Загрузка страницы

ಕರ್ಣನ ಕೊನೆ ಆಸೆ | The Last Desire Of Karna

ಮಹಾಭಾರತವನ್ನು ಬಲ್ಲವರಲ್ಲಿ ಕರ್ಣನೊಬ್ಬ ಖಳನಾಯಕನೆಂಬ ಒಂದು ಇಡೀ ಸಂಸ್ಕೃತಿಯೇ ಸೃಷ್ಟಯಾಗಿದೆ. ದಾನಶೂರ ಕರ್ಣನ ಕೊನೆ ಆಸೆಯನ್ನು ಕೇಳಿ ಕೃಷ್ಣನೇ ಬೆಚ್ಚಿಬಿದ್ದದ್ದ ಹಾಗಾದರೆ ಕರ್ಣನ ಕೊನೆ ಆಸೆಗಳು ಏನಿದ್ದವು.
ಕರ್ಣನ ಪಾತ್ರ ಮಹಾಭಾರತದ ದುರಂತಪಾತ್ರದಲ್ಲಿ ಒಂದಾಗಿದೆ. ಮದುವೆಗೂ ಮೊದಲು ಸೂರ್ಯನ ಪುತ್ರನಾಗಿ ಹುಟ್ಟುವ ಕರ್ಣನನ್ನು ಕುಂತಿ ನದಿಯಲ್ಲಿ ತೇಲಿ ಬಿಡುತ್ತಾಳೆ. ಸೂತನೊಬ್ಬನ ಮನೆಯಲ್ಲಿ ಬೆಳೆಯುವ ಕರ್ಣ ಪರಶುರಾಮನಿಂದ ಶಿಕ್ಷಣ ಪಡೆದು ಶಾಪವನ್ನು ಪಡೆಯುತ್ತಾನೆ. ದುರ್ಯೋಧನ ಕರ್ಣನ ಆಪ್ತ ಗೆಳೆಯ ಕೊನೆಗೆ ಮಹಾಭಾರತದ ಯುದ್ಧದಲ್ಲಿ ಪರಶುರಾಮನ ಶಾಪದ ಕಾರಣ ತನ್ನ ವಿಧ್ಯೆಯನ್ನೆಲ್ಲಾ ಮರೆತು ಹೋಗಿ ರಥ ಮಣ್ಣಿನಲ್ಲಿ ಹೂತು ಹೋಗಿದ್ದಾಗ ಅರ್ಜುನನ ಬಾಣದಿಂದ ಅವನು ಸಾಯುತ್ತಾನೆ.

ಕರ್ಣ ಅಸಾಧಾರಣ ಯೋಧನೆಂದು ಕೃಷ್ಣನಿಗೆ ಮೊದಲೇ ತಿಳಿದಿತ್ತು ಅರ್ಜುನ ಎಷ್ಟೇ ದೊಡ್ಡ ಬಿಲ್ಲುಗಾರನಾಗಿದ್ದರೂ ಕರ್ಣನನ್ನು ಸೋಲಿಸುವುದು ಅಸಾದ್ಯ ಎಂಬುದು ಅವನಿಗೆ ದೃಡವಾಗಿತ್ತು. ಬಾಲ್ಯ ಕಳೆದು ಯೌವನಕ್ಕೆ ಕಾಲಿಟ್ಟಾಗ ಕರ್ಣನಿಗೆ ಶಶ್ತ್ರ ವಿದ್ಯಾಭ್ಯಾಸದಲ್ಲಿ ಆಸಕ್ತಿ ಮೂಡುತ್ತದೆ. ಸೂತಪುತ್ರನಾದ ಅವನಿಗೆ ಶಶ್ತ್ರವಿದ್ಯಾಭ್ಯಾಸ ಕಲಿಸಲು ಆಚಾರ್ಯರು ಒಪ್ಪುವುದಿಲ್ಲ ಆಗ ಆತ ಪರಶುರಾಮರ ಬಳಿ ಬಂದು ತಾನು ವಿಪ್ರನೆಂದು ಸುಳ್ಳು ಹೇಳಿ ಧನೂರ್ವಿಧ್ಯೆಯನ್ನು