Загрузка...

ಮುಖ್ಯಪ್ರಾಣ ಕಿನ್ನಿಗೋಳಿ ಜೂ. 22ರಂದು ನಮ್ಮನ್ನು ಅಗಲಿದ ಹಾಸ್ಯಗಾರ #mukhyaprana ಅಗಸ ಪ್ರಾತ್ರದ ಸೊಗಸು #yakshagana

This video contains the yakshagana hasya peerformed by Sri Mukyaprana kinnigoli as rajaka in krishna leele yakshagana prasanga
ಯಕ್ಷಗಾನ ಹಾಸ್ಯಗಾರ ಮುಖ್ಯಪ್ರಾಣ ಕಿನ್ನಿಗೋಳಿ ಇನ್ನಿಲ್ಲ
ತೆಂಕು ಮತ್ತು ಬಡಗು ತಿಟ್ಟುಗಳಲ್ಲಿ ಸೈ ಎನಿಸಿದ ಖ್ಯಾತ ಯಕ್ಷಗಾನ ಹಾಸ್ಯಗಾರ ಮುಖ್ಯಪ್ರಾಣ ಕಿನ್ನಿಗೋಳಿ ಶನಿವಾರ (ಜೂ.22) ರಾತ್ರಿ ನಿಧನರಾಗಿದ್ದಾರೆ.
ಅವರಿಗೆ 84 ವರ್ಷ ವಯಸ್ಸಾಗಿತ್ತು. 58 ವರುಷಗಳಿಗೂ ಮಿಕ್ಕಿ ತೆಂಕು ಮತ್ತು ಬಡಗು ಯಕ್ಷಗಾನ ರಂಗದಲ್ಲಿ ಸೇವೆ ಸಲ್ಲಿಸಿದ್ದರು. ರುಕ್ಕಯ್ಯ ಶೆಟ್ಟಿಗಾರ್ ಹಾಗೂ ಸೇಸಿ ಶೆಟ್ಟಿಗಾರ್ತಿ ದಂಪತಿಗಳ ಮಗನಾದ ಮುಖ್ಯಪ್ರಾಣ ಕಿನ್ನಿಗೋಳಿಯವರು ಅಲ್ಪ ಕಾಲದಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಯಕ್ಷಗಾನ ಕಲೆಯನ್ನು ಗುರುಗಳಾಗಿ ಛಂದೋಬ್ರಹ್ಮ ಡಾ| ಎನ್.ನಾರಾಯಣ ಶೆಟ್ಟರು, ಮಿಜಾರು ಅಣ್ಣಪ್ಪ, ಕವತ್ತಾರಿನ ಸೀತಾರಾಮ ಶೆಟ್ಟಿಗಾರ್, ಸುರತ್ಕಲ್ ನ ಸೂರಪ್ಪ ಶೆಟ್ಟಿಗಾರ್, ಬ್ರಹ್ಮಾವರದ ರಾಮನಾಯರಿ ಇವರಲ್ಲಿ ಮಾರ್ಗದರ್ಶನ ಪಡೆದಿದ್ದಾರೆ.
