Загрузка страницы

ಕರ್ನಾಟಕದಲ್ಲಿ ವಿದೇಶಿ ಜುಕೀನಿ ಕೃಷಿ | Zucchini Farming | ಜುಕಿನಿ | Zucchini Cultivation | Yellow Zucchini

ಕರ್ನಾಟಕದಲ್ಲಿ ವಿದೇಶಿ ಜುಕೀನಿ ಕೃಷಿ | Zucchini Farming in Karnataka
ಬರಪೀಡಿತ ಜಿಲ್ಲೆ ಎಂದು ಹೆಸರಾದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇತ್ತೀಚಿಗೆ ಸುರಿದ ಮಳೆಯಿಂದ ಕೆರೆ ಕುಂಟೆಗಳು ತುಂಬಿ ಹರಿದಿದ್ದು, ಈ ಭಾಗದಲ್ಲಿ ರೈತರ ಮೊಗದಲ್ಲಿ ಕೊಂಚ ಸಮಾಧಾನ ಮತ್ತು ಸಂತಸ ತಂದಿದೆ. ಕೃಷಿ, ಹೈನುಗಾರಿಕೆ, ತರಕಾರಿ ಹಾಗೂ ವಿವಿಧ ತೋಟಗಾರಿಕಾ ಬೆಳೆಗಳಿಗೆ ಬರದ ನಡುವೆಯೂ ಹೆಸರಾದ ಜಿಲ್ಲೆಯ ಕೆಲ ರೈತರು ಸಾಂಪ್ರದಾಯಿಕ, ಸಾಮಾನ್ಯ ಬೆಳೆಗಳನ್ನು ಹೊರತುಪಡಿಸಿ ಆಗಾಗ ಕೆಲವು ವಿಶಿಷ್ಟ, ವೈವಿಧ್ಯಮಯ ಹಾಗೂ ಈ ನೆಲಮೂಲದಲ್ಲದ ಬೆಳೆಗಳನ್ನು ಬೆಳೆಯುವ ಹೊಸ ಪ್ರಯೋಗಗಳಿಗೆ ಕೈ ಹಾಕುತ್ತಿರುತ್ತಾರೆ. ಜಿಲ್ಲೆಯಲ್ಲಿ ಈಗಾಗಲೇ ಸ್ಟ್ರಾಬೆರಿ, ಆಪಲ್, ಡ್ರಾಗನ್ ಫ್ರೂಟ್ ನಂತಹ ಈ ಭಾಗಕ್ಕೆ ಅಪರೂಪ ಎನಿಸಬಹುದಾದ ಗಮನ ಸೆಳೆಯುವ ಬೆಳೆಗಳನ್ನು ಬೆಳೆದು ಆಧುನಿಕ ತಂತ್ರಜ್ಞಾನ, ಪದ್ದತಿಗಳಿಗೆ ಒಡ್ಡಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಹೇಮಾರಲಹಳ್ಳಿಯ ರೈತರೊಬ್ಬರು ಇಟಲಿಯ ಜುಕೀನಿ ಎಂಬ ತರಕಾರಿ ಬೆಳೆದು ಎಲ್ಲರ ಗಮನಸೆಳೆದಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಹೇಮಾರಲಹಳ್ಳಿಯ ರೈತ ಮಂಜುನಾಥ್ ಎಂಬುವವರು ಇಟಲಿ ಮೂಲದ ಜುಕೀನಿ ಎಂಬ ತರಕಾರಿ ಬೆಳೆಯನ್ನು ಬೆಳೆದು ಎಲ್ಲರ ಗಮನ ಸೆಳೆದಿದ್ದಾರೆ. ಕುಂಬಳ ಜಾತಿಗೆ ಸೇರಿದ ಸೌತೆಕಾಯಿ ಆಕಾರ ಮತ್ತು ಗಾತ್ರದ ಜುಕೀನಿ ತರಕಾರಿಯನ್ನು ಇಟಲಿ ಮುಂತಾದ ಕಡೆಗಳಲ್ಲಿ ವೆಜಿಟೇಬಲ್ ಸಲಾಡ್ ನಲ್ಲಿ ಹೆಚ್ಚಿಗೆ ಬಳಸಲಾಗುತ್ತದೆ ಎನ್ನಲಾಗುತ್ತದೆ. ಶೇ.94 ರಷ್ಟು ನೀರಿನ ಅಂಶವನ್ನು ಹೊಂದಿರುವ ಜುಕೀನಿ ಕಣ್ಣು, ಚರ್ಮದ ಆರೋಗ್ಯಕ್ಕೆ ಪೂರಕವಾಗಿದೆಯಲ್ಲದೆ ರೋಗನಿರೋಧಕ ಶಕ್ತಿಯನ್ನೂ ಹೊಂದಿದೆ ಎನ್ನಲಾಗಿದೆ. ಇಟಲಿ ಮೂಲದ ಈ ಜುಕೀನಿ ಬೆಳೆಯನ್ನು ಮಲೇಷಿಯಾ, ಥಾಯ್ಲೆಂಡ್ ಮುಂತಾದ ಕಡೆಗಳಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ ಮತ್ತು ಬಳಸುತ್ತಾರೆ. ವಿಟಮಿನ್ ಸಿ ಮತ್ತು ಪೊಟ್ಯಾಸಿಯಂ ಅಂಶ ಈ ತರಕಾರಿ ಬೆಳೆಯಲ್ಲಿ ಅಧಿಕವಾಗಿದೆ. ಅತಿ ಕಡಿಮೆ ರಾಸಾಯನಿಕಗಳೊಂದಿಗೆ ಕಡಿಮೆ ಖರ್ಚಿನಲ್ಲಿ ಈ ಬೆಳೆಯನ್ನು ಬೆಳೆಯಬಹುದಾಗಿದ್ದು, ಸದ್ಯ ಈ ಬೆಳೆಗೆ ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಲ್ಲಿ ಉತ್ತಮ ಮಾರುಕಟ್ಟೆಯೂ ಇದೆ.