ಪಡೆಯಲು ಬಯಸುತ್ತಾನೆ. ಒಂದು ದಿನ ಪರಶುರಾಮರು ಕರ್ಣನ ತೊಡೆಯಮೇಲೆ ತಲೆ ಇಟ್ಟು ನಿದ್ರಿಸುತ್ತಿದ್ದಾಗ ಆಗ ಇಂದ್ರನ ಆಜ್ಞೆಯ ಮೇರೆಗೆ ಅಲರ್ಕ ಎಂಬ ದುಂಬಿಯೊಂದು ಕರ್ಣನ ತೊಡೆಯನ್ನು ಬಗೆಯಲಾರಂಭಿಸುತ್ತದೆ ಆಗ ತಾನು ಅಲುಗಾಡಿದರೆ ಗುರುವಿಗೆ ನಿದ್ರಾಭಂಗವಾಗುತ್ತದೆ ಎಂದು ಎಣಿಸಿ ಕರ್ಣ ತನಗಾದ ಅಘಾದನೋವನ್ನು ಲಕ್ಷಿಸದೆ ಹಾಗೆ ತಡೆದುಕೊಂಡಿರುತ್ತಾನೆ ಅವನ ರಕ್ತದ ಸೋಂಕಿನಿಂದ ಪರಶುರಾಮ ಎಚ್ಚೆತ್ತು ಶಿಷ್ಯನ ವರ್ತನೆಯನ್ನು ಕಂಡು ಮೆಚ್ಚಿದರು ಆದರೆ ಇಂತ ಒಂದು ಕಾರ್ಯ ಸಹಿಸಿಕೊಳ್ಳಲು ವಿಪ್ರನಿಂದ ಸಾದ್ಯವಿಲ್ಲ ಅವನು ಕ್ಷತ್ರಿಯನೆ ಆಗಿರಬೇಕು ಎಂದು ಅವರಿಗೆ ಗೊತ್ತಾಗುತ್ತದೆ ಅದರಿಂದ ಕುಪಿತರಾದ ಪರಶುರಾಮರು ತಾನು ಕಲಿಸಿದ ವಿದ್ಯೆಯು ಸರಿಯಾದ ವೇಳೆಯಲ್ಲಿ ಅವನಿಗೆ ಮರೆತುಹೋಗಲಿ ಎಂದು ಶಾಪಹಾಕುತ್ತಾರೆ. ಗುರುಶಾಪದಿಂದ ಕರ್ಣ ತುಂಬಾ ದುಃಖಿತನಾಗುತ್ತಾನೆ.
ಹಸ್ತಿನಾಪುರದಲ್ಲಿ ಕೌರವರಿಗೂ ಪಾಂಡವರಿಗೂ ಗುರು ದ್ರೋಣಾಚಾರ್ಯರು ಶಶ್ತ್ರವಿದ್ಯೆಯನ್ನು ಕಲಿಸುತ್ತಿದ್ದರು. ಆ ರಾಜಪುತ್ರರ ವಿದ್ಯಾಪರಿಣಿತಿಯನ್ನು ಪ್ರದರ್ಶನಗೊಳಿಸುವಿಕೆಗಾಗಿ ಸಕಲ ಏರ್ಪಾಡುಗಳು ನಡೆಯುತ್ತಿದ್ದವು. ಅರ್ಜುನ ರಂಗಕ್ಕೆ ಪ್ರವೇಶಿಶುವುದೆ ತಡ ಆತ ಅದ್ವೀತಿಯನೆಂದು ಗುರುಗಳು ಅವನನ್ನು ಪ್ರಶಂಸಿಸಿದರು ಈ ಮಾತನ್ನು ಆಲಿಸಿದ ಕರ್ಣ ಮುಂದೆಬಂದು ಅರ್ಜುನನನ್ನು ಎದುರಿಸುವುದಾಗಿ ಸವಾಲೆಸೆಯುತ್ತಾನೆ. ಆಗ ಅಲ್ಲಿಯೇ ಇದ್ದ ಕೃಪಾಚಾರ್ಯರು ಎದ್ದುನಿಂತು