Загрузка страницы

ಈ ದೇಶ ನನ್ನದು ನಾನು ಈ ದೇಶವನ್ನು ಪ್ರೀತಿಸುತ್ತೇನೆ. ನನಗೆ ಪ್ರೀತಿ ಪ್ರದರ್ಶನದ ವಸ್ತುವಲ್ಲ ಕನ್ಹಯ್ಯ ಕುಮಾರ್

ನೀವು ಈ ದೇಶವನ್ನು ಸುತ್ತಾಡಬೇಕು. ಆಗ ನಿಮಗೆ ಈ ದೇಶದ ನಿಜ ಸೌಂದರ್ಯ ತಿಳಿಯುತ್ತದೆ. ನಮ್ಮ ದೇಶದ ಅಗಾಧತೆ ಎದುರು ನಾವೆಷ್ಟು ತುಚ್ಛರು ಅನ್ನುವುದು ಅರ್ಥವಾಗುತ್ತದೆ. ಈ ದೇಶ ನನ್ನದು. ನಾನು ಈ ದೇಶವನ್ನು ಪ್ರೀತಿಸುತ್ತೇನೆ. ನನಗೆ ಪ್ರೀತಿ ಪ್ರದರ್ಶನದ ವಸ್ತುವಲ್ಲ. ನಾನು ಅದನ್ನು ನನ್ನ ಎದೆಯಲ್ಲಿ ಹೊತ್ತು ತಿರುಗುತ್ತೇನೆ ~ ಡಾ.ಕನ್ಹಯ್ಯ ಕುಮಾರ್, #Kanhaiyakumar
Kannadanet News #kanayyakumar #kanayyaonnationalism #kanayyapatriotism
ಮಂಗಳೂರಿನ ಕಕ್ಕಿಲ್ಲಾಯ ಜನ್ಮಶತಾಬ್ದಿ ಕಾರ್ಯಕ್ರಮದಲ್ಲಿ ಮೋದಿ ಅಭಿಮಾನಿ, ಬಿಜೆಪಿ ಕಾರ್ಯಕರ್ತೆಯ ಪ್ರಶ್ನೆಗೆ ಕಾಮ್ರೇಡ್ ಕನ್ಹಯ್ಯ ನೀಡಿದ ಉತ್ತರ ಈಗ ದೇಶಾದ್ಯಂತ ಸದ್ದು ಮಾಡುತ್ತಿದೆ. ಅದರ ಕನ್ನಡ ಅನುವಾದ ಇಲ್ಲಿದೆ

ನಾವು ಪ್ರತಿಪಾದಿಸುವ ಏಕತೆ, ವಿವಿಧತೆಯನ್ನು ಪ್ರತಿನಿಧಿಸುತ್ತದೆ : ಡಾ.ಕನ್ಹಯ್ಯ ಕುಮಾರ್

*ನೀವು ಈ ದೇಶವನ್ನು ಸುತ್ತಾಡಬೇಕು. ಆಗ ನಿಮಗೆ ಈ ದೇಶದ ನಿಜ ಸೌಂದರ್ಯ ತಿಳಿಯುತ್ತದೆ. ನಮ್ಮ ದೇಶದ ಅಗಾಧತೆ ಎದುರು ನಾವೆಷ್ಟು ತುಚ್ಛರು ಅನ್ನುವುದು ಅರ್ಥವಾಗುತ್ತದೆ. ಈ ದೇಶ ನನ್ನದು. ನಾನು ಈ ದೇಶವನ್ನು ಪ್ರೀತಿಸುತ್ತೇನೆ. ನನಗೆ ಪ್ರೀತಿ ಪ್ರದರ್ಶನದ ವಸ್ತುವಲ್ಲ. ನಾನು ಅದನ್ನು ನನ್ನ ಎದೆಯಲ್ಲಿ ಹೊತ್ತು ತಿರುಗುತ್ತೇನೆ ~ ಡಾ.ಕನ್ಹಯ್ಯ ಕುಮಾರ್, ಬಿವಿ ಕಕ್ಕಿಲ್ಲಾಯ ಶತಾಬ್ದಿ ಕಾರ್ಯಕ್ರಮದಲ್ಲಿ ಯುವತಿಯೊಬ್ಬಳ ಪ್ರಶ್ನೆಗೆ ಉತ್ತರಿಸುತ್ತಾ ಆಡಿದ ಮಾತುಗಳು.... |

ಅನುವಾದ : ಚೇತನಾ ತೀರ್ಥಹಳ್ಳಿ

*ಯುವತಿಯ ಪ್ರಶ್ನೆಯ ಸಾರಾಂಶ* : ಸ್ವಾತಂತ್ರ್ಯ ದಿನಾಚರಣೆ ಹತ್ತಿರ ಬರುತ್ತಿದೆ. ಈ ಸಂದರ್ಭದಲ್ಲಿ ನೀವು ಒಮ್ಮೆಯಾದರೂ ಜೈ ಹಿಂದ್ ಜೈ ಶ್ರೀರಾಮ್ ಹೇಳಿಬಿಡಿ. ನೀವೇಕೆ ಏಕರಾಷ್ಟ್ರದ ವಿರುದ್ಧ ಇದ್ದೀರಿ, ಅದನ್ನೂ ವಿವರಿಸಿ.

