Загрузка страницы

ಮಹಾ ಮೃತ್ಯುಂಜಯ ಮಂತ್ರ ದಿಂದ ಏನೆಲ್ಲಾ ಅನುಕೂಲ? ಈ ಮಂತ್ರ ಜಪ ಹೇಗೆ? 👇 ನಿಯಮಗಳು ಕ್ರಮ ಅರ್ಥ ಏನು?

ಮಹಾಮೃತ್ಯುಂಜಯ ಮಂತ್ರವನ್ನು ಪಠಿಸುವುದು ಹೇಗೆ..? #Mrityunjaya mantra#
#murthunjaya manthra kannada#

ಈ ತಪ್ಪುಗಳನ್ನು ಮಾಡಲೇಬೇಡಿ..!👇

ಅಕಾಲಿಕ ಮರಣದ ಭಯವನ್ನು ಹೊಂದಿದ್ದರೆ ಅಥವಾ ದೀರ್ಘಕಾಲದ ಆರೋಗ್ಯದ ಸಮಸ್ಯೆಗಳಿಂದ ಬಳಲುತ್ತಿದ್ದರೆ ನೀವು ತಪ್ಪದೇ ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಬೇಕೆಂದು ಶಿವ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಮಹಾ ಮೃತ್ಯುಂಜಯ ಮಂತ್ರವನ್ನು ಪಠಿಸುವುದರಿಂದ ಭಗವಾನ್‌ ಶಿವನು ಅತ್ಯಂತ ಸಂತೋಷಗೊಳ್ಳುತ್ತಾನೆ. ಗ್ರಹಗಳ ಸಮಸ್ಯೆಯಿದ್ದವರೂ ಕೂಡ ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಬಹುದು.

ಮಹಾಮೃತ್ಯುಂಜಯ ಮಂತ್ರವನ್ನು ಪಠಿಸುವಾಗ ಕೆಲವೊಂದು ನಿಯಮಗಳನ್ನು ಅನುಸರಿಸಬೇಕು. ಆ ನಿಯಮಗಳ ಪ್ರಕಾರ ಮಹಾಮೃತ್ಯುಂಜಯ ಮಂತ್ರವನ್ನು ಪಠಿಸದಿದ್ದರೆ ನೀವು ಮಂತ್ರವನ್ನು ಪಠಿಸಿಯೂ ಪ್ರಯೋಜನವಿಲ್ಲ. ಅಷ್ಟು ಮಾತ್ರವಲ್ಲ, ನೀವು ತಪ್ಪಾದ ನಿಯಮಗಳಲ್ಲಿ ಮಂತ್ರವನ್ನು ಪಠಿಸಿದರೆ ಭಗವಾನ್‌ ಶಿವನು ಕೂಡ ಕೋಪಗೊಳ್ಳುತ್ತಾನೆ. ಮಹಾಮೃತ್ಯುಂಜಯ ಮಂತ್ರವನ್ನು ಯಾವುದೇ ಸಮಯದಲ್ಲಿ ಕೂಡ ಪಠಿಸಬಹುದು. ಮಹಾಮೃತ್ಯುಂಜಯ ಮಂತ್ರವನ್ನು ಶ್ರಾವಣದಲ್ಲಿ ಪಠಿಸುವುದರಿಂದ ಇನ್ನೂ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು.

ಮಹಾಮೃತ್ಯುಂಜಯ ಮಂತ್ರವು ಶಿವನ ಮಂತ್ರವಾಗಿದೆ:

