Загрузка страницы

ಈಶನಿನ್ನ ಚರಣ ಭಜನೆ | ಕನಕದಾಸರು | eesha ninna charana bhajane | Padmaja Vasudevachar | Kum. Dhanyaa

ಈಶ ನಿನ್ನ ಚರಣ ಭಜನೆ | ಆಶೆಯಿಂದ ಮಾಡುವೆನು
ದೋಶರಾಶಿ ನಾಶಮಾಡು ಶ್ರೀಶ ಕೇಶವ || ಪ ||

ಶರಣು ಹೊಕ್ಕೆನಯ್ಯ ಎನ್ನ | ಮರಣ ಸಮಯದಲ್ಲಿ ನಿನ್ನ |
ಚರಣ ಸ್ಮರಣೆ ಕರುಣಿಸಯ್ಯ ನಾರಾಯಣ ||
ಶೋಧಿಸೆನ್ನ ಭವದ ಕಲುಶ | ಭೋಧಿಸಯ್ಯ ಜ್ಞಾನವೆನಗೆ|
ಬಾಧಿಸುವ ಯಮನ ಬಾಧೆ | ಬಿಡಿಸು ಮಾಧವ || 1 ||

ಹಿಂದನೇಕ ಯೋನಿಗಳಲಿ | ಬಂದು ಬಂದು ನೊಂದೆನಯ್ಯ ||
ಇಂದು ಭವದ ಬಂಧ ಬಿಡಿಸೋ ತಂದೆ ಗೋವಿಂದ ||
ಭ್ರಷ್ಟನೆನಿಸಬೇಡ ಕೃಷ್ಣ | ಇಷ್ಟು ಮಾತ್ರ ಬೇಡಿಕೊಂಬೆ |
ಶಿಷ್ಟರೊಡನೆ ಇಟ್ಟು ಕಷ್ಟ | ಬಿಡಿಸು ವಿಷ್ಣುವೇ || 2 ||

ಮದನನಯ್ಯ ನಿನ್ನ ಮಹಿಮೆ | ವದನದಲ್ಲಿ ನುಡಿಯುವಂತೆ ||
ಹೃದಯದಲ್ಲಿ ಹುದುಗಿಸಯ್ಯ ಮಧುಸೂದನ ||
ಕವಿದುಕೊಂಡು ಇರುವ ಪಾಪ | ಸವೆದು ಪೋಗುವಂತೆ ಮಾಡಿ |
ಜವನ ಬಾಧೆಯನ್ನು ಬಿಡಿಸೋ | ಶ್ರೀತ್ರಿವಿಕ್ರಮ || 3 ||

ಕಾಮಜನಕ ನಿನ್ನ ನಾಮ | ಪ್ರೇಮದಿಂದ ಪಾಡುವಂಥ |
ನೇಮವೆನಗೆ ಪಾಲಿಸಯ್ಯ ಸ್ವಾಮಿ ವಾಮನ ||
ಮೊದಲು ನಿನ್ನ ಪಾದಪೂಜೆ | ಒದಗುವಂತೆ ಮಾಡೋ ಎನ್ನ |
ಹೃದಯದೊಳಗೆ ಸದನ ಮಾಡು ಮುದದಿ ಶ್ರೀಧರ || 4 ||

ಹುಸಿಯನಾಡಿ ಹೊಟ್ಟೆ ಹೊರೆವ | ವಿಷಯದಲ್ಲಿ ರಸಿಕನೆಂದು ||
ಹುಸಿಗೆ ಹಾಕದಿರೋ ಎನ್ನ ಹೃಷೀಕೇಶನೇ || ಬಿದ್ದು ಭವದನೇಕ ಜನುಮ | ಬದ್ದನಾಗಿ ಕಲುಷದಿಂದ ||
ಗೆದ್ದು ಪೋಪ ಬುಧ್ಧಿ ತೋರೊ ಪದ್ಮನಾಭನೆ || 5 ||

ಕಾಮಕ್ರೋಧ ಬಿಡಿಸಿ ನಿನ್ನ | ನಾಮ ಜಿಹ್ವೆಯೊಳಗೆ ನುಡಿಸು |
ಶ್ರೀಮಹಾನುಭಾವನಾದ ದಾಮೋದರ ||
ಪಂಕಜಾಕ್ಷ ನೀನೆ ಎನ್ನ | ಮಂಕುಬುದ್ಧಿಯನ್ನು ಬಿಡಿಸಿ |
ಕಿಂಕರನ್ನ ಮಾಡಿಕೊಳ್ಳೋ ಸಂಕರ್ಷಣ || 6 ||

ಏಸು ಜನ್ಮ ಬಂದರೇನು | ದಾಸನಲ್ಲವೇನು ನಾನು ||
ಘಾಸಿ ಮಾಡದಿರು ಇನ್ನು ವಾಸುದೇವನೇ ||
ಬುದ್ಧಿ ಶೂನ್ಯನಾಗಿ ಎನ್ನ | ಬದ್ಧಕಾಯ ಕುಹಕ ಮನವ ||
ತಿದ್ದಿ ಹೃದಯ ಶುದ್ಧ ಮಾಡೋ ಪ್ರದ್ಯುಮ್ನನೇ || 6 ||