*ಕನ್ಹಯ್ಯ ಕುಮಾರ್ ನೀಡಿದ ಉತ್ತರ*

ನೀವು ಏಕದ ಕುರಿತು ಹೇಳುತ್ತಿದ್ದೀರಿ. ಏಕೆ ‘ಏಕೈಕ’ವನ್ನು ಪ್ರಚಾರ ಮಾಡೋದಿಲ್ಲ, ಅದನ್ನೇಕೆ ಒಪ್ಪಿಕೊಳ್ಳೋದಿಲ್ಲ ಅಂತ ಕೇಳ್ತಿದ್ದೀರಿ. ಆದರೆ ನಾನೇನು ಮಾಡಲಿ? ನಾನು ಹುಟ್ಟಿದ್ದು ಇಬ್ಬರ ಸಂಯೋಗದಿಂದ. ನನ್ನ ಅಪ್ಪ ಮತ್ತು ಅಮ್ಮ ಇಬ್ಬರು ಮದುವೆಯಾಗಿದ್ದರಿಂದ ನಾನು ಹುಟ್ಟಿದೆ. ಯಾರೋ ಒಬ್ಬರಿಂದ ನಾನು ಹುಟ್ಟುವುದು ಅಸಾಧ್ಯವಿತ್ತು. ಅಲ್ಲಿ ಅಪ್ಪ ಮತ್ತು ಅಮ್ಮ ಇಬ್ಬರಿದ್ದರು.
ನೀವು ಏಕರಾಷ್ಟ್ರದ ಪರಿಕಲ್ಪನೆಯನ್ನು ನಾನೇಕೆ ಬೆಂಬಲಿಸೋದಿಲ್ಲ ಅಂತ ಕೇಳ್ತಿದ್ದೀರಿ. ರಾಷ್ಟ್ರ ಯಾವತ್ತಿಗೂ ಒಂದೇ. ಭಾರತ ಇರುವುದು ಒಂದೇ, ಇದರಲ್ಲಿ ಸಂದೇಹವಿಲ್ಲ. ಆದರೆ, ಈ ಏಕಭಾರತವನ್ನು ಪ್ರತಿನಿಧಿಸುವ ಒಂದು ಸಂವಿಧಾನ ಏನಿದೆ, ಅದರಲ್ಲಿ 300ಕ್ಕಿಂತ ಹೆಚ್ಚು ವಿಧಿಗಳಿವೆ. ಮತ್ತು ನೀವು ಹೇಳುತ್ತಿರುವ ಏಕರಾಷ್ಟ್ರವನ್ನು ಪ್ರತಿನಿಧಿಸಲು ಇರುವ ಒಂದು ಸಂಸತ್ತು ಏನಿದೆ, ಅದರಲ್ಲೂ ಎರಡು ಸದನಗಳಿವೆ- ಲೋಕಸಭೆ ಮತ್ತು ರಾಜ್ಯಸಭೆ. ಮತ್ತು ಅದಕ್ಕೆ ಚುನಾಯಿತರಾಗಿ ಹೋಗುವುದು ಯಾರೋ ಒಬ್ಬರಲ್ಲ, ಪೂರಾ 545 ಸದಸ್ಯರು!
