Загрузка страницы

Akshaya trutiya vaishistya

🌹🌹ಅಕ್ಷಯ ತೃತೀಯದ ಮಹತ್ವ🌹🌹

ಅಕ್ಷಯ ತೃತೀಯದ ವೈಶಿಷ್ಟ್ಯ ಕೇಳೋ
ಅಕ್ಷಯವಾಗುವುದು ದಿನ ನಿತ್ಯ ತಿಳಿಯೋ||ಪಲ್ಲ||

ನಾಲ್ಕು ಯುಗಗಳಲ್ಲಿ ಮೊದಲಾದ ಸತ್ಯಯುಗ ಪ್ರಾರಂಭ
ವಾದುದು ಅಕ್ಷಯ ತೃತೀಯ|
ವೇದವ್ಯಾಸರು ಭಾರತ ಪೇಳಲುಗಣೀಶ ಸಹಕರಿಸಿದುದು
ಅಕ್ಷಯ ತೃತೀಯ|
ತರಳನ ಮೊರೆ ಕೇಳಿ ತ್ವರದಿ ಕಂಬದಿ ಬಂದ ನರಸಿಂಹನವ
ತಾರ ಅಕ್ಷಯತೃತೀಯ|
ಸಿಂಹಾಚಲ ನರಸಿಂಹ ದೇವರಿಗೆ ಗಂಧ ಲೇಪನವು ಅಕ್ಷಯ
ತೃತೀಯ||೧||

ಹತ್ತಾವತಾರದ ಪರಶುರಾಮನು ಹುಟ್ಟಿದ ದಿನವೆಅಕ್ಷಯ
ತೃತೀಯ|
ದೇವ ದಾನವ ರುಸಮುದ್ರಮಥನ ಮಾಡೆ ಲಕ್ಷ್ಮಿದೇವಿಹುಟ್ಟಿ
ದ್ದು ಅಕ್ಷಯತೃತೀಯ
ಸಂಪತ್ತಿನ ಒಡೆಯ ಕುಬೇರನಿಗೆ ಧನ ಸಹಾಯವಾದುದು
ಅಕ್ಷಯತೃತೀಯ
ಭಕ್ತಿಯಿಂದ ಬಂಧ ಭಕ್ತ ಸುಧಾಮಗೆ ಅಕ್ಷಯವಾದುದು
ಅಕ್ಷಯತೃತೀಯ||೨||

ಭಗಿರಥನ ಯತ್ನದಿ ಶಿವನ ಜಡೆಯಿಂದ ಗಂಗೆ ಬಂದುದು
ಅಕ್ಷಯತೃತೀಯ| ದ್ರೌಪತಿಗೆ ಸೀರೆ ಅಕ್ಷಯವಾದ ದಿನವೆ
ಅಕ್ಷಯತೃತೀಯ|
ಶಕ್ತ್ಯಾನುಸಾರ ದಾನಧರ್ಮ ಮಾಡೆಂದು ತಿಳಿಸುವುದೆಅಕ್ಷಯ
ತೃತೀಯ|
ಅನ್ನದಾನವು ಅಧಿಕ ಅಕ್ಷಯವಾಗುವದುಅಕ್ಷಯತೃತೀಯ||೩||
ವೈಶಾಖಮಾಸದ ಶುಧ್ಧ ತೃತೀಯವೆ ಅಕ್ಷಯತೃತೀಯ
ಮುತೈದೆಯರಿಗೆ ಮನೆಗೆ ಕರೆದು ಕಾಲ್ತೊಳೆಯುವುದುಅಕ್ಷಯ ತೃತೀಯ|
ಬಳಿ ಕುಂಕುಮರಿಪಿಣ ಪಾನಕ ಕೋಸಂಬ್ರಿ ನೀಡುವುದೆ ಅಕ್ಷಯ ತೃತೀಯ|
ಚೈತ್ರ ಗೌರಿ ವಿಸರ್ಜಿಸಿ ನಿರ್ಮಾಲ್ಯ ಧರಿಸುವುದೆ ಅಕ್ಷಯ
ತೃತೀಯ||೪||

ಅಕ್ಷಯ ತೃತೀಯದಿ ಹೋಮಕಾರ್ಯ ಮಾಡೆ ಅಶ್ವಮೇಧಫಲ
ದೊರೆಯುವದು| ಅಕ್ಷಯ ತೃತೀಯದ ಪ್ರಮಾಣಗಳೆಲ್ಲ ವಿಷ್ಣು
ಪುರಾಣದಿ ತಿಳಿಸಿರಲು|
ಚೈತ್ರ ಗೌರಿ ಪೂಜೆ ಮುಗಿಯುವ ದಿನವೆ ಅಕ್ಷಯ ತೃತೀಯ
ಲಕ್ಷಿಟ್ಟು ಮಧ್ವೇಶಕೃಷ್ಣನ ಧ್ಯಾನ ಮಾಡೆ ಭಕ್ತಿ ಹುಟ್ವುವುದು
ಅಧಿಕವಾಗಿ||೫||

~~~~~~ಹರೇಶ್ರೀನಿವಾಸ.

Видео Akshaya trutiya vaishistya канала KN Rathna - (Rohini Rathna) Hari Dasara padagalu
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
2 мая 2022 г. 20:31:30
00:03:00
Яндекс.Метрика