ಮಂತ್ರ: "ಓಂ ತ್ರಯಂಬಕಂ ಯಜಾಮಹೇ
ಸುಗಂಧಿಂ ಪುಷ್ಟಿವರ್ಧನಂ
ಉರ್ವಾರುಕಮೇವ ಬಂಧನಾನ್
ಮೃತ್ಯೊರ್ಮುಕ್ಷೀಯ ಮಾಂಮೃತಾತ್"‌
ಮಹಾಮೃತ್ಯುಂಜಯ ಮಂತ್ರವನ್ನು ಪರಶಿವನ ಅತ್ಯಂತ ಪ್ರಮುಖವಾದ ಮಂತ್ರವೆಂದು ಪರಿಗಣಿಸಲಾಗುತ್ತದೆ. ಮಹಾಮೃತ್ಯುಂಜಯ ಮಂತ್ರವನ್ನು ಪ್ರಾಣರಕ್ಷಕ ಮತ್ತು ಮಹಾಮೋಕ್ಷ ಮಂತ್ರವೆಂದೂ ಕೂಡ ಕರೆಯಲಾಗುತ್ತದೆ. ಈ ಮಂತ್ರವನ್ನು ಪಠಿಸುವಾಗ ಯಾವಾಗಲೂ ಉಚ್ಛಾರಣೆ ಸರಿಯಾಗಿರಬೇಕು. ಅಪ್ಪಿ ತಪ್ಪಿಯೂ ಕೂಡ ಮಂತ್ರದ ಉಚ್ಛಾರಣೆಯಲ್ಲಿ ತಪ್ಪಾಗಬಾರದು. ಮಹಾಮೃತ್ಯುಂಜಯವನ್ನು ಮಂತ್ರವನ್ನು ಪಠಿಸುವಾಗ ಎಂದಿಗೂ ನೆಲದ ಮೇಲೆ ಕುಳಿತು ಎಂದಿಗೂ ಪಠಿಸಬಾರದು.
ಮಂತ್ರವನ್ನು ಪಠಿಸುವಾಗ ಇದನ್ನು ನೆನಪಿನಲ್ಲಿಟ್ಟುಕೊಳ್ಳಿ:
ಮಹಾಮೃತ್ಯುಂಜಯ ಮಂತ್ರವನ್ನು ಪಠಿಸುವಾಗ ಮನಸ್ಸನ್ನು ಕೇಂದ್ರಿಕರಿಸಬೇಕು.
ನಿಮ್ಮ ಮನಸ್ಸು ಕೇವಲ ಮಂತ್ರದ ಮೇಲೆ ಕೇಂದ್ರೀಕೃತವಾಗಿರಬೇಕು.

ಮಂತ್ರ ಪಠಿಸುವಾಗ ನಿಮ್ಮ ಮನಸ್ಸು ನಿಮ್ಮ ಹಿಡಿತದಲ್ಲಿಟ್ಟುಕೊಳ್ಳಿ. ಮನಸ್ಸಿನಲ್ಲಿ ಬೇರಾವುದೇ ಚಿಂತೆಗಳಿರಬಾರದು.

ಮಹಾಮೃತ್ಯುಂಜಯ ಮಂತ್ರವನ್ನು ಪಠಿಸುವಾಗ ಯಾವುದೇ ರೀತಿಯ ಸೋಮಾರಿತನ, ಉದಾಸೀನತೆ ಸಲ್ಲದು. ಮಾಂಸಾಹಾರವನ್ನು ಸೇವಿಸಿ ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಬಾರದು
ಮಹಾ ಮೃತ್ಯುಂಜಯ ಮಂತ್ರ ಪಠಿಸುವುದರಿಂದಾಗುವ ಲಾಭಗಳು?

