Загрузка страницы

Nemichandra Full Version| Web Interview | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi

Nemichandra Full Version| Web Interview | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi

ಹೊಸ ಚಿಗುರು ಹಳೆಬೇರು ಕೂಡಿರಲು ಮರಸೊಬಗು
ಹೊಸಯುಕ್ತಿ ಹಳೆ ತತ್ವದೊಡಗೂಡೆ ಧರ್ಮ
ಋಷಿ ವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ
ಜಸವು ಜನಜೀವನಕೆ – ಮಂಕುತಿಮ್ಮ
ಅನ್ನುವ ಡಿವಿಜಿಯವರ ಮಾತನ್ನು ಸಾಕಾರಗೊಳಿಸುವ ರೀತಿಯಲ್ಲಿ ಸಾಧನೆ ಮಾಡಿ, ಕನ್ನಡ ನುಡಿ ಜಗತ್ತಿನಲ್ಲಿ ಹೆಸರಾಗಿರುವ ಇಂಜಿನಿಯರ್, ಕತೆಗಾರ್ತಿ, ಅಂಕಣಗಾರ್ತಿ, ಕಾದಂಬರಿಗಾರ್ತಿ, ಪ್ರವಾಸಾಸ್ವಾದಕಿ ಹಾಗೂ ಸಂವೇದನಾಶೀಲ ಮನಸ್ಸಿನ ಚಿಂತಕಿ ಶ್ರೀಮತಿ ನೇಮಿಚಂದ್ರ ಅವರು ಮಾಧ್ಯಮ ಅನೇಕ ಪ್ರಸ್ತುತ ಪಡಿಸುತ್ತಿರುವ ‘ಬಿಚ್ಚಿಟ್ಟ ಬುತ್ತಿ’ ಇಂದಿನ ಅತಿಥಿ.

ನೇಮಿಚಂದ್ರ ಅವರು ವೃತ್ತಿಯಲ್ಲಿ ಇಂಜಿನಿಯರ್, ಬೆಂಗಳೂರಿನ ಎಚ್.ಎ.ಎಲ್ ಸಂಸ್ಥೆಯಲ್ಲಿ ಉನ್ನತ ತಂತ್ರಜ್ಞ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದವರು. ಪ್ರವೃತ್ತಿಯಲ್ಲಿ ಜನಪ್ರಿಯ ಲೇಖಕಿ. ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ತಮ್ಮ ವೈಶಿಷ್ಟ್ಯಪೂರ್ಣ ಬರಹಗಳನ್ನು ನೀಡುತ್ತಾ ಬಂದಿರುವ ನೇಮಿಚಂದ್ರ ಕಥಾಸಂಕಲನ, ಕಾದಂಬರಿ, ಪ್ರವಾಸಕಥನ, ಜೀವನ ಚರಿತ್ರೆ, ವಿಜ್ಞಾನ ಬರಹಗಳು, ವೈಚಾರಿಕ ಲೇಖನಗಳು - ಹೀಗೆ ಹಲವಾರು ಸಾಹಿತ್ಯ ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು.

‘ನೇಮಿಚಂದ್ರರ ಕಥೆಗಳು’ ‘ನಮ್ಮ ಕನಸುಗಳಲ್ಲಿ ನೀವಿದ್ದೀರಿ’, ‘ಮತ್ತೆ ಬರೆದ ಕಥೆಗಳು’, ‘ಕಳೆಯ ಬೇಕಿದೆ ನಿನ್ನ ಜೊತೆಯಲಿ ಒಂದು ಶ್ಯಾಮಲ ಸಂಜೆ’ ಇತ್ಯಾದಿ ಇವರ ಕಥಾಸಂಕಲನಗಳು.

