Загрузка страницы

Comedian in Yakshagana ಹಾಸ್ಯಗಾರರ ಕುಣಿತದ ಗಮ್ಮತ್ತು ನೋಡಿ! ನಮ್ಮನ್ನಗಲಿದ Gopalakrishna Nairy ನಿರ್ದೇಶನವಿದು

By Gopalakrishna Nairy, Drama and Yakshagana Director, Former Principal of National School of Drama, After him, it was played at Hangarakatte Yakshagana Kala Kendra, on 20th January 2023.

Watch Videos of Chandrashekara Navada, @kcnavada.com

ರಂಗ ನಿರ್ದೇಶನದಲ್ಲಿ ಹೆಸರು ಮಾಡಿದ ಗೋಪಾಲಕೃಷ್ಣ ನಾಯರಿಯವರ ಹೊಸ ಪ್ರಯೋಗ.

ಈ ಕೆಳಗೆ ಪ್ರಭಾಕರ ಶಿಶಿಲರವರ ಲೇಖನ ಕೊಡಲಾಗಿದೆ.

FEBRUARY 16, 2015

ಶೃಂಗಾರ ವೀರ ಕರುಣಾ| ಅದ್ಭುತಃ ಶಾಂತ ಹಾಸ್ಯ ಕೌ||

ಭಯಾನಕಶ್ಚ ಭೀಭತ್ಸೋ| ರೌದ್ರೋ ನವರಸಾ ಸ್ತಥಾ

ಹಾಸ್ಯದ ಸ್ಥಾನಮಾನ ಮತ್ತು ಪ್ರಭೇದಗಳು

ರಸಾಸ್ವಾದನೆಯ ಸಂದರ್ಭದಲ್ಲಿ ವಿಮರ್ಶಾಪ್ರಜ್ಞೆ ಜಾಗೃತವಾಗಿರುವಂತೆ ನೋಡಿ ಕೊಳ್ಳುವುದು ಅತ್ಯಂತ ಅಗತ್ಯವೆಂದು ಹೇಳುವ ಮೀಮಾಂಸಕಾರರು ಭಾರತದಲ್ಲೂ ಇದ್ದಾರೆ, ಪಾಶ್ಚಾತ್ಯ ರಾಷ್ಟ್ರಗಳಲ್ಲೂ ಇದ್ದಾರೆ. ಖ್ಯಾತ
ನಾಟಕಕಾರ ಬ್ರೆಕ್ಟ್‌ ಅಂಥವರಲ್ಲೊಬ್ಬ. ಅವನ ಹೇಳಿಕೆ ಬ್ರೆಕ್ಟನ ತಂತ್ರವೆಂದು ಪಾಶ್ಚಾತ್ಯ ನಾಟಕರಂಗದಲ್ಲಿ ಪ್ರಸಿದ್ಧಿ ಪಡೆದಿದೆ. ಭಾರತೀಯ ಪ್ರದರ್ಶನ ಕಲೆಗಳಲ್ಲಿ ಭಾವದೊಂದಿಗೆ ವಿಚಾರವೂ ಜಾಗೃತವಾಗಿರಬೇಕೆಂಬ ಕಾರಣಕ್ಕಾಗಿ ಕೆಲವು ತಂತ್ರಗಳನ್ನು ಅಳವಡಿಸಲಾಗುತ್ತದೆ. ಯಕ್ಷಗಾನದ ಹಾಸ್ಯಪಾತ್ರಗಳ ಸುಪ್ತ ಉದ್ದೇಶ ಅದುವೇ. ಅದಕ್ಕಾಗಿ ಯಕ್ಷಗಾನದ ಹಾಸ್ಯಪಾತ್ರಗಳಿಗೆ ಸಾಕಷ್ಟು ಸ್ವಾತಂತ್ರ್ಯ ನೀಡಲಾಗಿದೆ.

