Загрузка страницы

Banottu Shiva Temple | VIHARA PLUS | ಕಾಲಗರ್ಭದಲ್ಲಿ ಸೇರಿದ್ದ ಉಮಾಶಿವ ದೇವಳ ಮತ್ತೆ ಪ್ರತ್ಯಕ್ಷ!

#ViharaPlus #Banottu#ManiShivaTemple
ಇದು ಅಭಿವೃದ್ಧಿಯ ಓಟದ ನಡುವೆ ಮಸುಕಾಗಿ ಹೋದ ಶಿವಸಾನಿಧ್ಯವೊಂದರ ಕಥೆ.
ಸುಮಾರು ಐದು ದಶಕಗಳ ಹಿಂದೆ ಮಂಗಳೂರು-ಹಾಸನ ರೈಲು ಮಾರ್ಗ ನಿರ್ಮಾಣಗೊಳ್ಳುವ ವೇಳೆ ನಿರ್ನಾಮಗೊಂಡ ವಿಠಲಕೋಡಿ ಬಾನೊಟ್ಟು ಎಂಬಲ್ಲಿನ ಪುರಾತನ ಶಿವಕ್ಷೇತ್ರದ ಕಥೆ. ರೈಲು ಮಾರ್ಗದ ಕಾಮಗಾರಿಯಲ್ಲಿ ಮಣ್ಣಿನಡಿಗೆ ಸಿಲುಕಿ ಹೋಗಿದ್ದ ದೇವಸ್ಥಾನದ ಒಂದೊಂದೇ ಕುರುಹುಗಳು ಈಗ ಹೊರಬರುತ್ತಿವೆ, ತಮ್ಮ ಕಥೆಯನ್ನು ಹೇಳತೊಡಗಿವೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾಣಿ ಎಂಬಲ್ಲಿರುವ ಬಾನೊಟ್ಟು ಸುಳ್ಳಮಲೆಯ ಹಸಿರುಬೆಟ್ಟ, ಅದರ ತಪ್ಪಲಿನ ಗದ್ದೆತೋಟದ ನಿಸರ್ಗ ರಮಣೀಯ ತಾಣದಲ್ಲಿ ನೆಲೆಸಿದೆ. 1960ರ ದಶಕದಲ್ಲಿ ಮಂಗಳೂರು-ಹಾಸನ ರೈಲ್ವೆ ಮಾರ್ಗ ನಿರ್ಮಾಣಗೊಂಡಿತ್ತು. ಆಗ ಬಾನೊಟ್ಟುವಿನಲ್ಲಿ ಇದ್ದ ದೇಗುಲದ ಜಾಗ ರೈಲ್ವೇ ವಶವಾಗಿದ್ದರಿಂದ ಕ್ಷೇತ್ರ ನಶಿಸಿತು. ಜನರು ಅತ್ತ ಕಡೆ ತಲೆ ಹಾಕುವುದನ್ನೂ ಬಿಟ್ಟರು, ಅಕ್ಷರಶಃ ಕ್ಷೇತ್ರ ಮರೆಯಲ್ಪಟ್ಟಿತ್ತು. ಈಗ ಕೆಲವರ್ಷಗಳಿಂದ ಈ ಉಮಾಮಹೇಶ್ವರ ದೇವಸ್ಥಾನದ ಒಂದೊಂದೇ ಅವಶೇಷಗಳು ಕಾಣಸಿಗುತ್ತಿವೆ. ಊರಿನ ಕೆಲವು ಆಸಕ್ತ ಮಂದಿ ಮಾತ್ರ ದೇವಸ್ಥಾನವನ್ನು ಬೇರೆ ಕಡೆಗೆ ಯೋಗ್ಯವೆನಿಸುವ ಜಾಗದಲ್ಲಿ ಪುನರ್ನಿರ್ಮಾಣ ಮಾಡುವ ಹಠದಲ್ಲಿದ್ದಾರೆ.

ಕಲ್ಲಡ್ಕದಿಂದ ಮಾಣಿ ಮೂಲಕ ಪುತ್ತೂರು ಹೋಗುವಾಗ ಮಾಣಿಯಿಂದ ಬಲಕ್ಕೆ ತಿರುಗಿ ಸುಮಾರು ಒಂದು ಕಿ.ಮೀ ತೆರಳಬೇಕು. ದಾರಿಯಲ್ಲಿ ಸ್ಥಳೀಯ ಬಂಟಮನೆತನದವರ ಕಂಬಳ ಗದ್ದೆ, ಆ ಬಳಿಕ ರೈಲುಮಾರ್ಗ ಸಿಗುತ್ತದೆ. ಅದರಲ್ಲಿ ಸುಮಾರು ಅರ್ಧ ಕಿ.ಮೀ ಸಂಚರಿಸಿದರೆ ರೈಲುಪಟ್ಟಿಯ ಎಡಬದಿಗೇ ತಾಗಿಕೊಂಡಂತೆಯೇ ಈ ಹಳೇ ದೇವಸ್ಥಾನವಿದ್ದ ಜಾಗ ಸಿಗುತ್ತದೆ.

