Загрузка страницы

ಸುಟ್ಟರೂ ಸುಡದವನು ಸುಡುವುದೆಲ್ಲಿಂದ?

ಏನನ್ನೂ ತಿನ್ನದೇ ಉಪವಾಸವಿದ್ದು ಪೂಜಿಸುವವನ ಪೂಜೆಗೆ ತಿನ್ನದೇ ನಿಲ್ಲುವವನು ದೇವರು. ಹಾಗೆಯೇ ಪೂಜಿಸುವವ ತಿನ್ನುವ ಪದಾರ್ಥವೆಲ್ಲವನ್ನೂ ನೈವೇದ್ಯವೆಂದು ಅರ್ಪಿಸಿದಾಗ ತಿನ್ನುವವನೂ ಅದೇ ದೇವರೇರೀ. ಬೇಡರ ಕಣ್ಣಪ್ಪ ಜಿಂಕೆಯನ್ನು ಕೊಂದಾಗ ಸಾವಿಗೆ ಮುನ್ನ ನೋವನುಭವಿಸಿದ್ದು ಆ ಜಿಂಕೆಯೊಳಗಿನ ಶಿವನೇ ಮತ್ತು ಆ ಜಿಂಕೆಯ ಮಾಂಸವನ್ನು ನೈವೇದ್ಯವೆಂದು ಆ ಕಣ್ಣಪ್ಪ ಅರ್ಪಿಸಿದಾಗ ಸ್ವೀಕರಿಸಿದವನೂ ಆ ಕಾಳಹಸ್ತೀಶ್ವರನೇ. ಸತ್ತ ಜೀವಿಗಳೆಲ್ಲ ಬಿಟ್ಟ ಪ್ರೇತದೇಹಗಳನ್ನು ಪಂಚಭೂತಗಳಾಗಿ ಲೀನಮಾಡಿಕೊಂಡಿದ್ದೂ ಆ ಪಂಚಲಿಂಗನೇ ಕಣ್ರೀ. ಕೊಡುವವರ ಜೋಳಿಗೆಯಲ್ಲಿ ಏನಿದೆಯೋ ಅದನ್ನು ಮತ್ರವೇ ಅವರು ಕೊಡಲು ಸಾಧ್ಯ ಅಲ್ಲವೇ ಹಾಗಿದ್ದಲ್ಲಿ ಆ ಶಿವನಲ್ಲಿ ನೋವೇ ಇಲ್ಲದಿರುವಾಗ ಅವ ನಮಗೆ ನೋವ ಕೊಡಲು ಹೇಗೆ ಸಾಧ್ಯ? ಅವ ಸಾವಿಲ್ಲದವನಾದುದರಿಂದ ಅವ ಯಾರನ್ನೂ ಕೊಲ್ಲುವುದಿಲ್ಲ. ಅವ ಈ ಜಗದ ಆದಿ ತಿರುಕನಲ್ಲವೇ? ಆ ಹೊತ್ತಿಗೆ ಸಿಕ್ಕಷ್ಟು ತಾ ಬಳಸಿ ಮಿಕ್ಕದ್ದು ಇತರರೊಂದಿಗೆ ಹಂಚಿ ತಿನ್ನುವವನನ್ನು ನಾವು ಬೇಡುವುದಾದರೂ ಏನನ್ನು ಗೆಳೆಯರೇ, ಮತ್ತು ಅವ ಕೊಡುವುದಾದರೂ ಎಲ್ಲಿಂದ? ಅವನು ಸತ್ತದ್ದನ್ನೆಲ್ಲ ಸುಟ್ಟು ಉಳಿದ ವಿಭೂತಿಯನ್ನು ಮೈಗೆಲ್ಲಾ ಹಚ್ಚುತ್ತಾನಂತೆ! ಇತ್ತೀಚಿನ ವೈಜ್ಞಾನಿಕ ಸಂಶೋಧನೆಯ ಪ್ರಕಾರ ಶವ ಸುಟ್ಟ ಭಸ್ಮದಲ್ಲಿ ಹನ್ನೆರಡು ಮೂಲ ಅಜೈವಿಕ ಲವಣಗಳು ಇರುತ್ತವೆ, ಅವು ಜೀವಿಸಿರುವವರ ಆರೋಗ್ಯದ ಮೇಲೆ ಮಹತ್ವದ ಪರಿಣಾಮ ಬೀರುತ್ತವೆ. ಹಾಗಾಗಿ ಮೈಯೆಲ್ಲಾ ಬೂದಿ ಹಚ್ಚಿಕೊಳ್ಳುವ ಭಸ್ಮಧಾರಿ ಕೆಡುವುದಾದರೂ ಎಲ್ಲಿಂದ?
ಅಗ್ನಿ ಯಾವುದನ್ನಾದರೂ ಭಸ್ಮವಾಗುವವರೆಗೆ ಸುಡಬಹುದು ಅದಕ್ಕೂ ಮೀರಿ ಸುಡಲಾಗುವುದಿಲ್ಲ.
ಆ ಭೂತನಾಥ ಅಗ್ನಿ ಸುಡದಷ್ಟು ಸುಟ್ಟುಹೋಗಿದ್ದಾನೆ ಅಲ್ಲವೇ ? ಇನ್ನು ಸುಡುವುದಾದರೂ ಎಲ್ಲಿಂದ?
ಅವನು ಅಡಿನೆಟ್ಟು ಒಂದು ಕಡೆ ನಿಲ್ಲದ ಕಿತ್ತಡಿಯವನು ಹಾಗಾಗಿ ಅವನ ನಡಿಗೆಯೇ ಚಂದ! ನಮ್ಮೆಲ್ಲರ ಕೊನೆಯ ಮನೆ ಆರುಮೂರರ ಗುಂಡಿ ಅವನ ರಾಜ್ಯದಾನಿ. ನಮ್ಮ ಏಳು ಚಕ್ರಗಳು ದಾಟಿದರೇ ಅವ ಕಾಣುವನು. ಎಂಟೆದೆಯ ಭಂಟನವನು ನಮ್ಮೆಲ್ಲರ ಚಿಂತೆಯ ಗಂಟು ಬಿಡಿಸುವನು. ಕಡೆಗೆ ಹೆಣ್ಣಿನ ಐದುಭಾಗ ಮತ್ತು ಗಂಡಿನ ನಾಲ್ಕುಭಾಗ ಸೇರಿಸಿ ಒಂಬತ್ತು ಭಾಗದ ಮಗುವನ್ನು ಹುಟ್ಟಿಸಿ ನಮ್ಮನ್ನೆಲ್ಲಾ ನಕ್ಕು ನಗಿಸುವನವನು.

