Загрузка страницы

ಡೊಳ್ಳು ಕುಣಿತ - ಕೆ. ಎಂ. ಅಣ್ಣಪ್ಪ ಮತ್ತು ತಂಡ, ಹಡಗಲು, ಕಡೂರು | ರಂಗಾಯಣ | Dollu Kunitha | Rangayana

ಡೊಳ್ಳು ಕುಣಿತ - ಕೆ. ಎಂ. ಅಣ್ಣಪ್ಪ ಮತ್ತು ತಂಡ, ಹಡಗಲು, ಕಡೂರು

ರಂಗಾಯಣ
ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ 2024

ಚಿತ್ರಕೃಪೆ: ಗೌತಮ್ ಫೋಟೋಗ್ರಫಿ

#ಜಾನಪದಕರ್ನಾಟಕ #ಡೊಳ್ಳುಕುಣಿತ #ಜಾನಪದ
________________________________________

ಜನಪದ ಕಲೆಗಳಲ್ಲಿ ಗಂಡುಕಲೆ ಎನಿಸಿರುವ ಡೊಳ್ಳು ಕುಣಿತ ಪುರುಷರಿಗೆ ಮಿಸಲಾದ ಕಲೆ. ಒಳ್ಳೆಯ ಮೈಕಟ್ಠು ಮತ್ತು ಶಕ್ತಿ ಉಳ್ಳ ಕಲಾವಿದರು ಮಾತ್ರ ಈ ಕಲೆಯನ್ನು ಪ್ರದರ್ಶಿಸಬಲ್ಲರು. ಉತ್ತರ ಕರ್ನಾಟಕದ ಬಹುಪಾಲು ಜಿಲ್ಲೆಗಳು ಹಾಗೂ ಚಿತ್ರದುರ್ಗ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಪ್ರಚಲಿತವಿರುವ ಡೊಳ್ಳೂ ಕುಣಿತ ತನ್ನ ವಿಶಿಷ್ಟವಾದ ನೃತ್ಯ ಶೈಲಿಗಳಿಂದ ಉಳಿದುಕೊಂಡು ಬಂದಿದೆ. ಡೊಳ್ಳು ಕುಣಿತ- ಒಂದು ಜನಪದ ಹಾಗೂ ಶಾಸ್ತ್ರೀಯ ಕಲೆ, ನೃತ್ಯ. ಡೊಳ್ಳು ಬಾರಿಸಿಕೊಂಡು ಕುಣಿಯುವುದರಿಂದ ಇದಕ್ಕೆ ಡೊಳ್ಳು ಕುಣಿತ ಎಂಬ ಹೆಸರು.

ಡೊಳ್ಳಿನ ಇತಿಹಾಸ:
ಮೂಲತಃ ಕುರುಬ ಜನಾಂಗದ ವಾದ್ಯವಾಗಿರುವ ಡೊಳ್ಳು ಹಳ್ಳಿಯ ಸಂಸ್ಕೃತಿ ಜೀವನದೊಂದಿಗೆ ಸಮರಸವಾಗಿ ಬೆರೆತುಕೊಂಡಿದೆ. ಡೊಳ್ಳಿನ ಉತ್ಪತ್ತಿಯ ಬಗ್ಗೆ ಹಲವು ಕಥೆಗಳು ರೂಡಿಯಲ್ಲಿರುವುದರಿಂದ ಅದರ ಬಗ್ಗೆ ಭಕ್ತಿ ಗೌರವಗಳು ವ್ಯಕ್ತವಾಗುತ್ತದೆ. ಡೊಳ್ಳಿನ ಉತ್ಪತ್ತಿಯ ಬಗ್ಗೆ ಪೌರಣಿಕ ಹಿನ್ನೆಲೆಯ ಒಂದು ವಿಚಿತ್ರ ಕತೆ ಹಿಗೀದೇ