ಈ ದೇವಸ್ಥಾನದ ಕಲ್ಲಿನ ರಚನೆಗಳನ್ನು ನೋಡಿದರೆ ಸುಮಾರು 800 ವರ್ಷಗಳ ಹಿಂದಿನ ಇತಿಹಾಸವಿರಬಹುದು, ಪಕ್ಕದ ಕಲ್ಲಡ್ಕ, ಕಬಕದಂತಹ ಪೇಟೆಗಳು ಅಭಿವೃದ್ಧಿಯಾಗಿರುವಾಗ ಮಾಣಿ ಮಾತ್ರ ಸುಧಾರಣೆ ಕಾಣುತ್ತಿಲ್ಲ, ಇದಕ್ಕೆ ಈ ದೇವಾಲಯ ಕಡೆಗಣನೆಗೆ ಒಳಗಾಗಿರುವುದು ಕಾರಣವಾಗಿರಬಹುದು ಎಂದು ಊರಿನವರು ಹೇಳುತ್ತಾರೆ. ಊರಿನ ಪ್ರಮುಖರಾದ ಮಾಣಿಯ ಎಂ.ವಿ.ಪೈ, ಮಾಣಿಗುತ್ತು ಸಚಿನ್ ರೈ, ಜಗನ್ನಾಥ ಚೌಟ ಬದಿಗುಡ್ಡೆ ಸದಾಶಿವ ಆಚಾರ್, ರಮೇಶ ಕೈಂತಜೆ, ಹರೀಶ್ ಮಾಣಿ, ತೋಟ ನಾರಾಯಣ ಶೆಟ್ಟಿ, ನಾರಾಯಣ ರೈ ಬಾನೊಟ್ಟು, ರವಿ ಶರ್ಮ ಕುಕ್ಕರಬೆಟ್ಟು, ನಿತಿನ್ ಸಾಲ್ಯಾನ್ ಮೊದಲಾದವರು ಸ್ಥಳೀಯವಾಗಿ ಈ ದೇವಸ್ಥಾನದ ಮರುನಿರ್ಮಾಣ ಮಾಡುವತ್ತ ಹೆಜ್ಜೆ ಇರಿಸಿದ್ದಾರೆ.

ಕ್ಷಯಿಸಿ ಹೋಗಿರುವ ಈ ದೇವಸ್ಥಾನದ ಜಾಗದಲ್ಲಿ ಮತ್ತೊಮ್ಮೆ ದೇವಸ್ಥಾನ ನಿರ್ಮಾಣ ಅಸಾಧ್ಯ, ಅದಕ್ಕೆಂದು ಯೋಗ್ಯ ಸ್ಥಳವನ್ನು ಗುರುತಿಸಿ, ಅಲ್ಲಿ ಉಮಾಶಿವ ಕ್ಷೇತ್ರ ತಲೆಯೆತ್ತುವಂತೆ ಮಾಡುವುದು ಸದ್ಯ ಊರಿನ ಹಲವರ ಅಪೇಕ್ಷೆ. ಅದಕ್ಕಾಗಿ ಸರ್ಕಾರ, ಊರ ಪರವೂರ ದಾನಿಗಳೂ ಸಹಕಾರ ನೀಡಬೇಕೆನ್ನುವುದು ಅವರ ವಿನಂತಿ

Contact for details:
Ramesh Kaintaje: 9448858173
Venu Vinod : 9448386876

Subscribe VIHARA channel
https://www.youtube.com/c/VIHARA

Music courtesy:
Veena Kinhal - Haratanaya Sree Free music archive

Видео Banottu Shiva Temple | VIHARA PLUS | ಕಾಲಗರ್ಭದಲ್ಲಿ ಸೇರಿದ್ದ ಉಮಾಶಿವ ದೇವಳ ಮತ್ತೆ ಪ್ರತ್ಯಕ್ಷ! канала Vihara Plus
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
24 декабря 2021 г. 14:06:56
00:10:35
Яндекс.Метрика