Загрузка страницы

|| Kannada Bhavageete || ಹರಿಯ ಲೀಲೆ ||

ಭಾವಗೀತೆ : ಹರಿಯ ಲೀಲೆ.

ಸಾಹಿತ್ಯ : ಗಣೇಶ್ ಬಿಳೇಕಲ್..🖍️✏️✏️📄📝

ಗಾಯನ ಹಾಗೂ ರಾಗ ಸಂಯೋಜನೆ : ಶ್ರೀಮತಿ ಜ್ಯೋತಿ ಹೆಗಡೆ. 🎹🎤🎼🎵
ಸಾಹಿತ್ಯ....📝

.......ಎಲ್ಲ ಹರಿಯ ಲೀಲೆ......

ಕೊಳಲ ಉಸಿರಲಿ, ಹೆಸರು ಮೂಡಿತು
ರಾಧೆ ನಾಚಿದ ಕ್ಷಣದಲಿ//
ಮುರಳಿನಾದಕೆ ಪ್ರೀತಿ ಅಲೆಗಳು
ನಗುವ ತಂದವು ಇರುಳಲಿ //ಪ//
ಹರೆಯದೊಳಗಿನ ಪ್ರೀತಿ ವೇದನೆ
ರಾಧೆ ಮನವನು ಕಾಡಲು//
ತುಂಟ ನಗುವಲಿ ಕಾಡುತಿರುವನು
ಮುನಿಸು ಮುಖವನು ನೋಡಲು //;;//
ಬಾನ ಬಣ್ಣದ ಮುಖದ ಚಂದವು
ಬೆರಗು ಗೊಳಿಸಿದೆ ಭುವಿಯೊಳು//
ಮನೆಯ ಎದುರಿನ ತುಳಸಿ ದಳಗಳು
ನೆಲೆಸ ಬಯಸಿದೆ ಕೊರಳೊಳು//೨//
ಹರಿಯ ಲೀಲೆಯು ಹರಿವ ತೊರೆಯದು
ಎಲ್ಲೆ ಎಲ್ಲಿದೆ ಅರಿಯದು//
ಗಿರಿಧರನ ನೆನೆದ ಗಳಿಗೆಯು
ಗೆಲುವ ಗರಿ ಯೇ ಬರುವುದು//೩//

,,,,ಗಣೇಶ್ ಬಿಳೇಕಲ್,,,

🙏🙏🙏🙏🙏🙏

Видео || Kannada Bhavageete || ಹರಿಯ ಲೀಲೆ || канала Pannag_hegde
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
7 мая 2021 г. 17:55:21
00:04:51
Яндекс.Метрика