Загрузка страницы

ಕೋವಿಡ್ ಸಂದರ್ಭದ ಬಿಕ್ಕಟ್ಟಿನಲ್ಲಿ ಜನಜೀವನ ಮತ್ತು ಸವಾಲುಗಳು

ದತ್ತಾಂಶವಿಲ್ಲದೆ ಏನನ್ನು ಬೇಕಾದರೂ ಮಾತಾಡುವುದು ಸರಿಯಲ್ಲ: ಕೆ.ಸಿ.ರಘು

ಬೆಂಗಳೂರು: ದತ್ತಾಂಶವಿಲ್ಲದೆ ಏನನ್ನು ಬೇಕಾದರೂ ಮಾತಾಡುವುದು ಸರಿಯಲ್ಲ. ಕೋವಿಡ್ ಸಂದರ್ಭದಲ್ಲಿ ಆರ್ಥಿಕತೆ ಹೇಗಿದೆ ಎಂದು ಗಮನಿಸಬೇಕು. ಆದರೆ, ಕೋವಿಡ್ ಎಲ್ಲದಕ್ಕೂ ಕಾರಣ ಎಂಬ ವಾದವಿದೆ. ಅದು ಸರಿಯಲ್ಲ. ಕೋವಿಡ್ ಪೂರ್ವದಲ್ಲೇ ಆರ್ಥಿಕತೆ ಕುಸಿದು ಜಾರಿ ಕೆಳಗೆ ಬಿದ್ದಿತ್ತು ಎಂದು ಬೆಂಗಳೂರಿನ ಆಹಾರ ಮತ್ತು ಆರ್ಥಿಕ ತಜ್ಞ ಕೆ.ಸಿ.ರಘು ಅಭಿಪ್ರಾಯಪಟ್ಟರು.

ಮಾನವ ಬಂಧುತ್ವ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ಆರೋಗ್ಯ ಬಂಧುತ್ವ ವೆಬಿನಾರ್ ಸರಣಿಯ “ಕೋವಿಡ್ ಸಂದರ್ಭದ ಬಿಕ್ಕಟ್ಟಿನಲ್ಲಿ ಜನಜೀವನ ಮತ್ತು ಸವಾಲುಗಳು” ವಿಚಾರ ಸಂಕಿರಣದಲ್ಲಿ ಮಾತಾಡಿದ ಅವರು, 2020ರಲ್ಲಿ ಜಿಡಿಪಿ ದರ 4ಕ್ಕೆ ಕುಸಿದಿತ್ತು. ಡಬಲ್ ಡಿಜಿಟ್ ಜಿಡಿಪಿ ತರುತ್ತೇವೆ ಎಂದಿದ್ದರು. ಆದರೆ ಆರ್ಥಿಕತೆ ಕುಸಿದು ಬಿದ್ದಿತ್ತು ಎಂದರು.

ಜನರಿಗೆ ಆರ್ಥಿಕ ನೆರವು ನೀಡುವಲ್ಲಿ ದೇಶ ಸೋತಿತು. ಅಮೆರಿಕ ಸಿರಿವಂತ ದೇಶವಾದರು ಖಾತೆಗೆ ಹಣ ಹಾಕಲಾಯಿತು. ದೇಶದಲ್ಲಿ ಜನಧನ್ ಖಾತೆಗಳಿಗೆ ಹಣ ಹಾಕಲಾಗಿದೆ. ಗೋಡೌನ್ ನಲ್ಲಿ ಕೊಳೆಯುತ್ತಿದ್ದ ಧಾನ್ಯಗಳನ್ನು ಕೊಟ್ಟಿದ್ದಾರೆ. ಯಾವ ದೇಶದಲ್ಲಿ ಗೋದಾಮಿನಲ್ಲಿ ಆಹಾರ ಧಾನ್ಯ ತುಂಬಿತುಳುಕುತ್ತಿದೆಯೋ ಆ ದೇಶದಲ್ಲಿ ಬಡವರು ಇರುತ್ತಾರೆ ಎಂಬ ಮಾತಿದೆ. ದೇಶದಲ್ಲಿ 90 ಮಿಲಿಯನ್ ಟನ್ ದಾಸ್ತಾನಿತ್ತು. ಸರ್ಕಾರವೇ 15 ಮಿಲಿಯನ್ ಟನ್ ಅನ್ನು ಹರಾಜು ಹಾಕಿತು. ಆದ್ದರಿಂದ ಆಹಾರ ಧಾನ್ಯಗಳನ್ನು ಕೊಟ್ಟದ್ದನ್ನು ಲೆಕ್ಕಕ್ಕೆ ಪರಿಗಣಿಸುವಂತಿಲ್ಲ. ಇದನ್ನು ಹೊರತುಪಡಿಸಿ ಏನನ್ನೂ ವಿತರಿಸಿಲ್ಲ ಎಂದರು.