ಚೌಕಿ ಎಂಬ ಪ್ರಸಾಧನ ಗೃಹದಲ್ಲಿ ಹಾಸ್ಯಗಾರ ದೇವರಿಗೆ ಸರಿಯಾದ ವಿರುದ್ಧ ದಿಕ್ಕಿನಲ್ಲಿ ದೇವರತ್ತ ಮುಖ ಮಾಡಿ ಕುಳಿತುಕೊಳ್ಳುತ್ತಾನೆ. ಇದರ ಅರ್ಥ ವೇಷಧಾರಿಗಳು ಚೌಕಿಯಲ್ಲಿ ದೇವರ ಬಳಿಕ ಅತ್ಯಂತ ಹೆಚ್ಚು ಗೌರವ
ನೀಡಬೇಕಾದದ್ದು ಹಾಸ್ಯಗಾರನಿಗೇ ಎಂದು. ಯಕ್ಷಗಾನ ಮೇಳದಲ್ಲಿ ಭಾಗವತನ ಮತ್ತು ಮದ್ದಳೆಗಾರನ ಬಳಿಕ ಮೂರನೆಯ ಸ್ಥಾನದಲ್ಲಿರುವವನು ಹಾಸ್ಯಗಾರ.

ಆತನಿಗೆ ಭಾಗವತಿಕೆ ಮಾಡಲು ತಿಳಿದಿರಬೇಕು, ಚೆಂಡ ಮದ್ದಳೆ ನುಡಿಸಲು ಆತ ಅರಿತಿರಬೇಕು. ಪುರಾಣಜ್ಞಾನ, ಪ್ರಸಂಗಜ್ಞಾನ, ರಂಗಜ್ಞಾನ ಮತ್ತು ನೃತ್ಯಜ್ಞಾನ ಇರಬೇಕು. ಸಂದರ್ಭ ಒದಗಿದಾಗ ಯಾವುದೇ ಪಾತ್ರವನ್ನು ನಿಭಾಯಿಸುವ ಕೌಶಲ ಅವನಲ್ಲಿರಬೇಕು. ಯಕ್ಷಗಾನವು ಹಾಸ್ಯಗಾರನಿಂದ ಇವೆಲ್ಲವನ್ನು ನಿರೀಕಿಸುತ್ತದೆ ಎಂಬ ಅರಿವು ಅವನಿಗೂ ಇರಬೇಕು.

ಯಕ್ಷಗಾನದಲ್ಲಿ ಹಾಸ್ಯದ ಅಗತ್ಯವೇನು?

1. ಭಾವಬುದ್ಧಿ ಸಮನ್ವಯ : ಯಕ್ಷಗಾನವು ಒಂದು ನವ ರಸಭರಿತ ಸಾಂಪ್ರದಾಯಿಕ ಕಲೆಯಾಗಿದೆ. ಪೌರಾಣಿಕ ಪ್ರಸಂಗಗಳು ಯಕ್ಷಗಾನಕ್ಕೆ ಭಕ್ತಿಯ ಪರಿವೇಷೆಯನ್ನು ತೊಡಿಸಿ ಬಿಡುವುದಿದೆ. ಸಮರ್ಥನಾದ ಕಲಾವಿದನೊಬ್ಬ ರಂಗದಲ್ಲಿ ರಸವನ್ನು ಆಂಗಿಕವಾಚಿಕಆಹಾರ್ಯಗಳ ಮೂಲಕ ಅಭಿವ್ಯಕ್ತಿಸುವಾಗ ಪ್ರೇಕಕರು ಭಾವ ಜಗತ್ತಿನಲ್ಲಿ ಮುಳುಗಿ ಬಿಡುತ್ತಾರೆ. ವಿಮರ್ಶೆ ಇಲ್ಲದೆ ಯಾವುದೂ ಬೆಳೆಯುವುದಿಲ್ಲ. ಪ್ರೇಕಕರಲ್ಲಿ ಭಾವಬುದ್ಧಿ ಸಮನ್ವಯದಿಂದ ರಸಾಸ್ವಾದನೆ ಮಾಡಬೇಕೆನುನವುದು ಯಕ್ಷಗಾನದ ಸುಪ್ತ ಉದ್ದೇಶ. ಹಾಸ್ಯಗಾರ ಪ್ರೇಕಕರನ್ನು ಭಾವಪ್ರಪಂಚದಿಂದ ವಾಸ್ತವ ಪ್ರಪಂಚಕ್ಕೆ ಕರೆತರುತ್ತಾನೆ. ಈ ಕಾರಣಕ್ಕಾಗಿಯೇ ಹಾಸ್ಯಗಾರನಿಗೆ ಉಳಿದೆಲ್ಲಾ ಪಾತ್ರಗಳಿಗಿಂತ ಹೆಚ್ಚು ಸ್ವಾತಂತ್ರ್ಯ ದಕ್ಕಿರುವುದು.

