Загрузка страницы

## ಅರಿಯದಾದೆನೋ ಶ್ರೀ ರಾಮ ## By " Supriya Hegde "

◆ ಸಾಹಿತ್ಯ 📝..

ಗಣೇಶ್ ಬಿಳೇಕಲ್
◆ ಗಾಯನ ಹಾಗೂ ರಾಗ ಸಂಯೋಜನೆ..🎼🎶🎵

ಸುಪ್ರಿಯಾ ಹೆಗಡೆ..
★★ ಅರಿಯದಾದೆನೋ ಶ್ರೀ ರಾಮ ★★
ಚಿಂತೆಯ ಚಿತೆಯಲಿ ಚಂಚಲ ಮತಿಯಲಿ
ಚರಕದಿ ಸಿಲುಕಿಹೆ ರಾಮ ಶ್ರೀರಾಮ//
ಮೋಹದ ಪಾಶವೋ ಮಾಯೆಯ ವೇಷವೋ
ಅರಿಯದಾದೆನೋ ಶ್ರೀ ರಾಮ ಜಯ ರಾಮ//ಪ//
ಬಾಳ ಬೇಲಿಯಲಿ ಕುರುಚಲು ಗಿಡವೀಗ
ಚಿಗುರೊಡೆದು ತಾ ಮೆರೇಯುತಿದೆ//
ಕರವೀರ ದಳವೀಗ ಕಮರಿ ತಾ ಮುದುಡಿದೆ
ಅರಿಯದಾದೆನೋ ಶ್ರೀ ರಾಮ ಜಯ ರಾಮ//೧//
ಹೆಸರ ಕೇಳದೆ ಹಸುವು ಹಾಲ ನೀಡುತಲಿಹುದು
ದ್ವೇಷ ಅಸೂಯೆಯೇ ಮನುಜನ ಉಸಿರಹುದು //
ಪಶುವೀಗಿಂತಲೂ ಹೀನರಾದೆವೆ ನಾವು
ಅರಿಯದಾದೆನೋ ಶ್ರೀ ರಾಮ ಜಯ ರಾಮ/೨//
ಹಣಗಳಿಕೆಗೆ ಜನ ಹಸಿದು ಹವಣೀಸುತಲಿಹರು
ಹೆಸರು ಮಾಡುವ ನೇಪದಿ ಕೆಸರಲ್ಲೇ ಕುಳಿತಿಹರು//
ಹೆಣವಾಗಿ ಹೊರಟಾಗ ಹಣವೇನು ಮಾಡಿತೇ?
ಅರಿಯದಾದೆನೋ ಶ್ರೀ ರಾಮ ಜಯ ರಾಮ //೩//



🖍️📝 ಗಣೇಶ್ ಬಿಳೇಕಲ್.....

Видео ## ಅರಿಯದಾದೆನೋ ಶ್ರೀ ರಾಮ ## By " Supriya Hegde " канала Pannag_hegde
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
7 декабря 2020 г. 20:46:38
00:06:00
Яндекс.Метрика