Загрузка страницы

Tasty Sweet Jack Fruit ದಕ್ಷಿಣ ಭಾರತದಾದ್ಯಂತ Supply ಮಾಡುವ ತುಮಕೂರಿನ Narasimha Murthy; ಅವರ ನೇರ ಮಾತು ಕೇಳಿ

ಹಲಸು (ತುಳು: ಪೆಲಕಾಯಿ) ನಿತ್ಯಹರಿದ್ವರ್ಣದ ದೊಡ್ಡ ಪ್ರಮಾಣದ ಮರ. ಪಶ್ಚಿಮ ಘಟ್ಟಗಳ ನಿತ್ಯಹರಿದ್ವರ್ಣ ಕಾಡುಗಳಲ್ಲಿ 1,000ಮೀ ಎತ್ತರದ ಪ್ರದೇಶಗಳಲ್ಲೂ ಮೈದಾನ ಸೀಮೆಗಳಲ್ಲೂ ಕಾಣದೊರೆಯುತ್ತದೆ. ಇದು ಕರ್ನಾಟಕದ ದಕ್ಷಿಣ ಭಾಗದಲ್ಲಿ ಎಲ್ಲಾ ಕಡೆ, ಮಲೆನಾಡು ಮತ್ತು ಕರಾವಳಿಯ ಕಾಡುಗಳಲ್ಲಿಯೂ ಕೂಡಾ ವ್ಯಾಪಕವಾಗಿ ಬೆಳೆಯುತ್ತದೆ. ಇದು ವರ್ಷಪೂರ್ತಿ ದಟ್ಟನೆಯ ಕಡು ಹಸಿರು ಎಲೆಗಳನ್ನು ಹೊಂದಿದ್ದು, ಎಲೆಗಳು ೧೦ ರಿಂದ ೨೦ ಸೆ.ಮೀ ಉದ್ದವಿರುತ್ತದೆ.

ಇದು ಮೊರೇಸೀ ಕುಟುಂಬಕ್ಕೆ ಸೇರಿದ್ದು ಆರ್ಟೋಕಾರ್ಪಸ್ ಇಂಟೆಗ್ರಿಫೋಲಿಯ (Artocarpus heterophyllus) ಪ್ರಭೇದಕ್ಕೆ ಸೇರಿದುದಾಗಿದೆ.

ಒತ್ತಾದ ಹಸುರೆಲೆಗಳಿಂದ ಕೂಡಿದ ದುಂಡನೆಯ ಹಂದರ ಇದರದ್ದು. ಮರದ ಕಾಂಡ ಕುಳ್ಳಾಗಿ ದಪ್ಪಗಿರುವುದು. ಬೆಳೆಯಲು ನೆರಳು ಆವಶ್ಯಕ. ಕತ್ತರಿಸಿದಾಗ ಚಿಗುರುವುದು. ತೊಗಟೆ ಮತ್ತು ಎಲೆಗಳು ಆನೆಗಳಿಗೆ ಮೆಚ್ಚು. ಹಣ್ಣಿಗೋಸ್ಕರ ಇದನ್ನು ಸಾಗುವಳಿ ಮಾಡುವುದು ಸರ್ವವಿದಿತ. ಬೀಜಬಿತ್ತಿ ಇಲ್ಲವೇ ಕುಂಡಗಳಲ್ಲಿ ಸಸಿಗಳನ್ನು ನೆಟ್ಟು ಬೆಳೆಸಬಹುದು.