ಇವರ ಕಾದಂಬರಿ ‘ಯಾದ್ ವಶೇಮ್’ ಮಹಾಯುದ್ಧ ಕಾಲದ ಹಿನ್ನೆಲೆಯಲ್ಲಿ ಚಿತ್ರಿತವಾದ ಕಥೆ. ಜರ್ಮನ್ ಹುಡುಗಿಯೊಬ್ಬಳು ನಾಜಿಯರ ಕೈಯಿಂದ ತಪ್ಪಿಸಿಕೊಂಡು ನಮ್ಮ ಹಳೆಯ ಬೆಂಗಳೂರಿನಲ್ಲಿ ಬೆಳೆಯುತ್ತಾಳೆ. ತನ್ನ ಕಳೆದುಹೋದ ಕುಟುಂಬವನ್ನು ಅರಸುತ್ತ ಹೊರಟ ಈ ಹುಡುಗಿ ಅಮೆರಿಕವನ್ನು ಸುತ್ತಿ, ಕಡೆಗೆ ಯುದ್ಧಗ್ರಸ್ಥವಾದ ಇಸ್ರೇಲ್ - ಪ್ಯಾಲೆಸ್ಟೇನಿನ ವಾತಾವರಣದಲ್ಲಿ ಬಂದಿಳಿಯುತ್ತಾಳೆ. ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ 2007ರ ಗೌರವ ಪ್ರಶಸ್ತಿ ಮತ್ತು ಶ್ರೀಮತಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಪ್ರತಿಷ್ಠಾನದ 2009 ‘ಅಕ್ಕ’ ಪ್ರಶಸ್ತಿ ದೊರೆತಿದೆ. ಯಾವುದೇ ಒಂದು ಕಥಾ ವಸ್ತುವನ್ನು ರೂಪಿಸುವಾಗ, ಅದರ ಹಿನ್ನೆಲೆಯನ್ನು ಅತ್ಯಂತ ಸನಿಹದಲ್ಲಿ ಅನುಭವಿಸಿ ಬರೆಯುವುದಕ್ಕಾಗಿ ಲೇಖಕಿ ಪ್ರಪಂಚದಾದ್ಯಂತ ತಿರುಗಾಡಿ, ಇತಿಹಾಸದ ಪುಟದಿಂದ ಸೂಕ್ಷ್ಮ ವಿವರಗಳನ್ನು ಹೆಕ್ಕಿ ವಾಸ್ತವದ ಹೊಳಹುಗಳನ್ನು ತಮ್ಮ ಕಥನಕ್ಕೆ ಅಳವಡಿಸಿಕೊಳ್ಳುವ ಅದ್ಭುತ ಉದಾಹರಣೆ ಈ ಕಾದಂಬರಿ.

ನೇಮಿಚಂದ್ರರ 'ಮಾತೋಶ್ರೀ ರತ್ನಮ್ಮ ಹೆಗ್ಗಡೆ' ಪ್ರಶಸ್ತಿ ಪುರಸ್ಕೃತ ‘ಒಂದು ಕನಸಿನ ಪಯಣ’, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುರಸ್ಕೃತ ‘ಪೆರುವಿನ ಪವಿತ್ರ ಕಣಿವೆಯಲ್ಲಿ’ ಜನಪ್ರಿಯ ಪ್ರವಾಸ ಕಥನಗಳು.

ನೇಮಿಚಂದ್ರರ ಬರಹಗಳಲ್ಲಿ ಜೀವನ ಚರಿತ್ರೆಗಳು ವಿಶೇಷವೆನಿಸುತ್ತವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುರಸ್ಕೃತ 'ಬೆಳಕಿನೊಂದು ಕಿರಣ ಮೇರಿ ಕ್ಯೂರಿ', ವೆಲ್ಲೂರು ಆಸ್ಪತ್ರೆಯ ಸಂಸ್ಥಾಪಕರಾದ ‘ಡಾ. ಇದಾಸ್ಕಡರ್’, ‘ಥಾಮಸ್ ಆಲ್ವ ಎಡಿಸನ್’, ‘ನೊಬೆಲ್ ವಿಜೇತ ಮಹಿಳೆಯರು’, ‘ಮಹಿಳಾ ವಿಜ್ಞಾನಿಗಳು’ ಜನಪ್ರಿಯವೆನಿಸಿವೆ. 'ಮತ್ತೆ ಬರೆದ ಕಥೆಗಳು' ಕಥಾಸಂಕಲನಕ್ಕೆ ಆರ್ಯಭಟ ಪ್ರಶಸ್ತಿ, ವಿಜ್ಞಾನ ಸಾಹಿತ್ಯ, ಮಹಿಳಾ ಅಧ್ಯಯನಕ್ಕಾಗಿ 'ಸಂದೇಶ ಪ್ರಶಸ್ತಿ' ದೊರೆತಿದೆ.

