Загрузка страницы

ಯಕ್ಷಗಾನ ತಾಳಮದ್ದಳೆ - ಶ್ರೀ ಕೃಷ್ಣಾರ್ಜುನ ಕಾಳಗ (SHRI KRISHNARJUNA KALAGA - TALAMADDALE)

ಈ ತಾಳಮದ್ದಳೆ ಸುರತ್ಕಲ್ಲಿನಲ್ಲಿ ನಡೆದಿರುವುದು ಎನ್ನುವುದಷ್ಟೇ ನನಗೆ ತಿಳಿದಿದೆ. ಈ ತಾಳಮದ್ದಳೆಯನ್ನು ಆಯೋಜಿಸಿದ ಸಂಸ್ಥೆ ಅಥವಾ ಸಂಘದ ಬಗ್ಗೆ ಮತ್ತು ಈ ತಾಳಮದ್ದಳೆ ನಡೆದ ದಿನಾಂಕದ ಬಗ್ಗೆ ಯಾವ ಮಾಹಿತಿಗಳೂ ನನ್ನಲ್ಲಿ ಲಭ್ಯವಿಲ್ಲ. ಈ ವೀಡಿಯೋವನ್ನು ನನಗೆ ನನ್ನ ಮಿತ್ರರೋರ್ವರು ಕೊಟ್ಟಿರುವಂಥದ್ದು. ಯಾರು ನನಗೆ ಕೊಟ್ಟಿರುವುದು ಎನ್ನುವ ವಿಚಾರವೂ ನನಗೆ ನೆನಪಲ್ಲಿಲ್ಲ.

ಇಡಿಯ ಈ ಶ್ರೀಕೃಷ್ಣಾರ್ಜುನ ಯಕ್ಷಗಾನ ತಾಳಮದ್ದಳೆಯನ್ನು ನಾನು ಸಂಪೂರ್ಣ ಕೇಳಿದಾಗ ಮನಸ್ಸಿಗೆ ಅಗಾಧವಾದಂತಹ ಆನಂದವುಂಟಾಯಿತು. ಶ್ರೀ ಕುಂಬ್ಳೆ ಸುಂದರ ರಾಯರು, ಡಾ| ಕೋಳ್ಯೂರು ರಾಮಚಂದ್ರ ರಾಯರು, ಡಾ| ಎಂ. ಪ್ರಭಾಕರ ಜೋಶಿಯವರು, ಶ್ರೀ ಬೆಳ್ಳಾರೆ ರಾಮ ಜೋಯಿಸರು, ಶ್ರೀ ವಿಟ್ಲ ಶಂಭು ಶರ್ಮರು, ಶ್ರೀ ಉಜಿರೆ ಅಶೋಕ ಭಟ್ಟರು, ಶ್ರೀ ಸುಣ್ಣಂಬಳ ವಿಶ್ವೇಶ್ವರ ಭಟ್ಟರು ಇವರೆಲ್ಲವರ ಅರ್ಥಗಾರಿಕೆ ಅತ್ಯಂತ ಅಪೂರ್ವವಾಗಿದೆ.

ಹಿಮ್ಮೇಳದಲ್ಲಿ ಭಾಗವತಿಕೆಯಲ್ಲಿ ಶ್ರೀ ಕುಬಣೂರು ಶ್ರೀಧರ ರಾವ್, ಶ್ರೀ ಬಲಿಪ ಪ್ರಸಾದ ಭಟ್ಟ ಮತ್ತು ಶ್ರೀ ಪುತ್ತಿಗೆ ರಘುರಾಮ ಹೊಳ್ಳರ ಸುಶ್ರಾವ್ಯ ಗಾಯನವಿದೆ. ಮದ್ದಳೆಯಲ್ಲಿ ದಿ| ಚಿಪ್ಪಾರು ಕೃಷ್ಣಯ್ಯ ಬಲ್ಲಾಳ, ಶ್ರೀ ಪದ್ಯಾಣ ಶಂಕರನಾರಾಯಣ ಭಟ್ಟ ಮತ್ತು ಇತರರು ಉತ್ತಮ ಸಾಥ್ ನೀಡಿದ್ದಾರೆ. ಚೆಂಡೆಯಲ್ಲಿ ಶ್ರೀ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟ ಮತ್ತು ಇತರರು. ಹಾರ್ಮೋನಿಯಂ ಮತ್ತು ಚಕ್ರತಾಳದಲ್ಲಿ
ಸಹಕರಿಸಿದ ಕಲಾವಿದರಿಗೂ ಕೃತಜ್ಞತೆಗಳು.