ಕತ್ತರಿಸಿದ ಹೊಸದರಲ್ಲಿ ಚೌಬೀನೆ ಅಚ್ಚಹಳದಿ ಬಣ್ಣದಿಂದಿದ್ದು ಕ್ರಮೇಣ ಎಳೆಯ ಕಂದು ಬಣ್ಣಕ್ಕೆ ತಿರುಗುವುದು. ಹದಮಾಡಲು ಸುಲಭ; ಬಾಳಿಕೆಯುತ. ಕೊಯ್ತಕ್ಕೆ, ಕೆತ್ತನೆ ಕೆಲಸಗಳಿಗೆ ಸುಲಭ.
ಇದರ ಕಾಯಿ ದೊಡ್ಡದಾಗಿದ್ದು,೫ ಕಿ.ಗ್ರಾಂ.ನಿಂದ ೪೦ ಕಿ.ಗ್ರಾಂ.ಗಿಂತಲೂ ಹೆಚ್ಚು ತೂಗುತ್ತದೆ. ಹಣ್ಣಿನಲ್ಲಿ ಒಂದು ರೀತಿಯ ಮೇಣವಿರುತ್ತದೆ. ಕಾಯಿಯ ಹೊರಭಾಗ ಮುಳ್ಳಿನಿಂದ ಕೂಡಿರುತ್ತದೆ. ಹಣ್ಣಿನ ಒಳಗೆ ತುಂಬಾ ತೊಳೆಗಳಿದ್ದು ಸಿಹಿಯಾಗಿರುತ್ತದೆ. ಹಣ್ಣಿನಲ್ಲಿ ಎರಡು ವಿಧವಿದೆ. ೧.ಬಕ್ಕೆ ೨.ಬೊಳುವ.

ಬಡವರ ಹಣ್ಣು ಎಂದೇ ಖ್ಯಾತಿ ಪಡೆದಿದ್ದ ಹಲಸಿನ ಹಣ್ಣು ಉತ್ಪಾದನೆಯಲ್ಲಿ ಭಾರತ ದೇಶಕ್ಕೆ ಜಗತ್ತಿನಲ್ಲಿಯೇ ದ್ವಿತೀಯ ಸ್ಥಾನವಿದೆ. ದೇಶದಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನವಿದೆ. ಅಸ್ಸಾಂ ಮತ್ತು ಕೇರಳ ರಾಜ್ಯಗಳಲ್ಲಿ ಕೂಡ ಗಮನಾರ್ಹ ಪ್ರಮಾಣದಲ್ಲಿ ಹಲಸು ಬೆಳೆಯಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 930 ಹೆಕ್ಟೇರ್‌ ವಿಸ್ತೀರ್ಣದಲ್ಲಿ 40260 ಟನ್‌ ಬೆಳೆ ಉತ್ಪಾದಿಸಲಾಗುತ್ತಿದೆ.
ಇದರ ಹಣ್ಣಿನಿಂದ ಹಲವಾರು ಖಾದ್ಯಗಳನ್ನು ತಯಾರಿಸುತ್ತಾರೆ.ಹಣ್ಣನ್ನು ಸಂಸ್ಕರಿಸಿ ವಿದೇಶಗಳಿಗೆ ರಫ್ತು ಕೂಡಾ ಮಾಡುತ್ತಾರೆ. ಇದರ ದಾರು ಹಳದಿ ಬಣ್ಣ ಹೊಂದಿದೆ.ಒಣಗಿದಂತೆ ಕಂದು ಬಣ್ಣಕ್ಕೆ ತಿರುಗುತ್ತದೆ. ಸಾದಾರಣ ಹೊಳಪು ಬರುತ್ತದೆ. ಇದರ ಕಟ್ಟಿಗೆಯನ್ನು ಹೋಮ ಹವನಾದಿಗಳಿಗೆ ಉಪಯೋಗಿಸುತ್ತಾರೆ. ಅಲ್ಲದೆ ಚೌಬೀನೆಯು ಬ್ರಷ್ ಹಿಡಿಗಳು, ಕಡೆತದ ಕೆಲಸ, ಸಾಮಾನ್ಯ ಪೀಠೋಪಕರಣ, ವೀಣೆ ತಯಾರಿಕೆ ಇತ್ಯಾದಿಗಳಿಗೆ ಉಪಯುಕ್ತವಾಗಿದೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ - ವಿಟಮಿನ್ ಸಿ ಯನ್ನು ಒಳಗೊಂಡಿರುವ ಹಲಸಿನ ಹಣ್ಣು, ವೈರಲ್ ಮತ್ತು ಬ್ಯಾಕ್ಟೀರಿಯಾ ಸೋಂಕಿನಿಂದ ನಮ್ಮನ್ನು ಸಂರಕ್ಷಿಸುತ್ತದೆ. ಬಿಳಿ ರಕ್ತ ಕೋಶಗಳ ರಚನೆಯನ್ನು ಬೆಂಬಲಿಸುತ್ತಾ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ವಿಟಮಿನ್ ಸಿ ಪ್ರಮುಖ ಪಾತ್ರ ವಹಿಸುತ್ತದೆ. ಒಂದು ಕಪ್ ಹಲಸಿನಹಣ್ಣು ಈ ಶಕ್ತಿಯುತ ಉತ್ಕರ್ಷಣ ನಿರೋಧಕವನ್ನು ದೇಹಕ್ಕೆ ಒದಗಿಸುತ್ತದೆ

