Загрузка страницы

ಮಧುಮೇಹ ಪಾದಗಳಿಗೆ ಮತ್ತು ಕ್ರೀಡಾ ಗಾಯಗಳಿಗೆ ಚಿಕಿತ್ಸೆ ನೀಡಲು ಪೊಡಿಯಾಟ್ರಿಕ್ ಕೇರ್ ಇಂದಿನ ಅಗತ್ಯ : ಡಾ.ಸಂಜಯ್ ಶರ್ಮಾ

ಪಾದಗಳಿಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ದೀರ್ಘಕಾಲದ ಗಾಯಗಳಿಗೆ ಚಿಕಿತ್ಸೆ ನೀಡುವ ವಿಶೇಷವಾದ ಪೊಡಿಯಾಟ್ರಿ ಮತ್ತು ಗಾಯದ ಆರೈಕೆ ಕೇಂದ್ರವಾದ ಫುಟ್‌ ಸೆಕ್ಯೂರ್ ತನ್ನ ಐದನೇ ಕೇಂದ್ರವನ್ನು ಮಲ್ಲೇಶ್ವರಂನಲ್ಲಿ ಇದೇ ಮಾರ್ಚ್ 11ರಂದು ತೆರೆಯುತ್ತಿದೆ.

ಉತ್ತಮ ಗುಣಮಟ್ಟದ ಆರೋಗ್ಯ ಸೇವೆಯ ಕೇಂದ್ರವಾಗಿರುವ ಫುಟ್ ಸೆಕ್ಯೂರ್ ಬೆಂಗಳೂರಿನಲ್ಲಿ ಮತ್ತೊಂದು ವಿಶಿಷ್ಟ ಆರೋಗ್ಯ ಕೇಂದ್ರವನ್ನು ತನ್ನ ಜಾಲಕ್ಕೆ ಸೇರಿಸಿಕೊಳ್ಳುತ್ತಿದೆ.

ಫುಟ್ ಸೆಕ್ಯೂರ್ (FootSecure) 2018ರಲ್ಲಿ ಪ್ರಾರಂಭವಾದ ಗಾಯದ ಚಿಕಿತ್ಸೆ ಕೇಂದ್ರವಾಗಿದ್ದು, ಸಧ್ಯ ಬೆಂಗಳೂರಿನಲ್ಲಿ ನಾಲ್ಕು ಕೇಂದ್ರಗಳನ್ನು ನಿರ್ವಹಿಸುತ್ತದೆ. ಈಗ ಆರಂಭಿಸಲಾಗುತ್ತಿರುವ ಹೊಸ ಕೇಂದ್ರದ ವೈಶಿಷ್ಟ್ಯಗಳನ್ನು ಮಾಧ್ಯಮಗಳಿಗೆ ವಿವರಿಸಿದ ಫುಟ್‌ಸೆಕ್ಯೂರ್‌ನ ಸಂಸ್ಥಾಪಕ ಡಾ ಸಂಜಯ್ ಶರ್ಮಾ, ಈ ಕೇಂದ್ರವು ಪೊಡಿಯಾಟ್ರಿ ಮತ್ತು ಗಾಯದ ಆರೈಕೆಗಾಗಿ ಒಂದೇ ಸ್ಥಳದಲ್ಲಿ ಎಲ್ಲ ಚಿಕಿತ್ಸೆ ನೀಡುವ ಕೇಂದ್ರವಾಗಲಿದೆ ಎಂದು ಹೇಳಿದರು.

ಗಾಯವನ್ನು ಗುಣಪಡಿಸುವಲ್ಲಿ ವಿನೂತನ ರೀತಿಯ ತಂತ್ರಜ್ಞಾನವನ್ನು ಮೊದಲ ಬಾರಿಗೆ ನಾವು ಕರ್ನಾಟಕದಲ್ಲಿ (ಭಾರತದ 8 ಉತ್ಕೃಷ್ಟ ಕೇಂದ್ರಗಳಲ್ಲಿ ಒಂದು) ಪರಿಚಯಿಸಿದ್ದೇವೆ. - ಡೆರಿಮ್ (ಪುನರುತ್ಪಾದಕ ಔಷಧ) - ಈ ತಂತ್ರಜ್ಞಾನವು ಗಾಯವನ್ನು ತ್ವರಿತವಾಗಿ ಗುಣಪಡಿಸಲು ಸಹಾಯ ಮಾಡುತ್ತದೆ.

