Загрузка страницы

Rajarendare sreepada rajaru

🌹🌹ಶ್ರೀ ಪಾದರಾಜರ ಸ್ಮರಣೆ🌹🌹

ರಾಜರೆಂದರೆ ಶ್ರೀಪಾದರಾಜರು
ರಾಜೀವಲೋಚನನ ಮನ ಒಲಿಸಿದವರು||ಪಲ್ಲ||

ಕಣ್ವತೀರದ ಅಬ್ಬೂರಿನ ಬಳಿ
ಅವತಾರ ಮಾಡಿದ ಪುಣ್ಯ ಪುರುಷರು
ಶೇಷಗಿರಿ ಮತ್ತು ಗಿರಿಯಮ್ಮ ನೆಂಬುವರ
ಪ್ರೀತಿಯ ಪುತ್ರರಾಗಿ ಜನಿಸಿದವರು||೧||

ಸ್ವರ್ಣವರ್ಣತೀರ್ಥರು ಅನುಗ್ರಹ ಮಾಡಿ
ಸನ್ಯಾಸದೀಕ್ಷೆಯಿತ್ತು ಆಶೀರ್ವಾದ ಮಾಡಿ
" ಲಕ್ಷ್ಮಿ ನಾರಾಯಣ ತೀರ್ಥ" ರೆಂದು ಕರೆಯಲು
ದೇಶ ಸಂಚಾರಕ್ಕೆ ಹೊರಟಿಹರಂದು||೨||

ಶ್ರೀ ಮನ್ಯಾಯಸುಧಗೆ " ವಾಗ್ವಜ್ರ" ವೆಂಬ
ವ್ಯಾಖ್ಯಾನ ಬರೆದು ಗುರುಗಳಿಗೆ ನಮಿಸೆ
ಉತ್ತರಾದಿ ಮಠದ ರಘುನಾಥ ತೀರ್ಥರು
ಗ್ರಂಥ ಮೆಚ್ಚಿ " ಶ್ರೀಪಾದರಾಜ" ರೆನಲು||೩||

ಮುಳಬಾಗಿಲಿನಲ್ಲಿ ಸಾಧನೆ ಮಾಡುತ್ತ
ಸಾಳುವ ನರಸಿಂಹನ ಬ್ರಹ್ಮತ್ಯ ದೋಷ ಕಳೆಯುತ್ತ
ವಾಯುಸ್ತುತಿ,ಮಧ್ವನಾಮ ಭ್ರಮರಗೀತೆ ಮೊದಲಾದ
ಕೀರ್ತನೆಗಳನ ಕನ್ನಡದಲ್ಲಿ ರಚಿಸಿ||೪||

ಭೀಮತೀರದಿ " ರಂಗವಿಠಲ" ಮೂರ್ತಿ ದೊರಕಲು
ಅದೇ ಅಂಕಿತದಿಂದ ಪದಗಳನ ರಚಿಸಿ
ಜ್ಯೇಷ್ಟ ಶುಧ್ಧ ಚತುರ್ದಶಿಯಂದು
ಮಧ್ವೇಶಕೃಷ್ಣನ ಪಾದ ಸೇರಿದ||೫||

~~~~~ಹರೇಶ್ರೀನಿವಾಸ

Видео Rajarendare sreepada rajaru канала KN Rathna - (Rohini Rathna) Hari Dasara padagalu
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
14 июня 2022 г. 12:48:20
00:04:02
Яндекс.Метрика