇ ಪಾಲಿಸಿದ್ದಾರೆ. ದೇವಧೂತರೆನಿಸಿದವರು ಸರ್ವಾಂತರ್ಯಾಮಿಯ ಸಹಾಯದಿಂದ ಸೇವೆ ಸಲ್ಲಿಸುತ್ತಾರೆ. ಭಾರತದಲ್ಲಿ ದೊರಕುವ ಸಣ್ಣ ಸಣ್ಣ ವಿಷಯವನ್ನು ಅಧ್ಯಯಿಸಿದರೂ ಅಸಂಖ್ಯ ಜ್ಞಾನ ಪ್ರಾಪ್ತವಾಗುತ್ತದೆ. ಧರ್ಮದ ಚೌಕಟ್ಟನ್ನು ಹಾಕಿಕೊಂಡವರು ನಾವೇ ಆಗಿದ್ದೇವೆ. ಪ್ರತಿಯೊಂದು ಧರ್ಮವೂ ಎಲ್ಲರೂ ಒಂದು ಎನ್ನುವುದನ್ನೇ ನಿರೂಪಿಸಿದೆ. ಧರ್ಮಗಳಲ್ಲಿ ಶ್ರೇಷ್ಠ ಧರ್ಮ ಅಹಿಂಸೆ. ದ್ವೇಷ ಭಾವದಿಂದ ಹೊರಬಂದಾಗ ದೇಶ ಕಟ್ಟಲು ಸಾಧ್ಯವಾಗುತ್ತದೆ.

For More Videos:

ಕಾಡುವ ಪಾಪಪ್ರಜ್ಞೆಯಿಂದ ತಪ್ಪಿಸಿಕೊಳ್ಳುವುದು ಹೇಗೆ ? | ಅವಧೂತ ಶ್ರೀ ವಿನಯ್ ಗುರೂಜಿ https://youtu.be/xOy-55Jo56c

ಸನ್ಯಾಸಿಯಾಗಲು ಸಂಸಾರ ಬಿಡಲೇ ಬೇಕೇ? | ಅವಧೂತ ಶ್ರೀ ವಿನಯ್ ಗುರೂಜಿ https://youtu.be/HLAxf9Ra9KE

ದೇವರ ಪೂಜೆಗೆ ಇವುಗಳೆಲ್ಲಾ ನಿಷಿದ್ಧ! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/fiknFb7fWr0

ಮಂತ್ರ ಹೇಳುವಾಗ ಈ ತಪ್ಪನ್ನು ಮಾಡಲೇಬೇಡಿ! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/ra-qwUA6bIM

ಹುಟ್ಟು ವರವೋ? ಶಾಪವೋ? | ಅವಧೂತ ಶ್ರೀ ವಿನಯ್ ಗುರೂಜಿ https://youtu.be/WTBljrIqVHI

#AvadhoothaSriVinayGuruji #trending #blessings #srivinayguruji #vinayguruji #guruji #youtube #youtubeislife #youtubeguru #youtubecontent #newvideo #subscribers #youtubevideo #youtuber #youtubevideos #india #gurujispeech #health #tips #homeremedies
#hospital #medicine #Family #Familylife

