Загрузка страницы

ಶಿರಾಡಿ ದೈವದ ನರ್ತನ ಸೇವೆಗೆ ಮಕ್ಕಳನ್ನು ಅರ್ಪಿಸುವ ಬಾವುಕ ಕ್ಷಣ|ಬಿಕ್ಕಿ ಬಿಕ್ಕಿ ಅತ್ತ ದೈವ ದೀಕ್ಷೆ ಪಡೆದ ವ್ಯಕ್ತಿ

#daivaradhane #bhootharadhane #tulunaduculture #indianculture #indiancultureandfestivals

ಕಾಂತಾರ ಚಿತ್ರದಲ್ಲಿ ಪಂಜುರ್ಲಿ ಪಾತ್ರಧಾರಿ ವ್ಯಕ್ತಿ ಕಾಲವಾದ ಬಳಿಕ ಆತನ ಮಗನೇ ದೈವದ ಸೇವೆಗೆ ನೇಮಕಗೊಳ್ಳುವ ಚಿತ್ರಣ ಇದೆ. ಅದೇ ರೀತಿಯಲ್ಲಿ ಕಡಬ ತಾಲೂಕಿನಲ್ಲಿ ಕಾರಣಿಕದ ದೈವ ಆಗಿರುವ ಶಿರಾಡಿ ದೈವದ ಸೇವೆ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ ಬಳಿಕ ಆ ವ್ಯಕ್ತಿಯ ಮಕ್ಕಳೇ ಮುಂದಿನ ಸೇವೆ ಮಾಡಬೇಕೆಂದು ನಿಶ್ಚಯಗೊಂಡ ಪ್ರಸಂಗ ನಡೆದಿದ್ದು ಕಾಂತಾರ ಚಿತ್ರವನ್ನು ನೆನಪಿಸಿದೆ.

ಕಳೆದ 2023ರ ಮಾರ್ಚ್ 30 ರಂದು ದೈವದ ನರ್ತನ ಮಾಡುತ್ತಿದ್ದ ಸಂದರ್ಭದಲ್ಲಿ ದೈವ ನರ್ತಕ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆಯ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಎಡಮಂಗಲದ ಶಿರಾಡಿ ದೈವದ ವಾರ್ಷಿಕ ಜಾತ್ರೆ ನಡೆಯುತ್ತಿದ್ದಾಗ ಘಟನೆ ನಡೆದಿತ್ತು. ಉಳ್ಳಾಕುಲು ದೈವ ಹಾಗೂ ನಾಗಬ್ರಹ್ಮ ದೈವದ ನರ್ತನ ಸೇವೆ ನಡೆಯುತ್ತಿದ್ದಾಗ ಉಳ್ಳಾಕುಲು ದೈವದ ನರ್ತಕರಾಗಿದ್ದ ಎಡಮಂಗಲ ನಿವಾಸಿ 60 ವರ್ಷದ ಕಾಂತು ಅಜಿಲ ದೈವದ ನರ್ತನ ಮಾಡುತ್ತಲೇ ಕುಸಿದು ಬಿದ್ದು ಸಾವನ್ನಪ್ಪಿದ್ದರು.