ಬರಪೀಡಿತ ಜಿಲ್ಲೆಯಲ್ಲಿ ಜುಕೀನಿ ಬೆಳೆ ಬೆಳೆದು ಹೊಸ ಪ್ರಯೋಗ ಮಾಡಿರುವ ರೈತ ಹೆಚ್.ಪಿ.ಮಂಜುನಾಥ್ , ಜಿಲ್ಲೆಯಲ್ಲಿ ಹೆಚ್ಚಾಗಿ ಬೆಳೆಯುವ ಟೊಮೆಟೊ, ಎಲೆಕೋಸು, ಹೂಕೋಸು ಇನ್ನಿತರೆ ಬೆಳೆಗಳಿಗೆ ಅಗತ್ಯವಿರುವಷ್ಟು ಆರೈಕೆ ಮತ್ತು ವೆಚ್ಚ ಈ ಬೆಳೆಗೆ ಅಗತ್ಯವಿಲ್ಲ. ಉತ್ತಮ ಮಾರುಕಟ್ಟೆಯೂ ಇದೆ ಎಂದು ತಮ್ಮಅನುಭವ ಹಂಚಿಕೊಂಡರು.

ಶಿಡ್ಲಘಟ್ಟ ತಾಲ್ಲೂಕು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರಮೇಶ್ ಮಾತನಾಡಿ, ಇಟಲಿ ಮೂಲದ ಜುಕೀನಿ ಬೆಳೆಗೆ ಒಳ್ಳೆಯ ಬೇಡಿಕೆ ಇದೆ. ಬೆಳೆಗೆ ಅಗತ್ಯವಿರುವ ಮಣ್ಣು, ನೀರಿನ ಆರೈಕೆಯನ್ನುಸೂಕ್ತ ರೀತಿಯಲ್ಲಿ ಮಾಡಿ, ಕೀಟಗಳನ್ನು ನಿಯಂತ್ರಿಸುವ ಕ್ರಮ ಕೈಗೊಂಡರೆ ಉತ್ತಮ ಇಳುವರಿ ಬೆಳೆಯಬಹುದು. 60-70 ದಿನಗಳಲ್ಲಿ ಬೆಳೆ ಕೈ ಸೇರುತ್ತದೆ ಎಂದರು.

ಒಟ್ಟಾರೆಯಾಗಿ ಬರಪೀಡಿತ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಡಿಮೆ ನೀರಿನ ಲಭ್ಯತೆಯ ಮಧ್ಯೆಯೂ ಆಗಾಗ ನಷ್ಟ ಉಂಟು ಮಾಡುವ ಸಾಂಪ್ರದಾಯಿಕ ಬೆಳೆಗಳನ್ನು ಬದಿಗೊತ್ತಿ ಹೊಸ ಹೊಸ ಬೆಳೆಗಳನ್ನು ಬೆಳೆಯುವ ಪ್ರಯೋಗಕ್ಕೆ ಕೆಲವು ಪ್ರಗತಿ ಪರ ರೈತರು ಮುಂದಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದ್ದು, ಇಟಲಿಯ ಜುಕೀನಿ ಎಂಬ ಲಾಭದಾಯಕ ತರಕಾರಿ ಬೆಳೆ ಬೆಳೆದು ರೈತ ಹೇಮಾರಲಹಳ್ಳಿಯ ಮಂಜುನಾಥ್ ಇತರರಿಗೆ ಮಾದರಿಯಾಗಿದ್ದಾರೆ.