Видео ಕಲಿಯುಗದಲ್ಲಿ ಯುಗಧರ್ಮ ಪಾಲನೆ ಹೇಗೆ? | ಗುರು-ಬ್ರಹ್ಮ | ಭಾಗ 4 канала Avadhootha
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
15 июня 2023 г. 18:25:52
00:36:06
Другие видео канала
ನನಸಾಯ್ತು ಗಾಂಧಿ ಕುಟೀರದ ಕನಸು | ಅವಧೂತ ಶ್ರೀ ವಿನಯ್ ಗುರೂಜಿನನಸಾಯ್ತು ಗಾಂಧಿ ಕುಟೀರದ ಕನಸು | ಅವಧೂತ ಶ್ರೀ ವಿನಯ್ ಗುರೂಜಿಸೂರ್ಯ ಶಾಂತವಾಗಿರುವ ಮುಹೂರ್ತವೇ ಶುಭ ಮುಹೂರ್ತ | ಅವಧೂತ ಶ್ರೀ ವಿನಯ್ ಗುರೂಜಿಶ್ರೀಸೂರ್ಯ ಶಾಂತವಾಗಿರುವ ಮುಹೂರ್ತವೇ ಶುಭ ಮುಹೂರ್ತ | ಅವಧೂತ ಶ್ರೀ ವಿನಯ್ ಗುರೂಜಿಶ್ರೀಅವಧೂತರ ಆಶೀರ್ವಾದ ಪಡೆದ ಬಹುಭಾಷಾ ನಟ ಅರ್ಜುನ್ ಸರ್ಜಾಅವಧೂತರ ಆಶೀರ್ವಾದ ಪಡೆದ ಬಹುಭಾಷಾ ನಟ ಅರ್ಜುನ್ ಸರ್ಜಾತಾಂಬೂಲದ ಹಿನ್ನೆಲೆ ಮತ್ತು ಮಹತ್ವ | ಅವಧೂತ ಶ್ರೀ ವಿನಯ್ ಗುರೂಜಿತಾಂಬೂಲದ ಹಿನ್ನೆಲೆ ಮತ್ತು ಮಹತ್ವ | ಅವಧೂತ ಶ್ರೀ ವಿನಯ್ ಗುರೂಜಿ8ನೇ ವಿಶ್ವ ಯೋಗ ದಿನ | ಶ್ರೀ ವಿನಯ್ ಗುರೂಜಿಯ ಭಕ್ತರಿಂದ ಉತ್ತರಹಳ್ಳಿಯ ಆಶ್ರಮದಲ್ಲಿ ಯೋಗ ದಿನಚಾರಣೆ8ನೇ ವಿಶ್ವ ಯೋಗ ದಿನ | ಶ್ರೀ ವಿನಯ್ ಗುರೂಜಿಯ ಭಕ್ತರಿಂದ ಉತ್ತರಹಳ್ಳಿಯ ಆಶ್ರಮದಲ್ಲಿ ಯೋಗ ದಿನಚಾರಣೆಶ್ರೀ ಸಿದ್ಧಾರೂಢ ಮಹಾಸ್ವಾಮಿಗಳಿಗೆ ಅವಧೂತರಿಂದ ವಿಶೇಷ ಪೂಜೆ | ಅವಧೂತ ಶ್ರೀ ವಿನಯ್ ಗುರೂಜಿಶ್ರೀ ಸಿದ್ಧಾರೂಢ ಮಹಾಸ್ವಾಮಿಗಳಿಗೆ ಅವಧೂತರಿಂದ ವಿಶೇಷ ಪೂಜೆ | ಅವಧೂತ ಶ್ರೀ ವಿನಯ್ ಗುರೂಜಿಈ ಒಂದು ಕೆಲಸದಿಂದ ಯುವಕರ ಜೀವನವೇ ಬದಲಾಗುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿಈ ಒಂದು ಕೆಲಸದಿಂದ ಯುವಕರ ಜೀವನವೇ ಬದಲಾಗುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿಇದುವೇ ನೋಡಿ ನಿಜವಾದ ಶ್ರೀಮಂತಿಕೆ! | Prosperity | Avadhootha Sri Vinay Gurujiಇದುವೇ ನೋಡಿ ನಿಜವಾದ ಶ್ರೀಮಂತಿಕೆ! | Prosperity | Avadhootha Sri Vinay Gurujiನೈತಿಕ ಸಿದ್ಧಾಂತಗಳನ್ನು ಪಾಲಿಸದೇ ಇರುವುದೇ ಸಮಾಜದ ಕೆಡುಕಿನ ಕಾರಣ! | ಅವಧೂತ ಶ್ರೀ ವಿನಯ್ ಗುರೂಜಿನೈತಿಕ ಸಿದ್ಧಾಂತಗಳನ್ನು ಪಾಲಿಸದೇ ಇರುವುದೇ ಸಮಾಜದ ಕೆಡುಕಿನ ಕಾರಣ! | ಅವಧೂತ ಶ್ರೀ ವಿನಯ್ ಗುರೂಜಿಮನುಸ್ಮೃತಿ ಮತ್ತು ಸಂವಿಧಾನ ಆಂತರ್ಯ ಮತ್ತು ವ್ಯತ್ಯಾಸ | ಅವಧೂತ ಶ್ರೀ ವಿನಯ್ ಗುರೂಜಿಮನುಸ್ಮೃತಿ ಮತ್ತು ಸಂವಿಧಾನ ಆಂತರ್ಯ ಮತ್ತು ವ್ಯತ್ಯಾಸ | ಅವಧೂತ ಶ್ರೀ ವಿನಯ್ ಗುರೂಜಿಭಗವಂತನ ನರ ನಾರಾಯಣ ಅವತಾರದ ಹಿಂದಿದೆ ಈ ಮಹಾ ರಹಸ್ಯ! ಅವಧೂತ ಶ್ರೀ ವಿನಯ್ ಗುರೂಜಿಭಗವಂತನ ನರ ನಾರಾಯಣ ಅವತಾರದ ಹಿಂದಿದೆ ಈ ಮಹಾ ರಹಸ್ಯ! ಅವಧೂತ ಶ್ರೀ ವಿನಯ್ ಗುರೂಜಿಜೀವ ಮತ್ತು ದಶಾವತಾರದ ಸಂಬಂಧ | Dashavatar | ಅವಧೂತ ಶ್ರೀ ವಿನಯ್ ಗುರೂಜಿ | Avadhootha Shri Vinay Gurujiಜೀವ ಮತ್ತು ದಶಾವತಾರದ ಸಂಬಂಧ | Dashavatar | ಅವಧೂತ ಶ್ರೀ ವಿನಯ್ ಗುರೂಜಿ | Avadhootha Shri Vinay Gurujiಇಲ್ಲಿ ನಾವೆಲ್ಲರೂ ಭಿಕ್ಷುಕರೇ! | ಅವಧೂತ ಶ್ರೀ ವಿನಯ್‌ ಗುರೂಜಿಇಲ್ಲಿ ನಾವೆಲ್ಲರೂ ಭಿಕ್ಷುಕರೇ! | ಅವಧೂತ ಶ್ರೀ ವಿನಯ್‌ ಗುರೂಜಿಬದುಕು ಹಸನಾಗಿಸಲು ಇರುವ ದಾರಿಗಳು | ಅವಧೂತ ಶ್ರೀ ವಿನಯ್ ಗುರೂಜಿಬದುಕು ಹಸನಾಗಿಸಲು ಇರುವ ದಾರಿಗಳು | ಅವಧೂತ ಶ್ರೀ ವಿನಯ್ ಗುರೂಜಿನಂಬಿದವರೆಲ್ಲಾ ಕೈ ತೊರೆದಾಗ ಕಾಯುವ ಶಕ್ತಿ ಯಾವುದು? | Power Of God | Avadhootha Sri Vinay Gurujiನಂಬಿದವರೆಲ್ಲಾ ಕೈ ತೊರೆದಾಗ ಕಾಯುವ ಶಕ್ತಿ ಯಾವುದು? | Power Of God | Avadhootha Sri Vinay Gurujiಹೆಣ್ಣಿಗೆ ಉಪನಯನದ ಅಗತ್ಯವಿದೆಯೇ? | Upanayanam | Avadhootha Sri Vinay Gurujiಹೆಣ್ಣಿಗೆ ಉಪನಯನದ ಅಗತ್ಯವಿದೆಯೇ? | Upanayanam | Avadhootha Sri Vinay Gurujiಭಗವಂತ ಈ ಅವತಾರ ಎತ್ತಿದ್ದೇ ಈ ಮಹಾ ಉದ್ದೇಶಕ್ಕೆ | ಅವಧೂತ ಶ್ರೀ ವಿನಯ್ ಗುರೂಜಿಭಗವಂತ ಈ ಅವತಾರ ಎತ್ತಿದ್ದೇ ಈ ಮಹಾ ಉದ್ದೇಶಕ್ಕೆ | ಅವಧೂತ ಶ್ರೀ ವಿನಯ್ ಗುರೂಜಿತಾಂಬೂಲದಿಂದ ವಾಕ್ ದೋಷ ಹೋಗುತ್ತೆ  | ಅವಧೂತ ಶ್ರೀ ವಿನಯ್ ಗುರೂಜಿತಾಂಬೂಲದಿಂದ ವಾಕ್ ದೋಷ ಹೋಗುತ್ತೆ | ಅವಧೂತ ಶ್ರೀ ವಿನಯ್ ಗುರೂಜಿಸಕ್ರೇಬೈಲು  ಬಳಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಅವಧೂತರು || ಅವಧೂತ ಶ್ರೀ ವಿನಯ್ ಗುರೂಜಿ |ಸಕ್ರೇಬೈಲು ಬಳಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಅವಧೂತರು || ಅವಧೂತ ಶ್ರೀ ವಿನಯ್ ಗುರೂಜಿ |ಇವೆಲ್ಲವೂ ಧರ್ಮ ಯುದ್ದ ಆಗುವುದೇ ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿಇವೆಲ್ಲವೂ ಧರ್ಮ ಯುದ್ದ ಆಗುವುದೇ ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿದೇಹದ ಒಳಗೆ ಚಕ್ರಗಳನ್ನು ಯಾಕ್ಟಿವೇಟ್ ಮಾಡುವುದು ಹೇಗೆ  | ಅವಧೂತ ಶ್ರೀ ವಿನಯ್ ಗುರೂಜಿದೇಹದ ಒಳಗೆ ಚಕ್ರಗಳನ್ನು ಯಾಕ್ಟಿವೇಟ್ ಮಾಡುವುದು ಹೇಗೆ | ಅವಧೂತ ಶ್ರೀ ವಿನಯ್ ಗುರೂಜಿ
Яндекс.Метрика