ಹವ್ಯಾಸಿ ಕಲಾವಿದರಾಗಿ 4 ವರ್ಷ, ಕಟೀಲು ಮೇಳದಲ್ಲಿ 4 ವರ್ಷ, ಇರಾ ಸೋಮನಾಥೇಶ್ವರ ಮೇಳದಲ್ಲಿ 2 ವರ್ಷ, ಸುಬ್ರಹ್ಮಣ್ಯ ಮೇಳದಲ್ಲಿ 1 ವರ್ಷ, ಮಂತ್ರಾಲಯ ಮೇಳದಲ್ಲಿ 1 ವರ್ಷ, ಸಾಲಿಗ್ರಾಮ ಮೇಳದಲ್ಲಿ 14 ವರ್ಷ, ಪೆರ್ಡೂರು ಮೇಳದಲ್ಲಿ 5 ವರ್ಷ, ಕುಮುಟ ಮೇಳದಲ್ಲಿ 1 ವರ್ಷ, ಕದ್ರಿ ಮೇಳದಲ್ಲಿ 3 ವರ್ಷ ಹಾಗೂ ಮಂದಾರ್ತಿ ಮೇಳದಲ್ಲಿ 16 ವರ್ಷ ಹೀಗೆ ಸುದೀರ್ಘ ತಿರುಗಾಟ ಮಾಡಿದ ಮುಖ್ಯಪ್ರಾಣ ಕಿನ್ನಿಗೋಳಿ ಆರಂಭ ಹಾಗೂ ಕೊನೆಯ ತಿರುಗಾಟ ಮಾಡಿದ್ದು ಕಟೀಲು ಮೇಳದಲ್ಲೇ. ಪ್ರತೀ ವರ್ಷಕಟೀಲಿನ ನವರಾತ್ರಿ ಆಟದಲ್ಲಿ ವೇಷ ಮಾಡಿ ಸೇವೆ ಸಲ್ಲಿಸುತ್ತಿದ್ದ ಅವರು ಕಳೆದ ಬಾರಿಯೂ ಬಣ್ಣ ಹಚ್ಚಿದ್ದರು.
ಪೌರಾಣಿಕ ಪ್ರಸಂಗಗಳಲ್ಲಿ ಬಾವುಕ, ರಜಕ, ನಾರದ, ವಿಜಯ, ವೃದ್ಧಬ್ರಾಹ್ಮಣ, ಕಂದರ, ಮಂಥರೆ, ವಿದ್ಯುಜ್ಜಿಹ, ಶನಿ ಪೀಡಿತ ವಿಕ್ರಮ ಮುಂತಾದ ಪಾತ್ರಗಳು, ಕಾಲ್ಪನಿಕ ಪ್ರಸಂಗಗಳಲ್ಲಿ ಚೆಲುವೆ ಚಿತ್ರಾವತಿಯ ಅಡಗೂಲಜ್ಜಿ ಮತ್ತು ಮುರಳಿ ಶೂದ್ರ ತಪಸ್ವಿನಿಯ ರಂಗಾಚಾರಿ, ಕಾಂಚನ ಶ್ರೀಯ ಪ್ರೇತ, ಸ್ವಪ್ನ ಸಾಮ್ರಾಜ್ಯದ ಶೂರ ಸೇನ ಹಾಗೂ ಕಲಿಕ್ರೋಧನದ ಮಡಿವಾಳ, ನಾಗಶ್ರೀಯ ಕೈರವನ ಪಾತ್ರಗಳ ಮೂಲಕ ಅಪಾರ ಜನ ಮೆಚ್ಚುಗೆಯನ್ನು ಪಡೆದಿದ್ದರು.
ಯಕ್ಷಗಾನ ಸೇವೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ದ.ಕ ಜಿಲ್ಲಾ ಸಾಹಿತ್ಯ ಪರಿಷತ್ತು ರಾಜ್ಯೋತ್ಸವ ಪ್ರಶಸ್ತಿ, ದ.ಕ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ, ಉಡುಪಿ ಕಲಾರಂಗದ ನಿಟ್ಟೂರು ಸುಂದರ ಶೆಟ್ಟಿ ಪ್ರಶಸ್ತಿ, ಹಾಗೂ ಕರ್ನಾಟಕ ಬಯಲಾಟ ಅಕಾಡೆಮಿ, ಕೋಡಿಮನೆ ವಾಸುಭಟ್ಟ ಪುರಸ್ಕಾರ ಸೇರಿದಂತೆ ನೂರಾರು ಸಂಮಾನ, ಗೌರವಗಳು ಸಂದಿದ್ದವು.