ಹಿಂದೂ ಧರ್ಮದಲ್ಲಿ ಹಲವಾರು ರೀತಿಯ ಮಂತ್ರಗಳಿವೆ. ಇದನ್ನು ಸದುದ್ದೇಶ ಹಾಗೂ ಒಳ್ಳೆಯ ಮನಸ್ಸಿನಿಂದ ಪಠಿಸಿದರೆ ಆಗ ಖಂಡಿತವಾಗಿಯೂ ಆ ಮಂತ್ರದ ಫಲವು ಸಿಗುವುದು ಎಂದು ಹೇಳಲಾಗುತ್ತದೆ. ಇಂತಹ ಮಂತ್ರಗಳಲ್ಲಿ ಮಹಾಮೃತ್ಯುಂಜಯ ಮಂತ್ರವು ಒಂದಾಗಿದೆ. ಈ ಮಂತ್ರವು ವೇದಗಳ ಹೃದಯವೆಂದು ಹೇಳಲಾಗುತ್ತದೆ. ಮಹಾಮೃತ್ಯುಂಜಯ ಮಂತ್ರವು ನಾಲ್ಕು ವೇದಗಳ ಕೆಲವೊಂದು ಭಾಗಗಳಲ್ಲಿ ಕಂಡುಬರುತ್ತದೆ. ಶುಕ್ರಾಚಾರ್ಯರಿಗೆ ಈಶ್ವರ ದೇವರು ಸ್ವತಃ ಈ ಮಂತ್ರವನ್ನು ಕಲಿಸಿದರು ಎಂದು ಪುರಾಣಗಳಲ್ಲಿ ಇದೆ. ರಾಕ್ಷಸರ ಗುರುವಾಗಿದ್ದ ಶುಕ್ರಾಚಾರ್ಯರು ಸಾವನ್ನು ಗೆದ್ದು ಬರುವ ಮಂತ್ರವನ್ನು ಶಿವನಿಂದ ಪಡೆದಿದ್ದರು. ಆದರೆ ವಶಿಷ್ಠ ಋಷಿ ಮಹರ್ಷಿಗಳು ದೀರ್ಘವಾದ ತಪಸ್ಸಿನ ಮೂಲಕ ಈ ಮಂತ್ರವನ್ನು ಪಡೆದು ಅದನ್ನು ಲೋಕ ಕಲ್ಯಾಣಾರ್ಥವಾಗಿ ಬಳಸಿಕೊಂಡರು.
ಮಹಾ ಮೃತ್ಯುಂಜಯ ಮಂತ್ರದ ಅರ್ಥ
ಎಲ್ಲಾ ಮೂರು ಲೋಕಗಳಲ್ಲಿ ಮೂರು ಕಣ್ಣಿನ ದೇವ, ಸಕಲ ಜೀವಿಗಳನ್ನು ಪೋಷಿಸುವವನು, ಮಾಗಿದ ಸೌತೆಕಾಯಿ ಬಳ್ಳಿಯಿಂದ ಬಿಡುಗಡೆ ಆಗುವಂತೆ ನನ್ನನ್ನು ಸಾವಿನಿಂದ ಅಮರತ್ವವು ಬಿಡಿಸಲಿ.
ಒತ್ತಡ ಮತ್ತು ಭೀತಿಯಿಂದ ಮನಸ್ಸನ್ನು ಮುಕ್ತಗೊಳಿಸುವುದು.