ಸೂತಪುತ್ರನಾದ ಕರ್ಣನನ್ನು ಅರ್ಜುನನ ಸರಿಸಮಾನನೆಂದು ಭಾವಿಸಲು ಸಾಧ್ಯವಿಲ್ಲವೆಂದು ವಿರೋಧಪಡಿಸುತ್ತಾರೆ. ಈ ಅಸೂಯೆ ಮಾತುಗಳನ್ನು ಕೇಳಿ ಆಗತಾನೆ ಭೀಮನಿಂದ ಪರಾಜಿತನಾದ ದುರ್ಯೋಧನನು ಮುಂದೆ ಬಂದು ಕರ್ಣನ ಪರವಾಗಿ ವಾದಿಸಿ ಅವನನ್ನು ಅಂಗ ರಾಜ್ಯದ ರಾಜನನ್ನಾಗಿ ಮಾಡಿ ಗೌರವಿಸುತ್ತಾನೆ

ಕರ್ಣ ಸಾಯಲು ಅನೇಕ ಕಾರಣಗಳಿವೆ ಇದರಲ್ಲಿ ಒಂದು ಕಾರಣ ಕರ್ಣನು ಸೂರ್ಯನಿಂದ ಪಡೆದಂತಹ ರಕ್ಷಾ ಕವಚ. ಇದು ಕರ್ಣನ ಹತ್ತಿರ ಇರುವವರೆಗೂ ಯಾರೂ ಕೂಡ ಅವನಿಗೆ ಹಾನಿ ಮಾಡುವಂತಹ ಸಾದ್ಯತೆ ಇರಲಿಲ್ಲ.
ಆದ್ದರಿಂದ ಕರ್ಣನನ್ನು ಅರ್ಜುನ ಕೂಡ ಕೊಲ್ಲಲು ಸಾಧ್ಯವಾಗುತ್ತಿರಲಿಲ್ಲ. ಕರ್ಣನ ಪರಾಕ್ರಮ ಜನಜನಿತವಾಗಿತ್ತು ಕರ್ಣನ ದಾನದ ಗುಣಗಳು ವಿಕ್ಯಾತಿ ಆಗಿತ್ತು ಭೀಮ ದುರ್ಯೋಧನರ ಹಾಗೆ ಅರ್ಜುನ ಕರ್ಣರ ನಡುವೆ ಎಲ್ಲ ವಿಷಯದಲ್ಲಿ ಸ್ಪರ್ದೆ ನಡೆಯುತ್ತಿತ್ತು. ಅರ್ಜುನನ ಮೇಲೆ ಅತಿಯಾದ ಪ್ರೀತಿ ಹೊಂದಿದ್ದ ಇಂದ್ರನಿಗೆ ಹೇಗಾದರೂ ಮಾಡಿ ಕರ್ಣನನ್ನು ನಿಷಕ್ತನನ್ನಾಗಿ ಮಾಡಬೇಕೆಂದು ನಿರ್ಧಾರ ಮಾಡುತ್ತಾನೆ. ಕರ್ಣನ ಉದಾರ ಗುಣಗಳನ್ನು ಅರಿತ ಆತ ಒಂದು ದಿನ ವಿಪ್ರವೇಶದಲ್ಲಿ ಬಂದು ಆತನ ಕವಚ ಕುಂಡಲಗಳನ್ನು ಬೇಡುತ್ತಾನೆ. ಈ ಸಂಚನ್ನು ಮೊದಲೇ ತಿಳಿದ ಸೂರ್ಯ ಕರ್ಣನಿಗೆ ಸ್ವಪ್ನದಲ್ಲಿ ಕಾಣಿಸಿಕೊಂಡು ಎಚ್ಚರಿಸಿದರು ಕರ್ಣ ತನ್ನ ಸಹಜಗುಣಕ್ಕೆ ಅನುಸಾರವಾಗಿ ತನಗೆ ರಕ್ಷೆಯಂತಿದ್ದ ಕವಚ ಹಾಗೂ ಕೊಂಡಲಗಳನ್ನು ಮನಪೂರ್ವಕವಾಗಿ ಇಂದ್ರನಿಗೆ ದಾನವಾಗಿ ಕೊಡುತ್ತಾನೆ .
