Загрузка страницы

3ನೇ ಅಲೆ ವೇಳೆ ಸರ್ಕಾರ ಮುಂಜಾಗ್ರತೆ ವಹಿಸಬೇಕು: ಸತೀಶ್ ಜಾರಕಿಹೊಳಿ

ಆರೋಗ್ಯಬಂಧುತ್ವವೆಬಿನಾರ್ ಸಮಾರೋಪ ಸಮಾರಂಭ ಸತೀಶ್ ಜಾರಕಿಹೊಳಿ

3ನೇ ಅಲೆ ವೇಳೆ ಸರ್ಕಾರ ಮುಂಜಾಗ್ರತೆ ವಹಿಸಬೇಕು: ಸತೀಶ್ ಜಾರಕಿಹೊಳಿ

ಬೆಂಗಳೂರು: ಕೋವಿಡ್ 1, 2 ಅಲೆಬಂದು ಹೋಗಿದೆ. 3ನೇ ಅಲೆ ಬರಲಿದೆ. ಮೊದಲೆರಡು ಅಲೆಗಳಲ್ಲಿ ಬೇರೆಬೇರೆ ಸಮಸ್ಯೆಗಳು ಇದ್ದವು. ಈಗ ಬೇರೆ ಸಮಸ್ಯೆಗಳು ಎದುರಾಗಬಹುದು. ಸರ್ಕಾರ ಇವುಗಳನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಯಮಕನಮರಡಿ ಶಾಸಕ ಮತ್ತು ಮಾನವ ಬಂಧುತ್ವ ವೇದಿಕೆಯ ಸಂಸ್ಥಾಪಕ ಸತೀಶ್ ಜಾರಕಿಹೊಳಿ ಹೇಳಿದರು.

ಮಾನವ ಬಂಧುತ್ವ ವೇದಿಕೆಯಿಂದ 20/062021ರಿಂದ ನಡೆದ 10 ದಿನಗಳ ಆರೋಗ್ಯ ಬಂಧುತ್ವ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿಕೊಂಡು ಮಾತಾಡಿದ ಅವರು, 140 ಕೋಟಿ ಜನರಲ್ಲಿ ಏಕಕಾಲಕ್ಕೆ ಕೊರೊನಾ ತಗುಲಿದ್ದು ಕೇವಲ 5 ಲಕ್ಷ ಜನಕ್ಕೆ. ಅವರಿಗೆ ಬೆಡ್, ಚಿಕಿತ್ಸೆ ಕೊಡಲು ಸಾಧ್ಯವಾಗಲಿಲ್ಲ. ಮೂಲಭೂತ ಸೌಕರ್ಯವಿದ್ದರೂ 5 ಲಕ್ಷ ಜನರಿಗೆ ಕೇರ್ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಬಹಳಷ್ಟು ಜನ ಪ್ರಾಣ ಕಳೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯಬಾರದು ಎಂದರು.

ಕೊರೊನಾ ಪಾಸಿಟಿವ್ ಬಂದ ತಕ್ಷಣ ಚಿಕಿತ್ಸೆ ಪಡೆದರೆ 500 ರೂ.ಗೆ ಗುಣವಾಗಿದ್ದಾರೆ. ಒಬ್ಬರು 40 ಲಕ್ಷ ರೂ. ಕರ್ಚು ಮಾಡಿದರೂ ಬದುಕಲಿಲ್ಲ. ಮುಂಜಾಗ್ರತೆ ಕೈಗೊಂಡರೆ ಮನೆಯಲ್ಲೇ ನೀವು ಗುಣವಾಗಬಹುದು. ಕೋವಿಡ್ ಯಾವ ರೀತಿಯಲ್ಲಿ ಬದುಕಬೇಕು ಎಂಬುದನ್ನು ಕಲಿಸಿದೆ. ಲಾಕ್ ಡೌನ್ ಅನ್ನು 8 ಗಂಟೆಗೆ ಘೋಷಣೆ ಮಾಡಿದರು. 12 ಗಂಟೆಯಿಂದ ಜಾರಿಗೊಳಿಸಿದರು. ಮುಂದಿನ ದಿನಗಳಲ್ಲಿ ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಳ್ಳುವಾಗ ಮುಂದಾಲೋಚನೆ ಮಾಡಬೇಕು. ಆ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಆರೀತಿ ಆಗಬಾರದು ಎಂದರು.