ಮಹಾ ಮೃತ್ಯುಂಜಯ ಮಂತ್ರವು ಸೂಕ್ಷ್ಮ ಮನಸ್ಸಿನ ಮೇಲೆ ಕೆಲಸ ಮಾಡುವಲ್ಲಿ ಒಂದು ಅದ್ಭುತವಾದ ಗುಣವನ್ನು ಹೊಂದಿದೆ. ಇದು ಭೀತಿಯನ್ನು ಹೋಗಲಾಡಿವುದು ಮತ್ತು ಮನಸ್ಸನ್ನು ಒತ್ತಡದಿಂದ ಮುಕ್ತಗೊಳಿಸುವುದು. ಈ ಮಂತ್ರವನ್ನು ನೀವು ಪಠಿಸಬಹುದು. ಇದನ್ನು ಪಠಿಸಲು ಸರಿಯಾದ ಸಮಯ ಮುಂಜಾನೆ 4 ಗಂಟೆಯಿಂದ 6 ಗಂಟೆ ತನಕ.
ಮುಂಜಾನೆ 108 ಸಲ ಮಂತ್ರ ಪಠಿಸಿ
ಮುಂಜಾನೆ ಎದ್ದು ಸ್ನಾನ ಮಾಡಿ, ಇದರ ಬಳಿಕ ಶಿವ ಚಿತ್ರವಿರುವತ್ತ ಮುಖ ಮಾಡಿ ಮತ್ತು 108 ಸಲ ಇದನ್ನು ಪಠಿಸಿ. ನೀವು 40 ದಿನಗಳ ಹೀಗೆ ಮಾಡಿದರೆ ಆಗ ಖಂಡಿತವಾಗಿಯೂ ಪರಿಹಾರ ಸಿಗುವುದು ಮತ್ತು ಆತ್ಮವಿಶ್ವಾಸವು ಹೆಚ್ಚಾಗುವುದು.
ಮಹಾಮೃತ್ಯಂಜಯ ಮಂತ್ರವನ್ನು ಪಠಿಸಿದರೆ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳನ್ನು ಪಡೆಯಲು ಸಾಧ್ಯವಾಗುವುದು.
ಇದು ಪರೀಕ್ಷೆ ಭೀತಿ ನಿವಾರಿಸುವುದು ಮತ್ತು ಪರೀಕ್ಷೆಯನ್ನು ತುಂಬಾ ಧೈರ್ಯವಾಗಿ ಎದುರಿಸಲು ನೆರವಾಗುವುದು. ಇದು ಏಕಾಗ್ರತೆ, ಗಮನ ಮತ್ತು ದೃಷ್ಟಿಕೋನ ಹೆಚ್ಚಿಸುವುದು. ಮನಸ್ಸಿನಲ್ಲಿ ಇರುವ ಎಲ್ಲಾ ಅಸ್ಥಿರವನ್ನು ನಿವಾರಣೆ ಮಾಡುವುದು.
ಮುಂಜಾನೆ ಎದ್ದು ಸ್ನಾನ ಮಾಡಿದ ಬಳಿಕ ಶಿವನ ಮೂರ್ತಿ ಅಥವಾ ಫೋಟೊದ ಮುಂದೆ ಕುಳಿತು ಈ ಮಂತ್ರವನ್ನು 21 ಬಾರಿ ಪಠಿಸಬೇಕು. ಓದುವುದರಲ್ಲಿ ನಿಮಗೆ ಯಾವುದೇ ಸಮಸ್ಯೆಯಾಗುತ್ತಲಿದ್ದರೆ ಅದು ನಿವಾರಣೆ ಆಗುವುದು. ಶಾಲೆಗೆ ಹೋಗುವ ಮೊದಲು ಮೂರು ಸಲ ಈ ಮಂತ್ರ ಪಠಿಸಿ ಮತ್ತು ಉತ್ತಮ ಫಲಿತಾಂಶಕ್ಕಾಗಿ ಮಲಗುವ ಮೊದಲು ಇದನ್ನು ಮೂರು ಸಲ ಪಠಿಸಿ. ಸಾಲದಿಂದ ಮುಕ್ತರಾಗಲು ಮತ್ತು ಹಣ ಮರಳಿ ಬರಲು

ಜೀವನದಲ್ಲಿ ಹಣ ಎನ್ನುವುದು ಅತೀ ಪ್ರಾಮುಖ್ಯತೆ ಪಡೆದಿದೆ. ಸಾಲದಿಂದಾಗಿ ನಿಮ್ಮ ಮನಸ್ಸಿನ ಶಾಂತಿ ಕೆಡಬಹುದು ಮತ್ತು ಒತ್ತಡಕ್ಕೆ ಸಿಲುಕಬಹುದು. ನಿದ್ರೆ ಇಲ್ಲದೆ ಇರುವುದು, ಜೀವನದಲ್ಲಿ ಆಸಕ್ತಿ ಕಳೆದುಕೊಳ್ಳುವುದು, ಆತ್ಮಹತ್ಯೆಗೆ ಮುಂದಾಗುವುದು, ಜೀವನದ ಧನಾತ್ಮಕ ಅಂಶದ ಬಗ್ಗೆ ಗಮನ ಕೇಂದ್ರೀಕರಿಸಲು ವಿಫಲವಾಗುವುದು ಸಾಲದ ಕೆಲವೊಂದು ಪರಿಣಾಮಗಳು.
ಸಾಲ ತೀರಲು ಮತ್ತು ಹಣ ಮರಳಿ ಬರಲು
ಸಾಲವು ನಿಮ್ಮನ್ನು ಖಂಡಿತವಾಗಿಯೂ ಚಿಂತೆಗೀಡು ಮಾಡುವುದು. ಅದೇ ಮಹಾ ಮೃತ್ಯುಂಜಯ ಮಂತ್ರವನ್ನು ಪಠಿಸಿದರೆ ಸಾಲದಿಂದ ಮುಕ್ತಿ ಪಡೆದು, ನಿಮ್ಮ ಹಣವು ಮರಳಿ ಬರುವುದು. ಬೆಳಗ್ಗೆ ನೀವು 108 ಸಲ ನೀವು ಈ ಮಂತ್ರವನ್ನು ಪಠಿಸಬೇಕು ಮತ್ತು ಅದೇ ರೀತಿ ಸಂಜೆ ಕೂಡ. ಈ ರೀತಿ ಮಾಡಿದರೆ ಆಗ ನಿಮ್ಮ ಆರ್ಥಿಕ ಪರಿಸ್ಥಿತಿಯು ಖಂಡಿತವಾಗಿಯೂ ಸುಧಾರಣೆ ಆಗುವುದು. ನಿಮ್ಮ ಆದಾಯ ಹೆಚ್ಚುವುದು ಮತ್ತು ಆತ್ಮವಿಶ್ವಾಸವು ಮರಳಿ ಬರುವುದು.
ವೃತ್ತಿ ಬದುಕಿನಲ್ಲಿ ಯಶಸ್ವಿಯಾಗಲು

