Загрузка страницы

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರೇರಣಾತ್ಮಕ ನುಡಿಗಳು ಪರಾಕ್ರಮ್ ದಿವಸ್ ಜನವರಿ 23

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರೇರಣಾತ್ಮಕ ನುಡಿಗಳು:

ಅನ್ಯಾಯವನ್ನು ಸಹಿಸಿಕೊಳ್ಳುವುದು
ಮತ್ತು ತಪ್ಪುಗಳೊಂದಿಗೆ ರಾಜಿ ಮಾಡಿಕೊಳ್ಳುವುದು ನಮ್ಮ ದೊಡ್ಡ ಅಪರಾಧ ಎಂಬುದು ನೆನಪಿಡಿ.

ಸ್ವೀಕರಿಸಬೇಕಾದ ಸವಾಲುಗಳು ಇಲ್ಲದೇ
ಇದ್ದರೆ, ಹೋರಾಟಗಳು ಇಲ್ಲದೇ ಹೋದರೆ
ಜೀವನ ಅರ್ಧದಷ್ಟು ಆಸಕ್ತಿಯನ್ನು
ಕಳೆದುಕೊಳ್ಳುತ್ತದೆ.

ಒಬ್ಬ ವ್ಯಕ್ತಿ ತನ್ನ ಸಿದ್ಧಾಂತಕ್ಕಾಗಿ
ಸಾವನ್ನಪ್ಪಬಹುದು. ಆದರೆ, ಆತನ
ಮರಣಾನಂತರವೂ ಉಳಿಯುವ ಆ
ಸಿದ್ಧಾಂತ ಸಾವಿರ ಜನರಲ್ಲಿ
ಅವತರಿಸುತ್ತದೆ.

ಇತಿಹಾಸದಲ್ಲಿ ಯಾವುದೇ ನಿಜವಾದ ಬದಲಾವಣೆ ಆಗಬೇಕಾದರೆ ಅದು
ಕೇವಲ ಚರ್ಚೆಗಳಿಂದ ಸಾಧಿಸಲಾಗುವುದಿಲ್ಲ.

ಸ್ವಾತಂತ್ರ್ಯವನ್ನು ಯಾರೂ ಕೊಡುವುದಿಲ್ಲ, ಅದನ್ನು ನಾವೇ ಪಡೆದುಕೊಳ್ಳಬೇಕು.

ಉತ್ಸಾಹವಿಲ್ಲದೆ ಯಾವ ಮಹತ್ತರವಾದ ಕೆಲಸವೂ ನಡೆದಿಲ್ಲ.

ಜನ, ಹಣ ಮತ್ತು ವಸ್ತುಗಳು ಸ್ವತಃ ಜಯ
ಅಥವಾ ಸ್ವಾತಂತ್ರ್ಯವನ್ನು ತರಲು ಸಾಧ್ಯವಿಲ್ಲ. ಧೈರ್ಯಶಾಲಿ ಕೆಲಸಗಳು
ಮತ್ತು ಉಜ್ವಲ ಸಾಧನೆ ಮಾಡಬೇಕಾದರೆ ನಮ್ಮಲ್ಲಿ ನಾವು ಪ್ರೇರಕ ಶಕ್ತಿಯನ್ನು
ಹೊಂದಿರಬೇಕು.

ಪರಾಕ್ರಮ್ ದಿವಸ್ ಜನವರಿ 23

#netaji #subhashchandrabose #freedomfighter #birthanniversary #jayanti #parakramdivas #inspirational #quotes #kannada
#ಜಯಂತಿ #ಸ್ವಾತಂತ್ರ್ಯ #ನುಡಿಮುತ್ತುಗಳು #ಸ್ಪೂರ್ತಿ

Видео ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರೇರಣಾತ್ಮಕ ನುಡಿಗಳು ಪರಾಕ್ರಮ್ ದಿವಸ್ ಜನವರಿ 23 канала Inspire Kids Kannada
Показать
Страницу в закладки Мои закладки
Все заметки Новая заметка Страницу в заметки