ವಿಟಮಿನ್ ಸಿ ಯನ್ನು ಒಳಗೊಂಡಂತೆ ಹಲಸಿನ ಹಣ್ಣು, ಲಿಗಾನ್ಸ್, ಐಸೋಫ್ಲೇವನ್ಸ್ ಮತ್ತು ಸಪೋನಿನ್ಸ್‌ನಂತಹ ಫೈಟೋನ್ಯೂಟ್ರಿಯಂಟ್ಸ್ ಅನ್ನು ದೇಹಕ್ಕೆ ಪೂರೈಸುತ್ತದೆ ಇದು ಕ್ಯಾನ್ಸರ್ ವಿರುದ್ದ ಮತ್ತು ಬೇಗನೇ ಮುಪ್ಪಿನ ಲಕ್ಷಣಗಳನ್ನು ವರ್ಧಿಸುವುದರ ವಿರುದ್ದ ಹೋರಾಡುತ್ತದೆ. ಅಲ್ಸರ್ ವಿರುದ್ಧ ಹೋರಾಡುವ ವಿಶಿಷ್ಟ ಗುಣವನ್ನು ಹೊಂದಿರುವ ಹಲಸಿನ ಹಣ್ಣು ಅಲ್ಸರ್ ಮತ್ತು ಜೀರ್ಣಕ್ರಿಯೆ ಸಮಸ್ಯೆಗಳನ್ನು ದೂರಮಾಡುತ್ತದೆ. ಇದರಲ್ಲಿರುವ ಅತ್ಯಧಿಕ ಫೈಬರ್ ಅಂಶವು ಮೃದುವಾದ ಕರುಳಿನ ಚಲನೆಗೆ ಸಹಕಾರಿ 

ಸಮೀಕ್ಷೆಯೊಂದರ ಪ್ರಕಾರ ದೇಶದಲ್ಲಿ 1.20 ಲಕ್ಷ ಹೆಕ್ಟೇರ್ ಹಾಗೂ ಕರ್ನಾಟಕದಲ್ಲಿ 11,500 ಹೆಕ್ಟೇರ್ ವ್ಯಾಪ್ತಿಯಲ್ಲಿ ಹಲಸು ಬೆಳೆಯಿದೆ. ಭಾರತದಲ್ಲಿ ಹಲಸು ಬೆಳೆಯಲ್ಲಿ ಕೇರಳ ಮೊದಲ ಸ್ಥಾನದಲ್ಲಿದ್ದರೆ, ತಮಿಳುನಾಡು ದ್ವಿತೀಯ ಹಾಗೂ ಕರ್ನಾಟಕ ತೃತೀಯ ಸ್ಥಾನದಲ್ಲಿದೆ.

ಕೆಂಪು ತೊಳೆಯ ಹಲಸು - ಸುವಾಸನೆಯುಳ್ಳದ್ದು-ಹೆಚ್ಚು ರುಚಿಕರ. ಕೇರಳದ ಒಂದು ನರ್ಸರಿ ‘ಥಾಯ್ಲೆಂಡ್ ರೆಡ್’ ಎಂಬ ಹೆಸರಿನಲ್ಲಿ ಕೆಂಪು ಸೊಳೆ (ತೊಳೆ) ಹಲಸಿನ ಗಿಡವನ್ನು ಬಹುಪ್ರಚಾರದೊಂದಿಗೆ ಮಾರುತ್ತಿದೆ. ಇನ್ನೊಂದು ನರ್ಸರಿ ಮಲೇಷಿಯಾದ ಚಂದ್ರ ಹಲಸು ‘ಡೆಂಗ್ ಸುರೈಯಾ’ವನ್ನು ಮಾರುಕಟ್ಟೆಗಿಳಿಸಲು ಸಿದ್ಧವಾಗಿದೆ. ಬಣ್ಣದಲ್ಲೂ ರುಚಿಯಲ್ಲೂ ಬಹುಶಃ ಇವನ್ನು ಸರಿಗಟ್ಟುವ ಅಥವಾ ಇನ್ನೂ ಉತ್ತಮವಾದ ಅದೆಷ್ಟೋ ಹೆಸರೂ ಇಲ್ಲದ ಕೆಂಬಣ್ಣದ ತಳಿಗಳು ಕರ್ನಾಟಕದಲ್ಲಿವೆ. ಆದರಿವಕ್ಕೆ ಸರಿಯಾದ ಪ್ರಚಾರವಿಲ್ಲ.

Courtesy:- Wikipedia

ಬ್ರಹ್ಮಾವರ ಹಲಸು ಮೇಳದಲ್ಲಿ ತುಮಕೂರಿನ ವ್ಯಾಪಾರಿ. Hear his words

Watch Videos of Chandrashekara Navada,
@kcnavada.com

Видео Tasty Sweet Jack Fruit ದಕ್ಷಿಣ ಭಾರತದಾದ್ಯಂತ Supply ಮಾಡುವ ತುಮಕೂರಿನ Narasimha Murthy; ಅವರ ನೇರ ಮಾತು ಕೇಳಿ канала Chandrashekara Navada
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
13 июня 2023 г. 9:02:20
00:00:44
Другие видео канала
ಪುಟ್ಟದೊಂದು Saxophone ಝಲಕ್ ನೋಡಿ; ಸುರೇಶ್ ಜೋಗಿ ಅನಂತಾಡಿ ಎಂಬ Young Artist ಪರಿಚಯಿಸಿಕೊಳ್ಳಿ; ಪ್ರೋತ್ಸಾಹ ಇರಲಿಪುಟ್ಟದೊಂದು Saxophone ಝಲಕ್ ನೋಡಿ; ಸುರೇಶ್ ಜೋಗಿ ಅನಂತಾಡಿ ಎಂಬ Young Artist ಪರಿಚಯಿಸಿಕೊಳ್ಳಿ; ಪ್ರೋತ್ಸಾಹ ಇರಲಿWife ವಾಚನ, Husband ವ್ಯಾಖ್ಯಾನ; A Rare ಗಮಕಿ Couple / ಹೆಂಡತಿ Music Teacher, ಗಂಡ Purohith / ಕಾವ್ಯ ವಾಚನ /Wife ವಾಚನ, Husband ವ್ಯಾಖ್ಯಾನ; A Rare ಗಮಕಿ Couple / ಹೆಂಡತಿ Music Teacher, ಗಂಡ Purohith / ಕಾವ್ಯ ವಾಚನ /A Popular ವಿದ್ಯಾಸಂಸ್ಥೆಯ Old Student & ಉದ್ಯಮಿ ಹೇಳಿದ್ದು;ಆ PU ಕಾಲೇಜಿನ Platinum Jubilee Celebration ಬಂತುA Popular ವಿದ್ಯಾಸಂಸ್ಥೆಯ Old Student & ಉದ್ಯಮಿ ಹೇಳಿದ್ದು;ಆ PU ಕಾಲೇಜಿನ Platinum Jubilee Celebration ಬಂತುUsefulness of Rice washed Water / ಅಕ್ಕಿ ತೊಳೆದ ನೀರು ಅದೆಷ್ಟು ಉಪಯೋಗಕಾರಿ ಗೊತ್ತಾ? /Usefulness of Rice washed Water / ಅಕ್ಕಿ ತೊಳೆದ ನೀರು ಅದೆಷ್ಟು ಉಪಯೋಗಕಾರಿ ಗೊತ್ತಾ? /Some Work is going on here!ರಾಷ್ಟ್ರೀಯ ಹೆದ್ದಾರಿಯಲ್ಲಿ ಹೀಗೇಕೆ ಅಗೆಯುತ್ತಿದ್ದಾರೆ? It is Udupi MunicipalitySome Work is going on here!