ಹೊಸದಾಗಿ 50 ತಾಲೂಕುಗಳಲ್ಲಿ 100 ಆಸ್ಪತ್ರೆಗಳನ್ನು ನಿರ್ಮಿಸಿ, ಕೋವಿಡ್ ಇಲಾಖೆಗಳಲ್ಲಿ ಆಸ್ಪತ್ರೆ ಸಿಬ್ಬಂದಿಯನ್ನು ನೇಮಿಸಬೇಕು, ಇಡೀ ರಾಜ್ಯದಲ್ಲಿ ತಕ್ಷಣ ಆರೋಗ್ಯ ಸಿಬ್ಬಂದಿಯನ್ನು ನೇಮಿಸಿ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪನವರಲ್ಲಿ ಮನವಿ ಮಾಡಿದ್ದೇನೆ ಎಂದರು.

ಜೊತೆಗೆ, ಪ್ರವಾಸಿಗರನ್ನು ಕಡ್ಡಾಯವಾಗಿ ತಪಾಸಣೆ ಮಾಡಬೇಕು. ಕೊರೊನಾ 10 ವರ್ಷದವರೆಗೂ ಇರಬಹುದು. ರಾಜ್ಯದಲ್ಲಿ 30,000 ಪರೀಕ್ಷೆಗಳನ್ನು ಪ್ರತಿದಿನ ನಡೆಸಲಾಗುತ್ತಿದೆ. ಹೆಚ್ಚು ಪರೀಕ್ಷೆಗಳನ್ನು ನಡೆಸಬೇಕು. ಈ ನಿಟ್ಟಿನಲ್ಲಿ ಸಿಎಂಗೆ ಪತ್ರವನ್ನೂ ಬರೆದಿದ್ದೇನೆ ಎಂದರು.

ನ್ಯಾಯಾಲಯ ಮಧ್ಯಪ್ರವೇಶದಿಂದಾಗಿ ರಾಜ್ಯಕ್ಕೆ 900 ಟನ್ ಆಕ್ಸಿಜನ್ ಸಿಕ್ಕಿದೆ. ಜಿಂದಾಲ್ ನಲ್ಲಿ ಉತ್ಪಾದನೆಯಾದ ಆಕ್ಸಿಜನ್ ಅನ್ನು ಕೂಡ ಬಳಸಲು ಸಾಧ್ಯವಾಗುತ್ತಿರಲಿಲ್ಲ. ಕೋರ್ಟ್ ಮಧ್ಯಪ್ರವೇಶದಿಂದ ಸಿಕ್ಕಿದೆ. ಕೋರ್ಟ್ ಉತ್ತಮ ಕೆಲಸ ಮಾಡಿದೆ. ಮುಂದೆ ಕೂಡ ಇಂತಹ ಸಮಯದಲ್ಲಿ ಮಾಡಲಿದೆ ಎಂದರು.

ತಜ್ಞರು, ವೈದ್ಯರು, ಸ್ವಾಮೀಜಿಗಳು ಆರೋಗ್ಯ ಬಂಧುತ್ವ ವೆಬಿನಾರ್ ನಲ್ಲಿ ಭಾಗವಹಿಸಿರುವುದು ಒಳ್ಳೆಯ ಬೆಳವಣಿಗೆ. ಕಾರ್ಯಕ್ರಮದಲ್ಲಿ ತಿಳಿವಳಿಕೆ ನೀಡಿದ ಎಲ್ಲರಿಗೂ ಧನ್ಯವಾದಗಳು. ಮಾನವ ಬಂಧುತ್ವ ವೇದಿಕೆ ಬಹಳ ಜನಕ್ಕೆ ವಿಶಿಷ್ಟ ಕಾರ್ಯಕ್ರಮ ಎನಿಸಬಹುದು ಎಂದರು.