ಇವರ 'ಬದುಕು ಬದಲಿಸಬಹುದು' ಸರಣಿ ಹಲವಾರು ಓದುಗರ ಬದುಕನ್ನು ಬದಲಿಸಿದ ವಿಶಿಷ್ಟ ಪುಸ್ತಕ ಸರಣಿ.

ಕನ್ನಡ ಸಾಹಿತ್ಯ ಅಕಾಡೆಮಿ ಜೀವಮಾನದ ಪ್ರಶಸ್ತಿ ಹಾಗು ಅತ್ತಿಮಬ್ಬೆ ಪ್ರಶಸ್ತಿಗೆ ಭಾಜನರಾದ ಸೂಕ್ಷ್ಮಮನಸ್ಸಿನ ಲೇಖಕಿ ನೇಮಿಚಂದ್ರ ತಮ್ಮ ಬದುಕು, ಬರಹ, ಪಯಣಗಳ ಅನುಭವಗಳ ಬುತ್ತಿಯನ್ನು ಮಾಧ್ಯಮ ಅನೇಕದ web ಸಂಭಾಷಣೆಯಲ್ಲಿ ಹಂಚಿಕೊಂಡಿದ್ದಾರೆ.

#Nemichandra #KannadaWriter #BadukuBadalisabahudu #PeruvinaPavitraKaniveyalli

Subscribe for Maadhyama Aneka Channel to get updates and notification on more entertainment and infotainment content.
https://www.youtube.com/channel/UCYnLZEzdWg-WSoiJNCPxUIQ?sub_confirmation=1

Please leave your feedback and comments.

Follow Maadhyama Aneka on :
Facebook : https://www.facebook.com/maadhyama/
Instagram : https://www.instagram.com/maadhyama.aneka/
Twitter : https://twitter.com/MaadhyamaA
Website : www.maadhyama-aneka.com

© Maadhyama Aneka Pvt. Ltd.

