Загрузка страницы

Mysore H Yoganarasimham: Kolalelli Kalakondeyo (M A Jyothi)

Raagamaalike (Bilahari - Manirangu - Aarabhi)
Composer: Shri Mysooru H Yoganarasimham
Vocals: Dr M A Jyothi (Grand-daughter of the composer)

ಬಿಲಹರಿ ರಾಗ
ಪಲ್ಲವಿ-
ಕೊಳಲೆಲ್ಲಿ ಕಳಕೊಂಡೆಯೋ? ತೊಳಲದಿರೋ ಕೃಷ್ಣ| ಕಂದ|

ಅನುಪಲ್ಲವಿ-
ಬೆಳಕು ಹರಿದಿಲ್ಲವಿನ್ನು, ಅಳುಕಿ ಕನವರಿಸುವಿ
ಪೇಳಲಸದಳವೋ ಕೊಳಲಿನ ಹಾವಳಿಯ!

ಚರಣ ೧
ಸನಕ ಸನಂದನರ ಧ್ಯಾನಭಂಗ ಮಾಡುವಿ
ಮನುಮಥನ ಬಾಧೆಗೆ ವನಿತೆಯರ ಸಿಲುಕಿಸಿ
ಮನೆಗೆಲಸ ನಿಲಿಸುವಿ! ದನಗಳ ಮೇವು ಮರೆಸುವಿ!
ಅನುಚರರ ಸೇರಿ ವೃಂದಾವನ ರಂಗ ಮಾಡಿರುವಿ!

ಮಣಿರಂಗು ರಾಗ
ಚರಣ ೨-
ಗಾನಸುಧಾರಸ ಪಾನವೇ ಪದವಿ
ಗಾನವೆ ಜೀವರಿಗನುದಿನ ಮಂಗಳ
ವಾಣಿ ಉಮೆ ರಮೆ ವೀಣೆ ನುಡಿಸಲು
ಪಿನಾಕಿ ನಟಿಸಲು ಬೊಮ್ಮನ ತಾಳಕೆ

ಆರಭಿ ರಾಗ
ಚರಣ ೩-
ಮುನಿಜನ ನಿಕರಕೆ ಓಂಕಾರಾರ್ಥವ ಮನವರಿಕೆ ಮಾಡಿ ಕುಣಿಸುವೆನಮ್ಮ
ವನಿತೆಯರಿಗೆ ನಾ ನವವಿಧ ಭಕುತಿಯ ಅಣುವನು ಅರುಹುವೆ ತನುವನು ಮರೆಸಿ
ದನಕರು ವನಮೃಗ ಖಗನಗಕುಲಕಾನಂದಾಮೃತ ನೀಡುತ ತಣಿಸುವೆ, ತಿಭು-
ವನರಂಗದ ಸೂತ್ರಧಾರ ನಾನು, ಹಿನ್ನೆಲೆ ಗಾಯಕನಾಸಿರಿದೇವನು!

Видео Mysore H Yoganarasimham: Kolalelli Kalakondeyo (M A Jyothi) канала Kay Kay
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
22 марта 2014 г. 12:38:36
00:07:50
Яндекс.Метрика