Загрузка страницы

ಕರ್ನಾಟಕ ರಾಜ್ಯೋತ್ಸವದ ಹಾಡು ||Karnataka Rajyotsava Song||ನೀರಗಾನು ಕುಟುಂಬ ದುಬೈ||Neergan Family||

ಜನಿಸಿ ಧನ್ಯರು

ಗಂಧದ ಗುಡಿ ತವರಿನಲ್ಲಿ
ಚಂದದ ಸಿರಿ ಮಡಿಲಿನಲ್ಲಿ
ಕರುನಾಡಿನ ಒಡಲೊಳಗೆ
ಸಿರಿನುಡಿಯಾ ಬೆಳಕಿನಲ್ಲಿ
ಶಿಲ್ಪಕಲೆಯ ತೌರಿನಲ್ಲಿ
ವನಬನಗಳ ಬೀಡಿನಲ್ಲಿ
ಜನಿಸಿ ಧನ್ಯರು
ನಾವು ಕನ್ನಡಿಗರು

ಕಬ್ಬಿಗರಾ ನಂದನವೆ
ಶಿಲ್ಪಿಗಳಾ ಚೆಲುಬೀಡೆ
ಲೋಹದದಿರ ಕಣಜವೆ
ನದಿಬನಗಳ ಸಗ್ಗವೆ
ಮಲೆನಾಡಿನ ಸಿರಿಹಸಿರಿನ
ಮನಸೆಳೆಯುವ ತಾಯ್ನೆಲವೆ
ಜನಿಸಿ ಧನ್ಯರು
ನಾವ್ ಕನ್ನಡಿಗರು

ಕನ್ನಡದ ಮಣ್ಣಿನಲ್ಲಿ
ಬಾಂಧವ್ಯದ ಉಸಿರಿಹುದು
ಕರ್ನಾಟಕ ಹೆಸರಿನಲ್ಲಿ
ನಮ್ಮೆಲ್ಲರ ಗರಿಮೆಯಿಹುದು
ಮೈಮನಗಳ ಕಣಕಣದಿ
ಕನ್ನಡವೇ ತುಂಬಿಹುದು
ಜನಿಸಿ ಧನ್ಯರು
ನಾವ್ ಕನ್ನಡಿಗರು

ಕೋಟಿ ಕೋಟಿ ಹೃದಯದಲ್ಲು
ಸಂಸ್ಕೃತಿಯ ಸೊಬಗಿಹುದು
ಮೇರೆ ಮೀರಿ ಎದೆಯ ಭಾವ
ಕೊಂಡಿಯಲ್ಲಿ ಬೆಸೆದಿಹುದು
ಸೌಹಾರ್ದದ ಸೆಳಕಿಹುದು
ಐಕ್ಯತೆಯ ಬೆಳಕಿಹುದು
ಜನಿಸಿ ಧನ್ಯರು
ನಾವ್ ಕನ್ನಡಿಗರು

ಶಾಸನಗಳು ದೇಗುಲಗಳು
ಸಹ್ಯಾದ್ರಿಯ ಶಿಖರಗಳು
ಬಯಲುಸೀಮೆ ಕರಾವಳಿಯು
ಝಲ್ಲೆನ್ನಿಪ ಕಣಿವೆಗಳು
ಭೋರ್ಗರೆವ ತೊರೆಗಳು
ಮನಸೆಳೆಯುವ ತಟಗಳು
ಜನಿಸಿ ಧನ್ಯರು
ನಾವ್ ಕನ್ನಡಿಗರು

ದಾಸರ ಸಾಹಿತ್ಯಗಳು
ವಚನ ರಗಳೆಗಳು
ಭಿತ್ತಿಯಲ್ಲಿ ಬರೆದಿಟ್ಟ
ಕಾವ್ಯ ಮಾಲಿಕೆಗಳು
ಜಾನಪದ ನೃತ್ಯ ಕಲೆ
ಆಗರವು ನಮ್ಮನೆಲೆ
ಜನಿಸಿ ಧನ್ಯರು
ನಾವು ಕನ್ನಡಿಗರು

ಯುಎಇ ನೆಲದಲ್ಲು
ಕನ್ನಡ ಶಾಲೆಗಳಿಹವು
ಕರುನಾಡ ಕುಡಿಗಳಲಿ
ಕನ್ನಡದಾ ಒಲವಿಹುದು
ಕನ್ನಡದ ದೀಪವನು
ಬೆಳಗಿಪ ಹಂಬಲವಿಹುದು
ಜನಿಸಿ ಧನ್ಯರು
ನಾವ್ ಕನ್ನಡಿಗರು