ಮಾನವ ಬಂಧುತ್ವ ವೇದಿಕೆಯೆಂದರೆ ಮೂಢನಂಬಿಕೆ ವಿರೋಧಿ, ಧರ್ಮ ವಿರೋಧಿ ಎಂಬ ತಪ್ಪು ತಿಳಿವಳಿಕೆ ಇದೆ. ಮೂಢನಂಬಿಕೆ ವಿರುದ್ಧ ಹೋರಾಡುವುದು ನಮ್ಮ ಕಾರ್ಯಕ್ರಮದ ಒಂದು ಭಾಗ. ನಾವು ಕೆ.ಎ.ಎಸ್., ತರಬೇತಿ, ಕೃಷಿ ಕ್ಷೇತ್ರದ ಬೆಳವಣಿಗೆಗೆ ಪೂರಕವಾದ ತರಬೇತಿ, ಉದ್ಯಮಗಳ ಸ್ಥಾಪನೆಗೆ ಅಗತ್ಯ ತರಬೇತಿಯಂತಹ ಕೆಲಸಗಳನ್ನು ಕೂಡ ಮಾಡುತ್ತಿದ್ದೇವೆ ಎಂದರು.

ಮಾನವ ಬಂಧುತ್ವ ವೇದಿಕೆ ಮುಂದಿನ ದಿನಗಳಲ್ಲಿ ಕೃಷಿ ಮೊದಲಾದ ಇನ್ನಿತರ ವಿಷಯದ ಕುರಿತು ಕೆಲಸ ಮಾಡಲಿ. ಪ್ರವಾಹ, ಕೋವಿಡ್ ಮೊದಲಾದ ವಿಷಯಗಳಲ್ಲಿ ಕೂಡ ಮಾನವ ಬಂಧುತ್ವ ವೇದಿಕೆ ಕೆಲಸ ಮಾಡುತ್ತಿದೆ ಎಂದರು.

ಬೇರೆ ರಾಜ್ಯದ ವಲಸಿಗರನ್ನು 14 ದಿನ ವಸತಿ ಉಳಿಸಿದ್ದೇವೆ. ತರಕಾರಿಗಳನ್ನು ಕೊಂಡು ಜನರಿಗೆ ವಿತರಿಸಿದ್ದೇವೆ, ಆಕ್ಸಿಜನ್ ಸರಬರಾಜು ಕೆಲಸವನ್ನು ಕೂಡ ಮಾಡಿದ್ದೇವೆ ಎಂದರು.

ಜನ ಜಾಗೃತಿಯಿಂದ, ಜವಾಬ್ದಾರಿಯಿಂದ ಇರಬೇಕು. ಸರ್ಕಾರ ಕೂಡ ಕೆಲಸ ಮಾಡಬೇಕು. ಮಾನವ ಬಂಧುತ್ವ ವೇದಿಕೆ ಇಂತಹ ಒಳ್ಳೆಯ ಕೆಲಸ ಮಾಡಿದೆ. ಮುಂದಿನ ದಿನಗಳಲ್ಲಿ ಅಗತ್ಯವಾದ ಕೆಲಸಗಳನ್ನು ಮುಂದುವರೆಸೋಣ. ಜನರಿಗೆ ಅನುಕೂಲವಾಗುವಂತೆ ಕಳೆದ 30 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಮುಂದೆ ಕೂಡ ಜನಪರ ಕೆಲಸ ಮುಂದುವರೆಸುತ್ತೇನೆ ಎಂದರು.

#ಮಾನವಬಂಧುತ್ವವೇದಿಕೆ #ಆರೋಗ್ಯಬಂಧುತ್ವವೆಬಿನಾರ್ #ಸರಣಿ #ArogyaBandhutva #Webinar #satishjarkiholi #mbvkarnataka #MBV #ManavaBandhutvaVedike

