Загрузка страницы

ಮಡೇನೂರು ಡ್ಯಾಮ್ (Madenur Dam)

ಶರಾವತಿ ನದಿಯ ಗರ್ಭದಲ್ಲಿ ಹುದುಗಿ 60 ವರ್ಷಗಳು ಕಳೆದರೂ 'ಮಡೇನೂರು ಅಣೆಕಟ್ಟೆ' ಇಂದಿಗೂ ತನ್ನ ಸೌಂದರ್ಯವನ್ನು‌ ಹಾಗೆಯೇ ಉಳಿಸಿಕೊಂಡಿದೆ. ಲಿಂಗನಮಕ್ಕಿ ಅಣೆಕಟ್ಟೆಯ ಹಿನ್ನೀರಿನಲ್ಲಿ ಈ ಅಣೆಕಟ್ಟೆ ಮುಳುಗಿ ಹೋಗಿದೆ. ಲಿಂಗನಮಕ್ಕಿ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಕಡಿಮೆಯಾಗುತ್ತಿದ್ದಂತೆ ಮಡೇನೂರು ಅಣೆಕಟ್ಟೆ ಮತ್ತೆ ಹೊರ ಜಗತ್ತಿಗೆ ಕಾಣ ಸಿಗುತ್ತಿದೆ. ಮಡೇನೂರು ಡ್ಯಾಂ, ಹಿರೇಭಾಸ್ಕರ ಡ್ಯಾಂ ಎಂದು ಕರೆಯುತ್ತಾರೆ.

ಅಣೆಕಟ್ಟೆಯ ಇತಿಹಾಸ: ಶರಾವತಿ ನದಿಗೆ ಪ್ರಥಮವಾಗಿ ನಿರ್ಮಿಸಿದ ಅಣೆಕಟ್ಟು ಎಂದರೆ ಅದು ಮಡೇನೂರು ಅಣೆಕಟ್ಟು. 1939ರ ಬ್ರಿಟಿಷರ ಆಳ್ವಿಕೆಯಲ್ಲಿ ಈ ಡ್ಯಾಂ ನಿರ್ಮಾಣ ಮಾಡಲು ಪ್ರಾರಂಭಿಸಿದರು. ಮೈಸೂರಿನ ಪ್ರಸಿದ್ದ ಅರಸರಲ್ಲಿ ಒಬ್ಬರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1939ರ ಫೆಬ್ರವರಿ 5 ರಂದು ಅಡಿಗಲ್ಲು ಹಾಕಿದ್ದರು. ಮೈಸೂರಿನ ಇಂಜಿನಿಯರ್ ಆಗಿದ್ದ ಸುಬ್ಬರಾವ್ ಅವರ ನೇತೃತ್ವದಲ್ಲಿ ಡ್ಯಾಂ ನಿರ್ಮಾಣ ಮಾಡಲಾಯಿತು. ಇದು 114 ಅಡಿ ಎತ್ತರದಲ್ಲಿದೆ. ಇಲ್ಲಿ ಸುಮಾರು 25 ಟಿಎಂಸಿ ನೀರನ್ನು ಸಂಗ್ರಹ ಮಾಡಬಹುದಾಗಿದೆ.

11 ಸೈಫನ್ ನಿರ್ಮಾಣ: ಈ ಜಲಾಶಯದಲ್ಲಿ 18 ಅಡಿ ವ್ಯಾಸದ 58 ಅಡಿ ಎತ್ತರದ ಒಟ್ಟು 11 ಸೈಫನ್ಗಳಿವೆ. ಸೈಫನ್ಗಳ‌ ನಿರ್ಮಾಣಕ್ಕೆ ಆರ್ಸಿ‌ಸಿ ಬಳಸಲಾಗಿದೆ. ಇದರಿಂದ ಸೈಫನ್ ಒಳಗೆ ಯಾವುದೇ ಮರ ಸೇರಿದಂತೆ ಇತರ ವಸ್ತುಗಳು ಸಿಲುಕಿ ಹಾಕಿಕೊಳ್ಳದಂತೆ ಒಳಗೆ ಜಾಲರಿಗಳನ್ನು ಅಳವಡಿಸಲಾಗಿದೆ. ಇಲ್ಲಿ ಪ್ರತಿಯೊಂದು ಸೈಫನ್ನಿಂದ 12 ಕ್ಯೂಸೆಕ್ ನೀರು ಹೊರ ಹೋಗುವಂತೆ ನಿರ್ಮಾಣ ಮಾಡಲಾಗಿದೆ. ಇದು 114 ಅಡಿ ಎತ್ತರ ಹೊಂದಿದ್ದು, ಇಲ್ಲಿ 65.73 ಕ್ಯೂಬಿಕ್ ಅಡಿ ನೀರು ಸಂಗ್ರಹ ಮಾಡಬಹುದಾಗಿದೆ.