ಕನ್ನಡದ ಕಂಪನಿಲ್ಲಿ
ಪಸರಿಸುತ ಸಾಗೋಣ
ಕನ್ನಡದಾ ನುಡಿಯನಿಲ್ಲಿ
ಬೆಳೆಯಿಸುತಾ ನಡೆಯೋಣ
ಕನ್ನಡದ ವೈಭವಕೆ
ಮುಕುಟಪ್ರಾಯರಾಗೋಣ
ಜನಿಸಿ ಧನ್ಯರು
ನಾವ್ ಕನ್ನಡಿಗರು
ಜೈ ಕರ್ನಾಟಕ
ಜೈ ಕರ್ನಾಟಕ

ಯಶೋದಾ ಭಟ್ಟ ದುಬೈ

ರಚನೆ,ಪರಿಕಲ್ಪನೆ,ದೃಶ್ಯ ಸಂಯೋಜನೆ

ಯಶೋದಾ ಭಟ್ಟ ದುಬೈ
ಸಹಕಾರ: ನಿತ್ಯಾ

Видео ಕರ್ನಾಟಕ ರಾಜ್ಯೋತ್ಸವದ ಹಾಡು ||Karnataka Rajyotsava Song||ನೀರಗಾನು ಕುಟುಂಬ ದುಬೈ||Neergan Family|| канала Haadu Goodu
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
1 ноября 2022 г. 20:20:45
00:03:51
Другие видео канала
ಹವ್ಯಕ ಸಾಂಪ್ರದಾಯಿಕ ಉಪನಯನದ ಆರತಿ ಎತ್ತಿದ ಹಾಡು||Havyaka Upanayana Song||ಯಶೋದಾ ಭಟ್ಟ ದುಬೈ||Yashoda Bhat||ಹವ್ಯಕ ಸಾಂಪ್ರದಾಯಿಕ ಉಪನಯನದ ಆರತಿ ಎತ್ತಿದ ಹಾಡು||Havyaka Upanayana Song||ಯಶೋದಾ ಭಟ್ಟ ದುಬೈ||Yashoda Bhat||ಹವ್ಯಕ ಸಾಂಪ್ರದಾಯಿಕ ಶಿವರಾತ್ರಿ ಹಾಡು||Havyaka Song||ಯಶೋದಾ ಭಟ್ಟ ದುಬೈ||Yashoda Bhat||ಹವ್ಯಕ ಸಾಂಪ್ರದಾಯಿಕ ಶಿವರಾತ್ರಿ ಹಾಡು||Havyaka Song||ಯಶೋದಾ ಭಟ್ಟ ದುಬೈ||Yashoda Bhat||ಹವ್ಯಕ ಸಾಂಪ್ರದಾಯಿಕ ಹಾಡು ಗೌರಿ ಬಂದಿದ್ದು||Havyaka Song||ಯಶೋದಾ ಭಟ್ಟ ದುಬೈ||Yashoda Bhat||ಹವ್ಯಕ ಸಾಂಪ್ರದಾಯಿಕ ಹಾಡು ಗೌರಿ ಬಂದಿದ್ದು||Havyaka Song||ಯಶೋದಾ ಭಟ್ಟ ದುಬೈ||Yashoda Bhat||ಹವ್ಯಕ ಸಾಂಪ್ರದಾಯಿಕ ಗೋಪೂಜೆ ಹಾಡು||Hayavaka Gou pooja Song||ಯಶೋದಾ ಭಟ್ಟ ದುಬೈ||Yashoda Bhat||ಹವ್ಯಕ ಸಾಂಪ್ರದಾಯಿಕ ಗೋಪೂಜೆ ಹಾಡು||Hayavaka Gou pooja Song||ಯಶೋದಾ ಭಟ್ಟ ದುಬೈ||Yashoda Bhat||ಹವ್ಯಕ ಸಾಂಪ್ರದಾಯಿಕ ನವರಾತ್ರಿ ದೇವಿಗಾರತಿ ಎತ್ತಿದ ಹಾಡು|Havyaka Navratri Song|ಯಶೋದಾ ಭಟ್ಚ ದುಬೈ|Yashoda Bhat|ಹವ್ಯಕ ಸಾಂಪ್ರದಾಯಿಕ ನವರಾತ್ರಿ ದೇವಿಗಾರತಿ ಎತ್ತಿದ ಹಾಡು|Havyaka Navratri Song|ಯಶೋದಾ ಭಟ್ಚ ದುಬೈ|Yashoda Bhat|ಹವ್ಯಕ ಸಾಂಪ್ರದಾಯಿಕ ಹಾಡು ಗಂಗಾ ಉಗಮ||Havyaka Song||ಯಶೋದಾ ಭಟ್ಟ ದುಬೈ||Yashoda Bhat||ಹವ್ಯಕ ಸಾಂಪ್ರದಾಯಿಕ ಹಾಡು ಗಂಗಾ ಉಗಮ||Havyaka Song||ಯಶೋದಾ ಭಟ್ಟ ದುಬೈ||Yashoda Bhat||ಹವ್ಯಕ ಸಾಂಪ್ರದಾಯಿಕ ದೇವಿಯಲ್ಲಿ ಹೂ ಬೇಡಿದ ಹಾಡು||Havyaka Song||ಯಶೋದಾ ಭಟ್ಟ ದುಬೈ||Yashoda Bhat||ಹವ್ಯಕ ಸಾಂಪ್ರದಾಯಿಕ ದೇವಿಯಲ್ಲಿ ಹೂ ಬೇಡಿದ ಹಾಡು||Havyaka Song||ಯಶೋದಾ ಭಟ್ಟ ದುಬೈ||Yashoda Bhat||ಹವ್ಯಕ ಸಾಂಪ್ರದಾಯಿಕ ಮದು ಮಕ್ಕಳು ಗೃಹಕೆ ಬಂದ ಹಾಡು||Havyaka Marriage Song||ಯಶೋದಾ ಭಟ್ಚ ದುಬೈ||Yashoda Bhat||ಹವ್ಯಕ ಸಾಂಪ್ರದಾಯಿಕ ಮದು ಮಕ್ಕಳು ಗೃಹಕೆ ಬಂದ ಹಾಡು||Havyaka Marriage Song||ಯಶೋದಾ ಭಟ್ಚ ದುಬೈ||Yashoda Bhat||ಹವ್ಯಕ  ಸಾಂಪ್ರದಾಯಿಕ ಶಿವನಿಗೆ ಆರತಿ ಎತ್ತಿದ ಹಾಡು||Havyaka Shivratri Song||ಯಶೋದಾ ಭಟ್ಟ ದುಬೈ||Yashoda Bhat||ಹವ್ಯಕ ಸಾಂಪ್ರದಾಯಿಕ ಶಿವನಿಗೆ ಆರತಿ ಎತ್ತಿದ ಹಾಡು||Havyaka Shivratri Song||ಯಶೋದಾ ಭಟ್ಟ ದುಬೈ||Yashoda Bhat||ಹವ್ಯಕ ಸಾಂಪ್ರದಾಯಿಕ ಕೇರಿ ಕರೆದ ಹಾಡು||Havyaka Song||ಯಶೋದಾ ಭಟ್ಟ ದುಬೈ||Yashoda Bhat||ಹವ್ಯಕ ಸಾಂಪ್ರದಾಯಿಕ ಕೇರಿ ಕರೆದ ಹಾಡು||Havyaka Song||ಯಶೋದಾ ಭಟ್ಟ ದುಬೈ||Yashoda Bhat||ಹವ್ಯಕ ಸಾಂಪ್ರದಾಯಿಕ ಹಾಡು ಧಾರೆ ಎರೆದಿದ್ದು||Havyaka Song||ಯಶೋದಾ ಭಟ್ಟ ದುಬೈ||Yashoda Bhat||ಹವ್ಯಕ ಸಾಂಪ್ರದಾಯಿಕ ಹಾಡು ಧಾರೆ ಎರೆದಿದ್ದು||Havyaka Song||ಯಶೋದಾ ಭಟ್ಟ ದುಬೈ||Yashoda Bhat||ಹವ್ಯಕ ಸಾಂಪ್ರದಾಯಿಕ ಹೋಮ ಮಾಡಿದ ಹಾಡು||Havyaka Song||ಯಶೋದಾ ಭಟ್ಟ ದುಬೈ||Yashoda Bhat||ಹವ್ಯಕ ಸಾಂಪ್ರದಾಯಿಕ ಹೋಮ ಮಾಡಿದ ಹಾಡು||Havyaka Song||ಯಶೋದಾ ಭಟ್ಟ ದುಬೈ||Yashoda Bhat||ಹವ್ಯಕ ಹಳ್ಳಿ ಹಾಡು:ಬಲಿವೇಂದ್ರ ಬಂದಿದ್ದು || Havyaka Song Bali Bandiddu || ಯಶೋದಾ ಭಟ್ಟ ದುಬೈ || Yashoda Bhatಹವ್ಯಕ ಹಳ್ಳಿ ಹಾಡು:ಬಲಿವೇಂದ್ರ ಬಂದಿದ್ದು || Havyaka Song Bali Bandiddu || ಯಶೋದಾ ಭಟ್ಟ ದುಬೈ || Yashoda Bhatಹವ್ಯಕ ಸಾಂಪ್ರದಾಯಿಕ ಸತ್ಯನಾರಾಯಣ ವ್ರತದ ಪ್ರಸಾದ ಬೇಡುವ ಹಾಡು||Havyaka Song||ಯಶೋದಾ ಭಟ್ಟ ದುಬೈ||Yashoda Bhat||ಹವ್ಯಕ ಸಾಂಪ್ರದಾಯಿಕ ಸತ್ಯನಾರಾಯಣ ವ್ರತದ ಪ್ರಸಾದ ಬೇಡುವ ಹಾಡು||Havyaka Song||ಯಶೋದಾ ಭಟ್ಟ ದುಬೈ||Yashoda Bhat||ಹವ್ಯಕ ಸಾಂಪ್ರದಾಯಿಕ ದೀಪಾವಳಿಯ ಬಲಿ ಪೂಜೆ ಹಾಡು||Havyaka Bali pooja song||ಯಶೋದಾ ಭಟ್ಟ ದುಬೈ||Yashoda Bhat||ಹವ್ಯಕ ಸಾಂಪ್ರದಾಯಿಕ ದೀಪಾವಳಿಯ ಬಲಿ ಪೂಜೆ ಹಾಡು||Havyaka Bali pooja song||ಯಶೋದಾ ಭಟ್ಟ ದುಬೈ||Yashoda Bhat||ಹವ್ಯಕ ಹಳ್ಳಿ ಹಾಡು ಮದುಮಕ್ಕಳಿಗೆ ಆರತಿ||Havyaka Song||ಯಶೋದಾ ಭಟ್ಟ ದುಬೈ||Yashoda Bhat||ಹವ್ಯಕ ಹಳ್ಳಿ ಹಾಡು ಮದುಮಕ್ಕಳಿಗೆ ಆರತಿ||Havyaka Song||ಯಶೋದಾ ಭಟ್ಟ ದುಬೈ||Yashoda Bhat||ಶ್ರೀ ಸಾಂಬ ಸದಾಶಿವ ಅಕ್ಷರಮಾಲಾ  ಸ್ತೋತ್ರ||Sri  Shiva Aksharamala Stotram||ಯಶೋದಾ ಭಟ್ಟ ದುಬೈ||Yashoda Bhat||ಶ್ರೀ ಸಾಂಬ ಸದಾಶಿವ ಅಕ್ಷರಮಾಲಾ ಸ್ತೋತ್ರ||Sri Shiva Aksharamala Stotram||ಯಶೋದಾ ಭಟ್ಟ ದುಬೈ||Yashoda Bhat||ಹವ್ಯಕ ಸಾಂಪ್ರದಾಯಿಕ ಮದುವೆ ಹಾಡು ಕರಿಮಣಿ ಕಟ್ಟಿದ್ದು||Havyaka Marriage Song||ಯಶೋದಾ ಭಟ್ಟ ದುಬೈ||Yashoda Bhat|ಹವ್ಯಕ ಸಾಂಪ್ರದಾಯಿಕ ಮದುವೆ ಹಾಡು ಕರಿಮಣಿ ಕಟ್ಟಿದ್ದು||Havyaka Marriage Song||ಯಶೋದಾ ಭಟ್ಟ ದುಬೈ||Yashoda Bhat|ಹವ್ಯಕ ಸಾಂಪ್ರದಾಯಿಕ ಮದುವೆ ಹಾಡು ಸೌಭದ್ರಾ ಕಲ್ಯಾಣ ||Havyaka Marriage Song||ಯಶೋದಾ ಭಟ್ಟ ದುಬೈ||Yashoda Bhat||ಹವ್ಯಕ ಸಾಂಪ್ರದಾಯಿಕ ಮದುವೆ ಹಾಡು ಸೌಭದ್ರಾ ಕಲ್ಯಾಣ ||Havyaka Marriage Song||ಯಶೋದಾ ಭಟ್ಟ ದುಬೈ||Yashoda Bhat||ಹವ್ಯಕ ಸಾಂಪ್ರದಾಯಿಕ ನಿಶ್ಚಯಾಂಬರ ಕೊಟ್ಟ ಹಾಡು||Havyaka Song||ಯಶೋದಾ ಭಟ್ಟ ದುಬೈ||Yashoda Bhat||ಹವ್ಯಕ ಸಾಂಪ್ರದಾಯಿಕ ನಿಶ್ಚಯಾಂಬರ ಕೊಟ್ಟ ಹಾಡು||Havyaka Song||ಯಶೋದಾ ಭಟ್ಟ ದುಬೈ||Yashoda Bhat||
Яндекс.Метрика