Загрузка страницы

Kannada Bhavageete: Kalarava Kelade/ಕಲರವ ಕೇಳದೇ

ಕವಿ - ಚಿನ್ಮಯ ರಾವ್ ಹೊನಗೋಡು
ಹಾಡಿರುವವರು - ಪಲ್ಲವಿ ಅರುಣ್
ಸಂಗೀತ ಸಂಯೋಜನೆ - ಚಿನ್ಮಯ ರಾವ್ ಹೊನಗೋಡು

ಕಲರವ ಕೇಳದೇ
ರಾಧೆಯೊಳಗೆ ನೀ ಮಾಧವ
ಕಾಣದೇಕೆ ಅವಳ ರೂಪ
ಕಾದು ನಿನ್ನ ವಿರಹ ತಾಪ
ಮಿಡಿಯುತಿಹಳು ಕಂಬನಿಯನು
ಎಲ್ಲಿ ಹೋದೆ ಬಾರೊ ನೀನು
ಮಾಧವ...ವೇದನೆ ಕಾಣದೇ?
ಅವಳೆದೆ ಕಾದಿದೆ..

ಚೆಲ್ಲುವಾಗ ವಿರಹದುಸಿರ
ಧ್ಯಾನಿಸುವಳು ನಿನ್ನ ಹೆಸರ
ಘಾಸಿ ಮನವ ಹಾಸಿ ನಿನ್ನ ದಾರಿಗಾಗಿ
ಅವಳ ಸಮರ
ಕರಗುತಿಹಳು ಕೊರಗಿನಲ್ಲಿ ನಿನ್ನ
ಹರಡಿ ಹೆರಳಿನಲ್ಲಿ
ಮೊಗವ ತೋರು ಕರುಣೆಯಿಂದ
ಸವಿಯ ಬಾರೊ ಇವಳ ಅಂದ
ಮಾಧವ...ತನನನ ಕೇಳದೇ?
ತನುಮನ ಕಾದಿದೆ

ಕಾಮಿನಿಯರ ಸಂಗದಲ್ಲಿ
ಮುಳುಗಿ ಹೋಗಿ ಮರೆತೆ ಇವಳ
ಅಗಲಿಕೆಯಲೂ ನೆನೆಯುತಿಹಳು
ಮಧುರ ದನಿಯ ನಿನ್ನ ಕೊಳಲ
ಲೇಪಿಸಿರುವೆ ನಿನ್ನ ತಾಪ
ಹಾಕುತಿಹಳು ನಿನಗೆ ಶಾಪ
ಹೇಳಲಾರೆ ಅವಳ ಪಾಡು
ಅಮೃತಾಂಗ ಸಂಗ ನೀಡು
ಮಾಧವ...ಬೆಂದಿದೆ ಅವಳೆದೆ
ವಂದನೆ ಎಂದಿದೆ

Видео Kannada Bhavageete: Kalarava Kelade/ಕಲರವ ಕೇಳದೇ канала Kay Kay
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
12 мая 2013 г. 1:09:39
00:07:02
Яндекс.Метрика