ಪ್ರತಿಯೊಬ್ಬರ ವೃತ್ತಿ ಬದುಕಿನಲ್ಲಿ ಏನಾದರೊಂದು ತೊಂದರೆಯು ಇದ್ದೇ ಇರುತ್ತದೆ. ಆದರೂ ಕಚೇರಿಗಳಲ್ಲಿ ಕೆಲವೊಂದು ಸಲ ವೃತ್ತಿಪರ ವೈಷಮ್ಯಗಳು ಇದ್ದೇ ಇರುತ್ತದೆ. ಇದರಿಂದಾಗಿ ನಿಮಗೆ ಭಡ್ತಿ ಹಾಗೂ ಸಂಬಳ ಹೆಚ್ಚಳಕ್ಕೆ ತೊಂದರೆ ಆಗುತ್ತಲಿರಬಹುದು. ನಿಮ್ಮ ಹಾದಿಗೆ ತೊಂದರೆ ಆಗುವುತ್ತಿರುವುದನ್ನು ತಪ್ಪಿಸಲು ಮೃತ್ಯುಂಜಯ ಮಂತ್ರ ಪಠಿಸಿ ಮತ್ತು ನಿಮ್ಮ ಗುರಿಯನ್ನು ಸಾಧಿಸಿ. ವೃತ್ತಿಪರ ಜೀವನದಲ್ಲಿ ಯಶಸ್ವಿಯಾಗಲು…
ನಿಮ್ಮ ವೃತ್ತಿಪರ ಯಶಸ್ಸು ಮತ್ತು ಪ್ರಗತಿಯನ್ನು ಸಹಿಸದೆ ಇರುವಂತಹ ಹಲವಾರು ಜನರು ಇರಬಹುದು. ಇದರಿಂದ ನಿಮ್ಮ ಸಾಧನೆಗೆ ಅಡ್ಡಿಯಾಗುತ್ತಿರಬಹುದು. ಪ್ರತಿನಿತ್ಯವೂ ನೀವು ಬೆಳಗ್ಗೆ 54 ಸಲ ಮತ್ತು ಸಂಜೆ ವೇಳೆ 54 ಸಲ ಈ ಮಂತ್ರವನ್ನು ಪಠಿಸಬೇಕು. ನಿಮ್ಮ ದೈನಂದಿನ ಕೆಲಸಗಳನ್ನು ಆರಂಭಿಸುವ ಮೊದಲು ಈ ಮಂತ್ರವನ್ನು ಮೂರು ಸಲ ಪಠಿಸಿ. ನಿಮ್ಮ ಶತ್ರುಗಳು ಸೂರ್ಯನ ಬೆಳಕಿನಡಿಯಲ್ಲಿ ಮಂಜು ಕರಗುವಂತೆ ನಾಶವಾಗುವರು.. ಈ ಮಂತ್ರ ಕೇಳಿ ...