ಆದ್ದರಿಂದ ನಾವು ಪ್ರತಿಪಾದಿಸುವ ಏಕತೆ ಏನಿದೆ, ಅದು ವಿವಿಧತೆಯನ್ನು ಪ್ರತಿನಿಧಿಸುವಂಥದ್ದು. ಅಲ್ಲಿ ವೈವಿಧ್ಯತೆ ಇದೆ. ನೀವು ಜೈ ಶ್ರೀರಾಮ್ ಘೋಷಣೆ ಕುರಿತು ಹೇಳಿದಿರಿ. ನೀವು ಖಂಡಿತವಾಗಿ ಘೋಷಣೆ ಹಾಕಿ, ಅದು ನಿಮ್ಮ ಸ್ವಾತಂತ್ರ್ಯ. ನೀವು ಜೈ ಶ್ರೀರಾಮ್ ಬೇಕಾದರೂ ಅನ್ನಿ, ಜೈ ಹನುಮಾನ್ ಬೇಕಾದರೂ ಅನ್ನಿ. ನಿಮಗೆ ಬೇಕಾದ ಘೋಷಣೆ ಕೂಗುವ ಸ್ವಾತಂತ್ರ್ಯವನ್ನು ನಮ್ಮ ಸಂವಿಧಾನ ನೀಡಿದೆ. ಆದ್ದರಿಂದ ನಾನು ನಿಮ್ಮಲ್ಲಿ ಆಗ್ರಹಿಸುತ್ತೇನೆ, ನಿಮಗೆ ನಿಮ್ಮ ಘೋಷಣೆ ಕೂಗುವ ಸ್ವಾತಂತ್ರ್ಯ ನೀಡಿರುವ ಸಂವಿಧಾನಕ್ಕೂ ಒಮ್ಮೆ ಜೈಕಾರ ಹಾಕಿಬಿಡಿ.
ಇನ್ನು, ನಾನು ಜೈಶ್ರೀರಾಮ್ ಘೋಷಣೆ ಕೂಗುವ ಬಗ್ಗೆ,… ನಾನು ಹುಟ್ಟಿದ್ದೇ ಮಿಥಿಲೆಯಲ್ಲಿ. ನನ್ನ ಊರು ಬೇಗುಸರಾಯ್ ಮಿಥಿಲಾ ಪ್ರಾಂತ್ಯಕ್ಕೆ ಸೇರುತ್ತದೆ. ನಿಮಗೆ ಗೊತ್ತಿರಬಹುದು, ಮಿಥಿಲೆ ಶ್ರೀರಾಮನ ಮಾವನ ಮನೆ. ನಮ್ಮ ಊರಲ್ಲಿ ಪ್ರತಿವರ್ಷ ಸೀತಾ ರಾಮರ ವಿವಾಹ ಮಹೋತ್ಸವ ನಡೆಸುತ್ತಾರೆ. ಅಯೋಧ್ಯೆಯಿಂದ ತರುಣರು ರಾಮನ ವೇಷದಲ್ಲಿ ನಮ್ಮ ಊರಿಗೆ ಮೆರವಣಿಗೆ ಬರುತ್ತಾರೆ. ನಾವು ಹೆಣ್ಣಿನ ಕಡೆಯವರು. ಅವರು ಗಂಡಿನ ಕಡೆಯವರು. ನಮ್ಮ ಪ್ರಾಂತ್ಯದಲ್ಲಿ ಬೀಗರನ್ನು ಬೈಗುಳದ ಮೂಲಕ ಸ್ವಾಗತಿಸುವ ಪದ್ಧತಿ ಇದೆ. ನಾವು ರಾಮನನ್ನು ನಿಂದಿಸುತ್ತಾ ಸ್ವಾಗತ ಕೋರುತ್ತೇವೆ. ರಾಮನನ್ನು ಹಾಸ್ಯ ಮಾಡುತ್ತೇವೆ. ಇದು ನಮ್ಮಲ್ಲಿ ಪಾರಂಪರಿಕವಾಗಿ ನಡೆದು ಬಂದ ರೂಢಿ. ಇದು ನಮ್ಮ ನೆಲದ ಸಂಸ್ಕೃತಿ.