ಜನನಿ ಜನಕ ನೀನೆಯೆಂದು | ನೆನೆವೆನಯ್ಯ ದೀನಬಂಧು ||
ಎನಗೆ ಮುಕ್ತಿ ಪಾಲಿಸಿನ್ನು ಅನಿರುದ್ಧನೇ ||
ಹರುಶದಿಂದ ನಿನ್ನ ನಾಮ | ಸ್ಮರಿಸುವಂತೆ ಮಾಡು ಕ್ಷೇಮ ||
ಇರಿಸು ಚರಣದಲ್ಲಿ ಪ್ರೇಮ ಪುರುಷೋತ್ತಮ || 7 ||

ಸಾಧುಸಂಗ ಕೊಟ್ಟು ನಿನ್ನ | ಪಾದಭಜನೆ ಇತ್ತು ಎನ್ನ ||
ಭೇದಮಾಡಿ ನೋಡದಿರೊ ಹೇ ಅಧೋಕ್ಷಜ ||
ಚಾರುಚರಣ ತೋರಿ ಎನಗೆ | ಪಾರುಗಾಣಿಸಯ್ಯ ಕೊನೆಗೆ ||
ಭಾರ ಹಾಕಿರುವೆ ನಿನಗೆ ನಾರಸಿಂಹನೇ ||8 ||

ಸಂಚಿತಾದಿ ಪಾಪಗಳು | ಕಿಂಚಿತಾದಿ ಪೀಡೆಗಳನು ||
ಮುಂಚಿತಾಗಿ ಕಳೆಯಬೇಕೋ ಸ್ವಾಮಿ ಅಚ್ಯುತ ||
ಜ್ಞಾನ ಭಕುತಿ ಕೊಟ್ಟು ನಿನ್ನ | ಧ್ಯಾನದಲ್ಲಿ ಇಟ್ಟು ಸದಾ ||
ಹೀನ ಬುದ್ಧಿ ಬಿಡಿಸೊ ಮುನ್ನ ಶ್ರೀ ಜನಾರ್ದನ ನ || || 9 ||

ಜಪತಪಾನುಷ್ಠಾನವಿಲ್ಲ | ಕುಪಿತಗಾಮಿಯಾದ ಎನ್ನ ||
ಕೃಪೆಯ ಮಾಡಿ ಕ್ಷಮಿಸಬೇಕು ಹೇ ಉಪೇಂದ್ರನೇ ||
ಮೊರೆಯ ಇಡುವೆನಯ್ಯ ನಿನಗೆ | ಶರಧಿಶಯನ ಶುಭಮತಿಯ|
ಇರಿಸೋ ಭಕ್ತರೊಳಗೆ ಪರಮಪುರುಷ ಶ್ರೀಹರೇ || 10 ||

ಪುಟ್ಟಿಸಲೇಬೇಡ ಇನ್ನು | ಪುಟ್ಟಿಸಿದಕೆ ಪಾಲಿಸಿನ್ನು||
ಇಷ್ಟು ಮಾತ್ರ ಬೇಡಿಕೊಂಬೆ ಶ್ರೀ ಕೃಷ್ಣನೇ ||
ಸತ್ಯವಾದ ನಾಮಗಳನು | ನಿತ್ಯದಲ್ಲಿ ಪಠಿಸುವರಿಗೆ |
ಅರ್ಥಿಯಿಂದ ಸಲಹುತಿರುವ ಕರ್ತೃ ಕೇಶವ || 11 ||

ಮರೆಯದಲೆ ಹರಿಯ ನಾಮ | ಬರೆದು ಓದಿ ಪೇಳ್ದವರಿಗೆ ||
ಕರೆದು ಮುಕ್ತಿ ಕೊಡುವ ನೆಲೆಯಾದಿಕೇಶವ || 12 ||
*******
https://youtu.be/aWyvG30oq-g
Link for naraka chaturdashi enne shastra haadu