ಇದು ರೋಗ ಪತ್ತೆ, ಸಾಮಾನ್ಯ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸಾ ಸೌಲಭ್ಯಗಳನ್ನು ಹೊಂದಿದೆ; ಫುಟ್‌ಸೆಕ್ಯೂರ್ ಕ್ರೀಡಾಪಟುಗಳು ಮತ್ತು ಮಧುಮೇಹ ರೋಗಿಗಳಿಗೆ ಪಾದರಕ್ಷೆ/ ಇನ್‌ಸೊಲ್‌ಗಳನ್ನು ಸಹ ಒದಗಿಸುತ್ತದೆ.

ದೇಶದಲ್ಲಿ ಹೆಚ್ಚುತ್ತಿರುವ ಕ್ರೀಡಾ ಚಟುವಟಿಕೆಗಳು ಮತ್ತು ಮಧುಮೇಹ ಪ್ರಮಾಣದ ಜೊತೆಗೆ, ಕಾಲು ಮತ್ತು ಪಾದದ ಕಾಯಿಲೆಗಳು ಸಹ ಹಲವಾರು ರೀತಿಯಲ್ಲಿ ಬೆಳೆಯುತ್ತಿವೆ ಎಂದು ಡಾ. ಶರ್ಮಾ ಹೇಳಿದರು.

ಸಂಧಿವಾತ, ಮಧುಮೇಹ, ಗರ್ಭಾವಸ್ಥೆ ಇತ್ಯಾದಿಗಳಿಂದಾಗಿ ಭಾರತದಲ್ಲಿ ಅಂದಾಜು 46 ಕೋಟಿ ಜನರು ವಿವಿಧ ಕಾಲು ಮತ್ತು ಪಾದದ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಮಧುಮೇಹ ಪಾದವು ಇಂದು ಅತ್ಯಾಧುನಿಕ ಚಿಕಿತ್ಸಾ ಪದ್ಧತಿಯನ್ನು ಹೊಂದಿದೆ; ಪ್ರತಿ 20 ಸೆಕೆಂಡಿಗೆ ಜಗತ್ತಿನ ಯಾವುದಾದರೊಂದು ಕಡೆ ಮಧುಮೇಹದಿಂದ ಒಂದು ಅಂಗ ಛೇಧನವಾಗುತ್ತದೆ ಎಂದು ವರದಿಗಳು ಹೇಳುತ್ತವೆ. ಭಾರತವು ಮಧುಮೇಹದಿಂದ ವಾರ್ಷಿಕವಾಗಿ ಸರಾಸರಿ 14 ಲಕ್ಷ ಅಂಗಚ್ಛೇದನಗಳಿಗೆ ಸಾಕ್ಷಿಯಾಗುತ್ತಿದೆ, 5 ವರ್ಷಗಳ ಮರಣ ಪ್ರಮಾಣವು ಶೇ.70 ರಷ್ಟಿದೆ. ಇದು ಕ್ಯಾನ್ಸರ್ ಸಾವಿನ ಪ್ರಮಾಣಕ್ಕಿಂತ ಹೆಚ್ಚು ಎಂದು ಅವರು ವಿವರಿಸಿದರು.