ಮುಂದೆ ಮಹಾಭಾರತದ ಯುದ್ಧ ಪ್ರಾರಂಭವಾಗುತ್ತದೆ ಆ ಯುದ್ಧದಲ್ಲಿ ಕೃಷ್ಣನು ಪಾಂಡವರ ಪರವಾಗಿ ನಿಲ್ಲುತ್ತಾನೆ ಹಾಗೆಯೇ ಕರ್ಣನು ಕೌರವರ ಪರವಾಗಿ ನಿಲ್ಲುತ್ತಾನೆ ಈ ಘೋರವಾದ ಯುದ್ಧ ದಿನಗಟ್ಟಲೆ ನಡೆಯುತ್ತದೆ ಘಟಾನು ಘಟಿಗಳು ಅದರಲ್ಲಿ ಸಾವನ್ನಪ್ಪುತ್ತಾರೆ ಹೀಗೆ ಅದರ ಕೊನೆಯ ದಿನಗಳಲ್ಲಿ ಅರ್ಜುನ ಹಾಗೂ ಕರ್ಣರ ನಡುವೆ ಭಾರಿ ಯುದ್ಧ ನಡೆಯುತ್ತದೆ. ಕರ್ಣ ತಾನು ಬಳಸಬೇಕಾದ ಯುಕ್ತಿಯನ್ನು ಆ ಯುದ್ಧದಲ್ಲಿ ಬಳಸಲು ಆಗುವುದಿಲ್ಲ ಕಾರಣ ಹಿಂದೆ ಬ್ರಾಹ್ಮಣನ ಶಾಪಕ್ಕೆ ಗುರಿಯಾಗಿದ್ದಿದ್ದರಿಂದ ಯುದ್ಧದ ಸಮಯದಲ್ಲಿ ಕರ್ಣನ ರಥದ ಚಕ್ರ ಭೂಮಿಯಲ್ಲಿ ಹೂತು ಹೋಗುತ್ತದೆ. ಅದನ್ನು ಸರಿ ಪಡಿಸಿಕೊಳ್ಳಲು ರಥದಿಂದ ಕೆಳಗಿಳಿಯಲು, ಕರ್ಣನನ್ನು ಸಂಹರಿಸಲು ಅದೇ ತಕ್ಕ ಸಮಯ ಎಂದು ಕೃಷ್ಣ ಅರ್ಜುನನನ್ನು ಪ್ರಚೋದಿಸುತ್ತಾನೆ ನಿರಾಯುಧನಾದ ಕರ್ಣನನ್ನು ಹೇಗೆ ಸಂಹರಿಸುವುದು ಎಂಬ ಕನಿಕರದಿಂದ ಅರ್ಜುನನು ಸುಮ್ಮನಿರುತ್ತಾರೆ
ಆಗ ಕೃಷ್ಣ ಕರ್ಣನ ಅಧರ್ಮ ಕಾರ್ಯಗಳನ್ನು ಪಟ್ಟಿಮಾಡಿ ಹೇಳಿ ಅರ್ಜುನನಿಗೆ ಬಲವಂತವಾಗಿ ಅವನ್ನನ್ನು ಕೊಲ್ಲಲು ಹೇಳುತ್ತಾನೆ. ನಂತರ ತಾನು ಅರಿಯದೆ ಮಾಡಿದ ತಪ್ಪಿನಿಂದಾಗಿ ಹಾಗೂ ಅವನಿಗೆ ಅಗತ್ಯವಿರುವ ಸಂದರ್ಭಗಳಲ್ಲಿ ಕರ್ಣನಿಗಿದ್ದ ಶಾಪಾಗಳು ಅವನಿಗೆ ಮುಳುವಾಗಿ ಕರ್ಣ ಸಾವನ್ನಪ್ಪಬೇಕಾಗುತ್ತದೆ.
