Загрузка страницы

Havyaka haadu_ Vatuvannu hasege karediddu. ಹವ್ಯಕ ಹಾಡು_ವಟುವನ್ನು ಹಸೆಗೆ ಕರೆದಿದ್ದು (ಒಬ್ಬಳ ಬಸಿರಿನಿಂದಲಿ)

ಹಾಡಿದವರು_ಶಿಲ್ಪಾ ಪ್ರಶಾಂತ ಹೆಗಡೆ ಅಂಬ್ಲಿಹೊಂಡ
ಮತ್ತು
ಸುತೇಜಾ ಮೋಹನ ಹೆಗಡೆ ಅಳವಳ್ಳಿ

ಇದು ಪುರಂಧರ ದಾಸರ ಕೃತಿಯಾಗಿದ್ದು "ಜಗನ್ಮೋಹನೆ ಕೃಷ್ಣ ಜಗವಂ ಪಾಲಿಪನೆ" ಎಂಬ ಸಾಲಿನೊಡನೆ ಶುರುವಾಗುತ್ತದೆ.ಈ ಕೃತಿ, ಹವ್ಯಕ ಸಂಪ್ರದಾಯದಲ್ಲಿ ವಟುವನ್ನು ಹಸೆಗೆ ಕರೆದ ಹಾಡಾಗಿ ಹೇಗೆ ಬಳಕೆಗೆ ಬಂತು ಎಂಬುದು ಗೊತ್ತಿಲ್ಲ.ಗೊತ್ತಿದ್ದವರು ಕಾಮೆಂಟ್ ಮಾಡಿ ತಿಳಿಸಿ.

ಹಾಡಿನ ಸಾಹಿತ್ಯ
ಒಬ್ಬಳ ಬಸುರಿನಿಂದಲಿ ಬಂದೆ ಮತ್ತೊಬ್ಬಳ ಕೈಯ್ಯಲಿ ನೀ ಬೆಳೆದೆ|ಕೊಬ್ಬಿದ ದೈತ್ಯರ ಒಡಲ ಸೀಳಿದೆ ಇಂಥ |ತಬ್ಬಿಬ್ಬಾಟವ ನೆಲ್ಲಿ ಕಲಿತ್ಯೋ ರಂಗ|ಜಗದ ಮೋಹನನೇ ಹಸಿಗ್ಯೋಳು||1||

ಲೋಕದೊಳಗೆ ನೀ ಶಿಶುವಾಗಿ ಮೂರ್ಲೋಕವನೆಲ್ಲ ಬಾಯಲಿ ತೋರಿದೆ|ಆಕಳು ಕಾಯುವ ಚಿಣ್ಣನೆಂದೆನಿಸಿದೆ|ಈ ಕುಟಿಲವನೆಲ್ಲ ಎಲ್ಲಿ ಕಲಿತ್ಯೋ ರಂಗ ||2||

ಮಗುವಾಗಿಯೆ ಪೂತನಿ ಮೊಲೆಯುಂಡೆ ಜಗದಗಲಕೆ ಬೀಳಲು ಕೆಡಹಿ|ನಗುತ ನಗುತ ಗೋಪಿ ಮೊಲೆಯುಂಡೆ|ಇಂಥ ತಗಿಬಿಗಿಯಾಟಗಳೆಲ್ಲಿ ಕಲಿತ್ಯೋ ರಂಗ ||3||

ಮಡುವ ಧುಮುಕಿ ಕಾಳಿಂಗನ ಶಿರದಲಿ ಮೃಢಸುರಪಾದ್ಯರು ಪೊಗಳುತಿರೆ|ಹೆಡೆಯ ಮೇಲೆ ಕುಣಿದಾಡುತ ಆಡುತ ಕಡೆಸಾರೆಂಬುದನೆಲ್ಲಿ ಕಲಿತ್ಯೋ ರಂಗ||4||

