Загрузка...

Vijay Karnataka Live : ಪಹಲ್ಗಾಮ್‌ ದಾ*ಳಿಗೆ ಪ್ರತ್ಯುತ್ತರ ನೀಡಿದ ಭಾರತೀಯ ಸೇನೆ, ಆಪರೇಷನ್‌ ಸಿಂಧೂರ ಸಕ್ಸಸ್‌!

ಪಹಲ್ಗಾಮ್‌ ಉಗ್ರರ ದಾಳಿಗೆ ಭಾರತ ಪ್ರತೀಕಾರವನ್ನು ತೀರಿಸಿಕೊಂಡಿದ್ದು, ಪಾಕಿಸ್ತಾನಕ್ಕೆ ತಕ್ಕ ತಿರುಗೇಟನ್ನು ನೀಡಿದೆ. ಆಪರೇಷನ್‌ ಸಿಂಧೂರ ಹೆಸರಲ್ಲಿ ಭಾರತ ಉಗ್ರರ ವಿರುದ್ಧ ಕಾರ್ಯಾಚರಣೆಯನ್ನು ಕೈಗೊಂಡಿದೆ. ಪಾಕಿಸ್ತಾನ ಹಾಗೂ ಪಾಕ್‌‌ ಆಕ್ರಮಿತ ಕಾಶ್ಮೀರದ 9 ಭಯೋತ್ಪಾದಕರ ನೆಲೆಗಳನ್ನು ಏರ್‌ಸ್ಟ್ರೈಕ್‌ ಮೂಲಕ ಭಾರತೀಯ ಸೇನೆ ಹೊಡೆದುರುಳಿಸಿದೆ.

ಪಾಕಿಸ್ತಾನ ಹಾಗೂ ಪಾಕ್‌ ಆಕ್ರಮಿತ ಪ್ರದೇಶದ ಒಟ್ಟು ಒಂಬತ್ತು ಸ್ಥಳಗಳನ್ನು ಗುರುತಿಸಿ ಭಾರತೀಯ ವಾಯಸೇನೆ ದಾ*ಳಿಯನ್ನು ನಡೆಸಿದೆ. ಕಾರ್ಯಾಚರಣೆಯಲ್ಲಿ ಪ್ರಮುಖವಾಗಿ ನಿಷೇಧಿತ ಜೈಶ್‌ ಎ ಮೊಹಮದ್‌ ಗುಂಪುಗಳ ನೆಲೆ, ಬಹಲ್‌ವಾಲ್‌ಪುರದಲ್ಲಿ ಮರ್ಕಜ್‌ ಸುಭಾನ್‌ ಅಲ್ಲಾ ಮಸೀದಿ, ತೆಹ್ರಾ ಕಲಾನ್‌ನಲ್ಲಿ ಸರ್ಜಾಲ್‌, ಕೋಟ್ಲಿಯ ಮರ್ಕಜ್‌, ಅಬ್ಬಾಸ್ ಮತ್ತು ಮುಜಫರಾಬಾದ್‌ ಸೈಯದ್ನಾ ಬಿಲಾಲ್‌ ಕಟ್ಟಡಗಳ ಮೇಲೆ ಭಾರತ ದಾ*ಈ ನಡೆಸಿದೆ.

ಬುಧವಾರ ಮಧ್ಯರಾತ್ರಿ ಸುಮಾರು 1.44 ಸುಮಾರಿಗೆ ಭಾರತೀಯ ವಾಯಸೇನೆ ದಾಳಿ ನಡೆಸಿದೆ. ಭಾರತೀಯ ಸಶಸ್ತ್ರ ಪಡೆ ಪಾಕಿಸ್ತಾನ ಯಾವುದೇ ಸೈನಿಕರನ್ನ ಗುರಿಯಾಗಿಸಿಲ್ಲ. ಬದಲಾಗಿ ಉ*ಗ್ರರ ಅಡಗುತಾಣವನ್ನು ಗುರಿಯಾಗಿಸಿ ಭಾರತೀ ಸೇನೆ ದಾ*ಳಿ ಮಾಡಿದೆ ಎಂದು ಸೇನೆ ಮಾಹಿತಿಯನ್ನು ನೀಡಿದೆ.

ಒಟ್ಟಿನಲ್ಲಿ ಪಹಲ್ಗಾಮ್‌ ನಡೆದ ದಾಳಿಗೆ ಪ್ರತಿದಾಳಿ ನಡೆಸಿದ್ದು, ಉ*ಗ್ರರನ್ನು ಬೇರು ಸಮೇತ ಭಾರತೀಯ ಸೇನೆ ಮಟ್ಟಹಾಕಿದೆ. ಪಹಲ್ಗಾಮ್‌ನಲ್ಲಿ ಹ*ತ್ಯೆಯಾದವರ ಆತ್ಮಕ್ಕೆ ಶಾಂತಿ ನೀಡುವ ಕೆಲಸವನ್ನು ಭಾರತೀಯ ಸೇನೆ ಮಾಡಿದೆ.
#kashmirterrorattack #pahalgamterrorattack #indiapakistanwar #pakistan #indiapakistanwar

Видео Vijay Karnataka Live : ಪಹಲ್ಗಾಮ್‌ ದಾ*ಳಿಗೆ ಪ್ರತ್ಯುತ್ತರ ನೀಡಿದ ಭಾರತೀಯ ಸೇನೆ, ಆಪರೇಷನ್‌ ಸಿಂಧೂರ ಸಕ್ಸಸ್‌! канала Vijay Karnataka | ವಿಜಯ ಕರ್ನಾಟಕ
Страницу в закладки Мои закладки
Все заметки Новая заметка Страницу в заметки