ದೈವ ನರ್ತಕ ಕಾಂತು ಅಜಿಲರ ಅಕಾಲಿಕ ಸಾವಿನ ಬಳಿಕ ಗ್ರಾಮದ ಜನ ದೈವದ ನರ್ತಕನ ಹುಡುಕಾಟದಲ್ಲಿ ತೊಡಗಿದ್ದರು. ದೈವಜ್ಞರ ಪ್ರಶ್ನಾ ಚಿಂತನೆ ನಡೆಸಿದಾಗ ಕಾಂತು ಅಜಿಲರ ಮಕ್ಕಳಾದ ಮೋನಪ್ಪ ಮತ್ತು ದಿನೇಶ್ ಅವರೇ ಮುಂದೆ ದೈವ ನರ್ತನದ ಜವಾಬ್ದಾರಿ ಹೊರಬೇಕು ಅಂತ ಕಂಡುಬಂದಿತ್ತು. ಬಳಿಕ, ಶಿರಾಡಿ ದೈವದ ಒಪ್ಪಿಗೆಯನ್ನೂ ಪಡೆಯಲಾಗಿತ್ತು. ಹೀಗಾಗಿ ಈ ವರ್ಷದ ಶಿರಾಡಿ ದೈವದ ನೇಮೋತ್ಸವಕ್ಕೂ ಮುನ್ನ ಇಬ್ಬರೂ ಯುವಕರನ್ನು ದೈವದ ಮುಂದೆ ನಿಲ್ಲಿಸಿ, ಇಬ್ಬರಿಗೂ ಯಾವ ರೀತಿಯಲ್ಲಿ ದೈವದ ಸೇವೆಯನ್ನು ಮಾಡಬೇಕು ನಡೆಸಲಾಗಿದೆ. ಅನ್ನೋದನ್ನು ತಿಳಿಸುವ ಪ್ರಕ್ರಿಯ

ದೈವ ನರ್ತಕರು ಶುದ್ಧವಾಗಿ ಮಡಿ ಬಟ್ಟೆಯನ್ನು ಸುತ್ತಿ ಮನೆ ಮಂದಿಯ ಹಾಗೂ ಗ್ರಾಮದ ಹಿರಿಯರ ಆಶೀರ್ವಾದ ಪಡೆದ ಬಳಿಕ ಒಂಬತ್ತು ದಿಕ್ಕಿಗೆ ಸೇರಿದ ಜನರ ಸಮ್ಮುಖದಲ್ಲಿ ದೀಕ್ಷೆ ಬೂಳ್ಯವನ್ನು ನೀಡಲಾಗುತ್ತದೆ. ದೈವ ನರ್ತಕನಿಗೆ ತನ್ನ ಸೇವೆ ಮಾಡುವಂತೆ ನೀಡುವ ಈ ದೀಕ್ಷೆ ದೈವಾರಾಧನೆಯಲ್ಲಿ ಅತ್ಯಂತ ಮಹತ್ವದ್ದಾಗಿದೆ. ದೈವ ತನ್ನ ಅವಾಹನೆಯನ್ನು ಹೊಸದಾಗಿ ನೇಮಕವಾದ ದೈವ ನರ್ತಕರ ಮೂಲಕ ತೋರ್ಪಡಿಸಲಿದೆ ಎನ್ನುವುದು ದೀಕ್ಷೆ ಬೂಳ್ಯದ ಹಿಂದಿರುವ ತತ್ವವಾಗಿದೆ.

ದೀಕ್ಷೆ ಪಡೆದ ಬಳಿಕ ದೈವ ನರ್ತಕ ನಾಲ್ಕು ಗ್ರಾಮಕ್ಕೆ ಸಂಬಂಧಪಟ್ಟ ದೈವಗಳ ಸೇವೆಯ ಜವಾಬ್ದಾರಿಯನ್ನು ತನ್ನ ಹೆಗಲ ಮೇಲೆ ಹೊತ್ತುಕೊಳ್ಳುತ್ತಾನೆ. ಈ ಅಪೂರ್ವ ಕ್ಷಣವನ್ನು ಕಣ್ಣುಂಬಿಕೊಳ್ಳಲು ಊರ ಹಾಗೂ ಪರವೂರಿನ ದೈವಭಕ್ತರು ಭಾಗವಹಿಸಿದ್ದರು.