ಪರ್ಕ್‌ಗಳಿಗೆ ಪ್ರವೇಶ ಪಡೆಯಲು, ಈ ಚಾನಲ್ ಅನ್ನು ಸೇರಿಕೊಳ್ಳಿ:
https://www.youtube.com/channel/UCRny2xhJHUroFTsF7c0OU4w/join

ಸ್ನೇಹ ಬಂಧುಗಳೇ ನಮಸ್ಕಾರ...

ಸ್ವಾಸ್ಥ್ಯ, ಸದಭಿರುಚಿಯುಳ್ಳ ಆಸಕ್ತಿದಾಯಕ ವಿಚಾರ ವಿಡಿಯೋಗಳನ್ನು ಮತ್ತು ತಮಗೆ ಮನರಂಜನೆ ನೀಡುವಂತಹ ಸಂಗೀತ-ಸಂಸ್ಕೃತಿ ಮೈಳೆಸಿರುವ ವಿಡಿಯೋಗಳನ್ನು "ಯೂ ಟ್ಯೂಬ್"ನ ನನ್ನ ಚಾನಲ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ. ತಾವು ನನ್ನ ಚಾನಲ್ ಗೆ ಸಬ್ ಸ್ಕ್ರೈಬ್ ಆಗಿ ಪ್ರೋತ್ಸಾಹ ನೀಡಿ...ಧನ್ಯವಾದಗಳು.

___ ಚೀಗೋರಾ
#zucchini #zucchinifarming #yellowzucchini #greenzucchini #zucchinivegetable #zucchinikannada #CHEEGORA

ಜುಕಿನಿ ಕೃಷಿ, yellow zucchini, green zucchini, planting zucchini, zucchini price, zucchini near me, zucchini price per kg, zucchini vegetable, zucchini spiralizer, Zucchini, Zucchini Vegetable, Amazing Zucchini, Zucchini Farming, Zucchini farming in India, Zucchini farming in Karnataka, Zucchini in Kannada, Zucchini Growing tips, Exotic Vegetable Farming, Awesome Zucchini Cultivation, how to grow Zucchini, Success in zucchini farming, Zucchini benefits, Zucchini flowers, zucchini food,

