Загрузка страницы

Bangalore History

ಕ್ರಿಸ್ತ ಶಕ 1537 ರ ತನಕ ಬೆಂಗಳೂರು ದಕ್ಷಿಣ ಭಾರತದ ಸಂಸ್ಥಾನಗಳಾದ ಗಂಗ, ಚೋಳ ಮತ್ತು ಹೊಯ್ಸಳರ ಆಳ್ವಿಕೆಗೆ ಒಳಪಟ್ಟಿದೆ. ನಂತರ ವಿಜಯನಗರ ಸಾಮ್ರಾಜ್ಯದ ನಾಡ ಪ್ರಭು ಕೆಂಪೇಗೌಡರು ಬೆಂಗಳೂರಿನಲ್ಲಿ ಮಣ್ಣಿನ ಕೋಟೆ ಕಟ್ಟಿ ಆಧುನಿಕ ಬೆಂಗಳೂರಿನ ಉದಯಕ್ಕೆ ಕಾರಣಕರ್ತರಾದರು. ಮರಾಠರು ಮತ್ತು ಮುಘಲರ ಅಲ್ಪಾವಧಿ ಆಡಳಿತಕ್ಕೆ ಒಳಪಟ್ಟಿದ್ದ ಬೆಂಗಳೂರು, ಮೈಸೂರು ರಾಜರ ಆಧಿಪತ್ಯದಲ್ಲೇ ಉಳಿದಿತ್ತು.ನಂತರ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನರ ಆಡಳಿತಕ್ಕೆ ಒಳಪಟ್ಟ ಬೆಂಗಳೂರು, ನಾಲ್ಕನೇ ಆಂಗ್ಲೋ ಮೈಸೂರು ಯುದ್ಧ (1799) ದಲ್ಲಿ ಬ್ರಿಟೀಷರ ಪಾಲಾಯಿತು. ತದನಂತರ ಬ್ರಿಟೀಷರು ಮೈಸೂರು ಸಂಸ್ಥಾನವನ್ನು ತಮ್ಮ ಆಡಳಿತದ ಒಂದು ರಾಜ್ಯವನ್ನಾಗಿಸಿ, ಬೆಂಗಳೂರನ್ನು ಅದರ ರಾಜಧಾನಿಯಾಗಿ ಘೋಷಿಸಿ, ಮೈಸೂರು ಒಡೆಯರ ಆಡಳಿತಕ್ಕೊಪ್ಪಿಸಿದರು.ಬೆಂಗಳೂರು 1537 ರಲ್ಲಿ ಕೆಂಪೇಗೌಡರ (1510 - 1570) ರಾಜಧಾನಿಯಾಗಿತ್ತು.ಈ ನಗರವನ್ನು ಕೆಂಪೇಗೌಡರು ನಿರ್ಮಿಸಿದರು. ಕೆಂಪೇಗೌಡ ಈ ನಗರವನ್ನು "ಗಂಡು ಭೂಮಿ" ಮತ್ತು "ನಾಯಕರ ರಾಜ್ಯ" ಎಂದು ಹೇಳುತಿದ್ದರು. 18/19 ಶತಮಾನದಲ್ಲಿ ಬೆಂಗಳೂರು ಒಂದು ನಗರವಾಗಿ ಬೆಳೆಯಿತು. ಆಗ ಪ್ರಮುಖವಾಗಿ ನಗರದಲ್ಲಿ ಎರಡು ಮುಖ್ಯ ರಸ್ತೆಗಳಿದ್ದವು. ಅವು "ಚಿಕ್ಕಪೇಟೆ" ಮತ್ತು "ದೊಡ್ಡಪೇಟೆ" ರಸ್ತೆಗಳು. ಸ್ವಾತಂತ್ರ್ಯಾನಂತರ ಬೆಂಗಳೂರು ಬಹು ದೊಡ್ಡ ಕೈಗಾರಿಕಾ ಉತ್ಪಾದನಾ ಕ್ಷೇತ್ರಗಳಿಗೆ ಮನೆಯಾಯಿತು. ಶಾಂತಿ ಸಮೃದ್ಧಿಯೂ, ಪರಿಸರ ಸಮೃದ್ಧಿಯೂ ಜನರನ್ನು ಈ ಊರಿನೆಡೆಗೆ ಆಕರ್ಷಿಸಿತು. ಹೆಚ್ ಎ ಎಲ್, ಬಿ ಇ ಎಲ್, ಐ ಟಿ ಐ, ಇಸ್ರೋ ನಂತಹ ಬಹು ದೊಡ್ಡ ಉತ್ಪಾದನಾ ಘಟಕಗಳಿಗೆ ಮನೆಯಾಯಿತು.
Until 1537 AD, Bangalore was under the rule of the Ganga, Chola and Hoysala kingdoms of South India. Later Nada Prabhu Kempegowda of Vijayanagar Empire built a mud fort in Bangalore and became the cause of the rise of modern Bangalore. Bengaluru, which was briefly ruled by the Marathas and Mughals, remained under the rule of the Mysore kings.Bengaluru, then ruled by Hyder Ali and Tipu Sultan, fell to the British in the Fourth Anglo-Mysore War (1799). Then the British made the Mysore state a part of their administration, declared Bangalore as its capital, and placed it under the rule of the Mysore lords.Bangalore was the capital of the Kempegowdas (1510 - 1570) in 1537. The city was built by the Kempegowdas. Kempegowda referred to the city as the "Land of Men" and the "Kingdom of Leaders".Bangalore grew into a city in the eighteenth/nineteenth century. There were two main roads in the city then. They are "Chikkapet" and "Doddpet" roads. After independence, Bangalore became home to many large industrial manufacturing sectors.The peace and prosperity of the environment attracted people to this town. It became home to many big manufacturing units like HAL, BEL, ITI, ISRO.

Видео Bangalore History канала Mysoorina kathegalu
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
20 сентября 2018 г. 23:47:41
00:05:43
Яндекс.Метрика