Загрузка страницы

ನೋಡ್ರಿ ನಮ್ಮ ಕಾನ್ಸ್ಟೇಬಲ್ ಯಾವ ಫಿಲ್ಮ್ ಸ್ಟಾರ್‌ಗೂ ಕಮ್ಮಿ ಇಲ್ಲ, ಗೃಹ ಸಚಿವ ಹೀಗೆಂದಿದ್ದು ಯಾಕೆ?Karnataka police

ಮಂಗಳೂರು: "ಯಾವ ಫಿಲ್ಮ್‌ಸ್ಟಾರ್‌ಗೂ ಕಡಿಮೆಯಿಲ್ಲ" ಪೊಲೀಸ್ ಸಿಬ್ಬಂದಿಯನ್ನು ಹೊಗಳಿದ ಗೃಹಸಚಿವ ಪರಮೇಶ್ವರ್
ಮಂಗಳೂರು: ರಾಜ್ಯ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರು ಪೊಲೀಸ್ ಸಿಬ್ಬಂದಿಯೊಬ್ಬರ ಬಗ್ಗೆ ಮೆಚ್ಚುಗೆಯ ಮಾತನಾಡಿ, 'ಆತನಿಗೆ ಪೊಲೀಸ್ ಯೂನಿಫಾರಂ ಬಿಟ್ಟು ಬೇರೆ ಡ್ರೆಸ್ ಹಾಕಿದ್ದಲ್ಲಿ ಯಾವ ಫಿಲ್ಮ್ ಸ್ಟಾರ್‌ಗೂ ಕಡಿಮೆಯಿಲ್ಲ' ಎಂದು ಹೊಗಳಿದ ಪ್ರಸಂಗ ಮಂಗಳೂರಿನಲ್ಲಿ ನಡೆದಿದೆ.

ಮಂಗಳೂರಿನ ಪೊಲೀಸ್ ಲೇನ್‌ನಲ್ಲಿ ಪೊಲೀಸ್ ವಸತಿ ಸಮುಚ್ಚಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಈ ಪೊಲೀಸ್ ಸಿಬ್ಬಂದಿ ಸ್ಪುಟವಾಗಿ ನಿರೂಪಣೆ ಮಾಡುತ್ತಿದ್ದರು. ವೇದಿಕೆಯಲ್ಲಿ ಗೃಹಸಚಿವರು ಕರ್ನಾಟಕ ಪೊಲೀಸ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ರಾಜ್ಯದ ಪೊಲೀಸರಲ್ಲಿ ಕೆಲವರು ಉತ್ತಮ ಸಾಹಿತಿಗಳಿದ್ದಾರೆ. ಉತ್ತಮ ಹಾಡುಗಾರರಿದ್ದಾರೆ ಎಂದು ಹೇಳುತ್ತಾ ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದ ಪೊಲೀಸ್ ಸಿಬ್ಬಂದಿಯ ಬಗ್ಗೆ ''ಎಷ್ಟೊಂದು ಚೆನ್ನಾಗಿ ನಿರೂಪಣೆ ಮಾಡುತ್ತಿದ್ದಾನೆ ನಮ್ಮ ಹುಡುಗ. ನಮ್ಮಲ್ಲಿ 'ಶಂಕರ್'ರಂತಹ ನಿರೂಪಕರನ್ನು ಕರೆಸುತ್ತೇವೆ. ಇವನು ಶಂಕರ್‌ಗಿಂತಲೂ ಚೆನ್ನಾಗಿ ಮಾಡಿದ್ದಾನೆ" ಎಂದು ಹೊಗಳಿದ್ದಾರೆ. ಈ ವೇಳೆ ಸಭೆಯಿಂದ ಕರತಾಡನ ಕೇಳಿ ಬಂದಿದೆ.

ಅಂದ ಹಾಗೆ ಗೃಹ ಸಚಿವರಿಂದಲೇ ಶಹಬ್ಬಾಷ್‌ಗಿರಿ ಪಡೆದುಕೊಂಡವರು ಬಂಟ್ವಾಳ ಠಾಣಾ ಸಿಬ್ಬಂದಿ ವಿವೇಕ್‌. ಇವರು ಮೂಲತಃ ಸುಬ್ರಹ್ಮಣ್ಯ ನಿವಾಸಿಯಾಗಿದ್ದಾರೆ.
#parameshwar #karnatakahomeminister #motivation #motivationalvideo #motivationspeech #mangalorepolice

Видео ನೋಡ್ರಿ ನಮ್ಮ ಕಾನ್ಸ್ಟೇಬಲ್ ಯಾವ ಫಿಲ್ಮ್ ಸ್ಟಾರ್‌ಗೂ ಕಮ್ಮಿ ಇಲ್ಲ, ಗೃಹ ಸಚಿವ ಹೀಗೆಂದಿದ್ದು ಯಾಕೆ?Karnataka police канала Star Of Mangalore
Показать
Страницу в закладки Мои закладки
Все заметки Новая заметка Страницу в заметки