Видео 3ನೇ ಅಲೆ ವೇಳೆ ಸರ್ಕಾರ ಮುಂಜಾಗ್ರತೆ ವಹಿಸಬೇಕು: ಸತೀಶ್ ಜಾರಕಿಹೊಳಿ канала MBV Karnataka
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
21 июня 2021 г. 16:20:49
00:16:53
Другие видео канала
ಮೌಢ್ಯ ವಿರೋಧಿ ದಿನಾಚರಣೆಯ ನೇರ ಪ್ರಸಾರಮೌಢ್ಯ ವಿರೋಧಿ ದಿನಾಚರಣೆಯ ನೇರ ಪ್ರಸಾರಅಪೌಷ್ಟಿಕತೆ ಮತ್ತು ಮೂಢನಂಬಿಕೆ ವಿರುದ್ಧ ಜಾಗೃತಿಗಾಗಿ ಬಸವ ಪಂಚಮಿ: ತೋಳಿ ಭರಮಣ್ಣಅಪೌಷ್ಟಿಕತೆ ಮತ್ತು ಮೂಢನಂಬಿಕೆ ವಿರುದ್ಧ ಜಾಗೃತಿಗಾಗಿ ಬಸವ ಪಂಚಮಿ: ತೋಳಿ ಭರಮಣ್ಣನಾರಾಯಣ ಗುರು ಹಾಗೂ ಸುಭಾಷ್ ಚಂದ್ರ ಬೋಸ್ ಸ್ತಬ್ಧಚಿತ್ರ ನಿರಾಕರಣೆ: ಒಕ್ಕೂಟ ವ್ಯವಸ್ಥೆಗೆ ಬಂದೊದಗಿದ ಅಪಾಯನಾರಾಯಣ ಗುರು ಹಾಗೂ ಸುಭಾಷ್ ಚಂದ್ರ ಬೋಸ್ ಸ್ತಬ್ಧಚಿತ್ರ ನಿರಾಕರಣೆ: ಒಕ್ಕೂಟ ವ್ಯವಸ್ಥೆಗೆ ಬಂದೊದಗಿದ ಅಪಾಯಹಿಂದಿ ಹೇರಿಕೆಯ ಅಪಾಯಗಳು: ಆನಂದ್ ಬನವಾಸಿಹಿಂದಿ ಹೇರಿಕೆಯ ಅಪಾಯಗಳು: ಆನಂದ್ ಬನವಾಸಿಕಲೆಗಳ‌ ಕಲರವ ಶಿಬಿರಾರ್ಥಿಗಳಿಂದ ಕಲಾ ಪ್ರದರ್ಶನಕಲೆಗಳ‌ ಕಲರವ ಶಿಬಿರಾರ್ಥಿಗಳಿಂದ ಕಲಾ ಪ್ರದರ್ಶನಸೂರ್ಯ ಗ್ರಹಣ ಸಮಯದಲ್ಲಿ ಉಪಾಹಾರ ಸೇವನೆ ಕಾರ್ಯಕ್ರಮದ ನೇರಪ್ರಸಾರಸೂರ್ಯ ಗ್ರಹಣ ಸಮಯದಲ್ಲಿ ಉಪಾಹಾರ ಸೇವನೆ ಕಾರ್ಯಕ್ರಮದ ನೇರಪ್ರಸಾರಕೋವಿಡ್ ಸಂದರ್ಭದ ಬಿಕ್ಕಟ್ಟಿನಲ್ಲಿ ಜನಜೀವನ ಮತ್ತು ಸವಾಲುಗಳುಕೋವಿಡ್ ಸಂದರ್ಭದ ಬಿಕ್ಕಟ್ಟಿನಲ್ಲಿ ಜನಜೀವನ ಮತ್ತು ಸವಾಲುಗಳುಅಭಿವೃದ್ಧಿ ಮತ್ತು ರಾಜಕೀಯ – 2 :  ಪ್ರೊ. ಎಂ.ಚಂದ್ರಪೂಜಾರಿಅಭಿವೃದ್ಧಿ ಮತ್ತು ರಾಜಕೀಯ – 2 : ಪ್ರೊ. ಎಂ.