ದಿ| ಚಿಪ್ಪಾರು ಕೃಷ್ಣಯ್ಯ ಬಲ್ಲಾಳರ ಮದ್ದಳೆವಾದನವನ್ನು ನೋಡುವ ಒಂದು ಅತ್ಯಂತ ಸಂತೋಷದ ಅನುಭವವೂ ಈ ತಾಳಮದ್ದಳೆಯನ್ನು ನೋಡುವಾಗ ಮೂಡುತ್ತದೆ.

ಮುಮ್ಮೇಳದಲ್ಲಿ ಮೊದಲ ಭಾಗದ ಶ್ರೀ ಕುಂಬ್ಳೆ ಸುಂದರ ರಾಯರು ಮತ್ತು ಡಾ| ಕೋಳ್ಯೂರು ರಾಮಚಂದ್ರ ರಾಯರ ಮಾತುಗಾರಿಕೆ ಭಾವಪೂರ್ಣವಾಗಿ ಸೊಗಸಾಗಿದೆ. ಶ್ರೀ ಬೆಳ್ಳಾರೆ ರಾಮ ಜೋಯಿಸರು, ಶ್ರೀ ವಿಟ್ಲ ಶಂಭು ಶರ್ಮರು, ಶ್ರೀ ಉಜಿರೆ ಅಶೋಕ ಭಟ್ಟರು ಮತ್ತು ಡಾ| ಎಂ. ಪ್ರಭಾಕರ ಜೋಶಿಯವರ ಹಾಸ್ಯದ ರಸಮಯ ಸನ್ನಿವೇಶಗಳು ಅತ್ಯಂತ ರಸವತ್ತಾಗಿದೆ. ಕೊನೆಯ ಭಾಗದ ಶ್ರೀ ಸುಣ್ಣಂಬಳ ವಿಶ್ವೇಶ್ವರ ಭಟ್ಟರ ಗಂಭೀರವಾದ ಅರ್ಥಗಾರಿಕೆಯೂ ಚೆನ್ನಾಗಿದೆ.

ಅಂತೂ ಒಟ್ಟಂದದಲ್ಲಿ ಒಂದು ಅತ್ಯಂತ ರಸವತ್ತಾದ ಒಂದು ತಾಳಮದ್ದಳೆಯನ್ನು ಸವಿದ ಅನುಭೂತಿ ನನಗಾಯಿತು. ಆ ಅನುಭೂತಿ ಯಕ್ಷಗಾನ ಕಲಾಭಿಮಾನಿಗಳಿಗೆಲ್ಲವರಿಗೂ ಆಗಲಿ ಎನ್ನುವ ಸದಾಶಯದಿಂದ ಈ ಇಡಿಯ ತಾಳಮದ್ದಳೆಯನ್ನು ಹಂಚಿಕೊಳ್ಳುತ್ತಿದ್ದೇನೆ. ಈ ತಾಳಮದ್ದಳೆಯ ವೀಡಿಯೋ ಚಿತ್ರೀಕರಣ ಮಾಡಿರುವುದು ನಾನಲ್ಲ. ಈ ಉತ್ತಮ ಯಕ್ಷಗಾನ ತಾಳಮದ್ದಳೆಯ ಸಂಯೋಜನೆಯನ್ನು ಮಾಡಿದ ಸಂಘ-ಸಂಸ್ಥೆಯ ಬಗ್ಗೆಯೂ ತಿಳಿದಿಲ್ಲ. ಆದರೆ ಕಲಾಭಿಮಾನಿಗಳೆಲ್ಲವರೂ ಈ ಉತ್ತಮ ತಾಳಮದ್ದಳೆಯನ್ನು ನೋಡಿ ಆನಂದಿಸಲಿ ಎನ್ನುವ ಉದ್ದೇಶದಿಂದ ಒಂದಿಡೀ ದಿನವನ್ನು ವ್ಯಯಿಸಿ ಈ ವೀಡಿಯೋವನ್ನು ಸಂಕಲಿಸಿ (Edit) ಮಾಡಿ ಯುಟ್ಯೂಬಿನಲ್ಲಿ ಏರಿಸಿ ಹಂಚಿಕೊಳ್ಳುತ್ತಿದ್ದೇನೆ.