ಕರ್ನಾಟಕದಲ್ಲಿ ತಾಯಂದಿರ ಸಾವಿನ ಪ್ರಮಾಣಕ್ಕೂ ಕೇರಳಕ್ಕೂ ವ್ಯತ್ಯಾಸವಿದೆ. ಕೇರಳದಲ್ಲಿ ಪ್ರತಿ ಸಾವಿರ ಮಕ್ಕಳ ಪೈಕಿ 25, ಕೇರಳದಲ್ಲಿ 4 ಇದೆ. ಕಳೆದ 5 ವರ್ಷದಲ್ಲಿ ಅಪೌಷ್ಟಿಕತೆ ಕೆಳಗೆ ಇಳಿಯಲಿಲ್ಲ. ತೂಕ, ವಯಸ್ಸು, ಎತ್ತರದಲ್ಲಿ ಭಾರತ ಅತ್ಯಂತ ಕೆಳಗೆ ಇದ್ದೇವೆ. ವಿಶ್ವಗುರು ಎಂದು ಹೇಳುತ್ತೇವೆ. 8 ಲಕ್ಷ ಮಕ್ಕಳು 1 ವರ್ಷ ದಾಟುವುದರೊಳಗೆ ಮಡಿಯುತ್ತವೆ. ಕಳೆದ 5 ವರ್ಷದಲ್ಲಿ ಅಪೌಷ್ಟಿಕತೆ, ಹಸಿವಿನ ಸೂಚ್ಯಂಕ ಇಳಿದಿಲ್ಲ ಎಂದರು.

ದೇಶದಲ್ಲಿ ಆರೋಗ್ಯಕ್ಕೆ 1.5%, ಶಿಕ್ಷಣಕ್ಕೆ 3% ಹಣ ವಿನಿಯೋಗ ದಾಟಲಿಲ್ಲ. ಕರ್ನಾಟಕದಲ್ಲಿ 55%ರಷ್ಟು ಮಕ್ಕಳು ಖಾಸಗಿಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಈ ಎರಡೂ ಕ್ಷೇತ್ರಗಳನ್ನು ಸರಿಯಾಗಿ ನಿರ್ವಹಿಸಿದರೆ ಅನುಕೂಲವಾಗುತ್ತದೆ. ದೇಶದಲ್ಲಿ ಪ್ರತಿ ತಿಂಗಳು ಕೆಲವರು ಮಾಸಿಕ 1600, ಬಡವರು 900 ರೂ. ಖರ್ಚು ಮಾಡುವ ಸಾಮರ್ಥ್ಯ ಹೊಂದಿದ್ದಾರೆ ಎಂದರು.

ದೇಶದಲ್ಲಿ ಶೇ. 85ರಷ್ಟು ಅಸಂಘಟಿತ ವಲಯದ ಕಾರ್ಮಿಕರಿದ್ದಾರೆ. ಬಣ್ಣಬಣ್ಣದ ಮಾತುಗಳನ್ನು ಇಂದು ಆಡಲಾಗುತ್ತಿದೆ. ಜನ ಸಂಕಷ್ಟದಲ್ಲಿದ್ದಾಗ ಹೆಚ್ಚು ತೆರಿಗೆ ವಿಧಿಸಲಾಗುತ್ತಿದೆ ಎಂದರು.