ಚಂದ್ರಪೂಜಾರಿSavitribai Phule Speech Competition-Mushraff Sayyad - Hindi - mbvkarnatakaSavitribai Phule Speech Competition-Mushraff Sayyad - Hindi - mbvkarnatakaPavitra Hattarwat   Speech videoPavitra Hattarwat Speech videoಮಾನವ ಬಂಧುತ್ವ ವೇದಿಕೆಯ ಆಶಾ ಕಲಾತಂಡದಿಂದ ನಾಡ ನಡುವಿನಿಂದ ಸಿಡಿದ ನೋವಿನ ಕೂಗೇ ಗೀತೆಮಾನವ ಬಂಧುತ್ವ ವೇದಿಕೆಯ ಆಶಾ ಕಲಾತಂಡದಿಂದ ನಾಡ ನಡುವಿನಿಂದ ಸಿಡಿದ ನೋವಿನ ಕೂಗೇ ಗೀತೆಬಂಧುತ್ವದ ಬೆಳಕು   ಡಾ ಎಲ್ ಹನುಮಂತಯ್ಯ   ಮಹಾತ್ಮಾ ಗಾಂಧಿ, ಲಾಲ್ ಬಹಾದ್ದೂರ್ ಶಾಸ್ತ್ರಿ ಮತ್ತು ಬಿಜೆಪಿ ರಾಜಕಾರಣಬಂಧುತ್ವದ ಬೆಳಕು ಡಾ ಎಲ್ ಹನುಮಂತಯ್ಯ ಮಹಾತ್ಮಾ ಗಾಂಧಿ, ಲಾಲ್ ಬಹಾದ್ದೂರ್ ಶಾಸ್ತ್ರಿ ಮತ್ತು ಬಿಜೆಪಿ ರಾಜಕಾರಣಧಾರ್ಮಿಕ ಸಾಮರಸ್ಯ ಸಾರುವ ಅಹಿಂಸೋ ಪರಮ ಧರ್ಮ ನಾಟಕಧಾರ್ಮಿಕ ಸಾಮರಸ್ಯ ಸಾರುವ ಅಹಿಂಸೋ ಪರಮ ಧರ್ಮ ನಾಟಕಎಂಬಿವಿ ಮಾರ್ಗದರ್ಶಕರಾಗಿದ್ದ ಪ್ರೊ. ಚಂಪಾರವರ ನೆನಪುಎಂಬಿವಿ ಮಾರ್ಗದರ್ಶಕರಾಗಿದ್ದ ಪ್ರೊ. ಚಂಪಾರವರ ನೆನಪುಕೊರೊನಾ ನೆಗೆಟಿವ್ ಆದನಂತರದ ಆರೋಗ್ಯ ಸಂಬಂಧಿಸಿದ ಸವಾಲುಗಳುಕೊರೊನಾ ನೆಗೆಟಿವ್ ಆದನಂತರದ ಆರೋಗ್ಯ ಸಂಬಂಧಿಸಿದ ಸವಾಲುಗಳುಬಂಧುತ್ವ ಬೆಳಕು ಸರಣಿ ಉಪನ್ಯಾಸ ಮಾಲಿಕೆಬಂಧುತ್ವ ಬೆಳಕು ಸರಣಿ ಉಪನ್ಯಾಸ ಮಾಲಿಕೆಮಾನವ ಕುಲದ ಕಲ್ಯಾಣಕ್ಕಾಗಿ ಬೌದ್ಧ ದಮ್ಮ ಸ್ಥಾಪನೆಯಾಗಿದೆ: ಬಂತೆ ವಿನಯ್ ಕೀರ್ತಿಮಾನವ ಕುಲದ ಕಲ್ಯಾಣಕ್ಕಾಗಿ ಬೌದ್ಧ ದಮ್ಮ ಸ್ಥಾಪನೆಯಾಗಿದೆ: ಬಂತೆ ವಿನಯ್ ಕೀರ್ತಿಅತ್ಯಾಚಾರ: ಕಾನೂನು ಅಥವಾ ವ್ಯವಸ್ಥೆಯ ವೈಫಲ್ಯವೇ?: ನ್ಯಾ ನಾಗಮೋಹನ್ ದಾಸ್ಅತ್ಯಾಚಾರ: ಕಾನೂನು ಅಥವಾ ವ್ಯವಸ್ಥೆಯ ವೈಫಲ್ಯವೇ?: ನ್ಯಾ ನಾಗಮೋಹನ್ ದಾಸ್ಶ್ರೀ ಜಯಮೃತ್ಯುಂಜಯ ಸ್ವಾಮೀಜಿ  - Team Songಶ್ರೀ ಜಯಮೃತ್ಯುಂಜಯ ಸ್ವಾಮೀಜಿ - Team SongSavitribai Phule - Speech Competition - Shamal Hiroji   SpeechSavitribai Phule - Speech Competition - Shamal Hiroji Speech
Яндекс.Метрика