ಈ ಉತ್ತಮ ತಾಳಮದ್ದಳೆಯ ಸಂಯೋಜನೆಯನ್ನುಮಾಡಿರುವ ಸುರತ್ಕಲ್ಲಿನ ಸಂಘ ಅಥವಾ ಸಂಸ್ಥೆಗೂ, ವೀಡಿಯೋ ಚಿತ್ರೀಕರಣವನ್ನು ಮಾಡಿದ ಮತ್ತು ಮಾಡಿಸಿದವರಿಗೂ, ಈ ವೀಡಿಯೋವನ್ನು ನನಗೆ ನೀಡಿದವರಿಗೂ ಹೃದಯಾಂತರಾಳದ ಧನ್ಯವಾದಗಳು. ಯಕ್ಷಗಾನ ಕಲಾಭಿಮಾನಿಗಳಾದ ತಾವು ಈ ತಾಳಮದ್ದಳೆಯನ್ನು ಆಸ್ವಾದಿಸಿ ಆನಂದಪಟ್ಟರೆ ಒಂದು ಧನ್ಯವಾದವನ್ನು ಅವಶ್ಯವಾಗಿ ಈ ಉತ್ತಮ ತಾಳಮದ್ದಳೆಯ ಸಂಯೋಜನೆಯನ್ನುಮಾಡಿರುವ ಸುರತ್ಕಲ್ಲಿನ ಸಂಘ ಅಥವಾ ಸಂಸ್ಥೆಗೂ, ವೀಡಿಯೋ ಚಿತ್ರೀಕರಣವನ್ನು ಮಾಡಿದ ಮತ್ತು ಮಾಡಿಸಿದವರಿಗೂ, ಈ ವೀಡಿಯೋವನ್ನು ನನಗೆ ನೀಡಿದವರಿಗೂ ಸಮರ್ಪಿಸಿದರೆ ಅವರ ಈ ಶ್ರಮಕ್ಕೆ, ಆಯೋಜನೆಗೆ ಸಾರ್ಥಕತೆ ಬಂದಂತೆ.

_____________________________________________________
I hereby declare that, the content is in the public domain OR is not eligible for copyright protection.
I swear, under penalty of perjury, that I have a good faith belief that the material does not fall under copyright protection.
I consent to the jurisdiction of the Federal District Court for the district in which my address is located, or if my address is outside of the United States, the judicial district in which YouTube is located, and will accept service of process from the claimant if any.

Видео ಯಕ್ಷಗಾನ ತಾಳಮದ್ದಳೆ - ಶ್ರೀ ಕೃಷ್ಣಾರ್ಜುನ ಕಾಳಗ (SHRI KRISHNARJUNA KALAGA - TALAMADDALE) канала ಯಕ್ಷರಂಗ ಕಟೀಲು ಸಿತ್ಲ ಫೌಂಡೇಶನ್ ರಿ, ಉಡುಪಿ-ಬೆಂಗಳೂರು
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Другие видео канала
Hidimbasura Vadhe in Pavanasuta Kali BheemasenaHidimbasura Vadhe in Pavanasuta Kali BheemasenaKalinga Mardana In Kalinga Mardana PrasangaKalinga Mardana In Kalinga Mardana PrasangaShumbha-Nishumbha In Sri Devi MahathmeShumbha-Nishumbha In Sri Devi Mahathme1 Madhyamavathi - Prapulla Chandra Nelyadi1 Madhyamavathi - Prapulla Chandra Nelyadiಶ್ರೀಮದ್ ಭಗವದ್ಗೀತಾ - ಭಾಗ 5 (Shrimad Bhagavadgeetha - Part 5)ಶ್ರೀಮದ್ ಭಗವದ್ಗೀತಾ - ಭಾಗ 5 (Shrimad Bhagavadgeetha - Part 5)In Damayanti Punaswayamvara Raja Rutuparna Part 3In Damayanti Punaswayamvara Raja Rutuparna Part 3Sudarshana In Sudarshana Vijaya PrasangaSudarshana In Sudarshana Vijaya Prasangaಮನೋರಮಾ ಎಂ. ಭಟ್ - ಬದುಕು ಮತ್ತು ಬರಹ (Manorama. M. Bhat – Life & Litrature of A heroic woman)ಮನೋರಮಾ ಎಂ. ಭಟ್ - ಬದುಕು ಮತ್ತು ಬರಹ (Manorama. M. Bhat – Life & Litrature of A heroic woman)"ಡ್ರೆಸ್ಸಿನ ಮಯ್ಯರು" ಖ್ಯಾತಿಯ ಖಂಡಿಗ ವೆಂಕಟೇಶ ಮಯ್ಯ (Khandiga Venkatesh Mayya of Yakshagana Outfits)"ಡ್ರೆಸ್ಸಿನ ಮಯ್ಯರು" ಖ್ಯಾತಿಯ ಖಂಡಿಗ ವೆಂಕಟೇಶ ಮಯ್ಯ (Khandiga Venkatesh Mayya of Yakshagana Outfits)ಗುರುರಾಜ ಮಾರ್ಪಳ್ಳಿಯವರ ಖ್ಯಾಲು ಖಯಾಲಿಗಳು (Kyalu KhayAli by Gururaja Marpalli)ಗುರುರಾಜ ಮಾರ್ಪಳ್ಳಿಯವರ ಖ್ಯಾಲು ಖಯಾಲಿಗಳು (Kyalu KhayAli by Gururaja Marpalli)ಶ್ರೀಮದ್ ಭಗವದ್ಗೀತಾ - ಕೊನೆಯ ಭಾಗ 7 (Shrimad Bhagavadgeetha - Last Part 7)ಶ್ರೀಮದ್ ಭಗವದ್ಗೀತಾ - ಕೊನೆಯ ಭಾಗ 7 (Shrimad Bhagavadgeetha - Last Part 7)ಮಹಿಷ ಮರ್ಧಿನಿ ಪ್ರಸಂಗದಲ್ಲಿ ಮಾಲಿನಿ (Malini in Mahisha Mardhini)ಮಹಿಷ ಮರ್ಧಿನಿ ಪ್ರಸಂಗದಲ್ಲಿ ಮಾಲಿನಿ (Malini in Mahisha Mardhini)In Sambandha Sanyoga Raja Yayati Part 1In Sambandha Sanyoga Raja Yayati Part 1In Sri Devi Mahathme Mahishasura Part3In Sri Devi Mahathme Mahishasura Part3ಅಪ್ರತಿಮ ಕಲಾವಿದ ಶ್ರೀ ವಂಡ್ಸೆ ನಾರಾಯಣ ಗಾಣಿಗ (A Legendary Yakshagana Artist Shri Vandse Narayana Ganiga)ಅಪ್ರತಿಮ ಕಲಾವಿದ ಶ್ರೀ ವಂಡ್ಸೆ ನಾರಾಯಣ ಗಾಣಿಗ (A Legendary Yakshagana Artist Shri Vandse Narayana Ganiga)ಎಡನೀರು ಮೇಳದ ತ್ರಿಪುರ ಮಥನ ದ ತಾರಾಕ್ಷನಾಗಿ ಪನೆಯಾಲ (In Tripura Mathana Taraksha by Paneyala)ಎಡನೀರು ಮೇಳದ ತ್ರಿಪುರ ಮಥನ ದ ತಾರಾಕ್ಷನಾಗಿ ಪನೆಯಾಲ (In Tripura Mathana Taraksha by Paneyala)ಅಭಿನವ ವಾಲ್ಮೀಕಿ ಖ್ಯಾತಿಯ ಪುರುಷೋತ್ತಮ ಪೂಂಜ (Great Yakshagana Bhagavata Purushottama Poonja) - Part2ಅಭಿನವ ವಾಲ್ಮೀಕಿ ಖ್ಯಾತಿಯ ಪುರುಷೋತ್ತಮ ಪೂಂಜ (Great Yakshagana Bhagavata Purushottama Poonja) - Part2ಯಕ್ಷರಂಗದ ವಿದ್ಯಾವಂತ ಪೂಕಳ ಲಕ್ಷ್ಮೀನಾರಾಯಣ ಭಟ್ಟ (An Educated artist Pookala Lakshminarayana Bhat)ಯಕ್ಷರಂಗದ ವಿದ್ಯಾವಂತ ಪೂಕಳ ಲಕ್ಷ್ಮೀನಾರಾಯಣ ಭಟ್ಟ (An Educated artist Pookala Lakshminarayana Bhat)Raktabeejasura in Sri Devi Mahathme Part1Raktabeejasura in Sri Devi Mahathme Part1ಯಕ್ಷಗುರು ಹೊಸ್ತೋಟ ಮಂಜುನಾಥ ಭಾಗವತ (The Living Legend Hostota Manjunatha Bhagavata)ಯಕ್ಷಗುರು ಹೊಸ್ತೋಟ ಮಂಜುನಾಥ ಭಾಗವತ (The Living Legend Hostota Manjunatha Bhagavata)Mantri & Taranisena PraveshaMantri & Taranisena Pravesha
Яндекс.Метрика