For any suggestions or feedback write to us at:
nithinrajshetty96@gmail.com

ನಾಗಶ್ರೀ' ಪ್ರಸಂಗ ಉತ್ತುಂಗದಲ್ಲಿದ್ದ ಕಾಲದಲ್ಲಿ ಮುಖ್ಯಪ್ರಾಣ ಕಿನ್ನಿಗೋಳಿ ಅವರ ಹೆಸರು ಎಲ್ಲೆಡೆ ಹಬ್ಬಿತ್ತು. ಕೈರವನಾಗಿ ಅನ್ಯಾಯಕ್ಕೊಳಗಾದ ಮಗಳು ಧಾರಿಕೆಯ ಕೈ ಹಿಡಿದು ಶಿಥಿಲನಾಗಿ ನಿಂತ ನನ್ನ ಮುಂದೆ ಮಗಳಿಗೆ ನ್ಯಾಯ ಕೋರಿ ರಂಗದಲ್ಲಿ ಗಟ್ಟಿದ್ದನಿಯಲ್ಲಿ ವಾದಕ್ಕಿಳಿಯುತ್ತಿದ್ದರೆ ತುಂಬಿದ ಇಡೀ ಸಭೆ ಮಂತ್ರಮುಗ್ಧವಾಗುತ್ತಿತ್ತು, ಕೆಲವರ ಕಣ್ಣಂಚಲ್ಲಿ ನೀರು ಜಿನುಗುತ್ತಿತ್ತು. ಮತ್ತೆ ಕೆಲವರ ಮನದೊಳಗೆ ಶಿಥಿಲನ ಬಗ್ಗೆ ಆಕ್ರೋಶ ಹೊರಹೊಮ್ಮುತ್ತಿತ್ತು. ಚೌಕಿಯಲ್ಲಿದ್ದ ಕಲಾವಿದರೂ ರಂಗಸ್ಥಳದ ಕಡೆ ಕಿವಿಗೊಡುತ್ತಿದ್ದರು. 'ನಾಗಶ್ರೀ' ಪ್ರಸಂಗ ಯಾವ ರೀತಿ ಸಾರ್ವಕಾಲಿಕ ಶ್ರೇಷ್ಠವಾಗಿ ಉಳಿಯುವುದೋ ಅದೇ ರೀತಿ ಆ ಪ್ರಸಂಗದಲ್ಲಿ ಅಭಿನಯಿಸಿದ ನೆನಪುಗಳು ಅಂದಿಗೂ ಇಂದಿಗೂ ಎಂದೆಂದಿಗೂ ಅಜರಾಮರ.
ಶನಿವಾರ ನಮ್ಮನ್ನಗಲಿದ ಹಾಸ್ಯ ಕಲಾವಿದ ಮುಖ್ಯಪ್ರಾಣ ಕಿನ್ನಿಗೋಳಿ ಅವರೊಂದಿಗೆ 4 ವರ್ಷಗಳ ಕಾಲ ಸಾಲಿಗ್ರಾಮ ಮೇಳದಲ್ಲಿಒಟ್ಟಿಗೆ ತಿರುಗಾಟಮಾಡಿದ್ದೆ ಅನಂತರ ನೂರಾರು ಪ್ರದರ್ಶನಗಳಲ್ಲಿ ಅತಿಥಿ ಕಲಾವಿದರಾಗಿ ಇಬ್ಬರು ಜತೆ ಯಾಗಿದ್ದೆವು. ಅವರು ಶಿಸ್ತು ಮತ್ತು ಸ್ವಾಭಿಮಾನಕ್ಕೆ ಹೆಸರುವಾಸಿ ಯಾಗಿದ್ದರು. ಸಹಕಲಾವಿದರ ಜತೆ ಕಲಾವಿದನೊಬ್ಬ ಹೇಗೆ ವ್ಯವಹರಿಸಬೇಕು ಎನ್ನುವುದಕ್ಕೆ ಅವರು ಮಾದರಿಯಾಗಿದ್ದರು.
ಅವರು ಸಹಕಲಾವಿದರನ್ನು ಗೌರವಿಸುವ ಹಾಗೂ ಅವರಲ್ಲಿನ ಪ್ರತಿಭೆ ಕುರಿತು ಮೆಚ್ಚುಗೆಯ ಮಾತುಗಳ ನಾಡುವಲ್ಲಿ ಸದಾ ಮುಂದಿರುತ್ತಿದ್ದರು. ನನಗಿನ್ನೂ ಆ ಘಟನೆ ಚೆನ್ನಾಗಿ ನೆನಪಿದೆ. ನನಗಾಗ ಇನ್ನೂ ಅತೀ ಚಿಕ್ಕ ಪ್ರಾಯ. ಯಕ್ಷಗಾನದಲ್ಲಿ ಆಗಷ್ಟೇ ಬೆಳಕಿಗೆ ಬರುತ್ತಿದ್ದೆ ಕಾಲ, ಬೆಂಗಳೂರಿನಲ್ಲಿ ಮಾರಣಕಟ್ಟೆ ಮೇಳ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಭೀಷ್ಮಪರ್ವ ಹಾಗೂ ಗದಾಯುದ್ದ ಪ್ರಸಂಗದ ಪ್ರದರ್ಶನವಿತ್ತು. ನಾನು ಆರಂಭದಲ್ಲಿ ಭೀಷ್ಮಪರ್ವದ ಭೀಷ್ಮ ಗದಾಯುದ್ಧದ ಭೀಮನ ಪಾತ್ರ ನಿರ್ವಹಿಸಿದ್ದೆ ಅಂದಿನ ಸಮ್ಮಾನದ ವೇದಿಕೆಯಲ್ಲಿ ಕಿನ್ನಿಗೋಳಿಯವರು ನನ್ನ ಕುರಿತು 'ಈ ಮಾಣಿ ಇನ್ನುಹತ್ತು ವರ್ಷದಲ್ಲಿ ಎಷ್ಟು ಎತ್ತರಕ್ಕೆ ಏರ್ತ ಎನ್ನುವುದು ಹೇಳಲಿಕ್ಕೆ ಸಾಧ್ಯ ಇಲ್ಲ' ಎಂದು ಅಭಿಮಾನದ ಮಾತನ್ನಾಡಿದ್ದರು ಹಾಗೂ ಕೊನೆ ಘಳಿಗೆಯ ತನಕ ನಾನು ಸಿಕ್ಕಾಗಲೆಲ್ಲ ಅಂದಿನ ಪ್ರದರ್ಶನವನ್ನು ನೆನಪಿಸಿಕೊಳ್ಳುತ್ತಿದ್ದರು.
ಚೆಲುವೆ ಚಿತ್ರವತಿಯಲ್ಲಿ ಅಡುಗೋಲಜ್ಜಿಯಾಗಿ, ನಾಗಶ್ರೀ ಪ್ರಸಂಗದಲ್ಲಿ ದಿ| ಕಾಳಿಂಗ ನಾವಡರೊಂದಿಗಿನ ಅವರ ಸಂಭಾಷಣೆ ಇಂದಿಗೂ ಜನಮನದಲ್ಲಿ ಹಸುರಾ ಗಿದೆ. ನನಗೆ ಆಶ್ಚರ್ಯವೆಂದರೆ ಕಿನ್ನಿಗೋಳಿಯವರು ಹಾಗೂ ನಾವಡರು ಇಬ್ಬರೂ ರಂಗಸ್ಥಳ ಬಿಟ್ಟು ಹೊರಬಂದ ಮೇಲೆ ತುಂಬಾ ಗಂಭೀರವಾಗಿ ಇರುತ್ತಿದ್ದರು. ಆದರೆ ರಂಗಸ್ಥಳ ಹತ್ತಿದ ತತ್‌ಕ್ಷಣ ಇಬ್ಬರಲ್ಲೂ ಹಾಸ್ಯದ ಹೊನಲು ಮೂಡಿಬರುತ್ತಿತ್ತು. ಬಹುಶಃ ನಾವಡರು ಕಿನ್ನಿಗೋಳಿಯವರೊಂದಿಗೆ ನಡೆಸಿದಷ್ಟು ಅದ್ಭುತವಾದ ಸಂಭಾಷಣೆ ಬೇರೆ ಹಾಸ್ಯ ಕಲಾವಿದರ ಜತೆ ನಡೆಸಿರಲಿಕ್ಕಿಲ್ಲ. ಆ ಕಾಲದಲ್ಲಿ ಸಾಮಾಜಿಕ ಪಾತ್ರಗಳೆಲ್ಲ ವಿಜೃಂಭಿಸಲು ಇವರಿಬ್ಬರ ಸಂಭಾಷಣೆ ಸನ್ನಿವೇಶಗಳು ಕಾರಣವಾಗಿದ್ದವು.