1947ರಲ್ಲಿ ಕಾಮಗಾರಿ ಮುಕ್ತಾಯ: ಅಣೆಕಟ್ಟೆಯನ್ನು ಬೆಲ್ಲ, ಮರಳು ಹಾಗೂ ಸುಣ್ಣದಿಂದ ತಯಾರು‌ ಮಾಡಿದ ಗಾರೆಯಿಂದ ನಿರ್ಮಾಣ ಮಾಡಲಾಗಿದೆ. ಈ ಅಣೆಕಟ್ಟೆಯನ್ನು ಮುಖ್ಯವಾಗಿ ಮಹಾತ್ಮ ಗಾಂಧಿ ವಿದ್ಯುತ್ ಗಾರದಲ್ಲಿ ವಿದ್ಯುತ್ ಉತ್ಪಾದನೆ ಮಾಡಲು ನಿರ್ಮಾಣ ಮಾಡಲಾಯಿತು. ಇದಕ್ಕಾಗಿ ಅಣೆಕಟ್ಟೆಯಲ್ಲಿ ಪ್ರತ್ಯೇಕ ಗೇಟ್ಗಳನ್ನು ನಿರ್ಮಾಣ ಮಾಡಲಾಗಿದೆ. ಅಣೆಕಟ್ಟೆಯಲ್ಲಿ ಪ್ರವಾಹ ತಪ್ಪಿಸಲು ಹಾಗೂ ಅಣೆಕಟ್ಟೆಗೆ ಅಪಾಯವಾಗದಂತೆ 11 ಸೈಫನ್ ನಿರ್ಮಾಣ ಮಾಡಲಾಗಿದೆ.

ಒಂದೂಂದು ಸೈಫನ್ಗಳು ಸುಮಾರು 18 ಅಡಿ ವ್ಯಾಸ ಹೊಂದಿವೆ. ಮಡೇನೂರು ಡ್ಯಾಂ 1939ರಲ್ಲಿ ಪ್ರಾರಂಭವಾಗಿ 1947 ರ ಮುಕ್ತಾಯವಾಗುತ್ತದೆ. ಮುಕ್ತಾಯವಾದಗಲೇ ಅಣೆಕಟ್ಟೆಯಲ್ಲಿ ನೀರು ಸಂಗ್ರಹ ಪ್ರಾರಂಭ ಮಾಡಲಾಗುತ್ತದೆ. ಆದರೆ, 1948 ರ ಫೆಬ್ರವರಿಯಲ್ಲಿ ಮಹಾತ್ಮ ಗಾಂಧಿ ವಿದ್ಯುತ್ ಗಾರದಲ್ಲಿ ವಿದ್ಯುತ್ ಉತ್ಪಾದನೆ ಪ್ರಾರಂಭವಾಗುತ್ತದೆ.

16ನೇ ವರ್ಷಕ್ಕೆ ಮುಳುಗಡೆ: ಮಡೇನೂರು ಅಣೆಕಟ್ಟೆ ನಿರ್ಮಾಣವಾಗಿ ಸುಮಾರು 16ನೇ ವರ್ಷಕ್ಕೆ ಮುಳುಗಡೆಯಾಗುತ್ತದೆ. 1947ರಲ್ಲಿ ಭಾರತ ಬ್ರಿಟಿಷರ ದಾಸ್ಯದಿಂದ ಮುಕ್ತವಾದಾಗ ಮೈಸೂರು ರಾಜ್ಯವಾಗುತ್ತದೆ. ಈ ವೇಳೆಗಾಗಲೇ ಮೈಸೂರು ರಾಜ್ಯಕ್ಕೆ ಪ್ರಥಮವಾಗಿ 'ಶಿವನ ಸಮುದ್ರ'ದಲ್ಲಿ ವಿದ್ಯುತ್ ಉತ್ಪಾದನೆ ಪ್ರಾರಂಭವಾಗುತ್ತದೆ.