ಒಂದು ಪಾದವ ಭೂಮಿಯಲೂರಿ ಮತ್ತೊಂದು ಪಾದದಿ ಗಗನವನಳೆದು|ಒಂದು ಪಾದ ಬಲಿ ಶಿರದಲಿಟ್ಟೆ ಇಂಥ ಚಂದದ ವಿದ್ಯವನೆಲ್ಲಿ ಕಲಿತ್ಯೋ ರಂಗ||5||

ನಂಬಿದ ಪ್ರಹ್ಲಾದನು ಸ್ತುತಿಸೆ ನೀ ಕಂಭವನೊಡೆದು ಬಂದಾಕ್ಷಣದಿ|ದೊಂಬಿಲಿ ದೈತ್ಯನ ಒಡಲ ಸೀಳಿದೆ ಇಂಥ ಡೊಂಬರಾಟವನೆಲ್ಲ ಎಲ್ಲಿ ಕಲಿತ್ಯೋ ರಂಗ||6||

ಅಂಬರೀಷ ದ್ವಾದಶಿ ಸಾಧಿಸುತಿರೆ ಬಂದು ದೂರ್ವಾಸರು ಶಾಪವ ಕೊಡಲು| ಮುಂದಕೆ ಸಾಧನವಹುದೆಂದು ಚಕ್ರವ ಹಿಂದಟ್ಟಿಸುವುದನೆಲ್ಲಿ ಕಲಿತ್ಯೋ ರಂಗ ||7||

ವರಬಲದಿಂದ ಭಸ್ಮಾಸುರನು ಹರನ ಶಿರದಿ ಕರವಿಡೆ ಬರಲು| ತರುಣಿಯ ರೂಪವ ತಾಳಿ ಆ ದೈತ್ಯನ ಹರಣವಳಿದುದನೆಲ್ಲಿ ಕಲಿತ್ಯೋ ರಂಗ||8||

ವೇದಗಳರಸಿ ಕಾಣದ ಪರಬ್ರಹ್ಮ ನೀ ಮೋದದಿಂದ ವಿದುರನ ಮನೆಯೈದಿ| ಆದರದಿ ಪಾಲ ಕುಡಿದುಳಿದುದ ನೀ ಮೇದಿನಿಗಿಳಿಸಿದುದೆಲ್ಲಿ ಕಲಿತ್ಯೋ ರಂಗ||9||

ದುರ್ಯೋಧನ ತನ್ನ ಒಡ್ಡೋಲಗದೊಳು ಹರಿಯನು ಕರೆಸೆಂದರುಹಲು ಬಂದು | ಧರಣಿಯುಂಗುಷ್ಟದಲೊತ್ತುತ ಅವನನು ಉರುಳಿಸಿದಾಟವನೆಲ್ಲಿ ಕಲಿತ್ಯೋ ರಂಗ||10||

ಆ ಸಭೆಯಲಿ ಖಳ ದುರ್ಯೋಧನನಾಗ ಮೋಸದಿ ಕೃಷ್ಣನ ಕಟ್ಟೆನಲು | ಸಾಸಿರರೂಪಿನ ಕೃಷ್ಣನೆಂದೆನಿಸಿದ ವೇಷವನೆಲ್ಲ ಎಲ್ಲಿ ಕಲಿತ್ಯೋ ರಂಗ ||11||

ಸರ್ಪಬಾಣ ಮೊರೆಯುತ ಬರಲು ಕಂದರ್ಪಪಿತನೆ ಕರುಣದಿ ನೀನು | ಒಪ್ಪುವ ಪಾರ್ಥನ ರಥವ ನೆಲಕೆ ಒತ್ತಿ ತಪ್ಪಿಸಿದಾಟವನೆಲ್ಲಿ ಕಲಿತ್ಯೋ ರಂಗ||12||

ದ್ರೋಣನ ಸಂಗ್ರಾಮದಿ ಹರಿಚಕ್ರವ ಮಾಣದೆ ಸೂರ್ಯಗೆ ಮರೆಮಾಡಿ | ಕಾಣಿಸಿ ಸೈಂಧವನನು ಕೊಲಿಸಿದೆ ಇಂಥ ಜಾಣತನವ ನೀನೆಲ್ಲಿ‌ ಕಲಿತ್ಯೋ ರಂಗ ||13||