ಇಷ್ಟಕ್ಕೂ ಕರ್ಣ ಸಾಯುವ ಮುನ್ನ ತನ್ನ ಕೊನೆಯ ಆಸೆಯಾಗಿ ಕೃಷ್ಣನಿಂದ ಮೂರು ವರವನ್ನು ಪಡೆಯಲು ಇಚ್ಛಿಸುತ್ತಾನೆ ಮೊದಲನೆಯದಾಗಿ ಈ ಜನುಮದಲ್ಲಿ ನಾನು ಅನೇಕ ಅವಮಾನ ಅನ್ಯಾಯ ಗಳನ್ನು ಎದುರಿಸಿದ್ದೇನೆ ಹಾಗಾಗಿ ಅಂತ ಅನ್ಯಾಯಕ್ಕೆ ಒಳಗಾಗುವ ಜನರಿಗೆ ನನ್ನಿಂದಲೇ ಸಹಾಯವಾಗಬೇಕು ಎಂಬುದು ಅವನ ಮೊದಲ ಆಸೆ ಆಗಿತ್ತು ನೊಂದವರಿಗೆ ಸಹಾಯ ಮಾಡುವ ಆ ಅವಕಾಶ ತನಗೆ ಮಾಡಿಕೊಂಡು ಎಂದು ಕೃಷ್ಣನಿಗೆ ಬೇಡಿಕೊಳ್ಳುತ್ತಾನೆ.
ಎರಡನೇ ವರವಾಗಿ ಕರ್ಣನು ತನ್ನ ಮುಂದಿನ ಜನ್ಮದಲ್ಲಿ ಕೃಷ್ಣನ ರಾಜ್ಯದಲ್ಲಿ ಜನಿಸಬೇಕೆಂದು ಕೇಳಿಕೊಳ್ಳುತ್ತಾನೆ. ಇನ್ನು ಕೊನೆಯ ವರವಾಗಿ ಕರ್ಣ ತನ್ನ ಕೊನೆಯವಿಧಿಯನ್ನು ಭೂಮಂಡಲದಲ್ಲಿ ಯಾವುದೇ ಪಾಪವಿಲ್ಲದ ಸ್ಥಳದಲ್ಲಿ ನಡೆಸಬೇಕೆಂದು ಕೃಷ್ಣನಲ್ಲಿ ಕೇಳಿಕೊಳ್ಳುತ್ತಾನೆ. ಇನ್ನು ಇಡೀ ಭೂಮಂಡಲದಲ್ಲಿ ಪಾಪ ನಡೆಯದೆ ಇರುವ ಸ್ಥಳವಿರುವುದು ಕಷ್ಟ ಇದನ್ನು ಅರಿತ ಕೃಷ್ಣ ತನ್ನ ಅಂಗೈಯಲ್ಲಿ ಕರ್ಣನ ಕೊನೆಯ ವಿಧಿಯನ್ನು ಮುಗಿಸುತ್ತಾನೆ ಹೀಗೆ ಕರ್ಣನ ಕೊನೆಯ ಆಸೆಗಳು ಈಡೇರುತ್ತವೆ.