Видео ಮಹಾ ಮೃತ್ಯುಂಜಯ ಮಂತ್ರ ದಿಂದ ಏನೆಲ್ಲಾ ಅನುಕೂಲ? ಈ ಮಂತ್ರ ಜಪ ಹೇಗೆ? 👇 ನಿಯಮಗಳು ಕ್ರಮ ಅರ್ಥ ಏನು? канала VEDAA BRAHMA
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
31 октября 2020 г. 11:45:09
00:49:55
Другие видео канала
Ekadasha Rudram | 11 Times Chanting of Rudram | Powerful Rudram ChantingEkadasha Rudram | 11 Times Chanting of Rudram | Powerful Rudram Chantingಮಹಾ ಮೃತ್ಯುಂಜಯ ಮಂತ್ರ 108 ಸಾರಿ Maha mrithynjayamantraಮಹಾ ಮೃತ್ಯುಂಜಯ ಮಂತ್ರ 108 ಸಾರಿ Maha mrithynjayamantraಒಂದುಸಾರಿ ಧನವಂತರಿ ಮಂತ್ರವನ್ನು ಕೇಳಿದರೆ ರೋಗಗಳು ತೊಲಗಿ ಸಂಪೂರ್ಣ ಆರೋಗ್ಯ ಐಶ್ವರ್ಯದಿಂದ ಬಾಳುತ್ತೀರ  Health Mantraಒಂದುಸಾರಿ ಧನವಂತರಿ ಮಂತ್ರವನ್ನು ಕೇಳಿದರೆ ರೋಗಗಳು ತೊಲಗಿ ಸಂಪೂರ್ಣ ಆರೋಗ್ಯ ಐಶ್ವರ್ಯದಿಂದ ಬಾಳುತ್ತೀರ Health Mantraಎಷ್ಟು ಸಾಹಸವಂತ | Eshtu Sahasavantha | Dr.Vidyabhushana | Shri Vadiraajaru | Thirumale Srinivasಎಷ್ಟು ಸಾಹಸವಂತ | Eshtu Sahasavantha | Dr.Vidyabhushana | Shri Vadiraajaru | Thirumale SrinivasMaha Mrityunjaya Mantra [108 times] - महामृत्युंजय मंत्र  | Lyrics & Meaning | Sounds of IshaMaha Mrityunjaya Mantra [108 times] - महामृत्युंजय मंत्र | Lyrics & Meaning | Sounds of Ishaಮಹಾ ಮೃತ್ಯುಂಜಯ ಮಂತ್ರ |Mrityunjaya Mantra, Significance, Meaning, How and When to Chant@Puja N Pujariಮಹಾ ಮೃತ್ಯುಂಜಯ ಮಂತ್ರ |Mrityunjaya Mantra, Significance, Meaning, How and When to Chant@Puja N Pujariಶ್ರೀ ವಿಷ್ಣುಸಹಸ್ರನಾಮ (ಕನ್ನಡ ದಪ್ಪ ಅಕ್ಷರಗಳ ಸಹಿತ) Sri Vishnu Sahasranama (With Kannada Subtitles)ಶ್ರೀ ವಿಷ್ಣುಸಹಸ್ರನಾಮ (ಕನ್ನಡ ದಪ್ಪ ಅಕ್ಷರಗಳ ಸಹಿತ) Sri Vishnu Sahasranama (With Kannada Subtitles)Mantralaya | Prasanna | Sri Raghavendra Swamy Kannada Devotional SongsMantralaya | Prasanna | Sri Raghavendra Swamy Kannada Devotional Songsಶಿವಾಷ್ಟಕಂ ಈ ಸ್ತೋತ್ರಾ ಕೇಳಿ  ಕಷ್ಟಗಳು ತೊಲಗಿ ಕೋರಿಕೆಗಳು ನೆರವೇರುತ್ತದೆ - SHIVA STUTHI KANNADA BHAKTHI 2300ಶಿವಾಷ್ಟಕಂ ಈ ಸ್ತೋತ್ರಾ ಕೇಳಿ ಕಷ್ಟಗಳು ತೊಲಗಿ ಕೋರಿಕೆಗಳು ನೆರವೇರುತ್ತದೆ - SHIVA STUTHI KANNADA BHAKTHI 2300ಸೌಂದರ್ಯಲಹರೀ | Soundarya Lahari |  Kannada Lyrical Video | Sindhu Smithaಸೌಂದರ್ಯಲಹರೀ | Soundarya Lahari | Kannada Lyrical Video | Sindhu Smithaಯಾವ ತರಹದ ಆರೋಗ್ಯದ ಸಮಸ್ಯೆ ಇಲ್ಲದೆ ಆರೋಗ್ಯದಿಂದ ಇರಬೇಕೆಂದರೆ ಈ ಹಾಡನ್ನು ಕೇಳಿರಿ Sri Rama Dhoothyam -   2466ಯಾವ ತರಹದ ಆರೋಗ್ಯದ ಸಮಸ್ಯೆ ಇಲ್ಲದೆ ಆರೋಗ್ಯದಿಂದ ಇರಬೇಕೆಂದರೆ ಈ ಹಾಡನ್ನು ಕೇಳಿರಿ Sri Rama Dhoothyam - 2466ವಿಷ್ಣು ಸಹಸ್ರನಾಮ ಪಠಣ ಮಾಡಿ,ಜೀವನದಲ್ಲಿ ಯಶಸ್ಸು ಸಾಧಿಸಿ... /Vishnu Sahasranama in Kannadaವಿಷ್ಣು ಸಹಸ್ರನಾಮ ಪಠಣ ಮಾಡಿ,ಜೀವನದಲ್ಲಿ ಯಶಸ್ಸು ಸಾಧಿಸಿ... /Vishnu Sahasranama in Kannadaಹನುಮಾನ್ ಚಾಲೀಸಾ ಕೇಳಿ ದುಷ್ಟಗ್ರಹಗಳು ತೊಲಗಿ ಸುಖಪ್ರಾಪ್ತಿ ಲಭಿಸುವದು| Hanuman chalisa | Kannada Bhakthi Songsಹನುಮಾನ್ ಚಾಲೀಸಾ ಕೇಳಿ ದುಷ್ಟಗ್ರಹಗಳು ತೊಲಗಿ ಸುಖಪ್ರಾಪ್ತಿ ಲಭಿಸುವದು| Hanuman chalisa | Kannada Bhakthi SongsMrityunjaya Stotra 108 Tim's, ಮೃತ್ಯುಂಜಯ ಸ್ತೋತ್ರ ನಿಮ್ಮ ನೋವುಗಳಿಗೆ ಇಲ್ಲಿದೆ ಪರಿಹಾರMrityunjaya Stotra 108 Tim's, ಮೃತ್ಯುಂಜಯ ಸ್ತೋತ್ರ ನಿಮ್ಮ ನೋವುಗಳಿಗೆ ಇಲ್ಲಿದೆ ಪರಿಹಾರPratyangira Mantra | Shatrusamhar Mantra | Mantra for protection | Blackmagic Removal | പ്രത്യംഗിരPratyangira Mantra | Shatrusamhar Mantra | Mantra for protection | Blackmagic Removal | പ്രത്യംഗിരಎಂತಹ ಸಮಸ್ಯೆಗಳು ಇದ್ದರೂ ಈ ಹಾಡನ್ನು ಕೇಳಿದರೆ ಸಮಸ್ಯೆ ದೂರವಾಗುತ್ತದೆ - VINAYAGAR  MANASASMARAMI - 460ಎಂತಹ ಸಮಸ್ಯೆಗಳು ಇದ್ದರೂ ಈ ಹಾಡನ್ನು ಕೇಳಿದರೆ ಸಮಸ್ಯೆ ದೂರವಾಗುತ್ತದೆ - VINAYAGAR MANASASMARAMI - 460ಶಿವಾಷ್ಟಕಂ ಈ ಸ್ತೋತ್ರಾ ಕೇಳಿ ಕಷ್ಟಗಳು ತೊಲಗಿ ಕೋರಿಕೆಗಳು ನೆರವೇರುತ್ತದೆ - SHIVA STUTHI KANNADA BHAKTHIಶಿವಾಷ್ಟಕಂ ಈ ಸ್ತೋತ್ರಾ ಕೇಳಿ ಕಷ್ಟಗಳು ತೊಲಗಿ ಕೋರಿಕೆಗಳು ನೆರವೇರುತ್ತದೆ - SHIVA STUTHI KANNADA BHAKTHIMrityunjaya Mantra 108 Tim's -ಮೃತ್ಯುಂಜಯ ಮಹಾ ಮಂತ್ರ || MAHA MANTRAM ||Mrityunjaya Mantra 108 Tim's -ಮೃತ್ಯುಂಜಯ ಮಹಾ ಮಂತ್ರ || MAHA MANTRAM ||Vishnu Sahasranamam - M S Subbulakshmi jrVishnu Sahasranamam - M S Subbulakshmi jr
Яндекс.Метрика