Загрузка страницы

ರಂಗ ನಾಯಕ ರಾಜೀವ ಲೋಚನ

ವಿದ್ಯಾಭೂಷಣರ ಸುಶ್ರಾವ್ಯ ಕಂಠದಲ್ಲಿ ಪುರಂದರದಾಸರ ರಚನೆ. ಸುಪ್ರಭಾತ ಸಮಯದಲ್ಲಿ ದೇವರನ್ನು ಎಬ್ಬಿಸುವ ಕಲ್ಪನೆಯ ಭಕ್ತಿಗೀತೆ. ಪ್ರಕೃತಿಯಲ್ಲಿ ಮುಂಜಾವಿನ ಚಟುವಟಿಕೆಗಳನ್ನು ಬಣ್ಣಿಸುತ್ತಲೇ ಶ್ರೀಹರಿಯನ್ನು ಸ್ತುತಿಸುವ ಒಂದು ಸುಮಧುರ ಭಕ್ತಿಗೀತೆ. ಮೋಹನ ರಾಗದಲ್ಲಿರುವ ಇದನ್ನು ಕೇಳಿ ದಿನದಾರಂಭ ಮಾಡಿದರೆ ಅಂದು ಇಡೀ ದಿನ ಲವಲವಿಕೆಯನ್ನು, ಹೊಸದೊಂದು ಚೈತನ್ಯವನ್ನು ಕೊಡುವ ಶಕ್ತಿಗೀತೆ!

ಪೂರ್ಣ ಸಾಹಿತ್ಯ ಇಲ್ಲಿದೆ:

ರಂಗನಾಯಕ ರಾಜೀವ ಲೋಚನ ರಮಣನೆ ಬೆಳಗಾಯಿತು ಏಳೆನ್ನುತ
ಅಂಗನೆ ಲಕುಮಿ ತಾ ಪತಿಯನೆಬ್ಬಿಸಿದಳು ಶೃಂಗಾರದ ನಿದ್ದೆ ಸಾಕೆನ್ನುತ || ಪ ||

ಪಕ್ಷಿರಾಜನು ಬಂದು ಬಾಗಿಲಲ್ಲಿ ನಿಂದು ಅಕ್ಷಿ ತೆರೆದು ಬೇಗ ಈಕ್ಷಿಸೆಂದು
ಪಕ್ಷಿಜಾತಿಗಳೆಲ್ಲ ಚಿಲಿಪಿಲಿಗುಟ್ಟುತ್ತ ಸೂಕ್ಷ್ಮದಲಿ ನಿನ್ನ ಸ್ಮರಿಸುವವೋ ಕೃಷ್ಣ || ೧ ||

ಸನಕ ಸನಂದನ ಸನತ್ಸುಜಾತರು ಬಂದು ವಿನಯದಿಂ ಕರ ಮುಗಿದು ಓಲೈಪರು
ಘನಶುಕ ಶೌನಕ ವ್ಯಾಸವಾಲ್ಮೀಕರು ನೆನೆದು ನೆನೆದು ಕೊಂಡಾಡುವರು ಹರಿಯೇ || ೨ ||

ಸುರರು ಕಿನ್ನರರು ಕಿಂಪುರುಷರು ಉರಗರು ಪರಿಪರಿಯಲಿ ನಿನ್ನ ಸ್ಮರಿಸುವರು
ಅರುಣನು ಬಂದು ಉದಯಾಚಲದಲಿ ನಿಂದು ಕಿರಣ ತೋರುವನು ಭಾಸ್ಕರನು ಶ್ರೀಹರಿಯೆ || ೩ ||

ಪದುಮನಾಭನೆ ನಿನ್ನ ನಾಮಾಮೃತವನ್ನು ಪದುಮಾಕ್ಷಿಯರು ತಮ್ಮ ಗೃಹದೊಳಗೆ
ಉದಯದೊಳೆದ್ದು ಸವಿದಾಡುತ್ತ ಪಾಡುತ್ತ ದಧಿಯ ಕಡೆವರೇಳೋ ಮಧುಸೂದನ ಕೃಷ್ಣ || ೪ ||

ಮುರಮಥನನೆ ನಿನ್ನ ಚರಣದ ಸೇವೆಯ ಕರುಣಿಸಬೇಕೆಂದು ತರುಣಿಯರು
ಪರಿಪರಿಯಿಂದಲೆ ಸ್ಮರಿಸಿ ಹಾರೈಪರು ಪುರಂದರವಿಠಲ ನೀನೇಳೋ ಶ್ರೀಹರಿಯೆ || ೫ ||

Видео ರಂಗ ನಾಯಕ ರಾಜೀವ ಲೋಚನ канала Srivathsa Joshi
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
18 июля 2013 г. 7:40:43
00:06:53
Яндекс.Метрика