ತಿನ್ನದವ ಪೂಜಿಸುವ ತಿನ್ನದವನವನು
ತಿನ್ನುವರ ನೈವೇದ್ಯ ತಿನ್ನುವವನವನು
ಕೊಂದವನು ತಿಂದಾಗ ಸತ್ತವನು ಅವನು
ಸತ್ತವರು ಬಿಟ್ಟದ್ದು ತಿನ್ನುವನವನು
ನೋವಿಲ್ಲದವನವ ನೋವ ಕೊಡಲಹುದೇ?
ಸಾವಿಲ್ಲದವನಂತೆ ಅವ ಕೊಲ್ಲಲಾರನು
ಆದಿ ತಿರುಕನವನಂತೆ ಕೊಡುವುದೆಲ್ಲಿಂದ?
ಬೂದಿ ಹಚ್ಚುವನಂತೆ ಕೆಡುವುದೆಲ್ಲಿಂದ?
ಸುಟ್ಟರೂ ಸುಡದವನು ಸುಡುವುದೆಲ್ಲಿಂದ?
ಅಡಿನೆಡದ ಕಿತ್ತಡಿಯ ನಡಿಗೆಯೇ ಚಂದ
ಆರು ಮೂರರ ಮನೆಯ ಆಳುವವನವನು
ಏಳೂರ ದಾಟಿದರೆ ಕಾಣುವವನವನು
ಎಂಟೆದೆಯ ಭಂಟನವ ಗಂಟುಬಿಡಿಸುವನು
ನಾಕೈದು ಸೇರಿಸಿ ನಕ್ಕು ನಗಿಸುವನು..
: ಅಹೋರಾತ್ರ