ಮೈಸೂರು ರಾಜ್ಯ ವಿಶಾಲವಾದ ಕಾರಣ ವಿದ್ಯುತ್ತಿನ ಬೇಡಿಕೆ ಹೆಚ್ಚಾದ ಕಾರಣ ಮೈಸೂರು ಅರಸರು ಲಿಂಗನಮಕ್ಕಿ ಬಳಿ ನಿರ್ಮಾಣವಾದ ಅಣೆಕಟ್ಟೆಯಿಂದ ಶರಾವತಿ ನದಿಯ ಪ್ರಥಮ ಅಣೆಕಟ್ಟು ಮುಳುಗಡೆಯಾಯಿತು. ಲಿಂಗನಮಕ್ಕಿ ಜಲಾಶಯ 1964 ರಲ್ಲಿ ನಿರ್ಮಾಣವಾಗುತ್ತದೆ. ಇದರಿಂದ ಮಡೇನೂರು ಅಣೆಕಟ್ಟೆಯ ಮೇಲೆ 41 ಅಡಿ ನೀರು ನಿಲ್ಲುತ್ತದೆ.

ಲಿಂಗನಮಕ್ಕಿ ಜಲಾಶಯ 1819 ಅಡಿ ಸಮುದ್ರ ಮಟ್ಟದಿಂದ ಎತ್ತರದಲ್ಲಿದೆ. ಮಡೇನೂರು ಅಣೆಕಟ್ಟು 1774 ಅಡಿ ಸಮುದ್ರ ಮಟ್ಟದಿಂದ ಎತ್ತರದಲ್ಲಿದೆ. ಪ್ರತಿ ಮಳೆಗಾಲದಲ್ಲಿ ಲಿಂಗನಮಕ್ಕಿ ಅಣೆಕಟ್ಟು ತುಂಬಿದಾಗ ಮಡೇನೂರು ಡ್ಯಾಂ ಮುಳುಗಡೆಯಾಗುತ್ತದೆ. ಅದೇ ಮೇ ತಿಂಗಳಲ್ಲಿ ಡ್ಯಾಂ ಗೋಚರವಾಗುತ್ತದೆ.

60 ವರ್ಷ ನೀರಿನಲ್ಲಿದ್ದರು ಗಟ್ಟಿಮುಟ್ಟಾಗಿರುವ ಡ್ಯಾಂ: ಮಡೇನೂರು ಡ್ಯಾಂ ನಿರ್ಮಾಣವಾಗಿ 80 ವರ್ಷಗಳಾಗಿವೆ. ನೀರಿನಲ್ಲಿ ಮುಳುಗಿ 60 ವರ್ಷಗಳಾಗಿವೆ. ಆದರೂ ಸಹ ಅಣೆಕಟ್ಟು ಇನ್ನೂ ಗಟ್ಟಿಯಾಗಿದೆ. ಅದರ ವಿನ್ಯಾಸ ಎಲ್ಲರನ್ನು ಸೂಚಿಗಲ್ಲಿನಂತೆ ಸೆಳೆಯುತ್ತಿದೆ. ಸೈಫನ್, ಅಂದಿನ ಟೆಕ್ಮಾಲಜಿ ಎಲ್ಲವು ಇಂದಿಗೂ ಸೂಜಿಗವೇ ಸರಿ. ಸತತವಾಗಿ ನೀರಿನಲ್ಲಿ ಇದ್ದ ಪರಿಣಾಮ ಅಣೆಕಟ್ಟು ಅಕ್ಕ ಪಕ್ಕದಲ್ಲಿ ಹಾಕಿದ್ದ ಕಲ್ಲಿನ ಒಡ್ಡುಗಳು ಒಡೆದು ಹೋಗಿವೆ. ಆದರೆ ಅಣೆಕಟ್ಟು ಇನ್ನೂ ಗಟ್ಟಿ ಮುಟ್ಟಾಗಿದೆ.

