Загрузка страницы

ಜಗದಾಭಿರಾಮ ಪಡುಬಿದ್ರೆಯವರ ಯಕ್ಷಜಗನ್ನೋಟ (An Interview with Jagadabhirama Padubidre)

ತೆಂಕುತಿಟ್ಟು ಯಕ್ಷಗಾನ ಕ್ಷೇತ್ರದ ಪುಂಡುವೇಷ, ಸ್ತ್ರೀವೇಷ, ಕಿರೀಟವೇಷ, ಬಣ್ಣದ ವೇಷ ಮೊದಲಾದ ವೇಷಗಳನ್ನು ಸಮರ್ಥವಾಗಿ ಮಾಡಬಲ್ಲ ಜಗದಾಭಿರಾಮ ಪಡುಬಿದ್ರೆ (An able artist who can perform varieties of characters in Tenkutittu Yakshagana Jagadabhirama Padubidre)

(An Article about Jagadabhirama Padubidre in Kannada https://yaksharangabykateelusitla.blogspot.com/2019/03/able-artist-who-can-perform-varieties_90.html)

ಜಗದಾಭಿರಾಮಸ್ವಾಮಿ ಪಡುಬಿದ್ರೆಯವರು ತೆಂಕುತಿಟ್ಟು ಯಕ್ಷಗಾನದಲ್ಲಿ ಸದ್ಯ ಮುಂಚೂಣಿಯಲ್ಲಿರುವ ಹೆಸರು. ಪುಂಡುವೇಷ, ಸ್ತ್ರೀವೇಷ, ಕಿರೀಟವೇಷ, ಬಣ್ಣದ ವೇಷ ಹೀಗೆ ತೆಂಕುತಿಟ್ಟು ಮುಮ್ಮೇಳದ ಹೆಚ್ಚಿನ ರೀತಿಯ ಪಾತ್ರಗಳನ್ನು ಪರಿಣಾಮಕಾರಿಯಾಗಿ ಮಾಡಬಲ್ಲವರು.

11ನೇ ನವೆಂಬರ್ 1973 ರಲ್ಲಿ ಪಡುಬಿದ್ರೆಯಲ್ಲಿ ದಿ. ಪಟ್ಟಾಭಿರಾಮಸ್ವಾಮಿ ಹಾಗೂ ವಸಂತಿ ದಂಪತಿಗಳಿಗೆ ಪುತ್ರರಾಗಿ ಜನಿಸಿದ ಇವರು ಪ್ರಾಥಮಿಕ ಹಂತದ ಶಿಕ್ಷಣವನ್ನು ಗಳಿಸಿಕೊಂಡಿದ್ದಾರೆ. ಆ ತರುವಾಯ ಸೂರಿಕುಮೇರಿ ಗೋವಿಂದ ಭಟ್ಟರು ಮತ್ತು ಕರ್ಗಲ್ಲು ವಿಶ್ವೇಶ್ವರ ಭಟ್ಟರಿಂದ ಯಕ್ಷಗಾನ ನಾಟ್ಯ ತರಬೇತಿಯನ್ನು ಪಡೆದರು. ಬಳಿಕ ನೆಡ್ಲೆ ನರಸಿಂಹ ಭಟ್ಟರಲ್ಲಿ ರಂಗಮಾಹಿತಿಯ ಅನುಭವವನ್ನು ಸಂಪಾದಿಸಿಕೊಂಡರು.