ಕರ್ಣನ ಉದಾರ ಗುಣಗಳಿಂದ ಇಂದಿಗೂ ಕರ್ಣನಿಲ್ಲದೆ ಮಹಾಭಾರತ ಇಲ್ಲ ಎನ್ನುವಷ್ಟರ ಮಟ್ಟಿಗೆ ಆತ ಜನರ ಮನಸ್ಸಿನಲ್ಲಿ ನೆಲೆಸಿದ್ದಾನೆ. ಸೂರ್ಯ ಪುತ್ರನಾದರೂ ಕರ್ಣ ನೋವಿನ ಜೀವನವನ್ನೇ ಎದುರಿಸಿದ್ದಾನೆ. ಮಹಾಭಾರತ ಯುದ್ಧವೆಲ್ಲ ಮುಗಿದ ಬಳಿಕ ಧರ್ಮರಾಜ ಸತ್ತವರಿಗೆ ಉತ್ತರಕ್ರೀಯಾದಿಗಳನ್ನ ಮಾಡುವ ಸಮಯದಲ್ಲಿ ಕುಂತಿ ಓಡಿಬಂದು ಕರ್ಣ ತನ್ನ ಮಗನೆಂದೂ ಪಾಂಡವರಿಗೆ ಅವನೇ ಹಿರಿಯನೆಂದು ಮೊದಲು ಅವನಿಗೆ ಕರ್ಮಾದಿಗಳು ನಡೆಯಬೇಕೆಂದು ತಿಳಿಸುತ್ತಾಳೆ
ಈ ವೃತ್ತಾಂತವನ್ನು ಕೇಳಿ ಚಕಿತನಾದ ಧರ್ಮರಾಜ ತಾಯಿ ಮಾಡಿದ ಅಪರಾಧಕ್ಕಾಗಿ ಅವಳ ಮೇಲೆ ಕೋಪಾಗೊಳ್ಳುತ್ತಾನೆ ಪಾಂಡವರೆಲ್ಲರು ಕರ್ಣನಿಗಾದ ದುರ್ದೆಸೆಗಾಗಿ ಮರುಗುತ್ತಾರೆ ಕರ್ಣನಿಗೆ ಕ್ಷತ್ರಿಯೋಚಿತವಾದ ಸಂಸ್ಕಾರಗಳು ಕೊನೆಯಲ್ಲಿ ನಡೆಯುತ್ತವೆ ಹೀಗೆ ಕರ್ಣನ ದುರಂತ ಕಥೆ ಕೊನೆಯಾಗುತ್ತದೆ.

Видео ಕರ್ಣನ ಕೊನೆ ಆಸೆ | The Last Desire Of Karna канала Spark Studio kannada
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
5 сентября 2021 г. 6:20:28
00:07:39
Другие видео канала
ಕನ್ನಡಿಗ #G.R ಗೋಪಿನಾಥ್ ಏರ್ ಡೆಕನ್ ಸ್ಥಾಪಿಸಿದ ಕಥೆ /G R GOPINATHಕನ್ನಡಿಗ #G.R ಗೋಪಿನಾಥ್ ಏರ್ ಡೆಕನ್ ಸ್ಥಾಪಿಸಿದ ಕಥೆ /G R GOPINATHಶಿವಮೊಗ್ಗ ವಿಮಾನ ನಿಲ್ದಾಣ ದ ಕಂಪ್ಲೀಟ್ ಡೀಟೇಲ್ಸ್ /Shivamogga Airport complete details.ಶಿವಮೊಗ್ಗ ವಿಮಾನ ನಿಲ್ದಾಣ ದ ಕಂಪ್ಲೀಟ್ ಡೀಟೇಲ್ಸ್ /Shivamogga Airport complete details.ರಾಜ ಬಾಹುಬಲಿ ದಿಗಂಬರ ಯಾಕಾದ ಗೊತ್ತಾ..? / Why did King Bahubali Became Digambara?ರಾಜ ಬಾಹುಬಲಿ ದಿಗಂಬರ ಯಾಕಾದ ಗೊತ್ತಾ..? / Why did King Bahubali Became Digambara?ಗಡಿಯಲ್ಲಿ  ಪಿನಾಕ ರೆಜಿಮೆಂಟ್, ಚೀನಾ ಮೇಲೆ ಹದ್ದಿನ ಕಣ್ಣು, 44 ಸೆಕೆಂಡ್ ನಲ್ಲಿ 12 ರಾಕೇಟ್ ಉಡಾವಣೆ ಏನಿದರ ತಾಕತ್ತು.