ಕಥೆ ಒಂದು:
ಡೊಳ್ಳು ಸುರನೆಂಬ ರಕ್ಕಸ ತಪಸ್ಸಿನಿಂದ ಪರಶಿವನನ್ನು ಮೆಚ್ಚಿಸಿ ಪರಶಿವನು ತನ್ನ ಹೊಟ್ಟೆಯಲ್ಲಿಯೆ ನೆಲೆಸಬೇಕೆಂದು ವರಪಡೆದ. ಅದರಂತೆ ಶಿವನು ಗಂಗೆ, ಗೌರಿಯನ್ನು ಆತ ತೊರೆದು ರಕ್ಕಸನ ಹೊಟ್ಟೆಯನ್ನು ಸೇರಿದ. ಶಿವನಿಲ್ಲದ ಕೈಲಾಸ ಕಳೆಗುಂದಿತು. ದುಃಖಿತರಾದ ಶಿವಗಣಗಳು ವಿಷ್ಣುವಿನ ಮೊರೆಹೊಕ್ಕರು ವಿಷ್ಣುವಿನ ರಹಸ್ಯ ನಿರ್ದೇಶನದಂತೆ ಪಂಚ ರಾತ್ರಿಗಳು (ಕಾಮ, ಕ್ರೊದ, ಮೋಹ, ಮದ, ಮಾತ್ಸರ್ಯಗಳು ಪಂಚ ರಾತ್ರಿಯ ಪ್ರತೀಕ) ಸೇರುವುದು. ಶಿವನು ಕೋಪದಿಂದ ಕಣ್ಣು ತೆರೆದರೆ ಪ್ರಳಯವೆ ಉಂಟಾಗುವುದೆಂದು ಅರಿತ ವಿಷ್ಣು ಡೊಳ್ಳಾಸುರನ ಹೊಟ್ಟಯನ್ನೆ ವಾದ್ಯವಿಶೇಷವಾಗಿ ಮಾಡಿಕೊಂಡು ಅವನ ಮೂಳೆಗಳಿಂದ ಡೊಳ್ಳು ಬಾರಿಸಲು ಆರಂಬಿಸಿದ. ಶಿವನು ಆ ವಾದ್ಯದ ದನಿಗೆ ಮಾರು ಹೋಗಿ ಲಾಸ್ಯದಲ್ಲಿ ತೊಡಗಿದ. ಈ ವೇಳೆಗೆ ತೊಡೆಯ ಗೌರಿ, ಜೆಡೆಯ ಗಂಗೆಯರು ಬಂದು ಶಿವನನ್ನು ಸೇರಿದರು. ಶಿವ ಸುಪ್ರಿತನಾದ! ಮುಂದೆ ಡೊಳ್ಳು ಶಿವಸ್ತುತಿಯ ವಿಶೇಷ ವಾದ್ಯವಾಯಿತು. ತಲತಲಾಂತರದಿಂದ ದೈವ ಆರಾಧನೆಯ ಸಾಧನವಾಗಿ ಬೆಳೆದು ಬಂದ ಈ ಕಲೆ ಇತ್ತೀಚೆಗೆ ಮನರಂಜನೆಯಾ ಮಾಧ್ಯಮವಾಗಿ ಮನ್ನಣೆಯನ್ನು ಗಳಿಸಿದೆ. ಯಾವುದೇ ಧಾರ್ಮಿಕ ಸಾಂಸ್ಕ್ರತಿಕ ಸಮಾರಂಭಗಳಲ್ಲಿ ಇದು ಒಂದು ಮುಖ್ಯ ಕಲೆಯಾಗಿದೆ ಗುರುತಿಸಿಕೊಂಡಿದೆ. ಡೊಳ್ಳು ಕುಣಿತವನ್ನು ಚೆನ್ನಾಗಿ ಮೈಗೂಡಿಸಿಕೊಂಡು ಪರಿಣಿತಿಯನ್ನು ಸಾಧಿಸಿರುವವರೆಂದರೆ ಕುರುಬ ಜನಾಂಗ. ಬಿಡುವು ದೊರೆತಾಗಲೆಲ್ಲಾ ಅದರ ಅಭ್ಯಾಸ ಅಭಿವ್ಯಕ್ತಿಗಳಲ್ಲಿ ಆಸಕ್ತರಾಗಿರುತ್ತಿದ್ದರು. ಕಲಾವಿದರಿಗೆ ವಯಸ್ಸಿನ ಕಟ್ಟುಕಟ್ಟಳೆಯಿಲ್ಲ. ಅದರೆ ಡೊಳ್ಳು ಹೊತ್ತು ಕುಣಿಯುವ ದೈಹಿಕ ಶಕ್ತಿ ಇರಬೇಕಾಗುತ್ತದೆ

ಡೊಳ್ಳು ತಯಾರಿ:
ಈ ಬೇಟೆಗೆ ಕಲಾವಿದರ ವೇಷ ಭೊಷಣಗಳು ಆಕರ್ಷಕ ರೀತಿಯಲ್ಲಿ ಮಾರ್ಪಾಟಾಗಿ ಕಲೆಗೆ ಮೆರಗುಕೊಟ್ಟದೆ. ಡೊಳ್ಳು ಮರ ಮತ್ತು ಚರ್ಮದಿಂದ ಮಾಡಿದ ಒಂದು ದೊಡ್ಡ ಆಕಾರದ ವಾದ್ಯವನ್ನು ಡೊಳ್ಳು ಎನ್ನಬಹುದು. ತಾಳೆ ಅಥವಾ ಹಗುರವಾದ ಮರದಿಂದ ಎರಡುವರೆ ಇಂದ ಮೂರುವರೆ ಅಡಿ ಉದ್ದದ ಹಾಗೂ ಎರಡು ಅಡಿ ವ್ಯಾಸವಿರುವ ಪಿಪಾಯಿ ಆಕಾರದ ಡೊಳ್ಳನ್ನು ಸಿದ್ದಪಡಿಸಿರುತ್ತಾರೆ. ಇದರ ಎಡಬಾಗಕ್ಕೆ ಆಡಿನ ಚರ್ಮವನ್ನು ಬಲಬಾಕ್ಕೆ ಕುರಿಯ ಚರ್ಮವನ್ನು ಬಿಗಿಯಾಗಿ ಬಿಗಿಯುತ್ತಾರೆ. ಬಳಿಕ ಡೊಳ್ಳುನ್ನು ಬಡಿಯಲು ಬಳಸುವುದು ಸುಮಾರು ಒಂದುವರೆ ಅಡಿ ಉದ್ದದ ಬಿದಿರು ಕೋಲು. ಇದಕ್ಕೆ 'ಗಣಿ' ಎಂದು ಕರೆಯುತ್ತಾರೆ. ಡೊಳ್ಳು ಬೀರೇಶ್ವರ ದೇವರಿಗೆ ಅತಿ ಪ್ರಿಯವಾದ ವಾದ್ಯ. ಎಲ್ಲ ಬೀರೇಶ್ವರ ದೇವರ ಗುಡಿಗಳಲ್ಲಿ ಒಂದು ಡೊಳ್ಳನ್ನು ಕಟ್ಟಿರುತ್ತಾರೆ. ಕುರುಬ ಗೌಡ ಜನಾಂಗದ ಜನರು ಡೊಳ್ಳು ಕುಣಿತ ಮಾಡುತ್ತಾ ಬೀರೇಶ್ವರ ದೇವರನು ಪೂಜಿಸುತ್ತಾರೆ. ಕುಣಿತದ ಜೊತೆ ಹಾಲುಮತ ಕುರುಬ ಪುರಾಣವನ್ನು ಹಾಡುತ್ತಾರೆ. ಡೊಳ್ಳು ಕುಣಿತ ಮಾಡಲು ತುಂಬಾ ಶಕ್ತಿ ಮತ್ತು ಧೈರ್ಯ ಬೇಕು, ತಮ್ಮ ಯುದ್ಧ ಕಲೆಗಳಲ್ಲಿ ಇದು ಒಂದು ಕುರುಬರು ಬಾವಿಸುತಾರೆ, ಕುರುಬರು ಹಿಂದಿನ ಕಾಲದಲ್ಲಿ ಸೈನಿಕರು, ನಾಯಕರು ಆಗಿದ್ದರೆಂದು ಈ ನೃತ್ಯ ತೋರಿಸುತ್ತದೆ. ಕುರುಬ ವಂಶಸ್ಥರು ಪಾರಂಪರಿಕವಾಗಿ ಈ ನೃತ್ಯವನ್ನು ತಲತಲಾಂತರದಿಂದ ಮಾಡಿಕೊಂಡು ಬಂದವರು. ಜನಪದದಲ್ಲೇ ಉಳಿದುಕೊಂಡ ಈ ಕಲೆಗೆ ಪ್ರೋತ್ಸಾಹ ನೀಡಲು ಇತ್ತೀಚೆಗೆ ಸಾಮಾನ್ಯವಾಗಿ ದಸರಾ ಸಂಭ್ರಮದಲ್ಲಿ, ವಸಂತಹಬ್ಬ ಹಾಗೂ ಇತರೆ ಸಂದರ್ಭಗಳಲ್ಲಿ ಇತರೆ ಕಾರ್ಯಕ್ರಮಗಳೊಂದಿಗೆ ಡೊಳ್ಳು ಕುಣಿತದ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗುತ್ತಿದೆ. ಕರ್ನಾಟಕದಲ್ಲಿ ಯಾವುದೇ ದೊಡ್ಡ ಕಾರ್ಯಕ್ರಮ ನಡೆದರೂ ಅಲ್ಲಿ ಡೊಳ್ಳು ಕುಣಿತ ಇರುತ್ತದೆ.