Видео ಶಿರಾಡಿ ದೈವದ ನರ್ತನ ಸೇವೆಗೆ ಮಕ್ಕಳನ್ನು ಅರ್ಪಿಸುವ ಬಾವುಕ ಕ್ಷಣ|ಬಿಕ್ಕಿ ಬಿಕ್ಕಿ ಅತ್ತ ದೈವ ದೀಕ್ಷೆ ಪಡೆದ ವ್ಯಕ್ತಿ канала Star Of Mangalore
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
14 мая 2024 г. 18:24:41
00:28:09
Другие видео канала
Water Medicine|ಈ ಕ್ಷೇತ್ರದ ಬಾವಿ ನೀರೇ ದಿವ್ಯೌಷಧಿ|ವೈದ್ಯ ಲೋಕಕ್ಕೆ ಸವಾಲೆನಿಸಿದ ಈ ಕ್ಷೇತ್ರದ ಮಹಿಮೆ ಗೊತ್ತೇ...?Water Medicine|ಈ ಕ್ಷೇತ್ರದ ಬಾವಿ ನೀರೇ ದಿವ್ಯೌಷಧಿ|ವೈದ್ಯ ಲೋಕಕ್ಕೆ ಸವಾಲೆನಿಸಿದ ಈ ಕ್ಷೇತ್ರದ ಮಹಿಮೆ ಗೊತ್ತೇ...?ಬೋಲ್ಟ್ ದಾಖಲೆ ಉಡೀಸ್ ಮಾಡಿದ ತುಳುನಾಡ ಕಂಬಳ ವೀರ ಶ್ರೀನಿವಾಸ ಗೌಡ| Srinivas Gowda Breakes Usain Bolts Recordಬೋಲ್ಟ್ ದಾಖಲೆ ಉಡೀಸ್ ಮಾಡಿದ ತುಳುನಾಡ ಕಂಬಳ ವೀರ ಶ್ರೀನಿವಾಸ ಗೌಡ| Srinivas Gowda Breakes Usain Bolts Recordತುಳುನಾಡಿನ ಇತಿಹಾಸದಲ್ಲಿ ಮೊದಲ ಬಾರಿಗೆ ನಡೆದ ರಕ್ತೇಶ್ವರಿ ದೈವದ ಧರ್ಮ ನಡಾವಳಿ|Raktheswari Daiva Dharma Nadavaliತುಳುನಾಡಿನ ಇತಿಹಾಸದಲ್ಲಿ ಮೊದಲ ಬಾರಿಗೆ ನಡೆದ ರಕ್ತೇಶ್ವರಿ ದೈವದ ಧರ್ಮ ನಡಾವಳಿ|Raktheswari Daiva Dharma Nadavaliಫೋನಲ್ಲಿ ನೀವು ಕೇಳೋ ಕೊರೋನಾ ಜಾಗೃತಿ ಧ್ವನಿಯ ಒಡತಿ ಮಂಗಳೂರು ಮೂಲದ ಡಾರೆಲ್ ಜೆಸಿಂತಾ ಫೆರ್ನಾಂಡಿಸ್ಫೋನಲ್ಲಿ ನೀವು ಕೇಳೋ ಕೊರೋನಾ ಜಾಗೃತಿ ಧ್ವನಿಯ ಒಡತಿ ಮಂಗಳೂರು ಮೂಲದ ಡಾರೆಲ್ ಜೆಸಿಂತಾ ಫೆರ್ನಾಂಡಿಸ್ಮಂಗಳೂರಿನಲ್ಲಿ ರಾಜ್ಯದ ಮೊದಲ ಸ್ಮಾರ್ಟ್, ಹೈಟೆಕ್  ಬಸ್ ಸ್ಟ್ಯಾಂಡ್|State's first smart bus stand in Mangaloreಮಂಗಳೂರಿನಲ್ಲಿ ರಾಜ್ಯದ ಮೊದಲ ಸ್ಮಾರ್ಟ್, ಹೈಟೆಕ್ ಬಸ್ ಸ್ಟ್ಯಾಂಡ್|State's first smart bus stand in Mangaloreಜ್ವಾಲೆಯಾಗಿ ಶಶಿಕಾಂತ ಶೆಟ್ರ ಅದ್ಭುತವೆನಿಸುವ ಅಭಿನಯಕ್ಕೆ ತೆಂಕಿನ ಪ್ರೇಕ್ಷಕರು ಫಿದಾ|Jwalaprathapa|yakshananaಜ್ವಾಲೆಯಾಗಿ ಶಶಿಕಾಂತ ಶೆಟ್ರ ಅದ್ಭುತವೆನಿಸುವ ಅಭಿನಯಕ್ಕೆ ತೆಂಕಿನ ಪ್ರೇಕ್ಷಕರು ಫಿದಾ|Jwalaprathapa|yakshananaಯಕ್ಷಗಾನ ಕಲಾವಿದನಿಂದ ರಂಗಸ್ಥಳದಲ್ಲಿ ಮತದಾನ ಜಾಗೃತಿಯಕ್ಷಗಾನ ಕಲಾವಿದನಿಂದ ರಂಗಸ್ಥಳದಲ್ಲಿ ಮತದಾನ ಜಾಗೃತಿಕಾವ್ಯಶ್ರೀ ಅಜೇರು ಮತ್ತು ಗಿರೀಶ್ ರೈ ಅವರ ಸ್ಮರಿಸಯ್ಯಾ ರಾಮ ಮಂತ್ರ|Smarisayya ramamanthra yakshagana song|ಕಾವ್ಯಶ್ರೀ ಅಜೇರು ಮತ್ತು ಗಿರೀಶ್ ರೈ ಅವರ ಸ್ಮರಿಸಯ್ಯಾ ರಾಮ ಮಂತ್ರ|Smarisayya ramamanthra yakshagana song|ಪಟ್ಲರ ನೋಡಿದನು ಕಲಿ ರಕ್ತ ಬೀಜನು ಹಾಡು| Famous yakshagana artist patla Sathish shetty favorite song HDಪಟ್ಲರ ನೋಡಿದನು ಕಲಿ ರಕ್ತ ಬೀಜನು ಹಾಡು| Famous yakshagana artist patla Sathish shetty favorite song HDಕೊರಗಜ್ಜನಿಗೆ ಚಿನ್ನದ ಮುಟ್ಟಾಲೆ ಸಮರ್ಪಣೆ|ಕೋಮು ಸೌಹಾರ್ದಕ್ಕೆ ಸಾಕ್ಷಯಾದ ಉಳ್ಳಾಲ|ಕೊರಗಜ್ಜನಿಗೆ ಚಿನ್ನದ ಮುಟ್ಟಾಲೆ ಸಮರ್ಪಣೆ|ಕೋಮು ಸೌಹಾರ್ದಕ್ಕೆ ಸಾಕ್ಷಯಾದ ಉಳ್ಳಾಲ|ವರ ನೋಡಿದ್ದೇನೆ,ಅದೇ ವರನನ್ನು ಮದುವೆ ಮಾಡಿಸುವಂತೆ ಕೊರಗಜ್ಜನಿಗೆ ಪ್ರಾರ್ಥನೆ ಸಲ್ಲಿಸಿದ ಪ್ರೇಮಾ|Prema begged Godವರ ನೋಡಿದ್ದೇನೆ,ಅದೇ ವರನನ್ನು ಮದುವೆ ಮಾಡಿಸುವಂತೆ ಕೊರಗಜ್ಜನಿಗೆ ಪ್ರಾರ್ಥನೆ ಸಲ್ಲಿಸಿದ ಪ್ರೇಮಾ|Prema begged Godರಾಮ, ರಾಮಾಯಣ ಮೀಡಿಯಾ ಮಾಸ್ಟರ್ ಖ್ಯಾತಿಯ ಎಮ್.ಎಸ್ ರಾಘವೇಂದ್ರ ಅದ್ಭುತ  ಉಪನ್ಯಾಸ|Speech About Ramayana& Ramaರಾಮ, ರಾಮಾಯಣ ಮೀಡಿಯಾ ಮಾಸ್ಟರ್ ಖ್ಯಾತಿಯ ಎಮ್.ಎಸ್ ರಾಘವೇಂದ್ರ ಅದ್ಭುತ ಉಪನ್ಯಾಸ|Speech About Ramayana& Ramaಮಂಗಳೂರು ಪಿಲಿನಲಿಕೆಯಲ್ಲಿ ಹುಲಿನೃತ್ಯಕ್ಕೆ ಭರ್ಜರಿ ಸ್ಟೆಪ್ ಹಾಕಿದ ರಾಜ್ ಬಿ. ಶೆಟ್ಟಿ,ರಿಷಬ್ ಶೆಟ್ಟಿಮಂಗಳೂರು ಪಿಲಿನಲಿಕೆಯಲ್ಲಿ ಹುಲಿನೃತ್ಯಕ್ಕೆ ಭರ್ಜರಿ ಸ್ಟೆಪ್ ಹಾಕಿದ ರಾಜ್ ಬಿ. ಶೆಟ್ಟಿ,ರಿಷಬ್ ಶೆಟ್ಟಿಒಲಿಮದೆಯೊಳಗೆ ಬಣ್ಣ ಬಳಿದು ಜೋಗದಿಂದ ಹೊರಬರುವ  ಅರಸು ಕುಂಜಿರಾಯ ದೈವದ ಆರ್ಭಟ|Arbhata of Arasu Kunjiraya Deivaಒಲಿಮದೆಯೊಳಗೆ ಬಣ್ಣ ಬಳಿದು ಜೋಗದಿಂದ ಹೊರಬರುವ ಅರಸು ಕುಂಜಿರಾಯ ದೈವದ ಆರ್ಭಟ|Arbhata of Arasu Kunjiraya Deivaವೂಂಬ್ ಜಿಹಾದ್ ಬಗ್ಗೆ ಚಕ್ರವರ್ತಿ ಸೂಲಿಬೆಲೆ ಹೇಳಿದ್ದೇನು?