ಅದೂ ಅಲ್ಲದೆ ನಾನು ಹುಟ್ಟಿ ಬೆಳೆದ ಸಂಸ್ಕೃತಿಯಲ್ಲಿ ಯಾವ ದೇವರನ್ನೂ ಏಕವಾಗಿ ಸ್ಮರಿಸುವುದಿಲ್ಲ. ರಾಮನನ್ನು ಸೀತಾರಾಮ ಎಂದೂ ಕೃಷ್ಣನನ್ನು ರಾಧಾಕೃಷ್ಣ ಎಂದೂ ಜೋಡಿಯಾಗಿ ಸ್ಮರಿಸುತ್ತಾರೆ, ಪೂಜಿಸುತ್ತಾರೆ. ಇದು ನಾನು ಬೆಳೆದ ನೆಲದ ಪರಂಪರೆ. ನನ್ನ ಪರಿಸರದ ಸಂಸ್ಕೃತಿ.
ನೀವೇನಾದರೂ ಪಿಎಚ್ಡಿ ಮಾಡುವುದಾದರೆ, ಈ ದೇಶದಲ್ಲಿ ಎಷ್ಟು ರಾಮಾಯಣಗಳಿವೆಯೋ ಅವುಗಳ ಮೇಲೆ ಸಂಶೋಧನೆ ಮಾಡಿ. ನನಗೆ ತಿಳಿದಿರುವಂತೆ ಈ ದೇಶದಲ್ಲಿ ಮುನ್ನೂರಕ್ಕೂ ಹೆಚ್ಚು ರಾಮಾಯಣಗಳಿವೆ.
ನಾನೊಮ್ಮೆ ಹಿಮಾಚಲಕ್ಕೆ ಹೋಗಿದ್ದೆ. ಅಲ್ಲಿ ತ್ರಿಲೋಕನಾಥ ಮಂದಿರವಿದೆ. ನೀವು ಈ ದೇಶವನ್ನು ಸುತ್ತಾಡಬೇಕು. ಆಗ ನಿಮಗೆ ಈ ದೇಶದ ನಿಜ ಸೌಂದರ್ಯ ತಿಳಿಯುತ್ತದೆ. ನಮ್ಮ ದೇಶದ ಅಗಾಧತೆ ಎದುರು ನಾವೆಷ್ಟು ತುಚ್ಛರು ಅನ್ನುವುದು ಅರ್ಥವಾಗುತ್ತದೆ.
ನಿಮ್ಮ ದೇಶ ನಿಮ್ಮದು. ನಿಮ್ಮ ತಾಯಿ ನಿಮ್ಮವಳು. ನೀವು ನಿಮ್ಮ ತಾಯಿಯನ್ನು ಪ್ರೀತಿಸುವುದು ನಿಮ್ಮ ಖಾಸಗಿ ವಿಷಯ. ಹಾಗಂತ ಯಾರಾದರೂ ಯಾವುದೇ ಬಣ್ಣದ ಬಾವುಟ ಹಿಡಿದು ಬಂದು, ಜೈ ಶ್ರೀ ರಾಮ್ ಎಂದೋ ಇಂಕ್ವಿಲಾಬ್ ಜಿಂದಾಬಾದ್ ಎಂದೋ ಘೋಷಣೆ ಕೂಗುತ್ತಾ ಬಂದು, “ನೀನು ನಿನ್ನ ತಾಯಿಯನ್ನು ಪ್ರೀತಿಸುವುದೇ ನಿಜವಾದರೆ, ಹೇಗೆ ಪ್ರೀತಿಸುತ್ತೀಯ ತೋರಿಸು” ಅಂದರೆ, ಆಗ ನಿಮ್ಮ ಉತ್ತರ ಏನಿರುತ್ತದೆ?
ಈ ದೇಶ ನನ್ನದು. ನಾನು ಈ ದೇಶವನ್ನು ಪ್ರೀತಿಸುತ್ತೇನೆ. ನನಗೆ ಪ್ರೀತಿ ಪ್ರದರ್ಶನದ ವಸ್ತುವಲ್ಲ. ನಾನು ಅದನ್ನು ನನ್ನ ಎದೆಯಲ್ಲಿ ಹೊತ್ತು ತಿರುಗುತ್ತೇನೆ.
