Загрузка страницы

ಚೈತ್ರದ ಚಿಗುರಲಿ || Kannada Bhaavageete || ಯುಗಾದಿ ಸಂಭ್ರಮ || Happy New Year || ಹಿಂದೂ ಹೊಸ ವರುಷ

#happyugadi #navavarusha #kannadabhavageetegalu #Ugadisambhrama #newyear2022
ಸಾಹಿತ್ಯ : ಶ್ರೀ ಗಣೇಶ್ ಬಿಳೆಕಲ್
ರಾಗ ಸಂಯೋಜನೆ : ಶ್ರೀ ದಿನೇಶ್ ಹೆಗಡೆ ಗಿಳಿಗುಂಡಿ
ಹಾಡುಗಾರಿಕೆ : ಕು. ಭೂಮಿಕಾ ಭಟ್
ಕು. ಅರ್ಪಿತಾ ಹೆಗಡೆ
ಕು. ಮಧುರಾ ಭಟ್
ತಬಲಾ ಸಹಕಾರ : ಕು. ಪನ್ನಗ ಹೆಗಡೆ

--------------------------------------******---------------------------------------

💐💐ಯುಗಾದಿ 💐💐

ಚೈತ್ರದ ಚಿಗುರಲಿ ಮೈತ್ರಿಯ ಸುಮವು
ಅರಳುತ ಘಮಿಸಲಿ ಹೃದಯದಲಿ //
ನೆರಳಿನ ಆಟವ ನೂಕುತ ನುಸುಳಲಿ
ನವ ವರುಷದ ಪ್ರಭೆ ನಲಿವಿನಲಿ//ಪ//

ಮಾವಿನ ಚಿಗುರಿನ ನಡುವಲಿ ಹಾಡಿದೆ
ಕೋಗಿಲೆ ಕಹಿಯನು ಮರೆಸುತಲಿ//
ಇಂಪಿನ ತಂಪಿಗೆ ತಂಗಾಳಿಯ ಬರು
ಹೊಸ ವರುಷದ ಹೊಸ ಹುರುಪಿನಲಿ//೧//

ಸಮರಸ ಸಿಂಚನ ಮನದಲಿ ಮಂಥನ
ನಡೆಸಲು ಬಾಳಲಿ ತನನನನಾ//
ಮನದಲಿ ಮುಸುಕಿದ ಮುನಿಸಿನ ಭಾವವ
ಅಳಿಸಲಿ ಹೊಸ ವರುಷದ ಚಲನ //೨//

ಕಂಗಳ ಕೊಳದ ಆಸೆಯ ಒರತೆಯು
ಬತ್ತದೆ ಚಿಮ್ಮಲಿ ಬಾಳಿನಲಿ//
ಭರವಸೆ ಬೆಳಕನು ಅರಸುವ ಬದುಕಲಿ
ಹೊಸ ವರುಷವು ಸುಖ, ಶುಭ ತರಲಿ//೩//

,💐💐ಆತ್ಮೀಯರಿಗೆಲ್ಲಾ ಯುಗಾದಿಯ ಶುಭಾಷಯಗಳು💐💐

✍️ ಗಣೇಶ್. ಬಿಳೇಕಲ್

Видео ಚೈತ್ರದ ಚಿಗುರಲಿ || Kannada Bhaavageete || ಯುಗಾದಿ ಸಂಭ್ರಮ || Happy New Year || ಹಿಂದೂ ಹೊಸ ವರುಷ канала Pannag_hegde
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
2 апреля 2022 г. 12:22:29
00:07:11
Яндекс.Метрика