2. ರಸ ನಿರ್ಮಾಣ : ‘ಹಾಸ್ಯ’ನವರಸಗಳಲ್ಲಿ ಅತ್ಯಂತ ಪ್ರಧಾನವಾದ ರಸ.

ಹಾಸ್ಯರಸ ನಿರ್ಮಾಣವು ಕೌಶಲವೂ ಹೌದು, ಪ್ರತಿಭೆಯೂ ಹೌದು. ಕುಶಲಿ ಹಾಸ್ಯಗಾರರ ಹಾಸ್ಯ ತಾತ್ಕಾಲಿಕ ಮನರಂಜನೆ ನೀಡುತ್ತದೆ. ಪ್ರತಿಭಾನ್ವಿತ ಹಾಸ್ಯಗಾರರು ಹಾಸ್ಯವನ್ನು ವೈಚಾರಿಕತೆಯ ಮಟ್ಟಕ್ಕೆ ಏರಿಸಬಲ್ಲರು.
ಹಾಸ್ಯವನ್ನು ಭಾವದ ಮಟ್ಟದಿಂದ ಬುದ್ಧಿಯ ಮಟ್ಟಕ್ಕೇರಿಸಿ ರಸನಿರ್ಮಾಣ ಮಾಡುವುದು ಅಸಾಧಾರಣ ಪ್ರತಿಭೆ. ಅದು ಹಾಸ್ಯಗಾರನೆದುರಿರುವ ದೊಡ್ಡ ಸವಾಲು.

3. ಪಾತ್ರ ಪೋಷಣೆ : ಹಾಸ್ಯಗಾರನೇ ಪ್ರಧಾನ ಪಾತ್ರವಾಗಿರುವ ಪ್ರಸಂಗಗಳು ತೀರಾ ಅಪೂರ್ವ. ಚಂದ್ರಾವಳಿ ವಿಲಾಸದಂತಹ ಕಲ್ಪಿತ ಪ್ರಸಂಗದಲ್ಲಿ ಚಂದ್ರಾವಳಿಯ ಪತಿ ಚಂದಗೋಪನದ್ದು ಪ್ರಧಾನ ಪಾತ್ರ ಎನ್ನುವುದುಂಟು. ಪ್ರಸಂಗದಲ್ಲಿ ಕೃಷ್ಣನಿರುವುದರಿಂದ ಚಂದಗೋಪ ನಾಯಕನಾಗಲು ಸಾಧ್ಯವಿಲ್ಲ. ಅವನದು ಏನಿದ್ದರೂ ಪೂರಕ ಮತ್ತು ಪೋಷಕ ಪಾತ್ರ. ಪ್ರಸಂಗದ ಓಟಕ್ಕೆ ಅಥವಾ ಕಥೆಯನ್ನು ಮುಂದೊಯ್ಯಲು ಹಾಸ್ಯಗಾರನ ಅಗತ್ಯವಿರುತ್ತದೆ. ಅದು ದೂತನ ರೂಪದಲ್ಲೋ, ಸಖನ ರೂಪದಲ್ಲೋ, ಋಷಿಮುನ್ನಿಗಳ ರೂಪದಲ್ಲೋ, ಬ್ರಹ್ಮಚಿತ್ರಗುಪ್ತರ ರೂಪದಲ್ಲೋ ಇರಬಹುದು. ಇವುಗಳಲ್ಲಿ ಕೆಲವು ಪಾತ್ರಗಳಲ್ಲಿ ಅದ್ಭುತ ಹಾಸ್ಯ ಪ್ರದರ್ಶನಕ್ಕೆ ಅವಕಾಶವಿದೆ. ಬ್ರಹ್ಮ, ಬೃಹಸ್ಪತಿ, ಬಾಹುಕ,ಜಾಂಬವಂತ ಇತ್ಯಾದಿ ಪಾತ್ರಗಳು ಗಂಭೀರ ಭಾವದೊಳಗೆ ಹಾಸ್ಯರಸವನ್ನಿರಿಸಿ ಪ್ರೇಕಕರಿಗೆ ನೀಡಬೇಕು.
ಅತ್ತೆಮಂಥರೆಯಂತಹ ಪಾತ್ರಗಳು ಹಾವಭಾವಗಳಿಂದ ತಾವು ಬಜಾರಿಗಳು ಮತ್ತು ಘಟವಾಣಿಗಳೆಂಬುದನ್ನು ತೋರ್ಪಡಿಸಬೇಕು. ಸಖರು ದೂತರಂತೆ ವರ್ತಿಸದೆ ಹಾಸ್ಯಪ್ರಜ್ಞೆಯನ್ನು ಅಭಿವ್ಯಕ್ತಿಸಬೇಕು. ದೂತರಿಗೆ ತುಂಬಾ
ಸ್ವಾತಂತ್ರ್ಯವಿದ್ದರೂ ಭಾಷೆ, ಸಮಯಸಂದರ್ಭ ಮತ್ತು ಔಚಿತ್ಯಗಳ ಬಗ್ಗೆ ಎಚ್ಚರವಿರಬೇಕು.

4. ಮನರಂಜನೆ : ಯಕ್ಷಗಾನ ಪ್ರದರ್ಶನ ರಾತ್ರಿ ಇಡೀ ನಡೆಯುವಾಗ ಮಧ್ಯೆ ಮಧ್ಯೆ ಕಚಗುಳಿ ಇಡುವ ಪಾತ್ರಗಳು ಮತ್ತು ಸನ್ನಿವೇಶಗಳು ಇರಬೇಕಾಗುತ್ತವೆ. ಅವು ಹೊಸ ಉತ್ಸಾಹದಿಂದ ಪ್ರೇಕಕರನ್ನು ಮುಂದಿನ ಕಥಾಸ್ವಾದನೆಗೆ ಸಿದ್ಧಪಡಿಸುತ್ತವೆ. ಸಂತೋಷಂ ಜನಯತೇ ಪ್ರಾಜ್ಞಃ ಎಂಬ ಮಾತಿದೆ. ಹಾಸ್ಯಗಾರನು ಉನ್ನತ ಮಟ್ಟದ ಸಂತೋಷವನ್ನು ನೀಡಬೇಕೆಂದು ಯಕ್ಷಗಾನ ಬಯಸುತ್ತದೆ. ಹಾಗೆಂದರೆ ವಿಚಾರಪ್ರಚೋದಕ ಮನರಂಜನೆ ನೀಡಲು ಹಾಸ್ಯಗಾರನಿಂದ ಸಾಧ್ಯವಾಗಬೇಕು ಎಂದರ್ಥ.