FootSecure ಅನ್ನು ಸ್ಥಾಪಿಸಿದ ಸುಮಾರು ನಾಲ್ಕು ವರ್ಷಗಳಲ್ಲಿ, 10,000 ಕ್ಕಿಂತ ಹೆಚ್ಚು ಜನರಿಗೆ ಚಿಕಿತ್ಸೆ ನೀಡಲಾಗಿದೆ ಮತ್ತು ಸಕಾಲಿಕ ಆರೈಕೆಯನ್ನು ಒದಗಿಸಲಾಗಿದೆ, ಇದು 3,000 ಅಂಗವಿಕಲರ ಜೀವ ಉಳಿಸಿದೆ. FootSecure ಭಾರತದಲ್ಲಿ ಮಧುಮೇಹದಿಂದ ಅತಿ ಕಡಿಮೆ ಅಂಗಚ್ಛೇದನದ ಪ್ರಮಾಣವನ್ನು ಹೊಂದಿದೆ, ಅಂದರೆ ಶೇ.2ರಷ್ಟು ಮಾತ್ರ. ಆದರೆ ರಾಷ್ಟ್ರೀಯ ಸರಾಸರಿಯು ಸುಮಾರು ಶೇ.19 ಆಗಿದೆ. 2021 ರಲ್ಲಿ ಇಂಡಿಯಾ ಟುಡೆ ಗ್ರೂಪ್‌ನಿಂದ ಭಾರತದಲ್ಲಿನ ಅತ್ಯುತ್ತಮ ಪೊಡಿಯಾಟ್ರಿ ಕ್ಲಿನಿಕ್ ಪ್ರಶಸ್ಸಿತಯನ್ನು ಫೂಟ್‌ಸೆಕ್ಯೂರ್‌ಗೆ ನೀಡಲಾಯಿತು. ಡಾ ಸಂಜಯ್ ಶರ್ಮಾ ಅವರಿಗೆ 2020 ರಲ್ಲಿ ಕರ್ನಾಟಕ ಸರ್ಕಾರ ಮತ್ತು ಟೈಮ್ಸ್ ಆಫ್ ಇಂಡಿಯಾದಿಂದ ಹೆಲ್ತ್ ಕೇರ್ ಅಚೀವರ್ಸ್ ಪ್ರಶಸ್ತಿಯಲ್ಲಿ ರೈಸಿಂಗ್ ಸ್ಟಾರ್ ಪ್ರಶಸ್ತಿಯನ್ನು ನೀಡಲಾಗಿದೆ.

FootSecure ಕೇವಲ ರೋಗಿಗಳಿಗೆ ಚಿಕಿತ್ಸೆ ನೀಡಲು ಮಾತ್ರ ಸೀಮಿತವಾಗಿಲ್ಲ, ಜೊತೆಗೆ ಸುಮಾರು 1,500 ವೈದ್ಯರು ಮತ್ತು ಶಸ್ತ್ರಚಿಕಿತ್ಸಕರಿಗೆ ಮಧುಮೇಹ ಪಾದವನ್ನು ಗುರುತಿಸುವುದು ಮತ್ತು ನಿರ್ವಹಿಸುವುದು, ಪಾದದ ವಿವಿಧ ಸ್ಕ್ಯಾನ್‌ಗಳನ್ನು ವಿಶ್ಲೇಷಿಸುವುದು ಮತ್ತು ಸರಿಯಾದ ಪಾದರಕ್ಷೆ/ಪೆಡ್ ಆರ್ಥೋಸಿಸ್ ಅನ್ನು ಶಿಫಾರಸು ಮಾಡುವ ಬಗ್ಗೆ ತರಬೇತಿಯನ್ನು ಸಹ ನೀಡುತ್ತಿದೆ. ತಂತ್ರಜ್ಞಾನದಲ್ಲಿನ ಪ್ರಗತಿಗೆ ಅನುಗುಣವಾಗಿ FootSecure, ಡಿಜಿಟಲ್, ಕೃತಕ ಬುದ್ಧಿಮತ್ತೆ (AI) -ಶಕ್ತಗೊಂಡ ಗಾಯದ ಆರೈಕೆ ಅಪ್ಲಿಕೇಶನ್ - Wound360 ಅನ್ನು ಅಭಿವೃದ್ಧಿಪಡಿಸಿದೆ ಎಂದು ಅವರು ಹೇಳಿದ್ದಾರೆ. ಇದು ಜಗತ್ತಿನ ಎಲ್ಲೆಡೆ ಇರುವ ರೋಗಿಗಳಲ್ಲಿ ಆರಂಭಿಕ ಹಂತದಲ್ಲೇ ಹುಣ್ಣುಗಳನ್ನು ಗುರುತಿಸಲು ಮತ್ತು ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.

ಭಾರತದಾದ್ಯಂತ ತನ್ನ ಜಾಲವನ್ನು ವಿಸ್ತರಿಸುವುದು ಮತ್ತು ಭಾರತದಲ್ಲಿ ಪೊಡಿಯಾಟ್ರಿ ಮತ್ತು ಗಾಯದ ಆರೈಕೆಗಾಗಿ ಮೀಸಲಾದ ಆಸ್ಪತ್ರೆಯನ್ನು ಹೊಂದುವುದು ನಮ್ಮ ಯೋಜನೆಯಾಗಿದೆ ಎಂದು ಡಾ. ಶರ್ಮಾ ಹೇಳಿದರು. ಈ ವಿಸ್ತರಣಾ ಯೋಜನೆ ಮತ್ತು ಮೀಸಲಾದ ಆಸ್ಪತ್ರೆಯನ್ನು ಮಲ್ಟಿಪ್ಲೆಕ್ಸ್ ಗ್ರೂಪ್ ಆಫ್ ಕಂಪನೀಸ್‌ನ ಮಹೇಶ್ ಶೆಟ್ಟಿ ಅವರು ಸ್ಥಾಪಿಸಿದ ನಿಧಿಯಿಂದ ಚಿಕಿತ್ಸೆಯ ನೆರವು ನೀಲಾಗುತ್ತದೆ ಎಂದರು.

ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಸಂಪರ್ಕಿಸಿ:
ಡಾ ಸಂಜಯ್ ಶರ್ಮಾ
ಪೊಡಿಯಾಟ್ರಿಕ್ ಸರ್ಜನ್ ಮತ್ತು ಫೂಟ್‌ಸೆಕ್ಯೂರ್‌ ಸಂಸ್ಥಾಪಕ
M: 8282829470 | ಇ ಮೇಲ್: sanjay@footsecure.com

Видео ಮಧುಮೇಹ ಪಾದಗಳಿಗೆ ಮತ್ತು ಕ್ರೀಡಾ ಗಾಯಗಳಿಗೆ ಚಿಕಿತ್ಸೆ ನೀಡಲು ಪೊಡಿಯಾಟ್ರಿಕ್ ಕೇರ್ ಇಂದಿನ ಅಗತ್ಯ : ಡಾ.ಸಂಜಯ್ ಶರ್ಮಾ канала BANGALORE NEWS NETWORK
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
7 марта 2023 г. 19:52:16
00:07:31
Другие видео канала
ಬೆಂಗಳೂರಿನ ನಿಸರ್ಗಾ ಮಹಿಳಾ ಮತ್ತು ಮಕ್ಕಳ ಚಾರಿಟೆಬಲ್ ಟ್ರಸ್ಟ್ (ರಿ) ವತಿಯಿಂದ ಅದ್ಧೂರಿ ಮಹಿಳಾ ದಿನಾಚರಣೆಬೆಂಗಳೂರಿನ ನಿಸರ್ಗಾ ಮಹಿಳಾ ಮತ್ತು ಮಕ್ಕಳ ಚಾರಿಟೆಬಲ್ ಟ್ರಸ್ಟ್ (ರಿ) ವತಿಯಿಂದ ಅದ್ಧೂರಿ ಮಹಿಳಾ ದಿನಾಚರಣೆNAK and SOTTO Team Up to Host 'A Gift Like No Other' Seminar to Dispel Organ Donation MythsNAK and SOTTO Team Up to Host 'A Gift Like No Other' Seminar to Dispel Organ Donation MythsFABELLE exquisite chocolates reimagine flavours of India in six unique chocolate barsFABELLE exquisite chocolates reimagine flavours of India in six unique chocolate bars27th CII QUALITY SUMMIT   AWARD FUNCTION   TAJ KIAL, BENGALURU27th CII QUALITY SUMMIT AWARD FUNCTION TAJ KIAL, BENGALURUಶ್ರೀ ಲಕ್ಷ್ಮಿ ಮದರ್ ಅಂಡ್ ಚಿಲ್ಡ್ರನ್ ಹಾಸ್ಪಿಟಲ್ ನ ಸೇವೆ ಈಗ ಬೆಂಗಳೂರಿನ  ಕೆ ಆರ್ ಪುರಂ ನಲ್ಲಿ ಲಭ್ಯಶ್ರೀ ಲಕ್ಷ್ಮಿ ಮದರ್ ಅಂಡ್ ಚಿಲ್ಡ್ರನ್ ಹಾಸ್ಪಿಟಲ್ ನ ಸೇವೆ ಈಗ ಬೆಂಗಳೂರಿನ ಕೆ ಆರ್ ಪುರಂ ನಲ್ಲಿ ಲಭ್ಯBharathi Vishnuvardhan Launched Logo of Vista's Learning (Dreammithra Pvt.Ltd) in BengaluruBharathi Vishnuvardhan Launched Logo of Vista's Learning (Dreammithra Pvt.Ltd) in BengaluruCII to host its 20th Innovation Summit in Bengaluru – Innoverge 2024CII to host its 20th Innovation Summit in Bengaluru – Innoverge 2024ಹೆಚ್ ಎಸ್ ಆರ್ ಲೇಔಟ್ ಗೆ ಭರ್ಜರಿ ಲಗ್ಗೆ ಇಟ್ಟ ಗ್ರಾಮೀಣ ಅಂಗಡಿ || Launch of Grameena Angadi at HSR Layoutಹೆಚ್ ಎಸ್ ಆರ್ ಲೇಔಟ್ ಗೆ ಭರ್ಜರಿ ಲಗ್ಗೆ ಇಟ್ಟ ಗ್ರಾಮೀಣ ಅಂಗಡಿ || Launch of Grameena Angadi at HSR LayoutPEARL ACADEMY Bengaluru hosts its annual event ‘WHAT’S NEXT’ with leading industry expertsPEARL ACADEMY Bengaluru hosts its annual event ‘WHAT’S NEXT’ with leading industry expertsMahatma Gandhiji's life through Augmented Reality AR technology by 4Point2 