ಡೊಳ್ಳಿನ ಹಾಡು:
ಡೊಳ್ಳಿನ ಹಾಡು ಎಂದರೆ ಕುರುಬರ ಹಾಡುಗಳು ಎಂದು ಕರೆಯುತ್ತಾರೆ. ಬೀರದೇವರ ವರ್ಣನೆ ಮತ್ತು ಆತನ ಭಕ್ತಿಯ ಮಹಿಮೆಯನ್ನು ಕುರಿತು ಇರುವ ಹಾಡುಗಳೆ ಹೆಚ್ಚು ಬಹುತರವಾಗಿ ಡೊಳ್ಳಿನ ಹಾಡುಗಳನ್ನು ರಚಿಸಲಾಗಿದೆ. ಹಾಡುಗಳಲ್ಲಿ ಹಾಲುಮತ ಪುರಣ, ಅನಸೂಯ ಪದ, ಮಾರ್ಕಾಂಡೇಯ ಚರಿತ್ರೆ, ನಿಂಬೆಕ್ಕಿನ ಪದ, ಪಡವರ ಪದ, ಡೊಳ್ಳು ಮರದ ಪದ, ಬಸವಣ್ಣನ ಚರಿತ್ರೆ, ಬೀಮಾರ್ಜುನರ ಗರ್ವಭಂಗ, ಬೀರಲಿಂಗೇಶ್ವರನ ಪದ, ಜಂಗುಮನ ಪದ, ಸತ್ಯವಾನ ಸಾವಿತ್ರಿ, ಭಕ್ತ ಕುಂಬಾರ ಇತ್ಯಾದಿ ಪ್ರಸಂಗಗಳು ಸೇರಿವೆ.