ತೆಂಕುತಿಟ್ಟು ಯಕ್ಷಗಾನದಲ್ಲಿ ಪುಂಡುವೇಷ, ಸ್ತ್ರೀವೇಷ, ಕಿರೀಟವೇಷ, ಬಣ್ಣದ ವೇಷ ಎಲ್ಲವನ್ನೂ ಪರಿಣಾಮಕಾರಿಯಾಗಿ ಮಾಡುವಲ್ಲಿ ಗುರುವಿನೋಪಾದಿಯಲ್ಲಿ ಕುರಿಯ ಗಣಪತಿ ಶಾಸ್ತ್ರಿಗಳು ಮತ್ತು ಪದ್ಯಾಣ ಶಂಕರನಾರಾಯಣ ಭಟ್ಟರ ಕೊಡುಗೆಯನ್ನು ಬಹಳ ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತಾರೆ. ವೇಷಗಳ ಪ್ರವೇಶ ಕ್ರಮ, ನಾಟ್ಯವೈಖರಿ, ರಂಗಮಾಹಿತಿ, ಪಾತ್ರದ ಭಾವ ಇವುಗಳೆಲ್ಲವನ್ನೂ ಕುರಿಯ ಗಣಪತಿ ಶಾಸ್ತ್ರಿಗಳು ಪರಿಣಾಮಕಾರಿಯಾಗಿ ಕಲಿಸಿಕೊಟ್ಟಿರುವುದನ್ನು ಹೇಳಲು ಜಗದಾಭಿರಾಮಸ್ವಾಮಿ ಪಡುಬಿದ್ರೆಯವರು ಮರೆಯುವುದಿಲ್ಲ. ಕಟೀಲು ಮೇಳದಲ್ಲಿ ಕುರಿಯ ಗಣಪತಿ ಶಾಸ್ತ್ರಿಗಳ ಭಾಗವತಿಕೆ ಮತ್ತು ಪದ್ಯಾಣ ಶಂಕರನಾರಾಯಣ ಭಟ್ಟರ ಚೆಂಡೆಯ ಸಾಂಗತ್ಯ ಜಗದಾಭಿರಾಮಸ್ವಾಮಿ ಪಡುಬಿದ್ರೆಯವರ ಎಲ್ಲಾ ಪಾತ್ರಗಳನ್ನು ಮೆರೆಸಿವೆ. ಇವತ್ತಿಗೂ ಈ ಇಬ್ಬರು ಹಿಮ್ಮೇಳದಲ್ಲಿದ್ದರೆ ನಾನು ಯಾವ ಪಾತ್ರವನ್ನು ಮಾಡಿದರೂ ಕೂಡ ಅದು ವಿಜೃಂಭಿಸುತ್ತದೆ ಎಂದು ಹೇಳುತ್ತಾರೆ.

ಧರ್ಮಸ್ಥಳ ಮೇಳದಲ್ಲಿ 7 ವರ್ಷಗಳು, ಕಟೀಲು ಮೇಳದಲ್ಲಿ 6 ವರ್ಷಗಳು, ಮಧೂರು ಮೇಳ ಮತ್ತು ಬಪ್ಪನಾಡು ಮೇಳದಲ್ಲಿ ತಲಾ ಒಂದೊಂದು ವರ್ಷಗಳ ಕಲಾವ್ಯವಸಾಯವನ್ನು ಮಾಡಿದ್ದಾರೆ. 1999 ರ ಬಳಿಕ ಮೇಳ ತಿರುಗಾಟವನ್ನು ನಿಲ್ಲಿಸಿದ್ದರೂ ಕೂಡ ಮತ್ತೆ ಹೊಸನಗರ ಮೇಳ, ಹನುಮಗಿರಿ ಮೇಳದಲ್ಲಿ ಕಲಾವ್ಯವಸಾಯವನ್ನು ಮುನ್ನಡೆಸುತ್ತ ಬರುತ್ತಿದ್ದಾರೆ.

ಪುಂಡುವೇಷ, ಸ್ತ್ರೀವೇಷ, ಕಿರೀಟವೇಷ, ಬಣ್ಣದ ವೇಷಧಾರಿಯಾಗಿರುವ ಇವರು ಸುಭದ್ರೆ, ಪ್ರಮೀಳೆ, ದಮಯಂತಿ, ಕರ್ಣ, ಹಿರಣ್ಯಾಕ್ಷ, ಇಂದ್ರಜಿತು, ಅರ್ಜುನ, ಭೀಮ, ನರಕಾಸುರ, ಕಂಸ, ಬ್ರಹ್ಮ, ವಿಷ್ಣು, ಚಂಡ ಮುಂಡರು, ಶುಂಭ. ಮಹಿಷಾಸುರ ಹೀಗೆ ಅನೇಕ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿ ಸೈ ಎನ್ನಿಸಿಕೊಂಡಿದ್ದಾರೆ.