ರಾಷ್ಟ್ರೀಯ ಹೆದ್ದಾರಿಯಲ್ಲಿ ಹೀಗೇಕೆ ಅಗೆಯುತ್ತಿದ್ದಾರೆ? It is Udupi MunicipalityYes, Coconut Growers ಇಂದಲ್ಲಾ ನಾಳೆ Millionaire ಆಗುತ್ತಾರೆ; ಉಡುಪರು Hopes ಕಳೆದುಕೊಂಡೇ ಇಲ್ಲHear his SpeechYes, Coconut Growers ಇಂದಲ್ಲಾ ನಾಳೆ Millionaire ಆಗುತ್ತಾರೆ; ಉಡುಪರು Hopes ಕಳೆದುಕೊಂಡೇ ಇಲ್ಲHear his Speechಮಗ Srinath ಮಾವನಾಗಿ ಕುಣಿದ ಪರಿ ನೋಡಿ! Father ಅಳಿಯನಾದರು! ಅಪ್ಪ ಹೆಣ್ಣಾದಾಗ Shivarama Karanth ಮೆಚ್ಚಿದ್ದರು!ಮಗ Srinath ಮಾವನಾಗಿ ಕುಣಿದ ಪರಿ ನೋಡಿ! Father ಅಳಿಯನಾದರು! ಅಪ್ಪ ಹೆಣ್ಣಾದಾಗ Shivarama Karanth ಮೆಚ್ಚಿದ್ದರು!COVID 19; ಕ್ಷೇಮವೇ, ಕುಶಲವೇ? ಹೀಗೆ ಇವರನ್ನು ವಿಚಾರಿಸುವವರು ಯಾರು? Interview in a Paddy FieldCOVID 19; ಕ್ಷೇಮವೇ, ಕುಶಲವೇ? ಹೀಗೆ ಇವರನ್ನು ವಿಚಾರಿಸುವವರು ಯಾರು? Interview in a Paddy FieldChant 108 Names of Lord Ganesha; ಗಣೇಶನ ಹಬ್ಬ, Festival Special / ಅಷ್ಟೋತ್ತರ ಶತ ನಾಮಾವಳಿ /Chant 108 Names of Lord Ganesha; ಗಣೇಶನ ಹಬ್ಬ, Festival Special / ಅಷ್ಟೋತ್ತರ ಶತ ನಾಮಾವಳಿ /Comedian in Yakshagana ಹಾಸ್ಯಗಾರರ ಕುಣಿತದ ಗಮ್ಮತ್ತು ನೋಡಿ! ನಮ್ಮನ್ನಗಲಿದ Gopalakrishna Nairy ನಿರ್ದೇಶನವಿದುComedian in Yakshagana ಹಾಸ್ಯಗಾರರ ಕುಣಿತದ ಗಮ್ಮತ್ತು ನೋಡಿ! ನಮ್ಮನ್ನಗಲಿದ Gopalakrishna Nairy ನಿರ್ದೇಶನವಿದುAnegudde Sri Siddi Vinayaka ಕ್ಷೇತ್ರದಲ್ಲಿ 108 ತೆಂಗಿನ ಕಾಯಿ ಗಣಹೋಮ; ಶ್ರೀ ಆನಂದರಾಮ ಐತಾಳ ಮತ್ತು ಕುಟುಂಬದವರಿಂದAnegudde Sri Siddi Vinayaka ಕ್ಷೇತ್ರದಲ್ಲಿ 108 ತೆಂಗಿನ ಕಾಯಿ ಗಣಹೋಮ; ಶ್ರೀ ಆನಂದರಾಮ ಐತಾಳ ಮತ್ತು ಕುಟುಂಬದವರಿಂದಇವರು ಅಮೆರಿಕಾದಲ್ಲಿ ತರಕಾರಿ ಬೆಳೆದಿದ್ದು ಹೀಗೆ... Smt & Sri Sridhara Upadhya, Retired Lecturer, Parampalliಇವರು ಅಮೆರಿಕಾದಲ್ಲಿ ತರಕಾರಿ ಬೆಳೆದಿದ್ದು ಹೀಗೆ... Smt & Sri Sridhara Upadhya, Retired Lecturer, ParampalliShivarama Karanth ಕರ್ಣಾಟಕ ಬ್ಯಾಂಕಿಗೆ ಅದೇನು ಮಾಡಿದ್ದಾರೆ? Not known ಹೆಚ್ಚಿನ ಜನರಿಗೆ; Speech of MD & CEOShivarama Karanth ಕರ್ಣಾಟಕ ಬ್ಯಾಂಕಿಗೆ ಅದೇನು