5. ಉದ್ದೇಶ ಸಾಧನೆ : ಯಕ್ಷಗಾನವು ಸುಸಂಸ್ಕೃತ ಸಮಾಜವೊಂದರ ನಿರ್ಮಾಣ ವನ್ನು ಬಯಸುವ ಕಲೆ. ಅದು ಹಿರಿಯರಿಗೆ, ಗುರುಗಳಿಗೆ, ಸ್ತ್ರೀಯರಿಗೆ ಅಪಾರ ಗೌರವ ಇರುವ ವ್ಯವಸ್ಥೆಯೊಂದನ್ನು ರೂಪಿಸ ಬಯಸುತ್ತದೆ. ಅದಕ್ಕೆ
ಸಮಾಜ ಸುಧಾರಣೆಯ ಸುಪ್ತ ಉದ್ದೇಶವಿದೆ. ಇದರ ಅರಿವಿಲ್ಲದ ಹಾಸ್ಯಕಲಾವಿದರು ಜಾತೀಯತೆ, ಮತೀಯತೆ, ವರ್ಣ ವ್ಯವಸ್ಥೆ, ಊಳಿಗಮಾನ್ಯ ವ್ಯವಸ್ಥೆ, ಅಸಮಾನತೆ ಮತ್ತು ಸ್ತ್ರೀ ಶೋಷಣೆಗಳನ್ನು ಸಮರ್ಥಿಸಿ ಪ್ರತಿಗಾಮಿ ಮೌಲ್ಯಗಳ ಹರಿಕಾರರಾಗುವುದಿದೆ. ಸಂಸ್ಕಾರವಂತ ಹಾಸ್ಯಗಾರ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯ ನಿವಾರಣೆಗೆ ತನ್ನ ಮಿತಿಯಲ್ಲಿ ಪ್ರಯತ್ನ ಪಡುತ್ತಾನೆ, ಪಡಬೇಕು. ತೀರಾ ಬಡತನದಿಂದ ಬಂದ ಯಕ್ಷ ಕಲಾವಿದರಿಗೆ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯ ನಿವಾರಣೆಗೆ ರಂಗದಿಂದ ಪ್ರಯತ್ನಿಸಬೇಕಾದ ಬದ್ಧತೆ ಇರುವುದು ಸಹಜವೂ ಕೂಡಾ.

ಯಕ್ಷಗಾನದಲ್ಲಿ ಅನೇಕ ಹಾಸ್ಯವೇಷಗಳು ಕಾಣಿಸಿಕೊಳ್ಳುತ್ತವೆ. ಅವುಗಳನ್ನು ಸಾಂಪ್ರದಾಯಿಕ ಹಾಸ್ಯವೇಷಗಳು, ಆರೋಪಿತ ಹಾಸ್ಯವೇಷಗಳು ಮತ್ತು ಕಲ್ಪಿತ ಹಾಸ್ಯವೇಷಗಳೆಂದು ವರ್ಗೀಕರಿಸಬಹುದು.

ಯಕ್ಷಗಾನದಲ್ಲಿ ‘ಹಾಸ್ಯ’ ಒಂದು ಅವಶ್ಯಕ, ಅನಿವಾರ್ಯ ಅಂಗ. ಅದರ ಮಹತ್ತ್ವದ ಹೊರತಾಗಿಯೂ ಹಾಸ್ಯದ ಮೌಲ್ಯ ಕುಸಿಯುತ್ತಿದೆ. ಹಾಸ್ಯವನ್ನು ಆಂಗಿಕ, ವಾಚಿಕ ಮತುಆಹಾರ್ಯ ರೂಪದಲ್ಲಿ ಕಲಾರಸಿಕರಿಗೆ ಉಣಬಡಿಸುವುದು ವಾಡಿಕೆ. ಆಂಗಿಕ ಮತ್ತು ವಾಚಿಕ ದಲ್ಲಿ ಅಸಂಬದ್ಧ ಮತ್ತು ಅಶ್ಲೀಲ ಹಾಸ್ಯ ಸೇರಿಕೊಂಡರೆ ವೇಷಭೂಷಣ ಮತ್ತು ಮುಖವರ್ಣಿಕೆ ಯಕ್ಷಗಾನದ ಹಾಸ್ಯವನ್ನು ಸರ್ಕಸ್ಸಿನ ಬಫೂನನ ಮಟ್ಟಕ್ಕೆ ಇಳಿಸಿಬಿಟ್ಟಿದೆ. ‘ಹಾಸ್ಯ’ವು ಅಪಹಾಸ್ಯ ಕ್ಕೀಡಾಗಿದೆ.
ಹಾಸ್ಯಪ್ರಜ್ಞೆಯ ಕೊರತೆ ಹಾಸ್ಯಗಾರರುಗಳನ್ನು ಹಾಸ್ಯಾಸ್ಪದ ಪಾತ್ರಗಳನ್ನಾಗಿ ಮಾಡಿದೆ. ರಸ ನಿರ್ಮಾಣ ಮಾಡಬೇಕಾದ ಹಾಸ್ಯವು ರಸಾಭಾಸಕ್ಕೆ ಕಾರಣವಾಗಿರುವುದು ಆತಂಕ ಹುಟ್ಟಿಸುವ ವಿದ್ಯಮಾನವಾಗಿದೆ.