ಆ ಶಿರವಾತನ ತಂದೆಯ ಕರದಲಿ ಸೂಸುತ ರಕುತವ ಬೀಳಲು ಅದನು |ಬೀಸಿ ಬಿಸಾಡಲು ಅವನ ಶಿರವನಾಗ ಸಾಸಿರ ಮಾಡಿದುದೆಲ್ಲಿ ಕಲಿತ್ಯೋ ರಂಗ ||14||

ಆದಿಮೂಲನೆ ಎಂದು ಕರಿರಾಜ ಕರೆಯಲು ಯಾದವರಾಯ ನೀ ನಗುತಲಿ ಬಂದು |ಆದರದಿಂದ ಗಜೇಂದ್ರನ ಸಲಹಿದೆ ಆ ದಿವ್ಯಾಟಗಳೆಲ್ಲಿ ಕಲಿತ್ಯೋ ರಂಗ ||15||

ಎಂದೆಂದಿಗು ನಿಮ್ಮ ಗುಣಗಳ ಪೊಗಳಲು ಇಂದ್ರಾದಿಗಳಿಗೆ ಅಳವಲ್ಲ | ಮಂದರಧರ ಶ್ರೀ ಪುರಂಧರ ವಿಠ್ಠಲನೇ ಒಂದೊಂದಾಟವನೆಲ್ಲಿ ಕಲಿತ್ಯೋ ರಂಗ ||16||