ಏಕವ್ಯಕ್ತಿ ಆರಾಧನೆ ದೇಶದ ಏಕತೆಗೆ ಮಾರಕ, ನನ್ನ ಸಂವಿಧಾನ ಬಹುತ್ವದ ಪಾಠ ಹೇಳಿದೆ.ಭಾರತ ಎಂದಿಗೂ ಒಂದೇ ಅದರೆ ಭಾರತವನ್ನು ಪ್ರತಿನಿಧಿಸುವವರು ವಿವಿಧ ಜಾತಿ,ಧರ್ಮಕ್ಕೆ ಸೇರಿದವರು,ವಿವಿಧತೆಯಲ್ಲಿ ಏಕತೆಯೆ ನನ್ನ ಜೀವನದ ಉಸಿರು..

Видео ಈ ದೇಶ ನನ್ನದು ನಾನು ಈ ದೇಶವನ್ನು ಪ್ರೀತಿಸುತ್ತೇನೆ. ನನಗೆ ಪ್ರೀತಿ ಪ್ರದರ್ಶನದ ವಸ್ತುವಲ್ಲ ಕನ್ಹಯ್ಯ ಕುಮಾರ್ канала Kannadanet
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
11 августа 2019 г. 13:01:06
00:09:53
Другие видео канала
ಬಿಜೆಪಿ ZP ಸದಸ್ಯರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸಿದರೆ ಕ್ರಮ - ದೊಡ್ಡನಗೌಡ ಪಾಟೀಲ್ ಬಿಜೆಪಿ ಜಿಲ್ಲಾಧ್ಯಕ್ಷಬಿಜೆಪಿ ZP ಸದಸ್ಯರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸಿದರೆ ಕ್ರಮ - ದೊಡ್ಡನಗೌಡ ಪಾಟೀಲ್ ಬಿಜೆಪಿ ಜಿಲ್ಲಾಧ್ಯಕ್ಷಕೊಪ್ಪಳ,ಗಂಗಾವತಿಯಲ್ಲಿ ರೌಡಿಶೀಟರ್ ಗಳ ಪರೇಡ್  ನಡೆಸಿದ ಎಸ್ಪಿ ಟಿ.ಶ್ರೀಧರ್ Koppal SP T Sridharಕೊಪ್ಪಳ,ಗಂಗಾವತಿಯಲ್ಲಿ ರೌಡಿಶೀಟರ್ ಗಳ ಪರೇಡ್ ನಡೆಸಿದ ಎಸ್ಪಿ ಟಿ.ಶ್ರೀಧರ್ Koppal SP T Sridharಬಿಜೆಪಿ ಕಾರ್ಯಕರ್ತರಿಗೆ ಹೋಳಿಗೆ ಊಟಬಿಜೆಪಿ ಕಾರ್ಯಕರ್ತರಿಗೆ ಹೋಳಿಗೆ ಊಟಶೃಂಗೇರಿ ಪ್ರಕರಣ ಬಿಜೆಪಿಯವರು ಮುಚ್ಚಿಹಾಕಲು ಪ್ರಯತ್ನ ಮಾಡುತ್ತಿದ್ಧಾರೆ- ಕೆಪಿಸಿಸಿ ಅಧ್ಯಕ್ಷ  ಡಿ.ಕೆ.ಶಿವಕುಮಾರ್!ಶೃಂಗೇರಿ ಪ್ರಕರಣ ಬಿಜೆಪಿಯವರು ಮುಚ್ಚಿಹಾಕಲು ಪ್ರಯತ್ನ ಮಾಡುತ್ತಿದ್ಧಾರೆ- ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್!ಕೊವಿಡ್ 19 ನಿಯಂತ್ರಣಕ್ಕೆ ಸೇವೆಗೆ ಸಾರ್ವಜನಿಕರು ಕೈಜೋಡಿಸಿ ವಾಟ್ಸಪ್ ಗ್ರೂಪ್ ನಲ್ಲಿ ಭಾಗವಹಿಸಿ- ಎಸ್.