ಗಡಿಯಲ್ಲಿ ಪಿನಾಕ ರೆಜಿಮೆಂಟ್, ಚೀನಾ ಮೇಲೆ ಹದ್ದಿನ ಕಣ್ಣು, 44 ಸೆಕೆಂಡ್ ನಲ್ಲಿ 12 ರಾಕೇಟ್ ಉಡಾವಣೆ ಏನಿದರ ತಾಕತ್ತು.Adolf Hitler's 3-mile-long Nazi getaway - here are insane facts about itAdolf Hitler's 3-mile-long Nazi getaway - here are insane facts about itಪ್ರಪಂಚದ ಅತ್ಯಂತ ಎತ್ತರದ ಪ್ರತಿಮೆಗಳಲ್ಲಿ ಭಾರತಕ್ಕೆ ಯಾವ ಸ್ಥಾನ ಗೊತ್ತಾ?TOP WORLD LARGEST STACHUಪ್ರಪಂಚದ ಅತ್ಯಂತ ಎತ್ತರದ ಪ್ರತಿಮೆಗಳಲ್ಲಿ ಭಾರತಕ್ಕೆ ಯಾವ ಸ್ಥಾನ ಗೊತ್ತಾ?TOP WORLD LARGEST STACHUಮಲ್ನಾಡ್ ಅಂಬ್ಲೆಟ್ /malnad ambletಮಲ್ನಾಡ್ ಅಂಬ್ಲೆಟ್ /malnad ambletಸನ್ಯಾಸಿನಿ ಆದ ಬಾಲಿವುಡ್ ನ ಟಾಪ್ ನಟಿ.! ಕೋಟಿ ಕೋಟಿ ಆಸ್ತಿ,ದೀಕ್ಷೆ ತಗೊಂಡಿದ್ದು ಯಾಕೆ.?#spark#studio#kannadaಸನ್ಯಾಸಿನಿ ಆದ ಬಾಲಿವುಡ್ ನ ಟಾಪ್ ನಟಿ.! ಕೋಟಿ ಕೋಟಿ ಆಸ್ತಿ,ದೀಕ್ಷೆ ತಗೊಂಡಿದ್ದು ಯಾಕೆ.?#spark#studio#kannadaನಾನು ನನ್ನ ಬದುಕು | naanu nanna badukuನಾನು ನನ್ನ ಬದುಕು | naanu nanna badukuThis Mexico City is one of the most dangerous places for tourists |Cabo San Lucas|Los Cabos|TravelThis Mexico City is one of the most dangerous places for tourists |Cabo San Lucas|Los Cabos|Travelಯಾರು ಈ ಮುರ್ಮು..?/ Inspiring Life story of Draupadi Murmu / India kannadaಯಾರು ಈ ಮುರ್ಮು..?/ Inspiring Life story of Draupadi Murmu / India kannada#Technician slapped #Kannada #Actor Chandan/ ನಟ ಚಂದನ್ ಗೆ ಶೂಟಿಂಗ್ ಸೆಟ್ ನಲ್ಲಿ ಕಾಪಾಳಮೋಕ್ಷ#Technician slapped #Kannada #Actor Chandan/ ನಟ ಚಂದನ್ ಗೆ ಶೂಟಿಂಗ್ ಸೆಟ್ ನಲ್ಲಿ ಕಾಪಾಳಮೋಕ್ಷಕರ್ನಾಟಕದ ಅಳಿಯ ಬ್ರಿಟನ್ ಪ್ರಧಾನಿ ಆಗತಿರೋದ್ರ ಹಿಂದಿನ ರೋಚಕ ಸ್ಟೋರಿಕರ್ನಾಟಕದ ಅಳಿಯ ಬ್ರಿಟನ್ ಪ್ರಧಾನಿ ಆಗತಿರೋದ್ರ ಹಿಂದಿನ ರೋಚಕ ಸ್ಟೋರಿDomestic and International Airports in Karnataka #ಕರ್ನಾಟಕದಲ್ಲಿ 19 #ಏರ್ಪೋರ್ಟ್ ಇವೆ ಅಂದ್ರೆ ನಂಬುತೀರಾ ?Domestic and International Airports in Karnataka #ಕರ್ನಾಟಕದಲ್ಲಿ 19 #ಏರ್ಪೋರ್ಟ್ ಇವೆ ಅಂದ್ರೆ ನಂಬುತೀರಾ ?ಕರ್ನಾಟಕ ರಾಜ್ಯದ ಒಟ್ಟು cm ಸಂಖ್ಯೆ 23 ಆದರೆ 5 ವರ್ಷ ಪೂರೈಸಿದೋರು ಬರೇ - 3 #cm#bommai#bsy#siddaramaiah#dkshiಕರ್ನಾಟಕ ರಾಜ್ಯದ ಒಟ್ಟು cm ಸಂಖ್ಯೆ 23 ಆದರೆ 5 ವರ್ಷ ಪೂರೈಸಿದೋರು ಬರೇ - 3 #cm#bommai#bsy#siddaramaiah#dkshi#ರಾಮನೆ ಕಟ್ಟಿಸಿದ ಸೇತುವೆ ಅವನೇ ಕೆಡವಿದ್ದು ಯಾಕೆ..?ಮಾತು ತಪ್ಪಿದನ #ರಾಮ..!#Ramayana / #Krishna #ramasethuve#ರಾಮನೆ ಕಟ್ಟಿಸಿದ ಸೇತುವೆ ಅವನೇ ಕೆಡವಿದ್ದು ಯಾಕೆ..?ಮಾತು ತಪ್ಪಿದನ #ರಾಮ..!#Ramayana / #Krishna #ramasethuve#Sagar to #Bangalure train jurney timelappes #sparkstudio kannada#Sagar to #Bangalure train jurney timelappes #sparkstudio kannadaವಿಶ್ವದ ಅತಿಉದ್ದದ ಜೋಡಿ ಸುರಂಗಮಾರ್ಗ ಲೋಕಾರ್ಪಣೆ 825 ಕೋಟಿ ಖರ್ಚು7100 ಮೆಟ್ರಿಕ್ ಟನ್ ಸಿಮೆಂಟ್ ಕಂಪ್ಲೀಟ್ ಡೀಟೇಲ್ಸ್ವಿಶ್ವದ ಅತಿಉದ್ದದ ಜೋಡಿ ಸುರಂಗಮಾರ್ಗ ಲೋಕಾರ್ಪಣೆ 825 ಕೋಟಿ ಖರ್ಚು7100 ಮೆಟ್ರಿಕ್ ಟನ್ ಸಿಮೆಂಟ್ ಕಂಪ್ಲೀಟ್ ಡೀಟೇಲ್ಸ್paytm ಅಧ್ಯಕ್ಷಸ್ಥಾನಕ್ಕೆ ವಿಜಯ್ ಶೇಖರ್ ಶರ್ಮ ರಾಜೀನಾಮೆ.#spark studio kannadapaytm ಅಧ್ಯಕ್ಷಸ್ಥಾನಕ್ಕೆ ವಿಜಯ್ ಶೇಖರ್ ಶರ್ಮ ರಾಜೀನಾಮೆ.#spark studio kannadaದುರ್ಯೋದನ ನಿಗೆ ಸ್ವರ್ಗ ಪ್ರಾಪ್ತಿ..?ದುರ್ಯೋದನ ನಿಗೆ ಸ್ವರ್ಗ ಪ್ರಾಪ್ತಿ..?#CHIDAMBARA RAHASYA / ಚಿದಂಬರ ರಹಸ್ಯ ಅಂದ್ರೆ ಎನ್ ಗೊತ್ತ ..?#CHIDAMBARA RAHASYA / ಚಿದಂಬರ ರಹಸ್ಯ ಅಂದ್ರೆ ಎನ್ ಗೊತ್ತ ..?
Яндекс.Метрика