Tech CompanyMahatma Gandhiji's life through Augmented Reality AR technology by 4Point2 Tech CompanyNational STEM Challenge 2024 Concludes with a Spectacular Finale in BengaluruNational STEM Challenge 2024 Concludes with a Spectacular Finale in BengaluruONFYX Celebrates 2nd Anniversary at Nisarga Retreat, Kanakapura Road, BengaluruONFYX Celebrates 2nd Anniversary at Nisarga Retreat, Kanakapura Road, BengaluruKarnataka Women Achievers Awards 2018 Ceremony held at Hotel Taj Vivanta Yeshwanthapur  BengaluruKarnataka Women Achievers Awards 2018 Ceremony held at Hotel Taj Vivanta Yeshwanthapur BengaluruDoubleTree by Hilton Bengaluru Whitefield debuts in Bengaluru's Vibrant Technology HubDoubleTree by Hilton Bengaluru Whitefield debuts in Bengaluru's Vibrant Technology Hubನಿಮ್ಮ ಮನೆ ಬಾಗಿಲಿಗೆ ನಿತ್ಯ ಬಳಕೆಯ ದಿನಸಿ ಪದಾರ್ಥಗಳು|| Chota Dukaan, Daily grocery items at your Doorstepನಿಮ್ಮ ಮನೆ ಬಾಗಿಲಿಗೆ ನಿತ್ಯ ಬಳಕೆಯ ದಿನಸಿ ಪದಾರ್ಥಗಳು|| Chota Dukaan, Daily grocery items at your DoorstepFashion show at 22nd JEWELS OF INDIA From 22 -24 January 2021 in Bangalore to Hotel Lalit AshokFashion show at 22nd JEWELS OF INDIA From 22 -24 January 2021 in Bangalore to Hotel Lalit Ashokಕೊರೊನಕ್ಕೆ ಯುವಜನತೆಯೇ ಹೆಚ್ಚು ಟಾರ್ಗೆಟ್. ಯಾಕೆ? || Why young people are more targeted for CORONA/COVID 19ಕೊರೊನಕ್ಕೆ ಯುವಜನತೆಯೇ ಹೆಚ್ಚು ಟಾರ್ಗೆಟ್. ಯಾಕೆ? || Why young people are more targeted for CORONA/COVID 19SASMOS HET Technologies inaugurates world's finest defence system division 'AVIRATA' in BengaluruSASMOS HET Technologies inaugurates world's finest defence system division 'AVIRATA' in BengaluruTrust Well successfully performed liver transplant // ಯಶಸ್ವಿ ಲಿವರ್ ಕಸಿ ನಡೆಸಿದ  ಟ್ರಸ್ಟ್ ವೆಲ್Trust Well successfully performed liver transplant // ಯಶಸ್ವಿ ಲಿವರ್ ಕಸಿ ನಡೆಸಿದ ಟ್ರಸ್ಟ್ ವೆಲ್ಕಾಂತಾರ ಚಿತ್ರದ ಪ್ರಮೋದ್ ಶೆಟ್ಟಿ ನಟನಾಗಿ ಚಲನಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಹೇಗೆ?-'Kanthara' Pramod Shettyಕಾಂತಾರ ಚಿತ್ರದ ಪ್ರಮೋದ್ ಶೆಟ್ಟಿ ನಟನಾಗಿ ಚಲನಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಹೇಗೆ?-'Kanthara' Pramod Shetty
Яндекс.Метрика