ವಿಕಾಸ್ ಕಿಶೋರ್ಕೊವಿಡ್ 19 ನಿಯಂತ್ರಣಕ್ಕೆ ಸೇವೆಗೆ ಸಾರ್ವಜನಿಕರು ಕೈಜೋಡಿಸಿ ವಾಟ್ಸಪ್ ಗ್ರೂಪ್ ನಲ್ಲಿ ಭಾಗವಹಿಸಿ- ಎಸ್.ವಿಕಾಸ್ ಕಿಶೋರ್ಸೋನಿಯಾ ಗಾಂಧಿ ED ವಿಚಾರಣೆ-ಶಿವರಾಜ್ ತಂಗಡಗಿ, ರಾಘವೇಂದ್ರ ಹಿಟ್ನಾಳ ಹೇಳಿದ್ದೇನು? Shivaraj Tangadagi, Hitnal MLAಸೋನಿಯಾ ಗಾಂಧಿ ED ವಿಚಾರಣೆ-ಶಿವರಾಜ್ ತಂಗಡಗಿ, ರಾಘವೇಂದ್ರ ಹಿಟ್ನಾಳ ಹೇಳಿದ್ದೇನು? Shivaraj Tangadagi, Hitnal MLAಸಾಮಾಜಿಕ ಜಾಲತಾಣದಲ್ಲಿ ಡಿಸಿ ಪಿ ಸುನೀಲ್ ಕುಮಾರ್  ಹವಾಸಾಮಾಜಿಕ ಜಾಲತಾಣದಲ್ಲಿ ಡಿಸಿ ಪಿ ಸುನೀಲ್ ಕುಮಾರ್ ಹವಾಕೊಪ್ಪಳದ ರಸ್ತೆಯಲ್ಲಿ ಯಮ ಪ್ರತ್ಯಕ್ಷಕೊಪ್ಪಳದ ರಸ್ತೆಯಲ್ಲಿ ಯಮ ಪ್ರತ್ಯಕ್ಷವಿಧಾನಸಭೆ ನೇರ ಪ್ರಸಾರ​   #KarnatakaAssemblySession​ | #ವಿಧಾನಸಭೆನೇರಪ್ರಸಾರ​ |  10-03-21ವಿಧಾನಸಭೆ ನೇರ ಪ್ರಸಾರ​ #KarnatakaAssemblySession​ | #ವಿಧಾನಸಭೆನೇರಪ್ರಸಾರ​ | 10-03-21ನಮ್ಮದು ಡೋಂಗಿ ರಾಜಕಾರಣವಲ್ಲ ನೇರಾನೇರ ರಾಜಕಾರಣ- ಬಿ.ಸಿ.ಪಾಟೀಲ್ನಮ್ಮದು ಡೋಂಗಿ ರಾಜಕಾರಣವಲ್ಲ ನೇರಾನೇರ ರಾಜಕಾರಣ- ಬಿ.ಸಿ.ಪಾಟೀಲ್ಕಾಂಗ್ರೆಸ್ ಬಿಜೆಪಿ ಇಲ್ಲಿ ಒಂದಾಗಿದ್ದು ಯಾಕೆ ಗೊತ್ತಾ ?ಕಾಂಗ್ರೆಸ್ ಬಿಜೆಪಿ ಇಲ್ಲಿ ಒಂದಾಗಿದ್ದು ಯಾಕೆ ಗೊತ್ತಾ ?ರೈತ ಸಂಘದ ಕಾರ್ಯಕರ್ತೆಗೆ ರಾಸ್ಕಲ್ ಎಂದ ಮಾಧುಸ್ವಾಮಿರೈತ ಸಂಘದ ಕಾರ್ಯಕರ್ತೆಗೆ ರಾಸ್ಕಲ್ ಎಂದ ಮಾಧುಸ್ವಾಮಿದೇವರು ಯಾರನ್ನು ಇಷ್ಟಪಡುತ್ತಾನೆ? ನಿಜವಾದ ಮಾನವ ಧರ್ಮ ಪೀಠ ಯಾವುದು ? ಶ್ರೀ ಗವಿಸಿದ್ದೇಶ್ವರ ಸ್ವಾಮಿಜಿ ನುಡಿಗಳುದೇವರು ಯಾರನ್ನು ಇಷ್ಟಪಡುತ್ತಾನೆ? ನಿಜವಾದ ಮಾನವ ಧರ್ಮ ಪೀಠ ಯಾವುದು ? ಶ್ರೀ ಗವಿಸಿದ್ದೇಶ್ವರ ಸ್ವಾಮಿಜಿ ನುಡಿಗಳುದೇವದಾಸಿ ಪದ್ದತಿ ನಿರ್ಮೂಲನೆಗಾಗಿ ಸಮಗ್ರ ಕಾಯ್ದೆ ಜಾರಿಗೆ ಆಗ್ರಹಿಸಿ ಜಾಥಾದೇವದಾಸಿ ಪದ್ದತಿ ನಿರ್ಮೂಲನೆಗಾಗಿ ಸಮಗ್ರ ಕಾಯ್ದೆ ಜಾರಿಗೆ ಆಗ್ರಹಿಸಿ ಜಾಥಾಹನುಮಮಾಲೆ ವಿಸರ್ಜನೆ : ಕಣ್ಣುಹಾಯಿಸಿದೆಲ್ಲೆಡೆ ಕೇಸರಿ ವಸ್ತ್ರಧಾರಿ ಭಕ್ತಗಣ Anjanadri Hanumamalaಹನುಮಮಾಲೆ ವಿಸರ್ಜನೆ : ಕಣ್ಣುಹಾಯಿಸಿದೆಲ್ಲೆಡೆ ಕೇಸರಿ ವಸ್ತ್ರಧಾರಿ ಭಕ್ತಗಣ Anjanadri Hanumamalaಅಗ್ನಿಪಥ ಯೋಜನೆಗೆ ಬೇಕಾದರೆ ಮಂತ್ರಿಗಳ ಮಕ್ಕಳನ್ನು ಕಳುಹಿಸಲಿ-ಡಿ.ಕೆ.ಶಿವಕುಮಾರ್ D K Shivakumarಅಗ್ನಿಪಥ ಯೋಜನೆಗೆ ಬೇಕಾದರೆ ಮಂತ್ರಿಗಳ ಮಕ್ಕಳನ್ನು ಕಳುಹಿಸಲಿ-ಡಿ.ಕೆ.ಶಿವಕುಮಾರ್ D K Shivakumarಸರ್ಕಾರಿ ಶಾಲೆಯ ಐದು ಸಾವಿರ ಮಕ್ಕಳಿಗೆ ಉಚಿತ ಪ್ರವಾಸ-ನೆಕ್ಕಂಟಿ ಸೂರಿಬಾಬು  Nekkanti Suribabu Vidyaniketanaಸರ್ಕಾರಿ ಶಾಲೆಯ ಐದು ಸಾವಿರ ಮಕ್ಕಳಿಗೆ ಉಚಿತ ಪ್ರವಾಸ-ನೆಕ್ಕಂಟಿ ಸೂರಿಬಾಬು Nekkanti Suribabu Vidyaniketanaಕಲಾಭಿಮಾನಿಗಳನ್ನು ರಂಜಿಸಿದ ಹಟ್ಟಿಯಂಗಡಿಯ ದೀಪದರ್ಪಣ ಯಕ್ಷಗಾನ  Huttiyangadi Yakshagan Deepdarpana Kundapurಕಲಾಭಿಮಾನಿಗಳನ್ನು ರಂಜಿಸಿದ ಹಟ್ಟಿಯಂಗಡಿಯ ದೀಪದರ್ಪಣ ಯಕ್ಷಗಾನ Huttiyangadi Yakshagan Deepdarpana Kundapurಮಾದಿಗ ಮಹಾಸಭಾ ಟ್ರಸ್ಟ್ ಉದ್ಘಾಟನೆ : ಪದಾಧಿಕಾರಿಗಳ ಪದಗ್ರಹಣ Madiga Mahasabha Koppalಮಾದಿಗ ಮಹಾಸಭಾ ಟ್ರಸ್ಟ್ ಉದ್ಘಾಟನೆ : ಪದಾಧಿಕಾರಿಗಳ ಪದಗ್ರಹಣ Madiga Mahasabha Koppalಹೊಸ ನೋಟ್ರಿಸ್ ಬಿಲ್ ನಿಂದ ನೋಟರಿಗಳ ಭವಿಷ್ಯ ಅತಂತ್ರ-ಅಸೀಪ್ ಅಲಿ ಆಕ್ರೋಶ  Oppose to Notari Amendment Bill 2021ಹೊಸ ನೋಟ್ರಿಸ್ ಬಿಲ್ ನಿಂದ ನೋಟರಿಗಳ ಭವಿಷ್ಯ ಅತಂತ್ರ-ಅಸೀಪ್ ಅಲಿ ಆಕ್ರೋಶ Oppose to Notari Amendment Bill 2021
Яндекс.Метрика