Видео ಡೊಳ್ಳು ಕುಣಿತ - ಕೆ. ಎಂ. ಅಣ್ಣಪ್ಪ ಮತ್ತು ತಂಡ, ಹಡಗಲು, ಕಡೂರು | ರಂಗಾಯಣ | Dollu Kunitha | Rangayana канала Diwanagraphy
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
10 марта 2024 г. 12:10:07
00:08:55
Другие видео канала
ಚಕ್ರವ್ಯೂಹ - ಯಕ್ಷಗಾನ | ಕಟೀಲು ನುಡಿಹಬ್ಬ | ವಿಶೇಷ ರಂಗಪರಿಕಲ್ಪನೆಯ ಯಕ್ಷಗಾನ ಬಯಲಾಟ | Chakravyuha - Yakshaganaಚಕ್ರವ್ಯೂಹ - ಯಕ್ಷಗಾನ | ಕಟೀಲು ನುಡಿಹಬ್ಬ | ವಿಶೇಷ ರಂಗಪರಿಕಲ್ಪನೆಯ ಯಕ್ಷಗಾನ ಬಯಲಾಟ | Chakravyuha - YakshaganaNanu Kolike Ranga | Kalavathi Dayanand Songs | Folk Singer | T P KailasamNanu Kolike Ranga | Kalavathi Dayanand Songs | Folk Singer | T P KailasamFine Art - Odisha ❤️Fine Art - Odisha ❤️Mantralaya Matha | Pancha Rathothsava | ಮಂತ್ರಾಲಯ ಮಠ - ಪಂಚ ರಥೋತ್ಸವ | మంత్రాలయ మఠం - పంచ రథోత్సవMantralaya Matha | Pancha Rathothsava | ಮಂತ್ರಾಲಯ ಮಠ - ಪಂಚ ರಥೋತ್ಸವ | మంత్రాలయ మఠం - పంచ రథోత్సవಯಶೋಮತಿ ಏಕಾವಳಿ - ಭಾಗ ೨/೩ | ಕಟೀಲು ಮೇಳ | ಸಂಪೂರ್ಣ ಯಕ್ಷಗಾನ | Yashomati Ekavali | Kateel Mela | Yakshaganaಯಶೋಮತಿ ಏಕಾವಳಿ - ಭಾಗ ೨/೩ | ಕಟೀಲು ಮೇಳ | ಸಂಪೂರ್ಣ ಯಕ್ಷಗಾನ | Yashomati Ekavali | Kateel Mela | Yakshaganaಗದಾಯುದ್ಧ ಪ್ರಸಂಗದ 3 ಹಾಡುಗಳು || ಸಾಹಿತ್ಯ - ದಿವಾಣ ದುರ್ಗಾಪ್ರಸಾದ್ ಭಟ್ | ಚಿನ್ಮಯ ಭಟ್ ಕಲ್ಲಡ್ಕ | Yakshaganaಗದಾಯುದ್ಧ ಪ್ರಸಂಗದ 3 ಹಾಡುಗಳು || ಸಾಹಿತ್ಯ - ದಿವಾಣ ದುರ್ಗಾಪ್ರಸಾದ್ ಭಟ್ | ಚಿನ್ಮಯ ಭಟ್ ಕಲ್ಲಡ್ಕ | Yakshaganaಹಾಸ್ಯದೌತಣ 🤣 ಮಹೇಶ ಮಣಿಯಾಣಿ, ಪ್ರಜ್ವಲ್ ಕುಮಾರ್, ದಿನೇಶ್ ಕೋಡಪದವು, ದಿನೇಶ್ ಕಡಬ, ಸಂದೇಶ್ ಮಂದಾರ | Yakshaganaಹಾಸ್ಯದೌತಣ 🤣 ಮಹೇಶ ಮಣಿಯಾಣಿ, ಪ್ರಜ್ವಲ್ ಕುಮಾರ್, ದಿನೇಶ್ ಕೋಡಪದವು, ದಿನೇಶ್ ಕಡಬ, ಸಂದೇಶ್ ಮಂದಾರ | Yakshaganaಯಕ್ಷೋಪಾಸನಂ ಮೂಡುಬಿದಿರೆ - ದಶಮಾನೋತ್ಸವ ಸಂಭ್ರಮ | ಸಭಾ ಕಾರ್ಯಕ್ರಮ | ಸಮಾಜ ಮಂದಿರ ಮೂಡುಬಿದಿರೆಯಕ್ಷೋಪಾಸನಂ ಮೂಡುಬಿದಿರೆ - ದಶಮಾನೋತ್ಸವ ಸಂಭ್ರಮ | ಸಭಾ ಕಾರ್ಯಕ್ರಮ | ಸಮಾಜ ಮಂದಿರ ಮೂಡುಬಿದಿರೆಪೆರ್ಮುದೆ × ಬಂಟ್ವಾಳ - ಹಾಸ್ಯ ಸಂಭಾಷಣೆ 🤣👌 | ಹನುಮಗಿರಿ ಮೇಳ | Permude × Bantwala Yakshagana Hasyaಪೆರ್ಮುದೆ × ಬಂಟ್ವಾಳ - ಹಾಸ್ಯ ಸಂಭಾಷಣೆ 🤣👌 | ಹನುಮಗಿರಿ ಮೇಳ | Permude × Bantwala