ಇನ್ನು ಸ್ವಾಭಿಮಾನದಲ್ಲೂ ಇವರು ಬೇರೆ ಕಲಾವಿದರಿಗೆ ಮಾರ್ಗದರ್ಶಕರಾಗಿದ್ದರು. 82ನೇ ವಯಸ್ಸಿನ ವರೆಗೂ ಕಲಾ ವಿದನಾಗಿ ರಂಗದಲ್ಲಿ ಬಣ್ಣ ಹಚ್ಚುವುದು ಅಷ್ಟು ಸುಲಭದ ಕೆಲಸವಲ್ಲ, ಇದಕ್ಕೆ ಮುಖ್ಯ ಕಾರಣ ಅವರೊಳಗಿನ ಸ್ವಾಭಿ ಮಾನದ ಬದುಕು. ಅಷ್ಟು ವಯಸ್ಸಾಗಿದ್ದರೂ ಪಾತ್ರವನ್ನು ಅರ್ಧಕ್ಕೆ ತುಂಡರಿಸುತ್ತಿರಲಿಲ್ಲ. 30-40ರ ವಯಸ್ಸಿನಲ್ಲಿ ಯಾವ ರೀತಿ ಅಭಿನಯಿಸುತ್ತಿದ್ದರೋ ಅದೇ ರೀತಿ ಪ್ರದರ್ಶನ ನೀಡುತ್ತಿದ್ದರು. ಇದು ಕೂಡ ಎಲ್ಲ ಕಲಾವಿದರಿಗೆ ಸಾಧ್ಯವಿಲ್ಲ ಕಿನ್ನಿಗೋಳಿಯವರು ಹಾಸ್ಯದಲ್ಲಿ ಬೇರೆ ಕಲಾವಿದರನ್ನು ಅನುಕರಿಸಿದ್ದು ಕಡಿಮೆ, ಅವರದ್ದೇ ಆದ ಶೈಲಿಯ ಮೂಲಕ ಗಮನಸೆಳೆದಿದ್ದರು.
ಒಟ್ಟಾರೆ ಯಕ್ಷರಂಗಕ್ಕೆ ಕಿನ್ನಿಗೋಳಿಯಂತಹ ಕಲಾವಿದರು ಸಾರ್ವಕಾಲಿಕ ಶ್ರೇಷ್ಠರಾಗಿ ತೋರುತ್ತಾರೆ. ಯಕ್ಷಮಂಚದಿಂದ ಚಿರವಿಶ್ರಾಂತಿಗೆ ಜಾರಿದ ಮುಖ್ಯಪ್ರಾಣ ಕಿನ್ನಿಗೋಳಿ ಅವರು ಯಕ್ಷಗಾನ ಕಲಾವಿದರು ಮತ್ತು ಯಕ್ಷಾಭಿಮಾನಿಗಳ ಪಾಲಿಗೆ ಸದಾ ಸ್ಮರಣೀಯರು.

-ಕೊಂಡದಕುಳಿ ರಾಮಚಂದ್ರ ಹೆಗಡೆ

#yakshagana #kinnigoli #mukyaprana #yakshagana_Hasya #nithinRajShetty #ಪಟ್ಲ #tenku #badagu#2025 #omshanti

Видео ಮುಖ್ಯಪ್ರಾಣ ಕಿನ್ನಿಗೋಳಿ ಜೂ. 22ರಂದು ನಮ್ಮನ್ನು ಅಗಲಿದ ಹಾಸ್ಯಗಾರ #mukhyaprana ಅಗಸ ಪ್ರಾತ್ರದ ಸೊಗಸು #yakshagana канала Nithin Raj Shetty
Яндекс.Метрика
Все заметки Новая заметка Страницу в заметки
Страницу в закладки Мои закладки
На информационно-развлекательном портале SALDA.WS применяются cookie-файлы. Нажимая кнопку Принять, вы подтверждаете свое согласие на их использование.
О CookiesНапомнить позжеПринять