ವೆಬಿನಾರ್ ನ ಅಧ್ಯಕ್ಷತೆ ವಹಿಸಿಕೊಂಡು ಮಾತಾಡಿದ ರಾಜ್ಯಸಭೆ ಸದಸ್ಯ ಡಾ ಸೈಯದ್ ನಾಸೀರ್ ಹುಸೇನ್, ಕೋವಿಡ್ ನಿಂದ ದೇಶದ ಆರ್ಥಿಕ ಪರಿಸ್ಥಿತಿ ಹಿನ್ನಡೆಯಿತು. 5 ಟ್ರಿಲಿಯನ್ ಎಕಾನಮಿ ಗುರಿ ಹಿನ್ನಡೆಯಾಯಿತು. ಹಣ ಹರಿವು ನಿಂತಾಗ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ. ಅಗತ್ಯವಿರುವ ಜನರಿಗೆ ಹಣವನ್ನು ಕೊಡಬೇಕಿತ್ತು. ಬಹಳ ದೇಶಗಳಲ್ಲಿ ಇದನ್ನು ಸಾಧ್ಯವಾಗಿಸಲಾಯಿತು ಎಂದರು.

ದೇಶದಲ್ಲಿ 20 ಲಕ್ಷ ಕೋಟಿ ಘೋಷಣೆಯಾಯಿತು. ಇದರಿಂದ ಬಡವರಿಗೆ, ಆರ್ಥಿಕತೆಗೆ ಏನಾದರೂ ನೆರವಾಯಿತೇ ಗೊತ್ತಿಲ್ಲ. ಸೆಂಟ್ರಲ್ ವಿಸ್ತಾದಲ್ಲಿ ಹೊಸ ಸಂಸತ್ತು, ಪ್ರಧಾನಿಗೆ ಹೊಸ ಮನೆ ಕಟ್ಟಲಗುತ್ತಿದೆ. ನಮಗೆ ವ್ಯಾಕ್ಸಿನ್, ಆಹಾರ ಕೊಡಲು ಸಾಧ್ಯವಾಗುತ್ತಿಲ್ಲ. ಆದರೆ, ಇಂತಹ ಸಮಯದಲ್ಲಿ ನಮ್ಮ ಆದ್ಯತೆಗಳೇನು ಎಂಬುದನ್ನು ನೋಡಬೇಕು ಎಂದರು.

ಮೊದಲನೇ ಅಲೆ ಬಂತು, ಎರಡನೇ ಅಲೆ ನಡೆಯುತ್ತಿದೆ. ದೇಶದ ಆಡಳಿತ ಸನ್ನದ್ಧವಾಗಿತ್ತೇ? ದೇಶದಲ್ಲಿ ಆರಂಭದಲ್ಲಿ ಸಾವಿನ ಸಂಖ್ಯೆ ಕಡಿಮೆ ಇತ್ತು. ನಮ್ಮಲ್ಲಿ ಬೆಡ್, ಆಕ್ಸಿಜನ್, ರೆಮ್ಡಿಸಿವಿರ್ ಇಂಜೆಕ್ಷನ್ ಇರಲಿಲ್ಲ. ಈಗ ಬ್ಲಾಕ್ ಫಂಗಸ್ ಸಮಯದಲ್ಲಿ ಕೂಡ ಇಂತಹ ಪರಿಸ್ಥಿತಿ ಇದೆ. ಹೆಲ್ತ್ ವರ್ಕರ್ಸ್, ವೈದ್ಯರು ಇರಲಿಲ್ಲ. ಇವುಗಳನ್ನು ನಾವು ಸನ್ನದ್ಧಗೊಳಿಸಲಿಲ್ಲ. 3ನೇ ಅಲೆ ಬರುವ ಸಮಯದಲ್ಲಿ ನಾವು ದೇಶ, ರಾಜ್ಯ ಸನ್ನದ್ಧವಾಗುತ್ತ ಇದ್ದೇವಾ? ಮಕ್ಕಳ ಆರೋಗ್ಯ ಕೇಂದ್ರಗಳನ್ನು ಆರಂಭಿಸಿದ್ದೇವಾ? ಎಂಬ ಪ್ರಶ್ನೆಗಳಿವೆ ಎಂದರು.