ಒಟ್ಟಾರೆ 10 ಘಂಟೆಗಳ ಅವಧಿಯ ಈ ಸಂದರ್ಶನದ ಸಾಕ್ಷ್ಯಚಿತ್ರದಲ್ಲಿ ಮೊದಲ ಎರಡು ಘಂಟೆಗಳ ಕಾಲ ಜಗದಾಭಿರಾಮ ಪಡುಬಿದ್ರೆಯವರ ಸಂದರ್ಶನವಿದೆ. ಆ ಬಳಿಕದ 8 ಘಂಟೆಗಳ ಅವಧಿಯಲ್ಲಿ ಜಗದಾಭಿರಾಮರ ಬ್ರಹ್ಮಕಪಾಲ ಪ್ರಸಂಗದ ಕಿರಾತ, ಕಟೀಲು ಮೇಳದಲ್ಲಿನ ಇಂದ್ರಜಿತು ಕಾಳಗದ ಇಂದ್ರಜಿತು, ಕುರುಡಪದವು ಎಂಬಲ್ಲಿ ನಡೆದ ಇಂದ್ರಜಿತು ಕಾಳಗದ ಇಂದ್ರಜಿತು, ಅಗ್ರಪೂಜೆ ಪ್ರಸಂಗದ ಶಿಶುಪಾಲ, ಕೌಂಡ್ಲಿಕ ವಧೆ ಪ್ರಸಂಗದ ಕೌಂಡ್ಲಿಕ, ಮಹಿಷಮರ್ದಿನಿ ಪ್ರಸಂಗದ ಮಹಿಷಾಸುರ ಇಡಿಯಾಗಿ ಅಳವಡಿಸಿಕೊಳ್ಳಲಾಗಿದೆ. ವೀಡಿಯೋಗಳನ್ನು ಕೊಟ್ಟು ಸಹಕರಿಸಿದ ಶ್ರೀ ಕುರಿಯ ಗೋಪಾಲಕೃಷ್ಣ ಶಾಸ್ತ್ರಿಗಳು ಮತ್ತು ಶ್ರೀ ಸುಣ್ಣಂಗುಳಿ ಶ್ರೀಕೃಷ್ಣ ಭಟ್ಟರಿಗೆ ಧನ್ಯವಾದಗಳು.

ಯಕ್ಷಗಾನದ ಸಾಮಾನ್ಯ ಅಭಿಮಾನಿಯಾದ ಹಾಗೂ ಜಗದಾಭಿರಾಮ ಪಡುಬಿದ್ರೆಯವರ ಸಾಮಾನ್ಯ ಅಭಿಮಾನಿಯಾದ ನನ್ನ ಅಭಿನಂದನೆಯನ್ನು ಈ ಡಾಕ್ಯುಮೆಂಟರಿಯ ಮೂಲಕ ಸಲ್ಲಿಸುತ್ತಿದ್ದೇನೆ.

ಬಲು ತಾಳ್ಮೆವಹಿಸಿ ಇದನ್ನು ಮಾಡಿದ್ದೇನೆ. ಈ ಡಾಕ್ಯುಮೆಂಟರಿಯನ್ನು ನೋಡಲೂ ಸಹ ಬಹಳ ಸಮಯದ ಅನುಕೂಲ್ಯತೆಯೂ ಮತ್ತು ತಾಳ್ಮೆಯ ಆವಶ್ಯಕತೆಯೂ ಇದೆ. ಆದರೆ ಇದನ್ನು ಸಂಪೂರ್ಣ ನೋಡಿದ ಕಲಾಭಿಮಾನಿಗಳಿಗೆ ನಿಜಕ್ಕೂ ಸಂತೋಷವಾದೀತು ಎಂಬ ವಿಶ್ವಾಸವುಳ್ಳವನಾಗಿದ್ದೇನೆ.