Видео ಕರ್ನಾಟಕದಲ್ಲಿ ವಿದೇಶಿ ಜುಕೀನಿ ಕೃಷಿ | Zucchini Farming | ಜುಕಿನಿ | Zucchini Cultivation | Yellow Zucchini канала CHEEGORA
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
15 января 2022 г. 7:00:13
00:15:16
Другие видео канала
ಕೃಷಿಯಲ್ಲೇ ನಮ್ಮ ಖುಷಿ..! | ಸಮಗ್ರ ಕೃಷಿ | SAMAGRA KRISHI | INTEGRATED FARMING | FARMER T L AMBARISHಕೃಷಿಯಲ್ಲೇ ನಮ್ಮ ಖುಷಿ..! | ಸಮಗ್ರ ಕೃಷಿ | SAMAGRA KRISHI | INTEGRATED FARMING | FARMER T L AMBARISHPawan Kalyan in Karnataka | Pawan Kalyan Speech at Janasena Long March #CHEEGORA #pawankalyan #pspkPawan Kalyan in Karnataka | Pawan Kalyan Speech at Janasena Long March #CHEEGORA #pawankalyan #pspkIndependence Day celebrations | Chinthamani | ಸ್ವಾತಂತ್ರ್ಯ ದಿನಾಚರಣೆ #CHEEGORA #IndependencedayIndependence Day celebrations | Chinthamani | ಸ್ವಾತಂತ್ರ್ಯ ದಿನಾಚರಣೆ #CHEEGORA #IndependencedayTAMATE DANCE | DAPPU DANCE | Mast Dance Performance | Dance, Dance | Transgenders Dance #CHEEGORATAMATE DANCE | DAPPU DANCE | Mast Dance Performance | Dance, Dance | Transgenders Dance #CHEEGORAಮೇವಿನ ಬೆಳೆ ಪಾಪಸ್ ಕಳ್ಳಿ | Spineless Cactus For Fodder | Fodder Crop Cactus | Fodder Crops in Kannadaಮೇವಿನ ಬೆಳೆ ಪಾಪಸ್ ಕಳ್ಳಿ | Spineless Cactus For Fodder | Fodder Crop Cactus | Fodder Crops in KannadaVeeridimamma Kanive Chikkaballapur | morning view | ವೀರದಿಮ್ಮಮ್ಮನ ಕಣಿವೆ #CHEEGORA #chikkaballapurVeeridimamma Kanive Chikkaballapur | morning view | ವೀರದಿಮ್ಮಮ್ಮನ ಕಣಿವೆ #CHEEGORA #chikkaballapurNandi Hills | Nandi Hills Bangalore | Nandi Hills Sunrise | Morning view At Nandi hillsNandi Hills | Nandi Hills Bangalore | Nandi Hills Sunrise | Morning view At Nandi hillsArabian Sea | Sea Waves | Waves of the Arabian Sea | Beach Sea WavesArabian Sea | Sea Waves | Waves of the Arabian Sea | Beach Sea WavesStarlings murmuration | Starlings Flying | BirdsStarlings murmuration | Starlings Flying | BirdsKotilingeshwara Temple | Kolar | Kammasandra | Karnataka Tourism #CHEEGORA #kotilingeshwaraKotilingeshwara Temple | Kolar | Kammasandra | Karnataka Tourism #CHEEGORA #kotilingeshwaraJANAPADA MELA | ಜಾನಪದ ಮೇಳ #CHEEGORA #janapadamela #kannadajanapadaJANAPADA MELA | ಜಾನಪದ ಮೇಳ #CHEEGORA #janapadamela #kannadajanapadaMGNREGA | ನರೇಗಾ ಯೋಜನೆಯ ಸದುಪಯೋಗ ಪಡೆದ ರೈತ | ಪಪ್ಪಾಯಿ ಬೆಳೆ ಕಾಮಗಾರಿಗೆ ಆರ್ಥಿಕ ನೆರವು #CHEEGORA #MGNREGAMGNREGA | ನರೇಗಾ ಯೋಜನೆಯ ಸದುಪಯೋಗ ಪಡೆದ ರೈತ | ಪಪ್ಪಾಯಿ ಬೆಳೆ ಕಾಮಗಾರಿಗೆ ಆರ್ಥಿಕ ನೆರವು #CHEEGORA #MGNREGAMy YouTube Channel CHEEGORA Montage-2019My YouTube Channel CHEEGORA Montage-2019ಹುಚ್ಚೆಳ್ಳು ಕೃಷಿ | Niger Seeds Farming in Kannada | Cheegoraಹುಚ್ಚೆಳ್ಳು ಕೃಷಿ | Niger Seeds Farming in Kannada | Cheegoranandi hills bangalore | nandi hills karnataka | nandi hills sunrise | Nandi Hills | ನಂದಿ ಬೆಟ್ಟnandi hills bangalore | nandi hills karnataka | nandi hills sunrise | Nandi Hills | ನಂದಿ ಬೆಟ್ಟVASUDEVANA NENEDU | PURANDRA DASA | SHRIKANTHAM SISTERS | ವಾಸುದೇವನ ನೆನೆದು | ಪುರಂದರದಾಸರು #CHEEGORAVASUDEVANA NENEDU | PURANDRA DASA | SHRIKANTHAM SISTERS | ವಾಸುದೇವನ ನೆನೆದು | ಪುರಂದರದಾಸರು #CHEEGORATennis Krishna Comedy | Funny Comedy Videos | ಟೆನ್ನಿಸ್ ಕೃಷ್ಣ ಕಾಮಿಡಿ #Comedy #dialoguesTennis Krishna Comedy | Funny Comedy Videos | ಟೆನ್ನಿಸ್ ಕೃಷ್ಣ ಕಾಮಿಡಿ #Comedy #dialoguesಮೇವಿನ ತೋಕೆಗೋಧಿ - R.O.11-1 | ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ನೂತನ ತಳಿ | Mevina Thoke Godhi- UAS | GKVKಮೇವಿನ ತೋಕೆಗೋಧಿ - R.O.11-1 | ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ನೂತನ ತಳಿ | Mevina Thoke Godhi- UAS | GKVKAMARANTH FARMING | RAJGIRA FARMING | RAJGIRA CULTIVATION | ರಾಜಗಿರಾ | ಬೀಜದ ದಂಟು | ಅಮರಾಂತ್ | CHEEGORAAMARANTH FARMING | RAJGIRA FARMING | RAJGIRA CULTIVATION | ರಾಜಗಿರಾ | ಬೀಜದ ದಂಟು | ಅಮರಾಂತ್ | CHEEGORAPooja Kunitha | Folk Dance | ಪೂಜಾ ಕುಣಿತ | Devara Kunitha | Dance PerformancePooja Kunitha | Folk Dance | ಪೂಜಾ ಕುಣಿತ | Devara Kunitha | Dance PerformanceFashion Show | Fashion Show in India | Tollywood Heroines Fashion Show | Actress Meghasri & TeamFashion Show | Fashion Show in India | Tollywood Heroines Fashion Show | Actress Meghasri & Team
Яндекс.Метрика