ಆನ್ ಲೈನ್ ಕ್ಲಾಸ್ ನಡೆಯುತ್ತಿರುವ ಸಮಯದಲ್ಲಿ ದೊಡ್ಡ ಸಮೂಹಕ್ಕೆ ತಂತ್ರಜ್ಞಾನದ ಕೊರತೆ ಇದೆ. ದೇಶದ ಜಿಡಿಪಿ ದರ ಬಾಂಗ್ಲಾ ನಮಗಿಂತ ಮುಂದಿದೆ. ರೈತರು, ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಬಿಪಿಎಲ್, ವಲಸೆ ಕಾರ್ಮಿಕರು, ದಿನಗೂಲಿಗಳು ಸಂಕಷ್ಟದಲ್ಲಿದ್ದಾರೆ ಎಂದರು.

ವೈಯಕ್ತಿಕ ಉದಾಹರಣೆಯನ್ನು ನೀಡಿದ ಅವರು, ಬಳ್ಳಾರಿಯಲ್ಲಿ ತರಕಾರಿ ವಿತರಣೆ ಗೆ ನಾವು ಪ್ರಯತ್ನ ಮಾಡಿದೆವು. 70,000 ಜನರಿಗೆ ತಲುಪಿಸಿದೆವು. ತರಕಾರಿ ವಿತರಿಸುವ ಸಮಯದಲ್ಲಿ ಅಸಹನೆಯ ಪ್ರಮಾಣ ದೊಡ್ಡದಿರುವುದನ್ನು ಕಂಡಿದ್ದೇನೆ. ತರಕಾರಿಗಾಗಿ ಗಂಟೆಗಳ ಕಾಲ ಮಹಿಳೆಯರು, ಗರ್ಭಿಣಿಯರು ಸರದಿಯಲ್ಲಿ ನಿಂತಿದ್ದರು ಎಂದರು.

ಅಲೆಗಳು ಬರುತ್ತಲೇ ಇರುತ್ತವೆ. ನಾವು ಭಾಷಣ ಕೇಳಬೇಕು. ತೆರಿಗೆ ಹಾಕಿಯೇ ಹಾಕುತ್ತೇವೆ ಎಂಬ ಆರೋಗ್ಯಂಟ್ ಸರ್ಕಾರ ಇದೆ. ಸರ್ಕಾರ ಜನರನ್ನು ಸಾಂಕ್ರಮಿಕ ಸಮಯದಲ್ಲಿ ರಕ್ಷಿಸಬೇಕು. ಆದರೆ ಜನರಿಗೆ ಹೆಚ್ಚಿನ ಹೊರೆಯನ್ನು ಹೊರಿಸಲಾಗುತ್ತಿದೆ. 25 ಲಕ್ಷ ಕೋಟಿಯನ್ನು ಕಳೆದ ವರ್ಷದಲ್ಲಿ ತೈಲದ ಮೇಲೆ ಸಂಗ್ರಹಿಸಲಾಗಿದೆ. ಯುಪಿಎ 1, 2 ಸಮಯದಲ್ಲಿ ಪ್ರತಿ ಬ್ಯಾರಲ್ ಕಚ್ಚಾತೈಲ ಬೆಲೆ 140 ಡಾಲರ್ ಇದ್ದಾಗ 65 ರೂ.ಗೆ ಪೆಟ್ರೋಲ್, 55 ರೂ.ಗೆ ಡೀಸೆಲ್ ಮಾರಿದ್ದೆವು. ಈಗ 70 ಡಾಲರ್ ಇದ್ದಾಗ ಪೆಟ್ರೋಲ್ ಬೆಲೆ 100 ರೂ. ಆಗಿದೆ ಎಂದರು.

ಯಾವುದೇ ಪಕ್ಷದ ಸರ್ಕಾರ ಅಧಿಕಾರದಲ್ಲಿರಲಿ. ಅವರಿಗೆ ದೇಶದ ಜನರ ಮೇಲೆ ಕಾಳಜಿ ಇರಬೇಕು. ನೆರೆಹೊರೆಯವರೊಂದಿಗೆ ಜಗಳ ಆಡುವುದು ಮುಖ್ಯವಲ್ಲ. ಜನರನ್ನು ಇಂತಹ ಪರಿಸ್ಥಿತಿಯಲ್ಲಿ ರಕ್ಷಿಸಬೇಕು. ಉತ್ತಮ ಜೀವನ ಮಟ್ಟವನ್ನು ಸುಧಾರಿಸಬೇಕು. ಇಂತಹ ಸಮಯದಲ್ಲಿ ಕೂಡ ಸರ್ಕಾರ 3ನೇ ಅಲೆಯನ್ನು ನಿರ್ವಹಿಸಲು ಸಜ್ಜಾಗಿಲ್ಲ ಎಂದರು.

ವೆಬಿನಾರ್ ನ ನಿರ್ವಹಣೆಯನ್ನು ಮಾನವ ಬಂಧುತ್ವ ವೇದಿಕೆಯ ಬಳ್ಳಾರಿ ಜಿಲ್ಲಾ ಸಂಚಾಲಕ ಇರ್ಫಾನ್ ಮುದಗಲ್ ನೆರವೇರಿಸಿದರು. ಪ್ರಶ್ನೋತ್ತರಗಳಲ್ಲಿ ಡಾ. ಗಿರೀಶ್ ಮೂಡ್ ಸೇರಿದಂತೆ ಸಂಪನ್ಮೂಲ ವ್ಯಕ್ತಿಗಳು ಉತ್ತರಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಲೇಖಕ ಯೋಗೇಶ್ ಮಾಸ್ಟರ್ ಮತ್ತು ಕೈವಲ್ಯ ಬಸವಣ್ಣನ ನುಡಿದರೆ ಮುತ್ತಿನ ಹಾರದಂತಿರಬೇಕು, ವಿಷಯವೆಂಬ ಹಸುರನ್ನ ವಚನಗಳನ್ನು ಹಾಡಿದರು.
#ಕೋವಿಡ್ #ಸಂದರ್ಭ #ಬಿಕ್ಕಟ್ಟು #ಜನಜೀವನ #ಸವಾಲು
#People #Facing #Problem #during #Corona #KCRaghu #Dr_Saiyad_Nasin_Hussain #ಮಾನವಬಂಧುತ್ವವೇದಿಕೆ #ಆರೋಗ್ಯಬಂಧುತ್ವವೆಬಿನಾರ್ #ಸರಣಿ #Dr_Girish_Mood #ArogyaBandhutva #Webinar #satishjarkiholi #mbvkarnataka #MBV #ManavaBandhutvaVedike

Видео ಕೋವಿಡ್ ಸಂದರ್ಭದ ಬಿಕ್ಕಟ್ಟಿನಲ್ಲಿ ಜನಜೀವನ ಮತ್ತು ಸವಾಲುಗಳು канала MBV Karnataka
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
21 июня 2021 г. 11:03:51
01:20:05
Другие видео канала
ಮೌಢ್ಯ ವಿರೋಧಿ ದಿನಾಚರಣೆಯ ನೇರ ಪ್ರಸಾರಮೌಢ್ಯ ವಿರೋಧಿ ದಿನಾಚರಣೆಯ ನೇರ ಪ್ರಸಾರಅಪೌಷ್ಟಿಕತೆ ಮತ್ತು ಮೂಢನಂಬಿಕೆ ವಿರುದ್ಧ ಜಾಗೃತಿಗಾಗಿ ಬಸವ ಪಂಚಮಿ: ತೋಳಿ ಭರಮಣ್ಣಅಪೌಷ್ಟಿಕತೆ ಮತ್ತು ಮೂಢನಂಬಿಕೆ ವಿರುದ್ಧ ಜಾಗೃತಿಗಾಗಿ ಬಸವ ಪಂಚಮಿ: ತೋಳಿ ಭರಮಣ್ಣನಾರಾಯಣ ಗುರು ಹಾಗೂ ಸುಭಾಷ್ ಚಂದ್ರ ಬೋಸ್ ಸ್ತಬ್ಧಚಿತ್ರ ನಿರಾಕರಣೆ: ಒಕ್ಕೂಟ ವ್ಯವಸ್ಥೆಗೆ ಬಂದೊದಗಿದ ಅಪಾಯನಾರಾಯಣ ಗುರು ಹಾಗೂ ಸುಭಾಷ್ ಚಂದ್ರ ಬೋಸ್ ಸ್ತಬ್ಧಚಿತ್ರ ನಿರಾಕರಣೆ: ಒಕ್ಕೂಟ ವ್ಯವಸ್ಥೆಗೆ ಬಂದೊದಗಿದ ಅಪಾಯಹಿಂದಿ ಹೇರಿಕೆಯ ಅಪಾಯಗಳು: ಆನಂದ್ ಬನವಾಸಿಹಿಂದಿ ಹೇರಿಕೆಯ ಅಪಾಯಗಳು: ಆನಂದ್ ಬನವಾಸಿಕಲೆಗಳ‌ ಕಲರವ ಶಿಬಿರಾರ್ಥಿಗಳಿಂದ ಕಲಾ ಪ್ರದರ್ಶನಕಲೆಗಳ‌ ಕಲರವ ಶಿಬಿರಾರ್ಥಿಗಳಿಂದ ಕಲಾ ಪ್ರದರ್ಶನಸೂರ್ಯ ಗ್ರಹಣ ಸಮಯದಲ್ಲಿ ಉಪಾಹಾರ ಸೇವನೆ ಕಾರ್ಯಕ್ರಮದ ನೇರಪ್ರಸಾರಸೂರ್ಯ ಗ್ರಹಣ ಸಮಯದಲ್ಲಿ ಉಪಾಹಾರ ಸೇವನೆ ಕಾರ್ಯಕ್ರಮದ ನೇರಪ್ರಸಾರಅಭಿವೃದ್ಧಿ ಮತ್ತು ರಾಜಕೀಯ – 2 :  ಪ್ರೊ. ಎಂ.ಚಂದ್ರಪೂಜಾರಿಅಭಿವೃದ್ಧಿ ಮತ್ತು ರಾಜಕೀಯ – 2 : ಪ್ರೊ. ಎಂ.ಚಂದ್ರಪೂಜಾರಿSavitribai Phule Speech Competition-Mushraff Sayyad - Hindi - mbvkarnatakaSavitribai Phule Speech Competition-Mushraff Sayyad - Hindi - mbvkarnatakaPavitra Hattarwat   Speech videoPavitra Hattarwat Speech videoಮಾನವ ಬಂಧುತ್ವ ವೇದಿಕೆಯ ಆಶಾ ಕಲಾತಂಡದಿಂದ ನಾಡ ನಡುವಿನಿಂದ ಸಿಡಿದ ನೋವಿನ ಕೂಗೇ ಗೀತೆಮಾನವ ಬಂಧುತ್ವ ವೇದಿಕೆಯ ಆಶಾ ಕಲಾತಂಡದಿಂದ ನಾಡ ನಡುವಿನಿಂದ ಸಿಡಿದ ನೋವಿನ ಕೂಗೇ ಗೀತೆಬಂಧುತ್ವದ ಬೆಳಕು   ಡಾ ಎಲ್ ಹನುಮಂತಯ್ಯ   ಮಹಾತ್ಮಾ ಗಾಂಧಿ, ಲಾಲ್ ಬಹಾದ್ದೂರ್ ಶಾಸ್ತ್ರಿ ಮತ್ತು ಬಿಜೆಪಿ ರಾಜಕಾರಣಬಂಧುತ್ವದ ಬೆಳಕು ಡಾ ಎಲ್ ಹನುಮಂತಯ್ಯ ಮಹಾತ್ಮಾ ಗಾಂಧಿ, ಲಾಲ್ ಬಹಾದ್ದೂರ್ ಶಾಸ್ತ್ರಿ ಮತ್ತು ಬಿಜೆಪಿ ರಾಜಕಾರಣಧಾರ್ಮಿಕ ಸಾಮರಸ್ಯ ಸಾರುವ ಅಹಿಂಸೋ ಪರಮ ಧರ್ಮ ನಾಟಕಧಾರ್ಮಿಕ ಸಾಮರಸ್ಯ ಸಾರುವ ಅಹಿಂಸೋ ಪರಮ ಧರ್ಮ ನಾಟಕಎಂಬಿವಿ ಮಾರ್ಗದರ್ಶಕರಾಗಿದ್ದ ಪ್ರೊ. ಚಂಪಾರವರ ನೆನಪುಎಂಬಿವಿ ಮಾರ್ಗದರ್ಶಕರಾಗಿದ್ದ ಪ್ರೊ. ಚಂಪಾರವರ ನೆನಪುಕೊರೊನಾ ನೆಗೆಟಿವ್ ಆದನಂತರದ ಆರೋಗ್ಯ ಸಂಬಂಧಿಸಿದ ಸವಾಲುಗಳುಕೊರೊನಾ ನೆಗೆಟಿವ್ ಆದನಂತರದ ಆರೋಗ್ಯ ಸಂಬಂಧಿಸಿದ ಸವಾಲುಗಳುಬಂಧುತ್ವ ಬೆಳಕು ಸರಣಿ ಉಪನ್ಯಾಸ ಮಾಲಿಕೆಬಂಧುತ್ವ ಬೆಳಕು ಸರಣಿ ಉಪನ್ಯಾಸ ಮಾಲಿಕೆಮಾನವ ಕುಲದ ಕಲ್ಯಾಣಕ್ಕಾಗಿ ಬೌದ್ಧ ದಮ್ಮ ಸ್ಥಾಪನೆಯಾಗಿದೆ: ಬಂತೆ ವಿನಯ್ ಕೀರ್ತಿಮಾನವ ಕುಲದ ಕಲ್ಯಾಣಕ್ಕಾಗಿ ಬೌದ್ಧ ದಮ್ಮ ಸ್ಥಾಪನೆಯಾಗಿದೆ: ಬಂತೆ ವಿನಯ್ ಕೀರ್ತಿಅತ್ಯಾಚಾರ: ಕಾನೂನು ಅಥವಾ ವ್ಯವಸ್ಥೆಯ ವೈಫಲ್ಯವೇ?: ನ್ಯಾ ನಾಗಮೋಹನ್ ದಾಸ್ಅತ್ಯಾಚಾರ: ಕಾನೂನು ಅಥವಾ ವ್ಯವಸ್ಥೆಯ ವೈಫಲ್ಯವೇ?: ನ್ಯಾ ನಾಗಮೋಹನ್ ದಾಸ್3ನೇ ಅಲೆ ವೇಳೆ ಸರ್ಕಾರ ಮುಂಜಾಗ್ರತೆ ವಹಿಸಬೇಕು: ಸತೀಶ್ ಜಾರಕಿಹೊಳಿ3ನೇ ಅಲೆ ವೇಳೆ ಸರ್ಕಾರ ಮುಂಜಾಗ್ರತೆ ವಹಿಸಬೇಕು: ಸತೀಶ್ ಜಾರಕಿಹೊಳಿಶ್ರೀ ಜಯಮೃತ್ಯುಂಜಯ ಸ್ವಾಮೀಜಿ  - Team Songಶ್ರೀ ಜಯಮೃತ್ಯುಂಜಯ ಸ್ವಾಮೀಜಿ - Team SongSavitribai Phule - Speech Competition - Shamal Hiroji   SpeechSavitribai Phule - Speech Competition - Shamal Hiroji Speech
Яндекс.Метрика