|Chakravarthi sulibele|womb jihadವೂಂಬ್ ಜಿಹಾದ್ ಬಗ್ಗೆ ಚಕ್ರವರ್ತಿ ಸೂಲಿಬೆಲೆ ಹೇಳಿದ್ದೇನು?|Chakravarthi sulibele|womb jihadಪಟ್ಲ ಸತೀಶ್ ಶೆಟ್ಟಿಯವರ ಸುಮಧುರ ಕಂಠದಲ್ಲಿ ವಂದೇ ಮಾತರಂ ಗೀತೆ.VANDE MATHARAM IN YAKSHAGANA(PALTA) STYLEಪಟ್ಲ ಸತೀಶ್ ಶೆಟ್ಟಿಯವರ ಸುಮಧುರ ಕಂಠದಲ್ಲಿ ವಂದೇ ಮಾತರಂ ಗೀತೆ.VANDE MATHARAM IN YAKSHAGANA(PALTA) STYLESathya Harishchandra Yakshagana Part-2 ಸುಪ್ರಸಿದ್ಧರ ಕೂಡುವಿಕೆಯಲ್ಲಿ ಯಕ್ಷಗಾನ ಸತ್ಯ ಹರೀಶ್ಚಂದ್ರ ಭಾಗ-2Sathya Harishchandra Yakshagana Part-2 ಸುಪ್ರಸಿದ್ಧರ ಕೂಡುವಿಕೆಯಲ್ಲಿ ಯಕ್ಷಗಾನ ಸತ್ಯ ಹರೀಶ್ಚಂದ್ರ ಭಾಗ-2ದೇವರ ಕಂಬಳ|ಸಾಂಪ್ರದಾಯಿಕ ಕಂಬಳ|Tulunadu culture|Indian cultureದೇವರ ಕಂಬಳ|ಸಾಂಪ್ರದಾಯಿಕ ಕಂಬಳ|Tulunadu culture|Indian cultureಮೋದಿಯಂತ ಪ್ರಧಾನಿ ದೇಶಕ್ಕೆ ದೊರೆತ್ತದ್ದು ಸುದೈವ;ಶತಮಾನದ ಸಂತ, ಸಿದ್ದೇಶ್ವರ ಸ್ವಾಮೀಜಿ ಮಾತು ವೈರಲ್ಮೋದಿಯಂತ ಪ್ರಧಾನಿ ದೇಶಕ್ಕೆ ದೊರೆತ್ತದ್ದು ಸುದೈವ;ಶತಮಾನದ ಸಂತ, ಸಿದ್ದೇಶ್ವರ ಸ್ವಾಮೀಜಿ ಮಾತು ವೈರಲ್ದೈವಕ್ಕೆ ಅಪಚಾರ ಮಾಡಿದ್ದಲ್ಲಿ ಈ ಕ್ಷೇತ್ರಕ್ಕೆ ತಪ್ಪು ಕಾಣಿಕೆ ಹಾಕಿದರೆ ಸಿಗುವುದು ಕ್ಷಮೆ| #offended#daiva#forgiveದೈವಕ್ಕೆ ಅಪಚಾರ ಮಾಡಿದ್ದಲ್ಲಿ ಈ ಕ್ಷೇತ್ರಕ್ಕೆ ತಪ್ಪು ಕಾಣಿಕೆ ಹಾಕಿದರೆ ಸಿಗುವುದು ಕ್ಷಮೆ| #offended#daiva#forgiveJugulbandi Vijay Prakash,background musiciansತರವಲ್ಲ ತಗಿ ನಿನ್ನ ತಂಬೂರಿ ಹಾಡು ವಿಭಿನ್ನವಾಗಿ ಹಾಡಿದ ವಿಜಯ್Jugulbandi Vijay Prakash,background musiciansತರವಲ್ಲ ತಗಿ ನಿನ್ನ ತಂಬೂರಿ ಹಾಡು ವಿಭಿನ್ನವಾಗಿ ಹಾಡಿದ ವಿಜಯ್
Яндекс.Метрика