Загрузка...

#ಹಾಲುಮಾರಲುಪೋದೇವಮ್ಮ#ದಾಸರಪದಗಳು #Halumaralupodevamma#ಹರಪನಹಳ್ಳಿಭೀಮವ್ವ #ಭೀಮೇಶಕೃಷ್ಣ #ದಾಸಸಾಹಿತ್ಯ#ಕೃಷ್ಣಲೇಲೆ

#ದಾಸರಪದಗಳು #song #bhajan #music #devotionalsong #devotional #dasasahitya #dasarapada #ಹಾಲುಮಾರಲುಪೋದೇವಮ್ಮ#ದಾಸರಪದಗಳು #Halumaralupodevamma#ಹರಪನಹಳ್ಳಿಭೀಮವ್ವ #ಭೀಮೇಶಕೃಷ್ಣ #ದಾಸಸಾಹಿತ್ಯ#ಕೃಷ್ಣಲೇಲೆ #ಕೃಷ್ಣ #shrikrishnabhajan #krishnatatva #isckon #ಹಾಲು #ಕೃಷ್ಣನಚೇಷ್ಟೆ #kannadabhajane #kannadadevotionalsongs #kannadabhajanegalu #ಕನ್ನಡಭಜನೆ #ಕನ್ನಡಭಜನೆಗಳು #dasarapada
#dasarapadagalu #dasarapada

for more easy bhajans, rare songs, Dasara pada please do like share and Subscribe my you tube channel.

@veenakrishnappa6010

ಹಾಡು... ಹಾಲು ಮಾರಲು ಹೋದೆವಮ್ಮ
ರಚನೆ ಹರಿದಾಸಿನಿ ಹರಪನಹಳ್ಳಿ ಭೀಮವ್ವನವರು.
ಅಂಕಿತ ಭೀಮೇಶ ಕೃಷ್ಣ. 🙏
ಗಾಯಕರು ವೀಣಾ ಕೃಷ್ಣಪ್ಪ

ಹಾಲು ಮಾರಲು ಪೋದೇವಮ್ಮ
ಗೋಕುಲದೊಳಗ್ಹಾಲು ಮಾರಲು ಪೋದೆವಮ್ಮ||2||

ಹಾಲು ಮಾರುವ ಧ್ವನಿ ಆಲಿಸಿ ಕೇಳುತ
ಬಾಲಕೃಷ್ಣ ಬಹು ಲೀಲೆ ಮಾಡುತ ಬಂದ
||ಹಾಲು||

ಹಸಿರು ಜರದ ಸೀರೆಯನುಟ್ಟು ಕುಸುರಿ ಕಂಕಣ
ಎಸೆವೊ ಹವಳದ ಹಿಂಬಳೆ ಕಟ್ಟು ಮೊಸರಿನ ಕುಂಭ
ಕುಸುಮ ಮಲ್ಲಿಗೆಯ ಮುಡಿಯಲ್ಲಿಟ್ಟು |
ಶಶಿವದನೆಯರೆಲ್ಲ ಚೆಂದದಿ ಬರುತಿರೆ
ಕುಸುಮನಾಭ ಮುಸುಗೆಳೆದು ಮೊಸರು ಸುರಿದ
||ಹಾಲು||

ಬಣ್ಣ ಬಣ್ಣದ ಸೀರೆಯನುಟ್ಟು ಮುತ್ತಿನ ಬಟ್ಟು
ಹೊಳೆವೊ ಕಸ್ತೂರಿ ತಿಲಕವನಿಟ್ಟು ಹಾಲಿನ ಕುಂಭ
ಸಣ್ಣ ಮಲ್ಲಿಗೆ ಮುಡಿಯಲಿಟ್ಟು |
ಚೆನ್ನಾರ ಚೆಲುವೇರು ಚೆಂದದಿ ಬರುತಿರೆ
ಕಣ್ಣು ಸನ್ನೆ ಮಾಡಿ ಕರೆದು ಮುದ್ದಿಡುವ ||ಹಾಲು||

ಮುಂದೆ ಮುಂದಾಗಿ ಹೋಗುತಲಿರಲು ಹಿಂದ್ಹಾಲಿನ್ಹರವಿ
ಒಂದೊಂದ್ಹರಳು ಮೀಟುತಿರಲು ಧಾರೆಗೆ ಬಾಯಾ
ಆನಂದದಿಂದೊಡ್ಡಿ ಕುಡಿಯುತಿರಲು |
ಸಂದಣಿಯೊಳು ನಾವು ಒಂದರಿಯದಲೆ
ಬಂದಿಳುಹಲು ಬರೀ ಗಡಿಗೆ ಕಾಣಮ್ಮ ||ಹಾಲು||

ಕಡಗೋಲಿಂದೊಡೆದು ಗಡಿಗೆಯನು ಬಡವರ ಬೆಣ್ಣೆ
ಒಡಲಿಗೆ ಕದ್ದು ತಿಂಬುವುದೇನು ಕಂಡರೆನಗಂಡ
ಬಡಿದರಿನ್ನೇನು ಮಾಡುವೆ ನೀನು |
ಗಡಿಬಿಡಿ ಮಾಡುತ ಕತ್ತಲ ಮನೆಯೊಳು
ತುಡುಗನಂತೆ ತಿರುಗಾಡುವ ತಾನು||ಹಾಲು||

ಸಿಟ್ಟು ಮಾಡುವುದ್ಯಾತಕಮ್ಮ ಶ್ರೀ ರಮಣನ
ಬಿಟ್ಟು ಬಾಹುವುದೆ ಲೇಸಮ್ಮ ಭೀಮೇಶಕೃಷ್ಣನ
ಕಟ್ಟಿ ಹಾಕುವುದೆ ಲೇಸಮ್ಮ |
ಪಟ್ಟುಮಾಡಿ ಪರಹೆಂಗಳೇರೊಳು
ಕಣ್ಣಿಟ್ಟ ಮ್ಯಾಲೆ ಒಂದಿಷ್ಟಾದರು ಬಿಡ ||ಹಾಲು||

Lyrics in English

Haalu maralu podevamma gokuladolagahgalu maralu podevamma||

Haalu maaruva dhwani aalisi keluta |balakrishna bahu leele maaduta banda ||haalu||

Hasiru jarada seereyanuttu kusuri kankana | asevo havalada himbale kattu mosarina kumbha kusuma malligeya mudiyalittu shashivadaneyarella chendadi barutire kusumanaabha musugeledu mosaru surida ||haalu||

Banna bannada seereyanuttu muttina battu | holeva kasturi tilakavanittu haalinakumbha | sanna mallige mudiyalittu chennaara cheluveru chendadi barutire | kannu sanne maadi karedu muddiduva ||haalu||

Видео #ಹಾಲುಮಾರಲುಪೋದೇವಮ್ಮ#ದಾಸರಪದಗಳು #Halumaralupodevamma#ಹರಪನಹಳ್ಳಿಭೀಮವ್ವ #ಭೀಮೇಶಕೃಷ್ಣ #ದಾಸಸಾಹಿತ್ಯ#ಕೃಷ್ಣಲೇಲೆ канала Veena Krishnappa
Яндекс.Метрика
Все заметки Новая заметка Страницу в заметки
Страницу в закладки Мои закладки
На информационно-развлекательном портале SALDA.WS применяются cookie-файлы. Нажимая кнопку Принять, вы подтверждаете свое согласие на их использование.
О CookiesНапомнить позжеПринять