Yakshagana Hasyaತುಳುವ ಬಾಸೆ - ಡಾ. ರವೀಶ್ ಪಡುಮಲೆ | ಕಟೀಲು ನುಡಿಹಬ್ಬ 2023 | Tuluva Base - Dr Ravish Padumale | Nudihabbaತುಳುವ ಬಾಸೆ - ಡಾ. ರವೀಶ್ ಪಡುಮಲೆ | ಕಟೀಲು ನುಡಿಹಬ್ಬ 2023 | Tuluva Base - Dr Ravish Padumale | Nudihabbaರಕ್ತರಾತ್ರಿ ಪ್ರಸಂಗದ ಅಶ್ವತ್ಥಾಮನಾಗಿ ಶಿವರಾಜ್ ಬಜಕೂಡ್ಲು | ದೇವರಾಜ ಆಚಾರ್ಯ ಭಾಗವತರ ಏರುಪದ್ಯಗಳು | Yakshaganaರಕ್ತರಾತ್ರಿ ಪ್ರಸಂಗದ ಅಶ್ವತ್ಥಾಮನಾಗಿ ಶಿವರಾಜ್ ಬಜಕೂಡ್ಲು | ದೇವರಾಜ ಆಚಾರ್ಯ ಭಾಗವತರ ಏರುಪದ್ಯಗಳು | Yakshaganaಬಿಳಿ 5 ಶ್ರುತಿಯಲ್ಲಿ ಪುಂಡಿಕೈ ಭಾಗವತರಿಂದ ಭಾರ್ಗವ ವಿಜಯ ಪ್ರಸಂಗದ ಹಾಡುಗಳು | ಮುರಾರಿ ಕಡಂಬಳಿತ್ತಾಯ, ವಿಶ್ವನಾಥ ಶೆಣೈಬಿಳಿ 5 ಶ್ರುತಿಯಲ್ಲಿ ಪುಂಡಿಕೈ ಭಾಗವತರಿಂದ ಭಾರ್ಗವ ವಿಜಯ ಪ್ರಸಂಗದ ಹಾಡುಗಳು | ಮುರಾರಿ ಕಡಂಬಳಿತ್ತಾಯ, ವಿಶ್ವನಾಥ ಶೆಣೈಸತೀ ಕಲ್ಯಾಣ - ಯಕ್ಷಗಾನ | ಕಟೀಲು ಮೇಳ | Sathi Kalyana | Kateel Mela | Yakshaganaಸತೀ ಕಲ್ಯಾಣ - ಯಕ್ಷಗಾನ | ಕಟೀಲು ಮೇಳ | Sathi Kalyana | Kateel Mela | Yakshaganaಶುಂಭವಧೆ ಸನ್ನಿವೇಶದ ರೋಚಕ ದೃಶ್ಯ 🔥💥 ಹನುಮಗಿರಿ ಮೇಳ | ಸಿದ್ದಕಟ್ಟೆ × ಪಡ್ರೆ | Hanumagiri Mela | Yakshaganaಶುಂಭವಧೆ ಸನ್ನಿವೇಶದ ರೋಚಕ ದೃಶ್ಯ 🔥💥 ಹನುಮಗಿರಿ ಮೇಳ | ಸಿದ್ದಕಟ್ಟೆ × ಪಡ್ರೆ | Hanumagiri Mela | Yakshaganaಅಮ್ಮಣ್ಣಾಯ ಭಾಗವತರಿಗೆ ಉಜಿರೆ ಅಶೋಕ ಭಟ್ಟರಿಂದ ಅಭಿನಂದನಾ ನುಡಿ | ಯಕ್ಷಸಂಗಮ ಮೂಡುಬಿದಿರೆ | Yakshaganaಅಮ್ಮಣ್ಣಾಯ ಭಾಗವತರಿಗೆ ಉಜಿರೆ ಅಶೋಕ ಭಟ್ಟರಿಂದ ಅಭಿನಂದನಾ ನುಡಿ | ಯಕ್ಷಸಂಗಮ ಮೂಡುಬಿದಿರೆ | Yakshaganaಪಟ್ಲ - ಬಾಯಾರು - ಬೊಳಿಂಜಡ್ಕಪಟ್ಲ - ಬಾಯಾರು - ಬೊಳಿಂಜಡ್ಕChudiyan Khanak Gayeen - Mr Raju Ram | Rajasthani Singer | #diwanagraphy #rajasthaniChudiyan Khanak Gayeen - Mr Raju Ram | Rajasthani Singer | #diwanagraphy #rajasthani🔥 ದಶಕಂಠ🔥 ದಶಕಂಠಪಾಂಡವ ಸ್ವರ್ಗಾರೋಹಣ - ಯಕ್ಷಗಾನ ತಾಳಮದ್ದಲೆ | Pandava Swargarohana | Yakshagana Talamaddaleಪಾಂಡವ ಸ್ವರ್ಗಾರೋಹಣ - ಯಕ್ಷಗಾನ ತಾಳಮದ್ದಲೆ | Pandava Swargarohana | Yakshagana Talamaddaleಭೀಮಶಂಕರ ಮಹಿಮೆ - ಯಕ್ಷಗಾನ | ಕಟೀಲು ಮೇಳ | Bheemashankara Mahime | Kateel Mela | Yakshaganaಭೀಮಶಂಕರ ಮಹಿಮೆ - ಯಕ್ಷಗಾನ | ಕಟೀಲು ಮೇಳ | Bheemashankara Mahime | Kateel Mela | Yakshagana
Яндекс.Метрика