Видео Havyaka haadu_ Vatuvannu hasege karediddu. ಹವ್ಯಕ ಹಾಡು_ವಟುವನ್ನು ಹಸೆಗೆ ಕರೆದಿದ್ದು (ಒಬ್ಬಳ ಬಸಿರಿನಿಂದಲಿ) канала Havyaka_Vishesha Haadugalu
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
21 декабря 2022 г. 18:38:23
00:04:07
Другие видео канала
Havyaka Bhajane_Karunakari kanakambari.   ಹವ್ಯಕ ಭಜನೆ_ಕರುಣಾಕರಿ ಕನಕಾಂಬರಿHavyaka Bhajane_Karunakari kanakambari. ಹವ್ಯಕ ಭಜನೆ_ಕರುಣಾಕರಿ ಕನಕಾಂಬರಿHavyaka haadu_Poojisuve jagadamba mookamba  ಹವ್ಯಕ ಹಾಡು_ಪೂಜಿಸುವೆ ಜಗದಂಬ ಮೂಕಾಂಬHavyaka haadu_Poojisuve jagadamba mookamba ಹವ್ಯಕ ಹಾಡು_ಪೂಜಿಸುವೆ ಜಗದಂಬ ಮೂಕಾಂಬHavyaka haadu_Harige abhisheka. ಹವ್ಯಕ ಹಾಡು_ಹರಿಗೆ ಅಭಿಷೇಕ (ಅತಿ ಹರುಷದಿ ಅಭಿಷೇಕವ ಗೈದರು)Havyaka haadu_Harige abhisheka. ಹವ್ಯಕ ಹಾಡು_ಹರಿಗೆ ಅಭಿಷೇಕ (ಅತಿ ಹರುಷದಿ ಅಭಿಷೇಕವ ಗೈದರು)Havyaka haadu_Tulasige aarati 2. ಹವ್ಯಕ ಹಾಡು_ತುಳಸಿಗೆ ಆರತಿ 2 ( ಬೆಳಗುವೆ ನಾ ಆರತಿಯ)Havyaka haadu_Tulasige aarati 2. ಹವ್ಯಕ ಹಾಡು_ತುಳಸಿಗೆ ಆರತಿ 2 ( ಬೆಳಗುವೆ ನಾ ಆರತಿಯ)Havyaka haadu_Kai koodisiddu   ಹವ್ಯಕ ಹಾಡು_ಕೈ ಕೂಡಿಸಿದ್ದು_ಈ ಬಾಳ ಬಂಧನ ಒಲವಿನಾ ಸಮ್ಮಿಲನHavyaka haadu_Kai koodisiddu ಹವ್ಯಕ ಹಾಡು_ಕೈ ಕೂಡಿಸಿದ್ದು_ಈ ಬಾಳ ಬಂಧನ ಒಲವಿನಾ ಸಮ್ಮಿಲನHavyaka haadu_Vadhu vararige aarati 7  ಹವ್ಯಕ ಹಾಡು_ವಧೂವರರಿಗೆ ಆರತಿ 7(ಎಸೆವ ಮಾಣಿಕ)Havyaka haadu_Vadhu vararige aarati 7 ಹವ್ಯಕ ಹಾಡು_ವಧೂವರರಿಗೆ ಆರತಿ 7(ಎಸೆವ ಮಾಣಿಕ)Havyaka haadu_Deviya Pooje 1              ಹವ್ಯಕ ಹಾಡು_ದೇವಿಯ ಪೂಜೆ 1 (ಪೂಜಿಸುವ ಶ್ರೀಶಾರದೆಯ)Havyaka haadu_Deviya Pooje 1 ಹವ್ಯಕ ಹಾಡು_ದೇವಿಯ ಪೂಜೆ 1 (ಪೂಜಿಸುವ ಶ್ರೀಶಾರದೆಯ)Havyaka haadu_Vadhu vararige harasiddu   ಹವ್ಯಕ ಹಾಡು_ವಧೂ ವರರಿಗೆ ಹರಸಿದ್ದು 1( ಬಾಳಿ ನೀವು ಭಾಗ್ಯವಂತರಾಗಿ)Havyaka haadu_Vadhu vararige harasiddu ಹವ್ಯಕ ಹಾಡು_ವಧೂ ವರರಿಗೆ ಹರಸಿದ್ದು 1( ಬಾಳಿ ನೀವು ಭಾಗ್ಯವಂತರಾಗಿ)Havyaka haadu_Nalinanabhage Aarati ಹವ್ಯಕ ಹಾಡು_ನಳಿನನಾಭಗೆ ಆರತಿHavyaka haadu_Nalinanabhage Aarati ಹವ್ಯಕ ಹಾಡು_ನಳಿನನಾಭಗೆ ಆರತಿHavyaka haadu_ Maale haakiddu  ಹವ್ಯಕ ಹಾಡು_ಮಾಲೆ ಹಾಕಿದ್ದು ( ಮಾಲೆಯ ನೀಡಿದಳ್ ಲೋಲೆ ಶಕುಂತಲೆ)Havyaka haadu_ Maale haakiddu ಹವ್ಯಕ ಹಾಡು_ಮಾಲೆ ಹಾಕಿದ್ದು ( ಮಾಲೆಯ ನೀಡಿದಳ್ ಲೋಲೆ ಶಕುಂತಲೆ)Havyaka haadu_ Tondilu mudisiddu  ಹವ್ಯಕ ಹಾಡು_ತೊಂಡಿಲು ಮುಡಿಸಿದ್ದು (ಬಾರೆನ್ನ ಮಗಳೆ)Havyaka haadu_ Tondilu mudisiddu ಹವ್ಯಕ ಹಾಡು_ತೊಂಡಿಲು ಮುಡಿಸಿದ್ದು (ಬಾರೆನ್ನ ಮಗಳೆ)Havyaka haadu_Dhaare erediddu 3 ಹವ್ಯಕ ಹಾಡು_ಧಾರೆ ಎರೆದಿದ್ದು 3(ಧಾರೆಯನೆರೆದ ಶ್ರೀ ರಾಮನಿಗೆ ಸೀತೆಯಾ)Havyaka haadu_Dhaare erediddu 3 ಹವ್ಯಕ ಹಾಡು_ಧಾರೆ ಎರೆದಿದ್ದು 3(ಧಾರೆಯನೆರೆದ ಶ್ರೀ ರಾಮನಿಗೆ ಸೀತೆಯಾ)Havyaka haadu_ Tandu needidale gopi.  ಹವ್ಯಕ ಹಾಡು_ತಂದು ನೀಡಿದಳೆ ಗೋಪಿHavyaka haadu_ Tandu needidale gopi. ಹವ್ಯಕ ಹಾಡು_ತಂದು ನೀಡಿದಳೆ ಗೋಪಿHavyaka haadu_Paada Tolediddu ಹವ್ಯಕ ಹಾಡು_ಪಾದ ತೊಳೆದಿದ್ದು_ಪಾದವ ತೊಳೆದ ಪರ್ವತರಾಯHavyaka haadu_Paada Tolediddu ಹವ್ಯಕ ಹಾಡು_ಪಾದ ತೊಳೆದಿದ್ದು_ಪಾದವ ತೊಳೆದ ಪರ್ವತರಾಯHavyaka haadu_Bhoomi devi stuti  ಹವ್ಯಕ ಹಾಡು_ಭೂಮಿದೇವಿ ಸ್ತುತಿ (ಸ್ವಾಮಿ ಸರ್ವೋತ್ತುಮಳೆ)Havyaka haadu_Bhoomi devi stuti ಹವ್ಯಕ ಹಾಡು_ಭೂಮಿದೇವಿ ಸ್ತುತಿ (ಸ್ವಾಮಿ ಸರ್ವೋತ್ತುಮಳೆ)Havyaka haadu_Enne hanisiddu 1 ಹವ್ಯಕ ಹಾಡು_ಎಣ್ಣೆ ಹನಿಸಿದ್ದು 1(ತೈಲವನೆರೆದರು ಲೋಲಲೋಚನೆಯರು)Havyaka haadu_Enne hanisiddu 1 ಹವ್ಯಕ ಹಾಡು_ಎಣ್ಣೆ ಹನಿಸಿದ್ದು 1(ತೈಲವನೆರೆದರು ಲೋಲಲೋಚನೆಯರು)Havyaka haadu_Ganapatige aarati_1  ಹವ್ಯಕ ಹಾಡು_ಗಣಪತಿಗೆ ಆರತಿ_1 ( ಮಾಡುವೆವು ಆರತಿಯನು)Havyaka haadu_Ganapatige aarati_1 ಹವ್ಯಕ ಹಾಡು_ಗಣಪತಿಗೆ ಆರತಿ_1 ( ಮಾಡುವೆವು ಆರತಿಯನು)Havyaka_bhajane_Sharada Stuti ಹವ್ಯಕ ಭಜನೆ_ ಶಾರದೆ ಸ್ತುತಿ(ಶಾರದೆ ವರದಾಯಿನಿ)Havyaka_bhajane_Sharada Stuti ಹವ್ಯಕ ಭಜನೆ_ ಶಾರದೆ ಸ್ತುತಿ(ಶಾರದೆ ವರದಾಯಿನಿ)Havyaka haadu_Shantidaate shrilalite  ಹವ್ಯಕ ಹಾಡು_ಶಾಂತಿದಾತೆ ಶ್ರೀಲಲಿತೆHavyaka haadu_Shantidaate shrilalite ಹವ್ಯಕ ಹಾಡು_ಶಾಂತಿದಾತೆ ಶ್ರೀಲಲಿತೆHavyaka haadu_ Bheemasenanannu hasege karediddu  ಹವ್ಯಕ ಹಾಡು_ಭೀಮಸೇನನ್ನು ಹಸೆಗೆ ಕರೆದಿದ್ದು.Havyaka haadu_ Bheemasenanannu hasege karediddu ಹವ್ಯಕ ಹಾಡು_ಭೀಮಸೇನನ್ನು ಹಸೆಗೆ ಕರೆದಿದ್ದು.
Яндекс.Метрика