Видео Nemichandra Full Version| Web Interview | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi канала Maadhyama Aneka ಮಾಧ್ಯಮ ಅನೇಕ
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
19 июля 2020 г. 6:30:10
02:17:39
Другие видео канала
ಸೋಮವಾರದಂದು ತಪ್ಪದೇ ಕೇಳಬೇಕಾದ ಮಹಾಲಕ್ಷ್ಮಿ ದೇವಿ ಸುಪ್ರಭಾತ | AA Digitalಸೋಮವಾರದಂದು ತಪ್ಪದೇ ಕೇಳಬೇಕಾದ ಮಹಾಲಕ್ಷ್ಮಿ ದೇವಿ ಸುಪ್ರಭಾತ | AA Digitalswami vivekananda biography in kannada | swami vivekananda life story in kannada | Sharan Updatesswami vivekananda biography in kannada | swami vivekananda life story in kannada | Sharan UpdatesN Santosh Hegde Full Version | Web Interview | web ಸಂಭಾಷಣೆ | ಬಿಚ್ಚಿಟ್ಟ ಬುತ್ತಿ | ಮಾಧ್ಯಮ ಅನೇಕN Santosh Hegde Full Version | Web Interview | web ಸಂಭಾಷಣೆ | ಬಿಚ್ಚಿಟ್ಟ ಬುತ್ತಿ | ಮಾಧ್ಯಮ ಅನೇಕAparna Vastarey Full Version | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi | ಮಾಧ್ಯಮ ಅನೇಕAparna Vastarey Full Version | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi | ಮಾಧ್ಯಮ ಅನೇಕPrakash Belawadi Full Version | Web Interview | ಬಿಚ್ಚಿಟ್ಟ ಬುತ್ತಿ | Web Sambhashane|bichchitta butthiPrakash Belawadi Full Version | Web Interview | ಬಿಚ್ಚಿಟ್ಟ ಬುತ್ತಿ | Web Sambhashane|bichchitta butthiSudha Belawadi Full Version | ಬಿಚ್ಚಿಟ್ಟ ಬುತ್ತಿ |Web Sambhashane | bichchitta butthi | ಮಾಧ್ಯಮ ಅನೇಕSudha Belawadi Full Version | ಬಿಚ್ಚಿಟ್ಟ ಬುತ್ತಿ |Web Sambhashane | bichchitta butthi | ಮಾಧ್ಯಮ ಅನೇಕlife story of Abraham Lincoln in Kannada ಒಬ್ಬ ಚಪ್ಪಲಿ ಹೊಲೆಯುವನ ಮಗ ದೇಶದ ಅಧ್ಯಕ್ಷರಾದ ಕಥೆ #AbrahamLincolnlife story of Abraham Lincoln in Kannada ಒಬ್ಬ ಚಪ್ಪಲಿ ಹೊಲೆಯುವನ ಮಗ ದೇಶದ ಅಧ್ಯಕ್ಷರಾದ ಕಥೆ #AbrahamLincolnJayanth Kaikini | Face To Face | Interview | Mukha Mukhi | Devu Pattar | ಜಯಂತ ಕಾಯ್ಕಿಣಿ | ಮುಖಾ-ಮುಖಿ |Jayanth Kaikini | Face To Face | Interview | Mukha Mukhi | Devu Pattar | ಜಯಂತ ಕಾಯ್ಕಿಣಿ | ಮುಖಾ-ಮುಖಿ |Master Anand Teaser | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi | ಮಾಧ್ಯಮ ಅನೇಕMaster Anand Teaser | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi | ಮಾಧ್ಯಮ ಅನೇಕB Suresh Full Version | web ಸಂಭಾಷಣೆ | ಬಿಚ್ಚಿಟ್ಟ ಬುತ್ತಿ | Web Interview | Season 2B Suresh Full Version | web ಸಂಭಾಷಣೆ | ಬಿಚ್ಚಿಟ್ಟ ಬುತ್ತಿ | Web Interview | Season 2Mandya Ramesh Full Version (Part1)|Web Interview|ಬಿಚ್ಚಿಟ್ಟ ಬುತ್ತಿ|Web Sambhashane|bichchitta butthiMandya Ramesh Full Version (Part1)|Web Interview|ಬಿಚ್ಚಿಟ್ಟ ಬುತ್ತಿ|Web Sambhashane|bichchitta butthiExplainable Mysteries of Machu Picchu |Investigator | History of Machu Picchu the lost city of incaExplainable Mysteries of Machu Picchu |Investigator | History of Machu Picchu the lost city of incaSatya Hegde Full Version | web ಸಂಭಾಷಣೆ | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthiSatya Hegde Full Version | web ಸಂಭಾಷಣೆ | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthiSuper Couple | S02 | Ep08 | Flames | Kannada | Web SeriesSuper Couple | S02 | Ep08 | Flames | Kannada | Web Seriesसती सुलोचना  किस्सा रामायण  | Sati Sulochna | Nemi Chand Kushwah | Trimurti Cassetteसती सुलोचना किस्सा रामायण | Sati Sulochna | Nemi Chand Kushwah | Trimurti CassetteWriter,Quiz Master Dr Na Someshwar in Shubhodaya Karnataka | 01-11-2019 | DD ChandanaWriter,Quiz Master Dr Na Someshwar in Shubhodaya Karnataka | 01-11-2019 | DD ChandanaAntara Gange | Bhargavi Narayan, Indira Lankesh, Dr Vijaya with MS Asha DeviAntara Gange | Bhargavi Narayan, Indira Lankesh, Dr Vijaya with MS Asha DeviVijay Prakash Full Version | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi | ಮಾಧ್ಯಮ ಅನೇಕVijay Prakash Full Version | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi | ಮಾಧ್ಯಮ ಅನೇಕಬಸವಣ್ಣನವರ ವಚನಗಳುಬಸವಣ್ಣನವರ ವಚನಗಳು
Яндекс.Метрика