ವೃತ್ತಿಪರನಲ್ಲ ನಾನು. ನನ್ನ ಸೀಮಿತ ತಿಳುವಳಿಕೆ, ಜ್ಞಾನ, ಮತ್ತು ಸೀಮಿತ ತಂತ್ರಜ್ಞಾನಗಳನ್ನು ಬಳಸಿಕೊಂಡು ಈ ಡಾಕ್ಯುಮೆಂಟರಿ ಮಾಡಿದ್ದೇನೆ. ದೋಷಗಳಿದ್ದರೂ ಕಲಾಭಿಮಾನಿಗಳು ವಿಶಾಲ ಮನಸ್ಸಿನಿಂದ ಸ್ವೀಕರಿಸುವಿರೆಂಬ ಆಶಯದೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
_________________________________________________________________
I hereby declare that, the content is in the public domain OR is not eligible for copyright protection.
I swear, under penalty of perjury, that I have a good faith belief that the material does not fall under copyright protection.
I consent to the jurisdiction of the Federal District Court for the district in which my address is located, or if my address is outside of the United States, the judicial district in which YouTube is located, and will accept service of process from the claimant if any.

Видео ಜಗದಾಭಿರಾಮ ಪಡುಬಿದ್ರೆಯವರ ಯಕ್ಷಜಗನ್ನೋಟ (An Interview with Jagadabhirama Padubidre) канала ಯಕ್ಷರಂಗ ಕಟೀಲು ಸಿತ್ಲ ಫೌಂಡೇಶನ್ ರಿ, ಉಡುಪಿ-ಬೆಂಗಳೂರು
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Другие видео канала
Hidimbasura Vadhe in Pavanasuta Kali BheemasenaHidimbasura Vadhe in Pavanasuta Kali BheemasenaKalinga Mardana In Kalinga Mardana PrasangaKalinga Mardana In Kalinga Mardana PrasangaShumbha-Nishumbha In Sri Devi MahathmeShumbha-Nishumbha In Sri Devi Mahathmeಶ್ರೀಮದ್ ಭಗವದ್ಗೀತಾ - ಭಾಗ 5 (Shrimad Bhagavadgeetha - Part 5)ಶ್ರೀಮದ್ ಭಗವದ್ಗೀತಾ - ಭಾಗ 5 (Shrimad Bhagavadgeetha - Part 5)In Damayanti Punaswayamvara Raja Rutuparna Part 3In Damayanti Punaswayamvara Raja Rutuparna Part 3Sudarshana In Sudarshana Vijaya PrasangaSudarshana In Sudarshana Vijaya Prasangaಮನೋರಮಾ ಎಂ. ಭಟ್ - ಬದುಕು ಮತ್ತು ಬರಹ (Manorama. M. Bhat – Life & Litrature of A heroic woman)ಮನೋರಮಾ ಎಂ. ಭಟ್ - ಬದುಕು ಮತ್ತು ಬರಹ (Manorama. M. Bhat – Life & Litrature of A heroic woman)"ಡ್ರೆಸ್ಸಿನ ಮಯ್ಯರು" ಖ್ಯಾತಿಯ ಖಂಡಿಗ ವೆಂಕಟೇಶ ಮಯ್ಯ (Khandiga Venkatesh Mayya of Yakshagana Outfits)"ಡ್ರೆಸ್ಸಿನ ಮಯ್ಯರು" ಖ್ಯಾತಿಯ ಖಂಡಿಗ ವೆಂಕಟೇಶ ಮಯ್ಯ (Khandiga Venkatesh Mayya of Yakshagana Outfits)ಗುರುರಾಜ ಮಾರ್ಪಳ್ಳಿಯವರ ಖ್ಯಾಲು ಖಯಾಲಿಗಳು (Kyalu KhayAli by Gururaja Marpalli)ಗುರುರಾಜ ಮಾರ್ಪಳ್ಳಿಯವರ ಖ್ಯಾಲು ಖಯಾಲಿಗಳು (Kyalu KhayAli by Gururaja Marpalli)ಶ್ರೀಮದ್ ಭಗವದ್ಗೀತಾ - ಕೊನೆಯ ಭಾಗ 7 (Shrimad Bhagavadgeetha - Last Part 7)ಶ್ರೀಮದ್ ಭಗವದ್ಗೀತಾ - ಕೊನೆಯ ಭಾಗ 7 (Shrimad Bhagavadgeetha - Last Part 7)ಮಹಿಷ ಮರ್ಧಿನಿ ಪ್ರಸಂಗದಲ್ಲಿ ಮಾಲಿನಿ (Malini in Mahisha Mardhini)ಮಹಿಷ ಮರ್ಧಿನಿ ಪ್ರಸಂಗದಲ್ಲಿ ಮಾಲಿನಿ (Malini in Mahisha Mardhini)Raktabeejasura in Sri Devi Mahathme Part2Raktabeejasura in Sri Devi Mahathme Part2In Sri Devi Mahathme Mahishasura Part3In Sri Devi Mahathme Mahishasura Part3ಅಪ್ರತಿಮ ಕಲಾವಿದ ಶ್ರೀ ವಂಡ್ಸೆ ನಾರಾಯಣ ಗಾಣಿಗ (A Legendary Yakshagana Artist Shri Vandse Narayana Ganiga)ಅಪ್ರತಿಮ ಕಲಾವಿದ ಶ್ರೀ ವಂಡ್ಸೆ ನಾರಾಯಣ ಗಾಣಿಗ (A Legendary Yakshagana Artist Shri Vandse Narayana Ganiga)ಎಡನೀರು ಮೇಳದ ತ್ರಿಪುರ ಮಥನ ದ ತಾರಾಕ್ಷನಾಗಿ ಪನೆಯಾಲ (In Tripura Mathana Taraksha by Paneyala)ಎಡನೀರು ಮೇಳದ ತ್ರಿಪುರ ಮಥನ ದ ತಾರಾಕ್ಷನಾಗಿ ಪನೆಯಾಲ (In Tripura Mathana Taraksha by Paneyala)ಅಭಿನವ ವಾಲ್ಮೀಕಿ ಖ್ಯಾತಿಯ ಪುರುಷೋತ್ತಮ ಪೂಂಜ (Great Yakshagana Bhagavata Purushottama Poonja) - Part2ಅಭಿನವ ವಾಲ್ಮೀಕಿ ಖ್ಯಾತಿಯ ಪುರುಷೋತ್ತಮ ಪೂಂಜ (Great Yakshagana Bhagavata Purushottama Poonja) - Part2ಯಕ್ಷರಂಗದ ವಿದ್ಯಾವಂತ ಪೂಕಳ ಲಕ್ಷ್ಮೀನಾರಾಯಣ ಭಟ್ಟ (An Educated artist Pookala Lakshminarayana Bhat)ಯಕ್ಷರಂಗದ ವಿದ್ಯಾವಂತ ಪೂಕಳ ಲಕ್ಷ್ಮೀನಾರಾಯಣ ಭಟ್ಟ (An Educated artist Pookala Lakshminarayana Bhat)Raktabeejasura in Sri Devi Mahathme Part1Raktabeejasura in Sri Devi Mahathme Part1ಯಕ್ಷಗುರು ಹೊಸ್ತೋಟ ಮಂಜುನಾಥ ಭಾಗವತ (The Living Legend Hostota Manjunatha Bhagavata)ಯಕ್ಷಗುರು ಹೊಸ್ತೋಟ ಮಂಜುನಾಥ ಭಾಗವತ (The Living Legend Hostota Manjunatha Bhagavata)Mantri & Taranisena PraveshaMantri & Taranisena Praveshaಪ್ರಶಾಂತ ನೆಲ್ಯಾಡಿಯವರ ಪ್ರಭಾವತಿ (In Sudhanvarjuna Prabhavati by Prashanth Nelyadi)ಪ್ರಶಾಂತ ನೆಲ್ಯಾಡಿಯವರ ಪ್ರಭಾವತಿ (In Sudhanvarjuna Prabhavati by Prashanth Nelyadi)
Яндекс.Метрика