Видео ಮಡೇನೂರು ಡ್ಯಾಮ್ (Madenur Dam) канала kiran bhat
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
16 июня 2023 г. 16:14:13
00:11:48
Другие видео канала
ಭದ್ರಾ ಲಕ್ಕವಳ್ಳಿಡ್ಯಾಂ ಹಿನ್ನರು,ಲಕ್ಕವಳ್ಳಿಭದ್ರಾ ಲಕ್ಕವಳ್ಳಿಡ್ಯಾಂ ಹಿನ್ನರು,ಲಕ್ಕವಳ್ಳಿಮಡೆನೂರು ಡ್ಯಾಮ್ ಭಾಗ 2ಮಡೆನೂರು ಡ್ಯಾಮ್ ಭಾಗ 2ಕುಪ್ಪಳ್ಳಿ ಮತ್ತು ಕವಿಶೈಲಕುಪ್ಪಳ್ಳಿ ಮತ್ತು ಕವಿಶೈಲA journey to Kuduremukha and horanadu in rainy season via Karkla and SK border.A journey to Kuduremukha and horanadu in rainy season via Karkla and SK border.ನೀಲ ಕುರಂಜಿ ಹೂವುಗಳ ಸೊಬಗು/ Neela kuranji Flowers .ಮುಳ್ಳಯ್ಯನಗಿರಿ Mullayyana Giriನೀಲ ಕುರಂಜಿ ಹೂವುಗಳ ಸೊಬಗು/ Neela kuranji Flowers .ಮುಳ್ಳಯ್ಯನಗಿರಿ Mullayyana Giriಕ್ಯಾತನಮಕ್ಕಿ (ಗಾಳಿ ಗುಡ್ಡ ) ಹೊರನಾಡು.ಕ್ಯಾತನಮಕ್ಕಿ (ಗಾಳಿ ಗುಡ್ಡ ) ಹೊರನಾಡು.An adventurer (funny)  catAn adventurer (funny) catNeela kuranji Flower, Mullayyanagiri/ ನೀಲ ಕುರಂಜಿ, ಮುಳ್ಳಯ್ಯನ ಗಿರಿNeela kuranji Flower, Mullayyanagiri/ ನೀಲ ಕುರಂಜಿ, ಮುಳ್ಳಯ್ಯನ ಗಿರಿhassan beaty fort manjarabad near ettina hole projecthassan beaty fort manjarabad near ettina hole projectಮೈಸೂರು ಅರಮನೆ ಬೆಳಕಿನ ಚಿತ್ತಾರದೊಂದಿಗೆ ....ಮೈಸೂರು ಅರಮನೆ ಬೆಳಕಿನ ಚಿತ್ತಾರದೊಂದಿಗೆ ....an action songan action songhalf wave and full wavehalf wave and full waveಪಂಚಕೂಟ ಬಸದಿ,ಕಂಬದಹಳ್ಳಿ,ನಾಗಮಂಗಲ (ಮಂಡ್ಯ)/ kambadalliಪಂಚಕೂಟ ಬಸದಿ,ಕಂಬದಹಳ್ಳಿ,ನಾಗಮಂಗಲ (ಮಂಡ್ಯ)/ kambadalliತಳಕಳಲೆ ಜಲಾಶಯ,ಜೋಗ ಸಾಗರ. Talakale dam ,Joga, Sagara.ತಳಕಳಲೆ ಜಲಾಶಯ,ಜೋಗ ಸಾಗರ. Talakale dam ,Joga, Sagara.ದೇವಿರಮ್ಮನ ಬೆಟ್ಟ,ಚಿಕ್ಕ ಮಗಳೂರು  / Devirammana betta, chikamagalurದೇವಿರಮ್ಮನ ಬೆಟ್ಟ,ಚಿಕ್ಕ ಮಗಳೂರು / Devirammana betta, chikamagalurಸೋಮೇಶ್ವರ ಸಮುದ್ರ ಕಿನಾರೆ, ಮಂಗಳೂರುಸೋಮೇಶ್ವರ ಸಮುದ್ರ ಕಿನಾರೆ, ಮಂಗಳೂರುಚಂದ್ರಗಿರಿ ಕೋಟೆ,ಕಾಸರಗೋಡು (ಕೇರಳ)ಚಂದ್ರಗಿರಿ ಕೋಟೆ,ಕಾಸರಗೋಡು (ಕೇರಳ)ಹಂಪಿಯ ಸುತ್ತ ಒಂದು ಸುತ್ತು./ A Round Around Hampiಹಂಪಿಯ ಸುತ್ತ ಒಂದು ಸುತ್ತು./ A Round Around Hampiಗಢೈಕಲ್ಲು (ಜಮಲಾಬಾದ್‌ ಕೋಟೆ)ಗಢೈಕಲ್ಲು (ಜಮಲಾಬಾದ್‌ ಕೋಟೆ)devaramane bettadevaramane bettaಗಢೈಕಲ್‌ (ಜಮಲಾಬಾದ್‌ ) ಕೋಟೆ- 2ಗಢೈಕಲ್‌ (ಜಮಲಾಬಾದ್‌ ) ಕೋಟೆ- 2
Яндекс.Метрика