Загрузка страницы

Kannada Bhavageete: Maayaakinnari/ಮಾಯಾಕಿನ್ನರಿ

ಕವಿ
ದ. ರಾ. ಬೇಂದ್ರೆ
------------
ಹಾಡಿರುವವರು
ಬಿ ಆರ್ ಛಾಯಾ
------------
ಮಾಯಾಕಿನ್ನರಿ

ಮರುಳು ಮಾಡಾಕ ಹೋಗಿ
ಮರುಳ ಸಿದ್ಧನ ನಾರಿ
ಮರುಳಾಗ್ಯಾಳು ಜಂಗಮಯ್ಯಗ ||ಪ||
ಕಿನ್ನರಿ ಆಗ್ಯಾಳ ಕೈಯಾಗ
ನುಡಿದಾಳ ಬಂದ್ಹಾಂಗ ಮೈಯಾಗ

ಆಡುತಾಡುತ ಬಂದು
ಸಿಂಗಾರ ಸೊಳ್ಳಿ ಹಾಂಗ
ಹಾಡಿಲೆ ಕಿವಿ ಗಲ್ಲ ಕಡಿದ್ಯೇನ?
ಹಾದಿ ತಪ್ಪಿಸಿಕೊಂಡ
ಗುಂಗಿಯ ಹುಳದ್ಹಾಂಗ
ಗುಣು ಗುಣು ಗೊಣಗುಟ್ಟಿ ನುಡಿದ್ಯೇನ?

ಕಂಕಣ ಕಾಲುಂಗರಕ
ಮೆಲ್ಲುಸಿರ ಛಂದಕ
ಕುಣಿತಾನ ನಡೆದ್ಹಾಂಗ ಕಾಲಾಗ|
ಕರಗಿ ಬಾ, ಅರಗಿ ಬಾ
ಎರಗಿ ಬಾ ಸಣ್ಣಾಗಿ
ಸಕ್ಕರಿ ಬೆರೆತ್ಹಾಂಗ ಹಾಲಾಗ||

ಅಗಲಿದ ಇನಿಯನ
ಘಕ್ಕನೆ ನೋಡುತ
ಬಸಿರ ಹೂ ಕುಲು ಕುಲು ನಕ್ಹಾಂಗ|
ನಲ್ಲ ಮುಟ್ಟಿದ ಗಲ್ಲ
ನಲ್ಲೆಯ ಮೈಯೆಲ್ಲ
ಹಿಗ್ಗಿನ ಮುಳ್ಳಿಗೆ ಸಿಕ್ಹಾಂಗ||

ಜುಮು ಜುಮು ರುಮು ಜುಮು
ಗುಂಗುಣು ಧುಮು ಧುಮು
ನಾದದ ನದಿಯೊಂದು ನಡೆದ್ಹಾಂಗ|
ಗಲ್ಲ ಗಲ್ಲಕೆ ಹಚ್ಚಿ
ನಲ್ಲ ನಲ್ಲೆಯರಿರುಳು
ಗುಜು ಗುಜು ಗುಲು ಗುಲು ನುಡಿದ್ಹಾಂಗ||

ಪ್ರಕೃತಿ ಪುರುಷಗೆ ಸೋತು
ಪ್ರಾಣಾದ್ಹಂಜೀನುತು
ಅನುಭವದ ಕಿವಿಮಾತು ಆದ್ಹಾಂಗ|
ಹಾಸಾದ ಹಾಡಿಗೆ
ಹೊಕ್ಕಾತು ಕಿನ್ನರಿ
ನೇಯ್ಗೀಯೊಳಗ ನೂಲು ಹೋದ್ಹಾಂಗ||

ಜೀವದ ರಸ ಹಿಂಡಿ
ತುಂತುರು ಮಳೆಯಾಗಿ
ತಂತಿಯ ತುಂಬೆಲ್ಲ ಸಿಡಿದ್ಹಾಂಗ|
ಮರುಳ ಸಿದ್ಧನ ಕೈಯ
ಕಿನ್ನರಿಯಾಗಿ ಸಿಕ್ಕ
ಮಾಯೆಯೆ ಮೈಗೆ ಮೈ ನುಡಿದ್ಹಾಂಗ||

Видео Kannada Bhavageete: Maayaakinnari/ಮಾಯಾಕಿನ್ನರಿ канала Kay Kay
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
23 марта 2013 г. 8:02:14
00:06:10
Яндекс.Метрика