Watch Videos of Chandrashekara Navada
@kcnavada.com

Видео Comedian in Yakshagana ಹಾಸ್ಯಗಾರರ ಕುಣಿತದ ಗಮ್ಮತ್ತು ನೋಡಿ! ನಮ್ಮನ್ನಗಲಿದ Gopalakrishna Nairy ನಿರ್ದೇಶನವಿದು канала Chandrashekara Navada
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
27 января 2023 г. 9:00:56
00:02:25
Другие видео канала
ಪುಟ್ಟದೊಂದು Saxophone ಝಲಕ್ ನೋಡಿ; ಸುರೇಶ್ ಜೋಗಿ ಅನಂತಾಡಿ ಎಂಬ Young Artist ಪರಿಚಯಿಸಿಕೊಳ್ಳಿ; ಪ್ರೋತ್ಸಾಹ ಇರಲಿಪುಟ್ಟದೊಂದು Saxophone ಝಲಕ್ ನೋಡಿ; ಸುರೇಶ್ ಜೋಗಿ ಅನಂತಾಡಿ ಎಂಬ Young Artist ಪರಿಚಯಿಸಿಕೊಳ್ಳಿ; ಪ್ರೋತ್ಸಾಹ ಇರಲಿA Popular ವಿದ್ಯಾಸಂಸ್ಥೆಯ Old Student & ಉದ್ಯಮಿ ಹೇಳಿದ್ದು;ಆ PU ಕಾಲೇಜಿನ Platinum Jubilee Celebration ಬಂತುA Popular ವಿದ್ಯಾಸಂಸ್ಥೆಯ Old Student & ಉದ್ಯಮಿ ಹೇಳಿದ್ದು;ಆ PU ಕಾಲೇಜಿನ Platinum Jubilee Celebration ಬಂತುUsefulness of Rice washed Water / ಅಕ್ಕಿ ತೊಳೆದ ನೀರು ಅದೆಷ್ಟು ಉಪಯೋಗಕಾರಿ ಗೊತ್ತಾ? /Usefulness of Rice washed Water / ಅಕ್ಕಿ ತೊಳೆದ ನೀರು ಅದೆಷ್ಟು ಉಪಯೋಗಕಾರಿ ಗೊತ್ತಾ? /Some Work is going on here!ರಾಷ್ಟ್ರೀಯ ಹೆದ್ದಾರಿಯಲ್ಲಿ ಹೀಗೇಕೆ ಅಗೆಯುತ್ತಿದ್ದಾರೆ? It is Udupi MunicipalitySome Work is going on here!ರಾಷ್ಟ್ರೀಯ ಹೆದ್ದಾರಿಯಲ್ಲಿ ಹೀಗೇಕೆ ಅಗೆಯುತ್ತಿದ್ದಾರೆ? It is Udupi MunicipalityYes, Coconut Growers ಇಂದಲ್ಲಾ ನಾಳೆ Millionaire ಆಗುತ್ತಾರೆ; ಉಡುಪರು Hopes ಕಳೆದುಕೊಂಡೇ ಇಲ್ಲHear his SpeechYes, Coconut Growers ಇಂದಲ್ಲಾ ನಾಳೆ Millionaire ಆಗುತ್ತಾರೆ; ಉಡುಪರು Hopes ಕಳೆದುಕೊಂಡೇ ಇಲ್ಲHear his SpeechWhy are you looking here and there? / ಅತ್ತ, ಇತ್ತ ನೋಡುವೆ, ಯಾಕೆ? / A short Video by KCNAVADA.COM /Why are you looking here and there? / ಅತ್ತ, ಇತ್ತ ನೋಡುವೆ, ಯಾಕೆ? / A short Video by KCNAVADA.COM /Young Man of 75 ಶೋಭಾನೆ ಹಾಡಿ "ನಮ್ಮ ಕುಂದಾಪುರ"ದವರನ್ನು ರಂಜಿಸಿದರು; ನಿವೃತ್ತ ಉಪನ್ಯಾಸಕರ "ಜೀವನ ಪ್ರೀತಿ"ಗೆ ಶರಣುYoung Man of 75 ಶೋಭಾನೆ ಹಾಡಿ "ನಮ್ಮ ಕುಂದಾಪುರ"ದವರನ್ನು ರಂಜಿಸಿದರು; ನಿವೃತ್ತ ಉಪನ್ಯಾಸಕರ "ಜೀವನ ಪ್ರೀತಿ"ಗೆ ಶರಣುಅದ್ಭುತ, ಅತ್ಯದ್ಭುತ New Tourist Centre in Udupi Dist ಈ ಬಹು ರೋಮಾಂಚಕ ಸ್ಥಳದಲ್ಲಿ ಚಂಡೆ, ಡೋಲು, ಮದ್ದಲೆ ಕಲರವಅದ್ಭುತ, ಅತ್ಯದ್ಭುತ New Tourist Centre in Udupi Dist ಈ ಬಹು ರೋಮಾಂಚಕ ಸ್ಥಳದಲ್ಲಿ ಚಂಡೆ, ಡೋಲು, ಮದ್ದಲೆ ಕಲರವJack Fruit Festival; Let us go one Round ಹಲಸಿನ ಮೇಳದಲ್ಲಿ ಒಂದು ಸುತ್ತು;ಅಬ್ಬಾ!ಅದೇನು ಜನಸಾಗರ At BrahmavaraJack Fruit Festival; Let us go one Round ಹಲಸಿನ ಮೇಳದಲ್ಲಿ ಒಂದು ಸುತ್ತು;ಅಬ್ಬಾ!ಅದೇನು ಜನಸಾಗರ At Brahmavaraಮಗ Srinath ಮಾವನಾಗಿ ಕುಣಿದ ಪರಿ ನೋಡಿ! Father ಅಳಿಯನಾದರು! ಅಪ್ಪ ಹೆಣ್ಣಾದಾಗ Shivarama Karanth ಮೆಚ್ಚಿದ್ದರು!ಮಗ Srinath ಮಾವನಾಗಿ ಕುಣಿದ ಪರಿ ನೋಡಿ! Father ಅಳಿಯನಾದರು! ಅಪ್ಪ ಹೆಣ್ಣಾದಾಗ Shivarama Karanth ಮೆಚ್ಚಿದ್ದರು!Anegudde Sri Siddi Vinayaka ಕ್ಷೇತ್ರದಲ್ಲಿ 108 ತೆಂಗಿನ ಕಾಯಿ ಗಣಹೋಮ; ಶ್ರೀ ಆನಂದರಾಮ ಐತಾಳ ಮತ್ತು ಕುಟುಂಬದವರಿಂದAnegudde Sri Siddi Vinayaka ಕ್ಷೇತ್ರದಲ್ಲಿ 108 ತೆಂಗಿನ ಕಾಯಿ ಗಣಹೋಮ; ಶ್ರೀ ಆನಂದರಾಮ ಐತಾಳ ಮತ್ತು ಕುಟುಂಬದವರಿಂದಇವರು ಅಮೆರಿಕಾದಲ್ಲಿ ತರಕಾರಿ ಬೆಳೆದಿದ್ದು ಹೀಗೆ... Smt & Sri Sridhara Upadhya, Retired Lecturer, Parampalliಇವರು ಅಮೆರಿಕಾದಲ್ಲಿ ತರಕಾರಿ ಬೆಳೆದಿದ್ದು ಹೀಗೆ... Smt & Sri Sridhara Upadhya, Retired Lecturer, ParampalliShivarama Karanth ಕರ್ಣಾಟಕ ಬ್ಯಾಂಕಿಗೆ ಅದೇನು ಮಾಡಿದ್ದಾರೆ? Not known ಹೆಚ್ಚಿನ ಜನರಿಗೆ; Speech of MD & CEOShivarama Karanth ಕರ್ಣಾಟಕ ಬ್ಯಾಂಕಿಗೆ ಅದೇನು ಮಾಡಿದ್ದಾರೆ? Not