ಮಾಡಿದ್ದಾರೆ? Not known ಹೆಚ್ಚಿನ ಜನರಿಗೆ; Speech of MD & CEOಮಾಜಿ ಮಂತ್ರಿಗಳು ತಲೆದೂಗುತ್ತಿದ್ದಾರೆ! Pramod Madhwaraj ಉಡುಪಿ ಸಂಗೀತ ಉತ್ಸವದಲ್ಲಿ, Ankush Nayakರ ಸಿತಾರ್ ವಾದನಮಾಜಿ ಮಂತ್ರಿಗಳು ತಲೆದೂಗುತ್ತಿದ್ದಾರೆ! Pramod Madhwaraj ಉಡುಪಿ ಸಂಗೀತ ಉತ್ಸವದಲ್ಲಿ, Ankush Nayakರ ಸಿತಾರ್ ವಾದನOnly Beauty never brings Happiness / ಸೌಂದರ್ಯವೊಂದೇ ಎಂದಿಗೂ ಸಂತೋಷ ತರುವುದಿಲ್ಲ /Only Beauty never brings Happiness / ಸೌಂದರ್ಯವೊಂದೇ ಎಂದಿಗೂ ಸಂತೋಷ ತರುವುದಿಲ್ಲ /Forgetting Dishes / ಮರೆಯುತ್ತಿರುವ, ಮರೆತೇ ಬಿಟ್ಟಿರುವ ಕೆಲವು ಆಹಾರ ಪದಾರ್ಥಗಳು, ಖಾದ್ಯಗಳು / Healthy Foods /Forgetting Dishes / ಮರೆಯುತ್ತಿರುವ, ಮರೆತೇ ಬಿಟ್ಟಿರುವ ಕೆಲವು ಆಹಾರ ಪದಾರ್ಥಗಳು, ಖಾದ್ಯಗಳು / Healthy Foods /A Evening in a Colorful World / ಬಣ್ಣದ ಲೋಕದಲ್ಲೊಂದು ಸಂಜೆ / Katara Cultural Village of Doha, Qatar /A Evening in a Colorful World / ಬಣ್ಣದ ಲೋಕದಲ್ಲೊಂದು ಸಂಜೆ / Katara Cultural Village of Doha, Qatar /Ancient Temple of ನೀಲಾವರ, ಮಹತೋಭಾರ ಮಹಿಷಮರ್ದಿನಿ; Ten Crore ಖರ್ಚು ಮಾಡಿ recently Renovation ಮಾಡಿದ್ದಾರೆ!Ancient Temple of ನೀಲಾವರ, ಮಹತೋಭಾರ ಮಹಿಷಮರ್ದಿನಿ; Ten Crore ಖರ್ಚು ಮಾಡಿ recently Renovation ಮಾಡಿದ್ದಾರೆ!ಕುಂದಾಪ್ರ ಕನ್ನಡ ಅಕಾಡೆಮಿ ಬೇಕೇ ಬೇಕು! Sahitya Sammelanaದಲ್ಲೂ ಕೇಳಿ ಬಂದ ಕೂಗು! ಅಧ್ಯಕ್ಷರ ಭಾಷಣದಲ್ಲೂ ಪ್ರಸ್ತಾಪ!ಕುಂದಾಪ್ರ ಕನ್ನಡ ಅಕಾಡೆಮಿ ಬೇಕೇ ಬೇಕು! Sahitya Sammelanaದಲ್ಲೂ ಕೇಳಿ ಬಂದ ಕೂಗು! ಅಧ್ಯಕ್ಷರ ಭಾಷಣದಲ್ಲೂ ಪ್ರಸ್ತಾಪ!Typical City ಈ ವಿಶಿಷ್ಟ ನಗರ ಕಂಡಿದ್ಥೀರಾ? ಇಲ್ಲಿ Ambulance & Police Vehicle ಕೂಡಾ ನೀರಲ್ಲೇ; Rare in WorldTypical City ಈ ವಿಶಿಷ್ಟ ನಗರ ಕಂಡಿದ್ಥೀರಾ? ಇಲ್ಲಿ Ambulance & Police Vehicle ಕೂಡಾ ನೀರಲ್ಲೇ; Rare in World
Яндекс.Метрика