ವಾಧ್ಯ ಸಂಯೋಜನೆ ಮತ್ತು ಕೊಳಲು
ಸಾಮೀರ್ ರಾವ್

ತಾಂತ್ರಿಕ ಸಂಯೋಜನೆ
ವಿನಯ್ ರಂಗದೋಳ್

ಗಾಯನ ಮತ್ತು ರಾಗ ಸಂಯೋಜನೆ
ರಾಘವೇಂದ್ರ ಬೀಜಾಡಿ

Видео ಸುಟ್ಟರೂ ಸುಡದವನು ಸುಡುವುದೆಲ್ಲಿಂದ? канала Ahoratra ಅಹೋರಾತ್ರ
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
30 апреля 2018 г. 17:03:53
00:03:34
Другие видео канала
Irabeku iruvante ( ಇರಬೇಕು ಇರುವಂತೆ)Irabeku iruvante ( ಇರಬೇಕು ಇರುವಂತೆ)ಮೂರ್ಖನ ಮಾತುಗಳುಮೂರ್ಖನ ಮಾತುಗಳುಇದ್ದಂಗಿದ್ರೆ ಇಟ್ಟಂಗಿದ್ರೆ ಬುದ್ನಂಗಾಯ್ತಾರಂತಪ್ಪಾ..ಇದ್ದಂಗಿದ್ರೆ ಇಟ್ಟಂಗಿದ್ರೆ ಬುದ್ನಂಗಾಯ್ತಾರಂತಪ್ಪಾ..'ಹತ್ತು ನಾಕು ಮೆಟ್ಟಿಲು''ಹತ್ತು ನಾಕು ಮೆಟ್ಟಿಲು'Redefining Fashion & Beauty - Sabyasachi Mukherjee with SadhguruRedefining Fashion & Beauty - Sabyasachi Mukherjee with Sadhguruಶಿವಲಿಂಗದ ನಿಜಸ್ವರೂಪಶಿವಲಿಂಗದ ನಿಜಸ್ವರೂಪತಿನ್ನದವ ಪೂಜಿಸುವ ತಿನ್ನದವನವನುತಿನ್ನದವ ಪೂಜಿಸುವ ತಿನ್ನದವನವನುಹತ್ತನು ತಿಳಿಯಲು ಹತ್ತಲೆಬೇಕು | ಭಗವದ್ಗೀತೆ | bhagavad gita | With Explanation | Ahoratraಹತ್ತನು ತಿಳಿಯಲು ಹತ್ತಲೆಬೇಕು | ಭಗವದ್ಗೀತೆ | bhagavad gita | With Explanation | Ahoratra|SOOTHU BANDENU GURUVE | ಸೋತು ಬಂದೆನು ಗುರುವೇ | KUVEMPU| PRAJWAL VIJAYKUMAR |  |SWARA MAADURI|SOOTHU BANDENU GURUVE | ಸೋತು ಬಂದೆನು ಗುರುವೇ | KUVEMPU| PRAJWAL VIJAYKUMAR | |SWARA MAADURI#ಏಕಾಂಗಿಯಾಗಿಹೊರಡು|#EkangiyagiHoradu|#BayalaJogi|#GirishHandalagere|#Naada|#Baul #Aniketana|#shoonya|#ಏಕಾಂಗಿಯಾಗಿಹೊರಡು|#EkangiyagiHoradu|#BayalaJogi|#GirishHandalagere|#Naada|#Baul #Aniketana|#shoonya|Celebrities talk about Ahoratra natesha polepalli | Moorkhana maatugalu | Upendra | GuruprasadCelebrities talk about Ahoratra natesha polepalli | Moorkhana maatugalu | Upendra | Guruprasadಮೂರ್ಖನಮಾತುಗಳು ಪೂರ್ಣಕೇಳ್ಹೊತ್ತಗೆ | Murkhana mathugalu | Ft. Ramya Vasishtha| Ahoratraಮೂರ್ಖನಮಾತುಗಳು ಪೂರ್ಣಕೇಳ್ಹೊತ್ತಗೆ | Murkhana mathugalu | Ft. Ramya Vasishtha| Ahoratraಆನಂದಮಯ ಈ ಜಗಹೃದಯ || Anandamaya ee jagahrudayaಆನಂದಮಯ ಈ ಜಗಹೃದಯ || Anandamaya ee jagahrudayaAASEGALA BENNERI(ಆಸೆಗಳ ಬೆನ್ನೇರಿ) |MADHU KODANADU|RAGHAVENDRA BEEJADIAASEGALA BENNERI(ಆಸೆಗಳ ಬೆನ್ನೇರಿ) |MADHU KODANADU|RAGHAVENDRA BEEJADIMasanada Boodiyanu Nosaligittavannu |ಮಸಣದ ಬೂದಿಯನು ನೊಸಲಿಗಿಟ್ಟವನು | Swara Maaduri Kannada BhavageeteMasanada Boodiyanu Nosaligittavannu |ಮಸಣದ ಬೂದಿಯನು ನೊಸಲಿಗಿಟ್ಟವನು | Swara Maaduri Kannada BhavageeteBaduku Jataka Bandi Lyrical Video Song | D V Gundappa | Mysore Ananthaswamy |Kannada BhavageethegaluBaduku Jataka Bandi Lyrical Video Song | D V Gundappa | Mysore Ananthaswamy |Kannada Bhavageethegaluತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ - ಎಂ.ವೆಂಕಟೇಶ್ ಕುಮಾರ್.Toredu Jeevisabahudeತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ - ಎಂ.ವೆಂಕಟೇಶ್ ಕುಮಾರ್.Toredu Jeevisabahudeಜೀವನವೊಂದು ನಾಟಕ ರಂಗ|JEEVANAVONDU NATAKA RANGA|SUJIT BARVE|RAGHAVRNDRA BERJADI|MOTIVATIONಜೀವನವೊಂದು ನಾಟಕ ರಂಗ|JEEVANAVONDU NATAKA RANGA|SUJIT BARVE|RAGHAVRNDRA BERJADI|MOTIVATIONವೀಡಿಯೋ ಕಾಲ್ ಮೆಸೇಜ್ವೀಡಿಯೋ ಕಾಲ್ ಮೆಸೇಜ್
Яндекс.Метрика