Загрузка страницы

ದೇವಿ ಹಾಡು|| PARVATI DEVI SONG||

ಈ ಹಾಡನ್ನು ರಚಿಸಿದವರು, ಶ್ರೀಮತಿ ದಾಕ್ಷಾಯಿಣಿ ಹೆಗಡೆ ಸೋಮನಮನೆ.

ಸಾಹಿತ್ಯ||

ಪಾಲಿಸೆ ಭುವನೇಶ್ವರಿ,ನಮಿಸುವೆ ದೇವಿ,ಪಾಲಿಸೆ ಜಗದೀಶ್ವರಿ.ಪಾವನಾತ್ಮಕಿ ಪಾಪರಹಿತಳೆ,ಪಾದಕೇ ನಾ ನಮಿಪೆ ದೇವಿಯೆ,ಪಾವನತೆಯನು ನೀಡಿ ರಕ್ಷಿಸು,ಪಾವನಾಂಗಿಯೆ ಪಾರ್ವತಿಯೆ ನೀ||
ಶಂಭು ಶಂಕರನ ರಾಣೀ,ಶಾಂಭವಿ ನೀನೆ, ನಂಬಿರುವೆನು ಜನನೀ, ವಂದಿಸುವೆನು ಸಿಂಹವಾಹಿನಿ,ಕುಂಭಿನೀಸ್ಥಿತಿ ಲಯಕೆ ಕಾರಿಣಿ, ಬೆಂಬಿಡದೆ ಶರಣರನು ಸಲಹುವ, ತ್ರ್ಯಂಬಕನ ಸತಿ ನಿನಗೆ ವಂದಿಪೆ||
ಮಾಯೆ ಮೂಲೋಕ ವಂದ್ಯೆ,ಈ ಜಗವನ್ನು ಮಾಯೆಯೋಳ್ ಬಂಧಿಸಿದೆ, ಮಾಯೆಯೇ ಜನರೆಲ್ಲ ನಿನ್ನಯ, ಮಾಯಾಜಾಲದಿ ತೊಳಲುತಿರುವರು, ಮಾಯೆ ಸರ್ವ ಶರೀರಗಳು.. ನಿನ್ನಾಟದಾ ಗೊಂಬೆಗಳು ಜನನೀ||
ಮಾತೆ ಗರ್ಭದೊಳು ನಾನು,ಯಾತನೆ ತಾಳಿ,ಭೂತಳದೊಳು ಜನಿಸಿ, ಹೇಸಿಕೆಯ ಈ ದೇಹದಿರವನು , ನಂಬಿ ಭ್ರಮಿಸಿ ತೊಳಲುತಿರುವೆನು, ನಾನು ನೀನೆಂದೆಂಬಹಂಕ್ರತಿ ಹೀನಗುಣದೊಳು ಬೆಳೆದೆ ಜನನೀ||
ಸಾಕು ಈ ಭವದೊಳಗೆ, ತೊಳಲಿದೆ ನಾನು.. ಸೋತೆ ಪ್ರಪಂಚದೊಳು,ಮಾತೆ ನಿನ್ನನು ಸ್ಮರಿಸಲಾರದೆ,ಮೂಕನಂದದಿ ದಿನವ ಕಳೆದೆ, ಪಾತಕಿಯ ಅಪರಾಧಗಳನೀ, ಕ್ಷಮಿಸಿ ಕರುಣಿಸೆ ಜ್ನಾನಪುಷ್ಪವ||

Видео ದೇವಿ ಹಾಡು|| PARVATI DEVI SONG|| канала Rajeshwari Hegde Keremane
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
10 марта 2023 г. 7:45:10
00:04:48
Яндекс.Метрика