https://youtu.be/oUdgRKVY5SE
Naraka chaturdashi Aarti haadu

Видео ಈಶನಿನ್ನ ಚರಣ ಭಜನೆ | ಕನಕದಾಸರು | eesha ninna charana bhajane | Padmaja Vasudevachar | Kum. Dhanyaa канала putti paddu
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
10 ноября 2020 г. 21:07:12
00:05:57
Другие видео канала
ಹನುಮ, ಭೀಮ, ಮಧ್ವ ಸುವ್ವಾಲಿ | Hanuma, bheema, madhva suvvali | Padmaja Vasudevacharಹನುಮ, ಭೀಮ, ಮಧ್ವ ಸುವ್ವಾಲಿ | Hanuma, bheema, madhva suvvali | Padmaja VasudevacharJai Jai Raama Hare Jai Jai Krishna Hare | Dasara Pada | Devotional Songs | Ramanavami SongsJai Jai Raama Hare Jai Jai Krishna Hare | Dasara Pada | Devotional Songs | Ramanavami SongsGajendra moksha | sri vadirajaru | Padmaja VasudevacharGajendra moksha | sri vadirajaru | Padmaja Vasudevacharಗುರುವಾರದಂದು ತಪ್ಪದೇ ಕೇಳಬೇಕಾದ ಶ್ರೀ ಮಹಾಲಕ್ಷಿ ಸುಪ್ರಭಾತ| Mahalakmidevi supprabhatha| A2 Bhakti Sagaraಗುರುವಾರದಂದು ತಪ್ಪದೇ ಕೇಳಬೇಕಾದ ಶ್ರೀ ಮಹಾಲಕ್ಷಿ ಸುಪ್ರಭಾತ| Mahalakmidevi supprabhatha| A2 Bhakti Sagaraಶ್ರೀ ಕೇಶವ ನಾಮ | Sri keshava naama | ಪುರಂದರ ದಾಸರು | puranda daasaru | Padmaja Vasudevachar |ಶ್ರೀ ಕೇಶವ ನಾಮ | Sri keshava naama | ಪುರಂದರ ದಾಸರು | puranda daasaru | Padmaja Vasudevachar |Smarisi bathukiro Vijaya kavachaSmarisi bathukiro Vijaya kavachaಕಾಶಿಯ ಹಾದಿಯಲ್ಲಿ|ಕೇಶವನಾಮ|ವಿಜಯದಾಸರು|kashiya hadiyalli|keshava nama vijayadasaru|Padmaja Vasudevacharಕಾಶಿಯ ಹಾದಿಯಲ್ಲಿ|ಕೇಶವನಾಮ|ವಿಜಯದಾಸರು|kashiya hadiyalli|keshava nama vijayadasaru|Padmaja Vasudevacharಎಷ್ಟು ಸಾಹಸವಂತ | Eshtu Sahasavantha | Dr.Vidyabhushana | Shri Vadiraajaru | Thirumale Srinivasಎಷ್ಟು ಸಾಹಸವಂತ | Eshtu Sahasavantha | Dr.Vidyabhushana | Shri Vadiraajaru | Thirumale Srinivasಸಂಕ್ಷೇಪ ರಾಮಾಯಣ |Sankshepa ramayana| kum. Dhanyaa.ಸಂಕ್ಷೇಪ ರಾಮಾಯಣ |Sankshepa ramayana| kum. Dhanyaa.Narasimha Nembo DevanaNarasimha Nembo Devanaನಿನ್ನನೇ ನಂಬಿದೆನೋ | ninnane nambideno | Padmaja Vasudevachar | kum. Dhanyaaನಿನ್ನನೇ ನಂಬಿದೆನೋ | ninnane nambideno | Padmaja Vasudevachar | kum. DhanyaaParvati Kalyana | With Lyrics | Sri Tande Purandara DasaruParvati Kalyana | With Lyrics | Sri Tande Purandara Dasaruಜೈ ಜೈ ರಾಮ ಹರೇ | jai Jai Rama Hare | Padmaja Vasudevachar | kum. Dhanyaa.ಜೈ ಜೈ ರಾಮ ಹರೇ | jai Jai Rama Hare | Padmaja Vasudevachar | kum. Dhanyaa.EESHA NINNA CHARANA I JAGADISH PUTTUR I ಈಶ ನಿನ್ನ ಚರಣ I KANAKADAASARU I LORD KRISHNA DEVOTIONAL SONGEESHA NINNA CHARANA I JAGADISH PUTTUR I ಈಶ ನಿನ್ನ ಚರಣ I KANAKADAASARU I LORD KRISHNA DEVOTIONAL SONGMadhwanama song - Puttur Narasimha NayakMadhwanama song - Puttur Narasimha Nayakಗುರುವಾರದಂದುತಪ್ಪದೇ ಕೇಳಬೇಕಾದ  ಮಹಾಲಕ್ಷ್ಮಿ ದೇವಿ ಸುಪ್ರಭಾತ |Mahalakmidevi bhakthigeethegalu|AA Digitalಗುರುವಾರದಂದುತಪ್ಪದೇ ಕೇಳಬೇಕಾದ ಮಹಾಲಕ್ಷ್ಮಿ ದೇವಿ ಸುಪ್ರಭಾತ |Mahalakmidevi bhakthigeethegalu|AA DigitalKeshava Nama (Eesha ninna charana) | ಕೇಶವ ನಾಮ (ಈಶ ನಿನ್ನ ಚರಣ ಭಜನೆ)Keshava Nama (Eesha ninna charana) | ಕೇಶವ ನಾಮ (ಈಶ ನಿನ್ನ ಚರಣ ಭಜನೆ)Eesha Ninna Charanabhajane | Dr. Vidyabhushana | Dasara Padagalu | Devotional Song | UdayaraagaEesha Ninna Charanabhajane | Dr. Vidyabhushana | Dasara Padagalu | Devotional Song | UdayaraagaEesha Ninna Charana Bhajane | Keshava Nama | Sri Kanaka DasaruEesha Ninna Charana Bhajane | Keshava Nama | Sri Kanaka Dasaru
Яндекс.Метрика