known ಹೆಚ್ಚಿನ ಜನರಿಗೆ; Speech of MD & CEOYoga, Very Simple Asana / ಯಾವ,ಯಾವ ತೊಂದರೆಗಳಿಗೆ, ಯಾವ,ಯಾವ ಆಸನ? / Video Part One for your Good Health /Yoga, Very Simple Asana / ಯಾವ,ಯಾವ ತೊಂದರೆಗಳಿಗೆ, ಯಾವ,ಯಾವ ಆಸನ? / Video Part One for your Good Health /ಮಾಜಿ ಮಂತ್ರಿಗಳು ತಲೆದೂಗುತ್ತಿದ್ದಾರೆ! Pramod Madhwaraj ಉಡುಪಿ ಸಂಗೀತ ಉತ್ಸವದಲ್ಲಿ, Ankush Nayakರ ಸಿತಾರ್ ವಾದನಮಾಜಿ ಮಂತ್ರಿಗಳು ತಲೆದೂಗುತ್ತಿದ್ದಾರೆ! Pramod Madhwaraj ಉಡುಪಿ ಸಂಗೀತ ಉತ್ಸವದಲ್ಲಿ, Ankush Nayakರ ಸಿತಾರ್ ವಾದನOnly Beauty never brings Happiness / ಸೌಂದರ್ಯವೊಂದೇ ಎಂದಿಗೂ ಸಂತೋಷ ತರುವುದಿಲ್ಲ /Only Beauty never brings Happiness / ಸೌಂದರ್ಯವೊಂದೇ ಎಂದಿಗೂ ಸಂತೋಷ ತರುವುದಿಲ್ಲ /Tasty Sweet Jack Fruit ದಕ್ಷಿಣ ಭಾರತದಾದ್ಯಂತ Supply ಮಾಡುವ ತುಮಕೂರಿನ Narasimha Murthy; ಅವರ ನೇರ ಮಾತು ಕೇಳಿTasty Sweet Jack Fruit ದಕ್ಷಿಣ ಭಾರತದಾದ್ಯಂತ Supply ಮಾಡುವ ತುಮಕೂರಿನ Narasimha Murthy; ಅವರ ನೇರ ಮಾತು ಕೇಳಿForgetting Dishes / ಮರೆಯುತ್ತಿರುವ, ಮರೆತೇ ಬಿಟ್ಟಿರುವ ಕೆಲವು ಆಹಾರ ಪದಾರ್ಥಗಳು, ಖಾದ್ಯಗಳು / Healthy Foods /Forgetting Dishes / ಮರೆಯುತ್ತಿರುವ, ಮರೆತೇ ಬಿಟ್ಟಿರುವ ಕೆಲವು ಆಹಾರ ಪದಾರ್ಥಗಳು, ಖಾದ್ಯಗಳು / Healthy Foods /A Evening in a Colorful World / ಬಣ್ಣದ ಲೋಕದಲ್ಲೊಂದು ಸಂಜೆ / Katara Cultural Village of Doha, Qatar /A Evening in a Colorful World / ಬಣ್ಣದ ಲೋಕದಲ್ಲೊಂದು ಸಂಜೆ / Katara Cultural Village of Doha, Qatar /Ancient Temple of ನೀಲಾವರ, ಮಹತೋಭಾರ ಮಹಿಷಮರ್ದಿನಿ; Ten Crore ಖರ್ಚು ಮಾಡಿ recently Renovation ಮಾಡಿದ್ದಾರೆ!Ancient Temple of ನೀಲಾವರ, ಮಹತೋಭಾರ ಮಹಿಷಮರ್ದಿನಿ; Ten Crore ಖರ್ಚು ಮಾಡಿ recently Renovation ಮಾಡಿದ್ದಾರೆ!
Яндекс.Метрика